ಸಾಧು-ಸಂತರು ಜಪ ಮಾಡಿದ ಕಪಾಲಿ ಬೆಟ್ಟ ಯೇಸು ಬೆಟ್ಟ ಆಗುತ್ತಿರುವುದು ಬೇಸರದ ಸಂಗತಿ; ಡಿಸಿಎಂ ಅಶ್ವಥ್ ನಾರಾಯಣ

ರಾಮನಗರಕ್ಕೆ ಮೆಡಿಕಲ್ ಕಾಲೇಜು ಘೋಷಣೆಯಾದರೆ, ರಾಮನಗರದಲ್ಲೇ ಕಾಲೇಜು ನಿರ್ಮಿಸುತ್ತೇವೆ ಹೊರತು ಕನಕಪುರದಲ್ಲಿ ಮೆಡಿಕಲ್ ಕಾಲೇಜು ಮಾಡಲ್ಲ. ಡಿಕೆಶಿ ಅಂದುಕೊಂಡದ್ದಕ್ಕಿಂತ ದೊಡ್ಡದಾಗಿಯೇ ರಾಮನಗರದಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸುತ್ತೇವೆ ಎಂದು ಹೇಳಿದರು.

HR Ramesh | news18-kannada
Updated:December 28, 2019, 4:13 PM IST
ಸಾಧು-ಸಂತರು ಜಪ ಮಾಡಿದ ಕಪಾಲಿ ಬೆಟ್ಟ ಯೇಸು ಬೆಟ್ಟ ಆಗುತ್ತಿರುವುದು ಬೇಸರದ ಸಂಗತಿ; ಡಿಸಿಎಂ ಅಶ್ವಥ್ ನಾರಾಯಣ
ಡಿಸಿಎಂ ಅಶ್ವತ್ಥ್ ನಾರಾಯಣ.
  • Share this:
ಬೆಂಗಳೂರು:  ಸಿದ್ದರಾಮಯ್ಯ ಅವರ ಬಿಜೆಪಿ ಮುಕ್ತ ಭಾರತ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ , ಅವರೇ ಮುಕ್ತಾಯವಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಥ್ ನಾರಾಯಣ ಅವರು,  ಅವಕಾಶವಾದಿ ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷ. ಎಂತಹ ಪರಿಸ್ಥಿತಿ ಯಾರ ಜೊತೆ ಬೇಕಾದರೂ ಸೇರುತ್ತಾರೆ. ಸಿದ್ದಾಂತ ಏನೂ ಇಲ್ಲ. ಸದ್ಯ ಅವರ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಂಡರೆ ಸಾಕಾಗಿದೆ ಎಂದು ಕುಹಕವಾಡಿದರು.

ಯೇಸು ಪ್ರತಿಮೆ ನಿರ್ಮಾಣ ವಿಚಾರವಾಗಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ,  ಕಪಾಲಿ ಬೆಟ್ಟ ಯೇಸು ಬೆಟ್ಟ ಆಗುತ್ತಿರುವುದು ಬೇಸರದ ಸಂಗತಿ. ಸಾಧು- ಸಂತರು ಜಪತಪ, ಧ್ಯಾನ ಮಾಡಿರುವ ಸ್ಥಳ ಅದು. ಅಲ್ಲಿ ಬೇರೆ ಧರ್ಮದ ವ್ಯಕ್ತಿಯನ್ನು ಸ್ಥಾಪಿಸೋದು ಸರಿಯಲ್ಲ. ಅಲ್ಲಿ ಏನಾಗಿದೆ ಅನ್ನೋದರ ಬಗ್ಗೆ ವರದಿ ತರಿಸಿಕೊಂಡು, ಆ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ಅದು ಸಂಪುಟಕ್ಕೆ ಬರುವ ವಿಚಾರವಲ್ಲ ಎಂದು ಹೇಳಿದರು.

ಇದನ್ನು ಓದಿ: ಕ್ರೈಸ್ತರ ಭಾವನೆಗಳಿಗೆ ಬೆಲೆ ಕೊಡದ ನೀವ್ಯಾಕೆ ಮಕ್ಕಳನ್ನು ಮಿಷನರಿ ಶಾಲೆಗಳಲ್ಲಿ ಓದಿಸುತ್ತೀರಿ?; ಬಿಜೆಪಿಗರಿಗೆ ಮಾಜಿ ಸಂಸದ ಪ್ರಶ್ನೆ

ಮೂರು ಹೊಸ ಮೆಡಿಕಲ್ ಕಾಲೇಜಿಗಳ ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಸಲ ರಾಮನಗರದ ಕನಕಪುರಕ್ಕೂ ಕಾಲೇಜು ಸಿಗುತ್ತಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಅಶ್ವಥ್ ನಾರಾಯಣ, ಯಾವ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಇಲ್ಲವೋ ಆ ಜಿಲ್ಲೆಗಳಲ್ಲಿ ಕಾಲೇಜು ನಿರ್ಮಿಸುತ್ತೇವೆ. ರಾಮನಗರಕ್ಕೆ ಮೆಡಿಕಲ್ ಕಾಲೇಜು ಘೋಷಣೆಯಾದರೆ, ರಾಮನಗರದಲ್ಲೇ ಕಾಲೇಜು ನಿರ್ಮಿಸುತ್ತೇವೆ ಹೊರತು ಕನಕಪುರದಲ್ಲಿ ಮೆಡಿಕಲ್ ಕಾಲೇಜು ಮಾಡಲ್ಲ. ಡಿಕೆಶಿ ಅಂದುಕೊಂಡದ್ದಕ್ಕಿಂತ ದೊಡ್ಡದಾಗಿಯೇ ರಾಮನಗರದಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸುತ್ತೇವೆ. ಜೊತೆಗೆ, ವೈದ್ಯಕೀಯ ವಿವಿ, ಹೆಲ್ತ್ ಸಿಟಿ ಮಾಡ್ತೇವೆ. ರಾಮನಗರವನ್ನು ಹೆಲ್ತ್ ಟೂರಿಸಂ ಕೇಂದ್ರವಾಗಿ ಮಾಡ್ತೇವೆ. ಕನಕಪುರದಲ್ಲಿ ಮೆಡಿಕಲ್ ಕಾಲೇಜು ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
Published by: HR Ramesh
First published: December 28, 2019, 4:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading