ರಾಜ್ಯದಲ್ಲಿ ಅನ್ ಲೈನ್ ಶಿಕ್ಷಣ ನಿರ್ಬಂಧ ವಿಚಾರ; ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ

ಆನ್ ಲೈನ್ ಶಿಕ್ಷಣ ವಿದ್ಯಾರ್ಥಿಗಳ ಮೂಲಭೂತ ಹಕ್ಕು. ಸರ್ಕಾರ ಮೂಲಭೂತ ಹಕ್ಕನ್ನು ನಿರ್ಬಂಧಿಸುವಂತಿಲ್ಲ. ಕೋವಿಡ್ 19 ಹಿನ್ನೆಲೆಯಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಹಾಗೂ ಹೈಕೋರ್ಟ್ ಆನ್ ಲೈನ್ ಶಿಕ್ಷಣ ಕಡ್ಡಾಯ ಮಾಡಿಲ್ಲ. ಹೆಚ್ಚುವರಿ ಶುಲ್ಕ ನಿಗದಿಗೂ ಶಾಲೆಗಳಿಗೆ ಸೂಚನೆ ನೀಡಿಲ್ಲ. ಆದೇಶವನ್ನು ತಪ್ಪಾಗಿ ವ್ಯಾಖ್ಯಾನಿಸದಂತೆ ಹೈಕೋರ್ಟ್ ಇದೇ ವೇಳೆ ಸೂಚನೆ ನೀಡಿದೆ.

ಕರ್ನಾಟಕ ಹೈಕೋರ್ಟ್

ಕರ್ನಾಟಕ ಹೈಕೋರ್ಟ್

  • Share this:
ಬೆಂಗಳೂರು; ಶಾಲಾ ವಿದ್ಯಾರ್ಥಿಗಳಿಗೆ ಆನ್​ಲೈನ್ ಶಿಕ್ಷಣ ನೀಡುವುದಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಅನ್ ಲೈನ್ ಶಿಕ್ಷಣ ಕೋರಿ ಪೋಷಕರು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ ಪಿಐಎಲ್ ವಿಚಾರಣೆ ನಡೆಸಿ ಅನ್ ಲೈನ್ ಶಿಕ್ಷಣಕ್ಕೆ ಸರ್ಕಾರ ನಿರ್ಬಂಧ ವಿಧಿಸಿದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಒಕಾ ಮತ್ತು ಆರ್. ನಟರಾಜ್ ರವರ ವಿಭಾಗೀಯ ಪೀಠದಿಂದ ಮಹತ್ವದ ಆದೇಶ ಹೊರಬಿದ್ದಿದೆ. ಖಾಸಗಿ ಶಾಲೆಗಳು ಮತ್ತು ಪೋಷಕರು ಸಲ್ಲಿಸಿದ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಅನ್ ಲೈನ್ ಶಿಕ್ಷಣ ನಡೆಸಲು ಸರ್ಕಾರಕ್ಕೆ ಸಾಧ್ಯವಿಲ್ಲವೆಂದು ಖಾಸಗಿಯವರಿಗೆ ನಿರ್ಬಂಧ ಹೇರುವುದು ಸರಿಯಲ್ಲ. 1983 ರ ಕಾಯ್ದೆಯಲ್ಲಿಯೂ ನಿರ್ಬಂಧ ವಿಧಿಸುವ ಅಧಿಕಾರವಿಲ್ಲ. ಸರ್ಕಾರ ಒಂದೆಡೆ ಆನ್ ಲೈನ್ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು ಎಂದಿದೆ. ಮತ್ತೊಂದೆಡೆ ಆನ್ ಲೈನ್ ಶಿಕ್ಷಣಕ್ಕೆ ನಿರ್ಬಂಧ ವಿಧಿಸಿದೆ. ಸರ್ಕಾರದ ಧೋರಣೆ ಒಪ್ಪಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ.

ರಾಜ್ಯದಲ್ಲಿ ಎಲ್ ಕೆ ಜಿಯಿಂದ 10ನೇ ತರಗತಿ ವರೆಗೆ ಆನ್ ಲೈನ್ ಶಿಕ್ಷಣ ನಿಷೇಧಿಸಿ ಜೂನ್ 15 ಮತ್ತು 27 ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶ ಪ್ರಶ್ನಿಸಿ ಖಾಸಗಿ ಶಾಲೆಗಳು ಮತ್ತು ಕೆಲ ಪೋಷಕರು ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದ್ದರು. ಇಂದು ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಸರ್ಕಾರದ ಎರಡು ಆದೇಶಗಳಿಗೆ ತಡೆ ನೀಡಿ ಮಧ್ಯಂತರ ಆದೇಶ ನೀಡಿದೆ. ಹಾಗೂ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಇದನ್ನು ಓದಿ: ಆನ್‌ಲೈನ್ ಶಿಕ್ಷಣಕ್ಕೆ ಸಮಿತಿ ಕೊನೆಗೂ ಅಸ್ತು; ಅಷ್ಟಕ್ಕೂ ತಜ್ಞರ ಸಮಿತಿ ವರದಿಯಲ್ಲೇನಿದೆ ಗೊತ್ತಾ?

ಅಲ್ಲದೇ, ಆನ್ ಲೈನ್ ಶಿಕ್ಷಣ ವಿದ್ಯಾರ್ಥಿಗಳ ಮೂಲಭೂತ ಹಕ್ಕು. ಸರ್ಕಾರ ಮೂಲಭೂತ ಹಕ್ಕನ್ನು ನಿರ್ಬಂಧಿಸುವಂತಿಲ್ಲ. ಕೋವಿಡ್ 19 ಹಿನ್ನೆಲೆಯಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಹಾಗೂ ಹೈಕೋರ್ಟ್ ಆನ್ ಲೈನ್ ಶಿಕ್ಷಣ ಕಡ್ಡಾಯ ಮಾಡಿಲ್ಲ. ಹೆಚ್ಚುವರಿ ಶುಲ್ಕ ನಿಗದಿಗೂ ಶಾಲೆಗಳಿಗೆ ಸೂಚನೆ ನೀಡಿಲ್ಲ. ಆದೇಶವನ್ನು ತಪ್ಪಾಗಿ ವ್ಯಾಖ್ಯಾನಿಸದಂತೆ ಹೈಕೋರ್ಟ್ ಇದೇ ವೇಳೆ ಸೂಚನೆ ನೀಡಿದೆ.
Published by:HR Ramesh
First published: