ಪರಮೇಶ್ವರ್ ಆಪ್ತ ಸಹಾಯಕ ರಮೇಶ್​ ಆತ್ಮಹತ್ಯೆ ಸಂಬಂಧ ಆದಾಯ ತೆರಿಗೆ ಇಲಾಖೆ ನೀಡಿದ ಸ್ಪಷ್ಟನೆ ಏನು?

ಆದಾಯ ತೆರಿಗೆ ಕಾಯ್ದೆ ಸೆಕ್ಷನ್​ 131, 132ರ ಅಡಿಯಲ್ಲಿ ಯಾವುದೇ ನಾವು ರಮೇಶ್ ಅವರಿಂದ ಯಾವುದೇ ಹೇಳಿಕೆಯನ್ನು ಪಡೆದಿಲ್ಲ. ಪರಮೇಶ್ವರ್ ಮನೆ ಪರಿಶೀಲನೆ ಮಾಡುವಾಗ ರಮೇಶ್ ಅಲ್ಲಿದ್ದರು. ಸಂಪೂರ್ಣ ತಪಾಸಣೆಯ ವೇಳೆ ಅವರು ಅಲ್ಲಿಯೇ ಇದ್ದರು. ಆ ವೇಳೆ ಪಂಚನಾಮೆಗೆ ಹೇಳಿಕೆ ಪಡೆದುಕೊಂಡಿದ್ದೆವೆ ಎಂದು ಐಟಿ ಇಲಾಖೆ ಹೇಳಿದೆ.

HR Ramesh | news18-kannada
Updated:October 12, 2019, 4:49 PM IST
  • Share this:
ಬೆಂಗಳೂರು: ಡಾ.ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಅವರ ಮನೆಯಲ್ಲಿ‌ ನಮ್ಮ ತಂಡ ತಪಾಸಣೆಯನ್ನೂ ಮಾಡಿಲ್ಲ. ಅಲ್ಲದೇ ರಮೇಶನಿಂದ ಯಾವುದೇ ಹೇಳಿಕೆಯನ್ನೂ ಸಹ ಪಡೆದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.

ಪರಮೇಶ್ವರ್ ಮನೆ ಹಾಗೂ ಅವರ ಆಪ್ತರ ಮನೆಗಳ ಮೇಲೆ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಐಟಿ ದಾಳಿಯಿಂದ ಕಂಗೆಟ್ಟು ಇಂದು ಆತ್ಮಹತ್ಯೆಗೆ ಶರಣಾಗಿರುವ ರಮೇಶ್​ ಸಾವಿಗೆ ಆದಾಯ ತೆರಿಗೆ ಇಲಾಖೆಯ ಕಿರುಕುಳವೇ ಕಾರಣ ಎಂಬ ಆರೋಪ ಕೇಳಬಂದ ಹಿನ್ನೆಲೆಯಲ್ಲಿ ಐಟಿ ಇಲಾಖೆ ಈ ಸ್ಪಷ್ಟನೆ ನೀಡಿದೆ.

ಆದಾಯ ತೆರಿಗೆ ಕಾಯ್ದೆ ಸೆಕ್ಷನ್​ 131, 132ರ ಅಡಿಯಲ್ಲಿ ಯಾವುದೇ ನಾವು ರಮೇಶ್ ಅವರಿಂದ ಯಾವುದೇ ಹೇಳಿಕೆಯನ್ನು ಪಡೆದಿಲ್ಲ. ಪರಮೇಶ್ವರ್ ಮನೆ ಪರಿಶೀಲನೆ ಮಾಡುವಾಗ ರಮೇಶ್ ಅಲ್ಲಿದ್ದರು. ಸಂಪೂರ್ಣ ತಪಾಸಣೆಯ ವೇಳೆ ಅವರು ಅಲ್ಲಿಯೇ ಇದ್ದರು. ಆ ವೇಳೆ ಪಂಚನಾಮೆಗೆ ಹೇಳಿಕೆ ಪಡೆದುಕೊಂಡಿದ್ದೆವೆ ಎಂದು ಐಟಿ ಇಲಾಖೆ ಹೇಳಿದೆ.

ನಮ್ಮ ತಂಡ ಅ.10ರಂದು ಪರಮೇಶ್ವರ್ ಮನೆಯಲ್ಲಿ ತಪಾಸಣೆಗೆ ಹೋಗಿತ್ತು. ಆದರೆ ಆ ವೇಳೆ ಪರಮೇಶ್ವರ್ ಪತ್ನಿ ಅವರು ಮನೆಯಲ್ಲಿ ಇಲ್ಲ ಅಂದಿದ್ದರು. ಅವರು ಕೊರಟಗೆರೆಯ ಒಂದು ಕಾರ್ಯಕ್ರಮಕ್ಕೆ ತೆರಳಿದ್ದರು. ನಮ್ಮ ತಂಡ ಅಲ್ಲಿಗೆ ಹೋಗಿ ಅವರಿಗೆ ಎಸ್ಕಾರ್ಟ್ ನೀಡಿ, ಸುರಕ್ಷಿತವಾಗಿ ಕರೆತಂದಿತ್ತು. ಈ ವೇಳೆ ರಮೇಶ್ ಸಹ ಪರಮೇಶ್ವರ್ ಜೊತೆ ಹೋಗಿದ್ದರು. ಪರಮೇಶ್ವರ್ ಅವರನ್ನು ಕರೆತಂದಾಗ ಅವರ ಜೊತೆ ರಮೇಶ್ ಕೂಡ ಬಂದಿದ್ದರು. ಪರಮೇಶ್ವರ್ ಮನೆಯಲ್ಲಿ ಅ. 12ರ ರಾತ್ರಿ 2:45 ರ ಬೆಳಗಿನ ಜಾವದ ತನಕ ತಪಾಸಣೆ ನಡೆಸಿದ್ದೆವು. ಅಲ್ಲಿಯತನಕವೂ ರಮೇಶ್ ಅವರ ಮನೆಯಲ್ಲಿಯೇ ಇದ್ದರು ಎಂದು ಐಟಿ ಇಲಾಖೆ ರಮೇಶ್​ ಆತ್ಮಹತ್ಯೆಯ ಬಗ್ಗೆ ನೀಡಿರುವ ಸ್ಪಷ್ಟನೆ ನೀಡಿದೆ.

ಇದನ್ನು ಓದಿ: IT Raid: ಐಟಿ ದಾಳಿ ಬೆನ್ನಲ್ಲೇ ಡಾ.ಜಿ.ಪರಮೇಶ್ವರ್​​ ಪಿಎ ರಮೇಶ್​ ಆತ್ಮಹತ್ಯೆ
First published:October 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading