• Home
  • »
  • News
  • »
  • state
  • »
  • Mangaluru Blast: ಕುಕ್ಕರ್ ಬಾಂಬ್ ತನಿಖೆ ಹೊಣೆ ಎನ್ಐಎ ಹೆಗಲಿಗೆ, ಗೃಹಸಚಿವರಿಂದ ಅಧಿಕೃತ ಮಾಹಿತಿ

Mangaluru Blast: ಕುಕ್ಕರ್ ಬಾಂಬ್ ತನಿಖೆ ಹೊಣೆ ಎನ್ಐಎ ಹೆಗಲಿಗೆ, ಗೃಹಸಚಿವರಿಂದ ಅಧಿಕೃತ ಮಾಹಿತಿ

ಎನ್ಐಎ

ಎನ್ಐಎ

ಘಟನೆ ನಡೆದ ಬಳಿಕ ಘಟನಾ ಸ್ಥಳಕ್ಕೆ ಎನ್‌ಐಎ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿತ್ತು. ಮತ್ತೊಂದೆಡೆ ಮಂಗಳೂರು ಪೊಲೀಸರು ಚುರುಕಿನ ತನಿಖೆ ಕೈಗೊಂಡು, ಮಹತ್ವದ ದಾಖಲೆ ಕಲೆ ಹಾಕಿದ್ದರು. ಕೇಸ್ ಎನ್ಐಎಗೆ ವರ್ಗಾವಣೆ ಮಾಡಲಾಗಿದೆ. ಇದೀಗ ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಅಧಿಕೃತ ಮಾಹಿತಿ ನೀಡಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Mangalore, India
  • Share this:

ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟದ ತನಿಖೆ ಹೊಣೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸಿ ರಾಜ್ಯ ಸರ್ಕಾರ (State Government) ಆದೇಶಿಸಿದೆ. ಈ ಬಗ್ಗೆ ಗೃಹಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ಅಧಿಕೃತ ಮಾಹಿತಿ ನೀಡಿದ್ದಾರೆ. ಸದ್ಯ ಶಂಕಿತ ಉಗ್ರ ಶಾರೀಕ್ (terrorist Shariq) ವಿರುದ್ಧ ​ಯುಎಪಿಎ ಕಾಯ್ದೆ ಅನ್ವಯ ಎನ್ಐಎ ತನಿಖೆ ನಡೆಸಲು ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ನವೆಂಬರ್ 19 ಶನಿವಾರ ಸಂಜೆ ಮಂಗಳೂರಿನ (Mangaluru) ನಾಗುರಿ (Naguri) ಸಮೀಪ ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ ಸಂಭವಿಸಿತ್ತು. ಈ ಪ್ರಕರಣದಲ್ಲಿ ಆಟೋ ಚಾಲಕ ಸೇರಿದಂತೆ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಘಟನೆ ನಡೆದ ಮರುದಿನವೇ ಘಟನಾ ಸ್ಥಳಕ್ಕೆ ಎನ್‌ಐಎ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿತ್ತು. ಮತ್ತೊಂದೆಡೆ ಮಂಗಳೂರು ಪೊಲೀಸರು ಚುರುಕಿನ ತನಿಖೆ ಕೈಗೊಂಡು, ಮಹತ್ವದ ದಾಖಲೆ ಕಲೆ ಹಾಕಿದ್ದರು. ಕೇಸ್ ಎನ್ಐಎಗೆ ವರ್ಗಾವಣೆ ಮಾಡಲಾಗಿದೆ. ಇದೀಗ ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಅಧಿಕೃತ ಮಾಹಿತಿ ನೀಡಿದ್ದಾರೆ.


ಘಟನೆ ಹೊಣೆ ಹೊತ್ತುಕೊಂಡ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಸಂಘಟನೆ


ಮಂಗಳೂರಿನ ಆಟೋರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ಹೊಣೆಯನ್ನು ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಉಗ್ರ ಸಂಘಟನೆ ಹೊತ್ತುಕೊಂಡಿದ್ದು, ಕದ್ರಿ ದೇವಸ್ಥಾನ ನಮ್ಮ ಗುರಿಯಾಗಿತ್ತು ಎಂದು ಹೇಳಿದೆ. ಈ ಕುರಿತು ಪೋಸ್ಟ್ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಈ ನಡುವೆ ಕೆಲ ವಿಚಾರಗಳ ಕುರಿತಂತೆ ಉಗ್ರ ಸಂಘಟನೆ ಪೋಸ್ಟ್'ನಲ್ಲಿ ಹೇಳಿದ್ದು, ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.




 ದೇವಸ್ಥಾನಗಳೇ ಉಗ್ರರ ಟಾರ್ಗೆಟ್


 ಶಂಕಿತ ಉಗ್ರರಿಗೆ ದೇವಸ್ಥಾನಗಳೇ(Temples) ಟಾರ್ಗೆಟ್ ಆಗಿದ್ದವಾ ಎಂಬ ಅನುಮಾನ ಮೂಡಿದೆ. ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (IRC) ಎಂಬ ಸಂಘಟನೆ ಹೆಸರಲ್ಲಿ ಡಾರ್ಕ್ ವೆಬ್ (Dark web) ಮೂಲಕ ಒಂದು ಪೋಸ್ಟ್ ಹಾಕಲಾಗಿದೆ. ಡಾರ್ಕ್ ವೆಬ್‌ನಲ್ಲಿ ಸ್ಫೋಟದ ರೂವಾರಿ ತಾವೇ ಎಂದು ಹೇಳಿಕೊಳ್ಳಲಾಗಿದೆ. ಅಲ್ಲದೇ ಆ ಪೋಸ್ಟ್​​ನಲ್ಲಿ ಕದ್ರಿ ದೇವಸ್ಥಾನದ (Kadri Temple) ಬಗ್ಗೆಯೂ ಉಲ್ಲೇಖಿಸಲಾಗಿದ್ದು, ಉಗ್ರರು ಕದ್ರಿ ದೇಗುಲವನ್ನೇ ಟಾರ್ಗೆಟ್ ಮಾಡಿಕೊಂಡಿದ್ರಾ ಎಂಬ ಅನುಮಾನ ಹುಟ್ಟಿಕೊಂಡಿದೆ.


 ಇದನ್ನೂ ಓದಿ: Mangaluru Blast: ಐಸಿಸ್​ ಸೇರಲು ಶಾರೀಕ್​​ ಯತ್ನ? ಬೆಂಗಳೂರಿನ ಅತ್ತೆ ಮನೆಯಲ್ಲಿ ವಾಸವಾಗಿದ್ನಾ ಉಗ್ರ?


ಪೋಸ್ಟ್ ಬಗ್ಗೆ ಪೊಲೀಸರಿಂದ ತನಿಖೆ


ಅಷ್ಟೇ ಅಲ್ಲ, ಕುದ್ರೋಳಿ (Kudroli) ಗೋಕರ್ಣನಾಥೇಶ್ವರ ದೇಗುಲ, ಮಂಗಳೂರಿನ ಮಂಗಳಾದೇವಿ ದೇವಸ್ಥಾನ, ಮಂಗಳೂರಿನ ರೈಲ್ವೇ ನಿಲ್ದಾಣ, ಮಂಗಳೂರು (Mangaluru) KSRTC ಬಸ್ ನಿಲ್ದಾಣ, ಮಂಗಳೂರಿನ ಸಂಘ ನಿಕೇತನದಲ್ಲಿ ಮಕ್ಕಳ ಮಾರಣ ಹೋಮಕ್ಕೆ ಸಂಚು ರೂಪಿಸಲಾಗಿತ್ತಂತೆ. ಸದ್ಯ ಎನ್​ಐಎ ತಂಡ ಪೋಸ್ಟ್ ಸತ್ಯವೋ ಸುಳ್ಳೋ ಎಂಬ ಬಗ್ಗೆ ತನಿಖೆ ಕೈಗೊಂಡಿದೆ.



ಶಾರೀಕ್ ಇದ್ದ ಮನೆಗೆ ಬೀಗ


ಮಂಗಳೂರಿನಲ್ಲಿ ಆಟೊದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಪ್ರಕರಣದ ರೂವಾರಿ ಶಾರಿಕ್ ನೆಲೆಸಿದ್ದ ಬಾಡಿಗೆ ಮನೆಯನ್ನ ವಶಕ್ಕೆ ಪಡೆದು ಬೀಗ ಜಡಿದಿದ್ದಾರೆ. ತನಿಖಾ ಉದ್ದೇಶದಿಂದ ಲೋಕನಾಯಕ ನಗರದಲ್ಲಿ ಶಾರಿಕ್ ವಾಸಿಸುತ್ತಿದ್ದ ಬಾಡಿಗೆ ಮನೆಯನ್ನು ವಶಕ್ಕೆ ಪಡೆದ ಪೊಲೀಸರು ಮನೆಗೆ ಬೀಗ ಜಡಿದಿದ್ದಾರೆ.


ಇದನ್ನೂ ಓದಿ: Mangaluru Cooker Bomb: ಈ 6 ಸ್ಥಳಗಳನ್ನು ಟಾರ್ಗೆಟ್ ಮಾಡಿದ್ನಾ ರಾಕ್ಷಸ ಶಾರೀಕ್?


ಐಸಿಸ್ ಸೇರಲು ಪ್ರಯತ್ನ


ಸಿರಿಯಾ ಅಥವಾ ಮತ್ತಿತರ ರಾಷ್ಟ್ರಕ್ಕೆ ತೆರಳಿ ಐಸಿಸ್ ಸೇರುವ ಆಸೆ ವ್ಯಕ್ತಪಡಿಸಿದ್ದ ಶಾರೀಕ್ ಹಲವರನ್ನು ಸಂಪರ್ಕ ಮಾಡಿದ್ದ ಎಂದು ತಿಳಿದು ಬಂದಿದೆ. ಒಂದು ವೇಳೆ ಸ್ವಂತದ್ದೊಂದು ಐಡೆಂಟಿಟಿ ಇಲ್ಲದಿದ್ದರೆ ಐಸಿಸ್​ನವರು ನಿನಗೆ ಪ್ರಾಮುಖ್ಯತೆ ಕೊಡಲ್ಲ. ಹಾಗಾಗಿ ಅವರೆಲ್ಲರಿಗೂ ನಿನ್ನ ಹೆಸರು ಗೊತ್ತಾಗುವ ರೀತಿಯಲ್ಲಿ ದೊಡ್ಡಮಟ್ಟದಲ್ಲಿ ಏನಾದ್ರೂ ಕೃತ್ಯ ಎಸಗುವಂತೆ ಸೂಚನೆ ಕೊಡಲಾಗಿತ್ತಂತೆ. ಇದೇ ಕಾರಣಕ್ಕೆ ಶಾರೀಕ್ ಬಾಂಬ್ ಸ್ಫೋಟಕ್ಕೆ ಮುಂದಾಗಿದ್ದ ಎನ್ನಲಾಗಿದೆ.

Published by:Annappa Achari
First published: