ಭಾರತೀಯ ಅಂಚೆ ಇಲಾಖೆಯ ಮತ್ತೊಂದು ಹೆಜ್ಜೆ; ಡಿಜಿಟಲೀಕರಣದತ್ತ ಚಿತ್ತ

news18
Updated:September 1, 2018, 11:12 AM IST
ಭಾರತೀಯ ಅಂಚೆ ಇಲಾಖೆಯ ಮತ್ತೊಂದು ಹೆಜ್ಜೆ; ಡಿಜಿಟಲೀಕರಣದತ್ತ ಚಿತ್ತ
news18
Updated: September 1, 2018, 11:12 AM IST
-ರಾಚಪ್ಪ ಬನ್ನಿದಿನ್ನಿ, ನ್ಯೂಸ್​ 18 ಕನ್ನಡ

ಬಾಗಲಕೋಟೆ,(ಸೆ.01): ಭಾರತೀಯ ಅಂಚೆ ಇಲಾಖೆ ಇದೀಗ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಸೇವೆ ನೀಡುವ ನಿಟ್ಟಿನಲ್ಲಿ, ಇಂದು ದೇಶದಲ್ಲಿ ಏಕಕಾಲಕ್ಕೆ 650 ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯಾಹ್ನ ಚಾಲನೆ ನೀಡುವ ಮೂಲಕ ಅಂಚೆ ಇಲಾಖೆ ಮತ್ತೊಂದು ಹೆಜ್ಜೆಯಿಡಲಿದೆ.ಬಾಗಲಕೋಟೆಯಲ್ಲಿ ಸಹಿತ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಆರಂಭಗೊಳ್ಳಲಿದೆ. ನಗರದ ಐದು ಕಡೆ ಆಕ್ಸೆಸ್ ಪಾಯಿಂಟ್ ಓಪನ್ ಆಗಲಿವೆ. ಇನ್ನು ಇಂದು ಮಧ್ಯಾಹ್ನ 3.15 ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಉದ್ಘಾಟಿಸಿ ಮಾತನಾಡಲಿದ್ದಾರೆ. ಮನೆ ಮನೆಗೂ ತಮ್ಮ ಬ್ಯಾಂಕ್ ಎನ್ನುವ ಧ್ಯೇಯವಾಕ್ಯ ಹೊಂದಿದೆ. ಇನ್ನು ಮುಂದೆ ಕ್ಯಾಸ್ ಲೆಸ್ ವಹಿವಾಟಿಗೆ ಅಂಚೆ ಇಲಾಖೆಯೂ ಸೇರ್ಪಡೆಯಾಗಲಿದೆ.  ಕಾಗದ ರಹಿತ ಬ್ಯಾಂಕ್ ಸೇವೆ ನೀಡಲು ಅಂಚೆ ಇಲಾಖೆ ಮುಂದಾಗಿದೆ. ಗ್ರಾಹಕರು ಕೇವಲ ಆಧಾರ್ ಕಾರ್ಡ್ ನಂಬರ್ ಹೊಂದಿದ್ದರೆ ಸಾಕು ಪೊಸ್ಟ್ ಪೇಮೆಂಟ್ಸ್ ಬ್ಯಾಂಕ್​ನಲ್ಲಿ ಖಾತೆ ಹೊಂದಬಹುದು. ಖಾತೆ ತೆರೆಯುವುದು ಸಹಿತ ಅತೀ ಸುಲಭವಾಗಿದೆ. ಪಾಸ್ ಬುಕ್ ಬದಲಿಗೆ ಕ್ಯೂಆರ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಈ ಕಾರ್ಡ್ ಮೂಲಕ ಬ್ಯಾಂಕ್ ಸೇವೆ ಪಡೆಯಬಹುದಾಗಿದೆ. ನೆಫ್ಟ್, ಆರ್ಟಿಜಿಎಸ್, ಸೇರಿದಂತೆ ಆನ್ ಲೈನ್ ಶಾಪಿಂಗ್, ಎಲೆಕ್ಟ್ರಿಕಲ್ ಬಿಲ್ ಪಾವತಿ ಹಾಗೂ ಹಣ ವರ್ಗಾವಣೆ ಮಾಡಬಹುದಾಗಿದೆ. ಆದರೆ  ಕ್ಯೂ ಆರ್ ಕಾರ್ಡಿನಲ್ಲಿ 1 ಲಕ್ಷ ರೂಪಾಯಿ ಮಾತ್ರ ಅಂತಿಮ ಬ್ಯಾಲೆನ್ಸ್ ಇರಬೇಕು. ಬೆಳಗ್ಗೆ ಲಕ್ಷಾಂತರ ಹಣ ವಹಿವಾಟು ಮಾಡಿದರೆ ಸಾಯಂಕಾಲ ಬ್ಯಾಂಕ್ ವ್ಯವಹಾರ ಸಮಯ ಮುಗಿಯುವ ವೇಳೆ 1 ಲಕ್ಷ ಕ್ಲೋಸಿಂಗ್ ಬ್ಯಾಲೆನ್ಸ್ ಇರಬೇಕು.


Loading...

ಇನ್ನು ಪ್ರಾಥಮಿಕ ವಾಗಿ ಜಿಲ್ಲಾಮಟ್ಟದಲ್ಲಿ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಆರಂಭಗೊಳ್ಳುತ್ತಿದ್ದು , ಡಿಸೆಂಬರ್ ಹೊತ್ತಿಗೆ ಎಲ್ಲಾ ಅಂಚೆ ಇಲಾಖೆ ಯಲ್ಲಿ ಪೋಸ್ಟ್ ಪೇಮೇಂಟ್ಸ್ ಬ್ಯಾಂಕ್ ಶಾಖೆ ಆರಂಭವಾಗೊಳ್ಳಲಿವೆ. ಇನ್ನು ಬಾಗಲಕೋಟೆಯಲ್ಲಿ 5 ಸಾವಿರ ಖಾತೆ ತೆರೆಯಲು ಉದ್ದೇಶಿಸಲಾಗಿದೆ.ಈಗಾಗಲೇ 2 ಸಾವಿರಕ್ಕೂ ಹೆಚ್ಚು ಖಾತೆ ತೆರೆಯಲಾಗಿದ್ದು.ಜನರು ಕೂಡಾ ಪೋಸ್ಟ್ ಪೇಮೇಂಟ್ಸ್ ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಉತ್ಸಾಹ ತೋರುತ್ತಿದ್ದಾರೆ.ಇನ್ನು ಬ್ಯಾಂಕ್ ಸೇವೆ ಗ್ರಾಮೀಣ ಗ್ರಾಹಕರನ್ನು ತಲುಪಲು ಅಂಚೆ ಅಣ್ಣನಿಗೆ ಐಆರ್ ಸಿಟಿ (ದರ್ಪಣ) ಬಳಸುವ ಕುರಿತು ತರಬೇತಿ ನೀಡಲಾಗುತ್ತಿದೆ.ಗ್ರಾಮೀಣ ಜನರಿಗೆ ತಲುಪಿಸಲು ಮೂಲ ಉದ್ದೇಶ ಹೊಂದಲಾಗಿದ್ದು, ಗ್ರಾಮೀಣ ಗ್ರಾಹಕರಿಗೆ ಹಣ ಜಮಾ ಹಾಗೂ ತೆಗೆದುಕೊಳ್ಳಬೇಕಾದರೆ ಐಆರ್ ಸಿಟಿ (ದರ್ಪಣ)ಮೂಲಕ ಅಂಚೆಯಣ್ಣ ಮನೆಬಾಗಿಲಿಗೆ ಬರುತ್ತಾರೆ. ಆ ಮೂಲಕ ಬ್ಯಾಂಕ್ ಸೇವೆ ಪಡೆದುಕೊಳ್ಳಬಹುದಾಗಿದೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ