ಜೆಡಿಎಸ್ ಪಕ್ಷ ಕಷ್ಟದಲ್ಲಿದೆ; ನಮ್ಮ ಕೈ ಹಿಡಿಯಿರಿ ; ಮತದಾರರಿಗೆ ನಿಖಿಲ್​ ಕುಮಾರಸ್ವಾಮಿ ಮನವಿ

ಕುಮಾರಸ್ವಾಮಿಯವರಿಗೆ ಕೆಲವರು ಬೆನ್ನಿಗೆ ಚೂರಿ ಹಾಕಿ ಹೋದರು. ನಾರಾಯಣಗೌಡ ಕೂಡ‌ ಆಮಿಷಕ್ಕೆ ಬಲಿಯಾಗಿ ಬಿಜೆಪಿ ಸೇರಿದ್ದಾರೆ. ಲೋಕಸಭಾ ಚುನಾವಣೆ ನನಗೆ ಸಾಕಷ್ಟು ಪಾಠ ಕಲಿಸಿದೆ. ದೊಡ್ಡ ಮಟ್ಟದ ಅನುಭವ ಪಡೆದಿದ್ದೇನೆ. ರಾಜಕೀಯದ ಮೊದಲ ಹೆಜ್ಜೆಯಲ್ಲೇ‌ ದೊಡ್ಡ ಅನುಭವ ಆಗಿದೆ

news18-kannada
Updated:November 25, 2019, 7:14 PM IST
ಜೆಡಿಎಸ್ ಪಕ್ಷ ಕಷ್ಟದಲ್ಲಿದೆ; ನಮ್ಮ ಕೈ ಹಿಡಿಯಿರಿ ; ಮತದಾರರಿಗೆ ನಿಖಿಲ್​ ಕುಮಾರಸ್ವಾಮಿ ಮನವಿ
ನಿಖಿಲ್​​​ ಕುಮಾರಸ್ವಾಮಿ
  • Share this:
ಮಂಡ್ಯ(ನ.25); ನಾನು ರಾಜಕೀಯ ಷಡ್ಯಂತ್ರದಿಂದ ಸೋತಿರಬಹುದು. ಜನರು ನನಗೆ ಮೋಸ ಮಾಡಿಲ್ಲ. ನನ್ನ ಮನಸ್ಸಿನಲ್ಲಿ ಸೋಲಿನ ಯಾವುದೇ ನೋವು ಇಲ್ಲ. ಆದರೆ ಇಂದು ಜೆಡಿಎಸ್ ಪಕ್ಷ ಕಷ್ಟದಲ್ಲಿದೆ. ದಯಮಾಡಿ ಪಕ್ಷವನ್ನ ಉಳಿಸಿಕೊಡಿ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್​​​ ಕುಮಾರಸ್ವಾಮಿ ಹೇಳಿದ್ದಾರೆ.

ಕೆಆರ್​ ಪೇಟೆ ಜೆಡಿಎಸ್ ಅಭ್ಯರ್ಥಿಪರ ಮಾಕವಳ್ಳಿಯಲ್ಲಿ ಪ್ರಚಾರದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಕೆಲವರು ಬೆನ್ನಿಗೆ ಚೂರಿ ಹಾಕಿ ಹೋದರು. ನಾರಾಯಣಗೌಡ ಕೂಡ‌ ಆಮಿಷಕ್ಕೆ ಬಲಿಯಾಗಿ ಬಿಜೆಪಿ ಸೇರಿದ್ದಾರೆ. ಲೋಕಸಭಾ ಚುನಾವಣೆ ನನಗೆ ಸಾಕಷ್ಟು ಪಾಠ ಕಲಿಸಿದೆ. ದೊಡ್ಡ ಮಟ್ಟದ ಅನುಭವ ಪಡೆದಿದ್ದೇನೆ. ರಾಜಕೀಯದ ಮೊದಲ ಹೆಜ್ಜೆಯಲ್ಲೇ‌ ದೊಡ್ಡ ಅನುಭವ ಆಗಿದೆ ಎಂದರು.

ಉಪ ಚುನಾವಣೆಯ ಪ್ರಚಾರದಲ್ಲಿ ನಾನು ತೊಡಗಿಸಿಕೊಳ್ಳುತ್ತೇನೆ. ಯಶವಂತಪುರ, ಕಾಮಾಕ್ಷಿಪಾಳ್ಯ, ಕೆ.ಆರ್. ಪುರಂ ಕ್ಷೇತ್ರಗಳಿಗೆ ಹೋಗಿ ಪ್ರಚಾರ ಮಾಡುತ್ತೇನೆ. ಹೊಸಕೋಟೆಯ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಯಾವುದಾದರೂ ಒಂದು‌ ದಿನ ಪ್ರಚಾರಕ್ಕೆ ಬರುವಂತೆ ಹೇಳಿದ್ದಾರೆ. ಅವರು ಹೇಳಿದ ದಿನದಂದು ಹೊಸಕೋಟೆಯಲ್ಲಿ ಶರತ್ ಪರ‌ ಪ್ರಚಾರ ಮಾಡ್ತೀನಿ ಎಂದು ಹೇಳಿದರು.

ಇದನ್ನೂ ಓದಿ : ಯಡಿಯೂರಪ್ಪ ಅಪರೇಷನ್ ಕಮಲದ ಪಿತಾಮಹ - ಅನಂತಕುಮಾರ್ ಹೆಗಡೆ ಒಬ್ಬ ಹುಚ್ಚ ; ಸಿದ್ಧರಾಮಯ್ಯ ಲೇವಡಿ

ಇತ್ತ ಬಿಜೆಪಿ ಅಭ್ಯರ್ಥಿ ಪರ ಮಾತನಾಡಿದ ಡಿಸಿಎಂ ಅಶ್ವತ್ಥ್ ನಾರಾಯಣ್, ಇದು  ಸಾರ್ವತ್ರಿಕ ಚುನಾವಣೆಯಲ್ಲ, ಉಪ ಚುನಾವಣೆ ಇದು. ಹೀಗಾಗಿ ಬೇರೆ ಪಕ್ಷಗಳಿಗೆ ಮತ ನೀಡಿದ್ರೆ ಪ್ರಯೋಜನ ಇಲ್ಲ. ಬಿಜೆಪಿಗೆ ಮತ ನೀಡಿದರೆ ಮಾತ್ರ ಉಪಯೋಗ. ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ. ಬಿಜೆಪಿ ಅಭ್ಯರ್ಥಿಗೆ ಮತ ನೀಡಿದ್ರೆ ಸರ್ಕಾರ ಉಳಿಯುತ್ತೆ. ಈ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಕೂಡ ಸಿಗುತ್ತೆ. ನಿಮ್ಮ, ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದು ತಿಳಿಸಿದರು.

First published:November 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ