ಮಾಜಿ ಶಾಸಕನ ಮೇಲೆ ರೌಡಿ ಪಟ್ಟಿಗೆ ಸೇರಿಸಲು ಐಜಿಪಿ ಅಲೋಕಕುಮಾರ ಸೂಚನೆ

news18
Updated:April 11, 2018, 8:55 PM IST
ಮಾಜಿ ಶಾಸಕನ ಮೇಲೆ ರೌಡಿ ಪಟ್ಟಿಗೆ ಸೇರಿಸಲು ಐಜಿಪಿ ಅಲೋಕಕುಮಾರ ಸೂಚನೆ
news18
Updated: April 11, 2018, 8:55 PM IST
ಮಹೇಶ ವಿ.ಶಟಗಾರ , ನ್ಯೂಸ್ 18 ಕನ್ನಡ 

ವಿಜಯಪುರ( ಏ.11):  ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲ ವಿರುದ್ಧ ರೌಡಿ ಶೀಟ್ ಓಪನ್ ಮಾಡಲು ಐಜಿಪಿ ಆದೇಶ ನೀಡಿದ್ದಾರೆ.  ಈ ಹಿನ್ನೆಲೆಯಲ್ಲಿ 48 ಗಂಟೆಯಲ್ಲಿ ಭೀಮಾ‌ ತೀರದ ಮಾಜಿ ಶಾಸಕನ ವಿರುದ್ಧ ರೌಡಿ ಶೀಟರ್ ಓಪನ್ ಆಗಲಿದೆ. ಇಂಡಿ ಕ್ಷೇತ್ರದ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಬಿ. ಎಸ್. ಯಡಿಯೂರಪ್ಪ ಬಂಟನಾಗಿದ್ದ.

ವಿಜಯಪುರ ಎಸ್ಪಿ ಪ್ರಕಾಶ ನಿಕ್ಕಂ ಮತ್ತು ಇಂಡಿ ಡಿವೈಎಸ್ಪಿ ರವಿಂದ್ರ ಶಿರೂರ ಅವರಿಗೆ ರೌಡಿಶೀಟರ್ ಓಪನ್ ಮಾಡಲು ಸೂಚನೆ ನೀಡಿರುವ ಐಜಿಪಿ ಅಲೋಕಕುಮಾರ, 2017 ರಲ್ಲಿ ರವಿಕಾಂತ ಪಾಟೀಲ ವಿರುದ್ಧ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಝಳಕಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ರೌಡಿ ಪಟ್ಟಿಗೆ ಸೇರಿಸಲು ಆದೇಶ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಸಧ್ಯ ಇಂಡಿ ಕ್ಷೇತ್ರದ ಬಿಜೆಪಿ ಟಿಕೆಟ್ ಗೆ ಪ್ರಬಲ ಆಕಾಂಕ್ಷಿಯಾಗಿರುವ ರವಿಕಾಂತ ಪಾಟೀಲ, ಈ ಹಿಂದೆ ಒಮ್ಮೆ ಜೈಲಿನಲ್ಲಿದ್ದುಕೊಂಡೆ ಸೇರಿದಂತೆ ಒಟ್ಟು ಮೂರು ಬಾರಿ ಇಂಡಿಯಿಂದ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದಾರೆ.  ಅಲ್ಲದೆ, ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿ ಸೋಲುಂಡಿದ್ದಾರೆ.

ಇಂಡಿ ಮತಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಭೀಮಾ ತೀರದ ಕಾಂಗ್ರೆಸ್ ಮುಖಂಡ ಉನರಾಣಿಯ ಮಜಾದೇವ ಸಾಹುಕಾರ ಭೈರಗೊಂಡ ವಿರುದ್ಧ ಮಾ. 27 ರೌಡಿ ಶೀಟರ್ ಒಪನ್ ಮಾಡಲಾಗಿತ್ತು. ಈಗ ಮಹಾದೇವ ಸಾಹುಕಾರ ಭೈರಗೊಂಡ ಅಕ್ರಮ ಮರಳು ಆರೋಪ ಪ್ರಕರಣ ಸಂಬಂಧ ವಿಜಯಪುರ ಕೇಂದ್ರ ಕಾರಾಗೃಹ ಸೇರಿದ್ದಾರೆ.
First published:April 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...