ಮೈಸೂರು: ಹಿಂದೆಲ್ಲಾ ಗಂಡ (Husband) ಹೆಂಡತಿ (Wife) ಸಂಬಂಧ (Relationship) ಅಂದ್ರೆ ಏಳೇಳು ಜನ್ಮದ ಋಣಾನುಬಂಧ ಅಂತಿದ್ರು. ಆದ್ರೆ ಈ ಆಧುನಿಕ ಯುಗದಲ್ಲೆಲ್ಲ ಗಂಡ, ಹೆಂಡತಿ ತುಂಬಾ ಟೈಮ್ (Time) ಒಟ್ಟಿಗೆ ಇದ್ರೆ ಅದೇ ದೊಡ್ಡ ಸಾಧನೆ (Achievement) ಎನ್ನವಂತಾಗಿದೆ. ಈಗೆಲ್ಲ ಚಿಕ್ಕ ಚಿಕ್ಕ ಕಾರಣಕ್ಕೆ (Reason), ಸಿಲ್ಲಿ ಸಿಲ್ಲಿ (Silly) ವಿಚಾರಗಳಿಗೆಲ್ಲ ಗಂಡ, ಹೆಂಡತಿ ವಿಚ್ಛೇದನ (Divorce) ಪಡೆದುಕೊಳ್ತಾರೆ. ಹೆಂಡತಿ ಚೆನ್ನಾಗಿಲ್ಲ, ಗಂಡ ಬೇಗ ಮನೆಗೆ ಬರಲ್ಲ, ಅವಳಿಗೆ ಭಾಷೆ (Language) ಬರಲ್ಲ, ಅವನು ಖರ್ಚಿಗೆ ಹಣಕೊಡಲ್ಲ ಎಂಬಿತ್ಯಾದಿ ಸಣ್ಣ ಪುಟ್ಟ ಕಾರಣಕ್ಕೆ ಡಿವೋರ್ಸ್ ಕೊಡಲಾಗುತ್ತದೆ. ಇದೀಗ ಹೆಂಡತಿ ಪ್ರತಿದಿನ ಮನೆಯಲ್ಲಿ ಮ್ಯಾಗಿ (Maggi) ಮಾಡ್ತಾಳೆ ಅನ್ನೋ ಕಾರಣಕ್ಕೂ ವ್ಯಕ್ತಿಯೊಬ್ಬರು ತಮ್ಮ ಹೆಂಡತಿಗೆ ಡಿವೋರ್ಸ್ ನೀಡಿದ್ದರಂತೆ. ಈ ವಿಚಿತ್ರ ಹಾಗೂ ವಿಶೇಷ ಪ್ರಕರಣದ (Special Case) ಬಗ್ಗೆ ತಿಳಿಸಿದ್ದು ಮೈಸೂರಿನ (Mysuru) ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ (Judge) ಎಂ.ಎಲ್.ರಘುನಾಥ್ ಅವರು. ಲೋಕ ಅದಾಲತ್‌ನಲ್ಲಿ (Lok Adalat) ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ನ್ಯಾ. ರಘುನಾಥ್ ಈ ವಿಚಾರ ತಿಳಿಸಿದ್ದಾರೆ.
ಮೈಸೂರಿನಲ್ಲಿ ಲೋಕ ಅದಾಲತ್
ಜೂನ್ 25ರಂದು ಮೈಸೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ಗೆ ಪೂರ್ವಭಾವಿಯಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಾ.ಎಂ.ಎಲ್.ರಘುನಾಥ್ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ವೈವಾಹಿಕ ವಿವಾದಗಳು ಹೆಚ್ಚುತ್ತಿದ್ದು, ಸುಮಾರು 800 ಪ್ರಕರಣಗಳು ಅದಾಲತ್‌ಗೆ ಬಂದಿವೆ, ಆದರೆ 32 ಪ್ರಕರಣಗಳಲ್ಲಿ ದಂಪತಿಗಳು ಮತ್ತೆ ಒಂದಾಗಿದ್ದಾರೆ ಅಂತ ಮಾಹಿತಿ ನೀಡಿದ್ರು.
ಮೂರು ಹೊತ್ತೂ ಮ್ಯಾಗಿ ಮಾಡ್ತಾಳೆ ಅಂತ ಹೆಂಡತಿಗೆ ಡಿವೋರ್ಸ್
ಈ ವೇಳೆ ಮಾತನಾಡಿದ ಅವರು ತಾವು ಬಳ್ಳಾರಿ ನ್ಯಾಯಾಲಯದಲ್ಲಿ ಈ ಹಿಂದೆ ಇದ್ದ ಸಂದರ್ಭದಲ್ಲಿ ಒಂದು ಪ್ರಕರಣವನ್ನು ನೆನಪಿಸಿಕೊಂಡರು. ಇದನ್ನು "ಮ್ಯಾಗಿ ಕೇಸ್" ಎಂದು ಕರೆದ ಅವರು, "ಈ ಪ್ರಕರಣವು ತನ್ನ ಹೆಂಡತಿಯ ವಿರುದ್ಧ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಸಂಬಂಧಿಸಿದೆ. ಕಾರಣ ಅವಳು ಕೇವಲ ಮ್ಯಾಗಿ ಅಡುಗೆ ಮಾಡುತ್ತಿದ್ದಳು ಮತ್ತು ಪ್ರತಿ ದಿನ ಮೂರು ಬಾರಿ ಬಡಿಸುತ್ತಿದ್ದಳು. ಇದರಿಂದ ಬೇಸರಗೊಂಡ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದನಂತೆ. ಆಕೆ ಬೇರೆ ಯಾವುದೇ ಆಹಾರವನ್ನು ಮಾಡುವುದಿಲ್ಲ. ಹೀಗಾಗಿ ನನಗೆ ಆಕೆಯಿಂದ ಬಿಡುಗಡೆ ಬೇಕು ಅಂತ ಹೇಳಿಕೊಂಡಿದ್ದಾನಂತೆ. ನಂತರ ಪ್ರಕರಣವು ವಿಚ್ಛೇದನದೊಂದಿಗೆ ಕೊನೆಗೊಂಡಿತು” ಎಂದು ಡಾ ರಘುನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ: BMW Car ಕಾವೇರಿ ನದಿಯಲ್ಲಿ ಮುಳುಗಿಸಿ ಮಾಲೀಕ ಪರಾರಿ! ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಿ
32 ಕೇಸ್‌ಗಳಲ್ಲಿ ಮಾತ್ರ ಒಂದಾದ ಜೋಡಿ
“ದಂಪತಿ ನಡುವೆ ರಾಜಿ ತರಲು ಮತ್ತು ಅವರನ್ನು ಮತ್ತೆ ಒಂದುಗೂಡಿಸಲು ನಾವು ಭಾವನೆಗಳನ್ನು ಬಳಸುತ್ತೇವೆ. ಇಲ್ಲಿ ದೈಹಿಕ ಸಮಸ್ಯೆಗಳಿಗಿಂತ ಮಾನಸಿಕ ಸಮಸ್ಯೆಗಳು ಹೆಚ್ಚು ಕೆಲಸ ಮಾಡುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ, ದಂಪತಿಗಳು ಮತ್ತೆ ಒಂದಾದರೂ, ಮನಸ್ತಾಪಗಳು ಹಾಗೆಯೇ ಉಳಿಯುತ್ತವೆ. 800-900 ವೈವಾಹಿಕ ಪ್ರಕರಣಗಳಲ್ಲಿ, ನಾವು ಸುಮಾರು 20-30 ಪ್ರಕರಣಗಳಲ್ಲಿ ಯಶಸ್ವಿಯಾಗುತ್ತೇವೆ. ಹಿಂದಿನ ಲೋಕ ಅದಾಲತ್‌ನಲ್ಲಿ ಸುಮಾರು 110 ವಿಚ್ಛೇದನ ಪ್ರಕರಣಗಳಲ್ಲಿ ಕೇವಲ 32 ಪ್ರಕರಣಗಳಲ್ಲಿ ಪುನರ್ಮಿಲನ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಜೂನ್ 25ರದು ಮೈಸೂರಿನಲ್ಲಿ ನಡೆಯಲಿದೆ ರಾಷ್ಟ್ರೀಯ ಲೋಕ ಅದಾಲತ್
ಜೂನ್ 25 ರಂದು ನಿಗದಿಪಡಿಸಲಾದ ಲೋಕ ಅದಾಲತ್‌ನಲ್ಲಿ, ನೆಗೋಶಬಲ್ ಉಪಕರಣಗಳ ಕಾಯಿದೆ, ಮೋಟಾರು ವಾಹನ ಕಾಯ್ದೆ, ಚೆಕ್ ಬೌನ್ಸ್ ಪ್ರಕರಣಗಳು ಮತ್ತು ಬೆದರಿಕೆ, ಸಣ್ಣ ಪ್ರಕರಣಗಳಂತಹ ಮೂರು ವರ್ಷಗಳಿಗಿಂತ ಕಡಿಮೆ ಅವಧಿಯ 2,800 ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಸುಮಾರು 22,000 ಪ್ರಕರಣಗಳನ್ನು ಪಟ್ಟಿ ಮಾಡಲಾಗಿದೆ.
ಇದನ್ನೂ ಓದಿ: Murder: ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಹತ್ಯೆ; ಇಬ್ಬರು ಆರೋಪಿಗಳ ಬಂಧನ
ಹಿಂದಿನ ಲೋಕ ಅದಾಲತ್‌ನಲ್ಲಿ 54,000 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, 53 ವರ್ಷ ಹಳೆಯ ಪ್ರಕರಣಗಳನ್ನೂ ಪರಿಹರಿಸಲಾಗಿದೆ. ಇಂತಹ ಅವಿರತ ಪ್ರಯತ್ನದಿಂದ ಲೋಕ ಅದಾಲತ್‌ನಲ್ಲಿ ಪ್ರಕರಣಗಳ ಇತ್ಯರ್ಥದಲ್ಲಿ ಮೈಸೂರು ಪ್ರಥಮ ಸ್ಥಾನದಲ್ಲಿದೆ ಎಂದು ನ್ಯಾ. ರಘುನಾಥ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ