• Home
  • »
  • News
  • »
  • state
  • »
  • Police Complaint: ಮತಾಂತರಗೊಂಡ್ರಷ್ಟೇ ಸಂಸಾರ ಅಂತಾಳೆ ನನ್ನ ಹೆಂಡತಿ! ಪತ್ನಿ ವಿರುದ್ಧವೇ ದೂರು ಕೊಟ್ಟ ಪತಿ

Police Complaint: ಮತಾಂತರಗೊಂಡ್ರಷ್ಟೇ ಸಂಸಾರ ಅಂತಾಳೆ ನನ್ನ ಹೆಂಡತಿ! ಪತ್ನಿ ವಿರುದ್ಧವೇ ದೂರು ಕೊಟ್ಟ ಪತಿ

ಪೊಲೀಸರಿಗೆ ದೂರು

ಪೊಲೀಸರಿಗೆ ದೂರು

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರಷ್ಟೇ ನಿನ್ನ ಜೊತೆ ಸಂಸಾರ ಮಾಡೋದಾಗಿ ಹೇಳಿದ್ದಾಳೆಂದು ಪ್ರತಿಯೊಬ್ಬ ತನ್ನ ಪತ್ನಿ ವಿರುದ್ಧವೇ ದೂರು ನೀಡಿದ್ದಾರೆ. ಇದನ್ನು ತಳ್ಳಿ ಹಾಕಿರೋ ಮಹಿಳೆ ಪ್ರತಿ ದೂರು ನೀಡಲು ಮುಂದಾಗಿದ್ದು, ಮತಾಂತರದ ಗುಮ್ಮ ಚರ್ಚೆಗೆ ಕಾರಣವಾಗಿದೆ.

  • News18 Kannada
  • Last Updated :
  • Karnataka, India
  • Share this:

ಹುಬ್ಬಳ್ಳಿ (ನ.16): ನನ್ ಜೊತೆ ಸಂಸಾರ ಮಾಡಬೇಕಂದ್ರೆ ನೀನು ಧರ್ಮಾಂತರ ಆಗಬೇಕು. ಹೀಗಂತ ಪತಿರಾಯನೊಬ್ಬ ತನ್ನ ಪತ್ನಿ ವಿರುದ್ಧವೇ ಮತಾಂತರ ಪ್ರಚೋದನೆ ದೂರು (Complaint) ನೀಡಿದ್ದಾನೆ. ಜೊತೆಗೆ ಶಿಕ್ಕಲಗಾರ ಸಮಾಜದ ಕೆಲ ಮುಖಂಡರ ವಿರುದ್ಧವೂ ದೂರು ನೀಡಲಾಗಿದೆ. ಆದರೆ ಮತಾಂತರ (Convert) ಆರೋಪವನ್ನು ತಳ್ಳಿ ಹಾಕಿರುವ ಗೃಹಿಣಿ, ಉಚಿತ ಸಿಲಿಂಡರ್ ಗಾಗಿ (Free Cylinder) ನಡೆದ ಜಗಳ ಇಷ್ಟೆಲ್ಲಕ್ಕೂ ಕಾರಣ ಎಂದು ದೂರಿದ್ದಾಳೆ. ಮತಾಂತರದ ವಿರುದ್ಧವಾಗಿ ಪ್ರತಿ ದೂರು ನೀಡಲು ತೀರ್ಮಾನಿಸಲಾಗಿದೆ.


ಹುಬ್ಬಳ್ಳಿಯಲ್ಲಿ‌ ಮಾತಾಂತರ ವಿವಾದ


ಹುಬ್ಬಳ್ಳಿಯಲ್ಲಿ‌ ಮಾತಾಂತರ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಹಳೇ ಹುಬ್ಬಳ್ಳಿಯ ಶಿಕ್ಕಲಗಾರ ಸಮುದಾಯದ ಕುಟುಂಬಗಳನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪಿಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಘೇರಾವ್ ಹಾಕಲಾಯಿತು. ಶಿಕ್ಕಲಗಾರ ಸಮುದಾಯದವರನ್ನು ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ, ಮತಾಂತರ ಮಾಡುವವರ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹ ಶಿಕ್ಕಲಿಗಾರ ಸಮುದಾಯ ಮತ್ತು ಹಿಂದೂ ಮುಖಂಡರಿಂದ ಠಾಣೆಗೆ ಘೇರಾವ್ ಹಾಕಿದರು. ಮತಾಂತರ ಮಾಡುತ್ತಿರುವವರ ವಿರುದ್ದ ಕ್ರಮಕ್ಕೆ ಹಿಂದೂ ಮುಖಂಡರ ಪಟ್ಟು ಹಿಡಿದರು.
ಗಂಡನಿಗೆ ಮತಾಂತರ ಅಗುವಂತೆ ಹೇಳಿದ್ರಾ ಮಹಿಳೆ?


ಇದೀಗ ಗಂಡನಿಗೆ ಮತಾಂತರ ಅಗುವಂತೆ ಮಹಿಳೆಯ ಒತ್ತಾಯದಿಂದ ಮತಾಂತರದ ರಗಳೆ ಶುರುವಾಗಿದೆ. ಮತಾಂತರ ಆಗದಿದ್ರೆ, ಸಂಸಾರ ಮಾಡದೇ ಇರುವುದಾಗಿ ಪತ್ನಿ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ. ಮತಾಂತರ ಆಗುವಂತೆ ಪತ್ನಿ ಪಟ್ಟು ಹಿಡಿದಿದ್ದಾಳೆ ಎಂದು ವ್ಯಕ್ತಿ ಸಮುದಾಯದ ಮುಖಂಡರ ಗಮನಕ್ಕೆ ತಂದಿದ್ದಾನೆ. ಮತಾಂತರ ಆಗುವಂತೆ ಹೆಂಡತಿಯ ಪಟ್ಟು ಹಿಡಿದಿದ್ದಳು ಎಂದು ಸಂಪತ್ ಬಗನಿ ಆರೋಪಿಸಿದ್ದಾರೆ.


ಮತಾಂತರಕ್ಕೆ ಒತ್ತಾಯ


ಮತಾಂತರ ವಿಚಾರವಾಗಿ ದಂಪತಿ ಹಲವು ಬಾರಿ ಠಾಣೆ ಮೆಟ್ಟಿಲೇರಿದ್ದರು. ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಪ್ರತಿ ಬಾರಿ ರಾಜೀ ಮಾಡಿ‌ ಕಳಿಸಿದ್ದರು. ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರ ಆಗುವಂತೆ ಒತ್ತಾಯಿಲಾಗಿತ್ತು ಎಂದು ಆರೋಪಿಸಲಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ಠಾಣೆಯಲ್ಲಿ ಮುಂದೆ ಜಮಾಯಿಸಿದ ಜನ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.


ಶಿಕ್ಕಲಿಗಾರ ಸಮುದಾಯದ ಯುವಕರು ಹಾಗೂ ಹಿಂದೂ ಮುಖಂಡರ ಜಮಾವಣೆಗೊಂಡಿದ್ದರಿಂದ ಕೆಲ ಕಾಲ ಠಾಣೆಯ ಬಳಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಹಿಂದೂ ಮುಖಂಡ ಜಯತೀರ್ಥ ಕಟ್ಟಿ ಸೇರಿದಂತೆ ಇತರರು ಭೇಟಿ ನೀಡಿದ್ದರು. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರೇರೇಪಿಸುತ್ತಿರುವ ರೌಡಿ ಶೀಟರ್ ಮದನ್ ಬುಗುಡಿ ಸೇರಿದಂತೆ 15 ಜನರ ವಿರುದ್ದ ಮತಾಂತರದ ದೂರು ನೀಡಲಾಗಿದೆ. ಈ ಕುರಿತು ಹಳೆ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಪ್ರತಿ ದೂರು ನೀಡಲು ತೀರ್ಮಾನ


ಬಲವಂತ ಮತಾಂತರ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಹಿಂದೂಪರ ಸಂಘಟನೆಗಳ ದೂರಿಗೆ ಪ್ರತಿ ದೂರು ನೀಡಲು ತೀರ್ಮಾನಿಸಲಾಗಿದೆ. ಮುಂದಾದ ಸಿದ್ಧು ಬುಗಡಿ ಮತ್ತಿತರರು ಪ್ರತಿ ದೂರು ದಾಖಲಿಸಲು ತೀರ್ಮಾನಿಸಿದ್ದಾರೆ. ಮತ್ತೊಂದೆಡೆ ಪತಿಯ ಮತಾಂತರಕ್ಕೆ ಯತ್ನಿಸಿದ ಆರೋಪವನ್ನು ತಳ್ಳಿಗಾರಿಕೋ ಗೃಹಿಣಿ ಹಿಂದೂಪರ ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಸಿದ್ಧು ಬುಗಡಿ ಮತ್ತು ಇತರರ ವಿರುದ್ಧ ಬಲವಂತ ಮತಾಂತರದ ದೂರು ದಾಖಲು ಮಾಡಲಾಗಿತ್ತು.
ಸಿಕ್ಕಲಗಾರ ಸಮಾಜದವರನ್ನ ಬಲವಂತವಾಗಿ ಮತಾಂತರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆರೋಪವನ್ನ ತಳ್ಳಿಹಾಕಿದ ಸಿದ್ಧು ಬುಗಡಿ, ಪ್ರತಿದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.


ನಾನು ಹಿಂದೂ ಧರ್ಮದವನೇ


ಪದೇ ಪದೇ ನನ್ನ ಮೇಲೆ ಮತಾಂತರದ ಆರೋಪ ಬರ್ತಿದೆ. ನಾನು ಹಿಂದೂ ಧರ್ಮದವನೇ ಆಗಿದ್ದೇನೆ. ನಾನೇನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿಲ್ಲ. ಯಾರನ್ನೂ ಮತಾಂತರ ಮಾಡಿಲ್ಲ. ಮತಾಂತರ ಮಾಡಿದ ಸಾಕ್ಷಿ, ಪುರಾವೆ ಇದ್ದರೆ ಕಾನೂನು ಕ್ರಮ ಕೈಗೊಳ್ಳಲಿ. ನನ್ನ ಬೆಳವಣಿಗೆ ಸಹಿಸದ ನಮ್ಮ ಸಮಾಜದವರಿಂದಲೇ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಎಸಿಪಿ ಕಚೇರಿಗೆ ತೆರಳಿ ಲಿಖಿತ ದೂರು ನೀಡಲಿದ್ದೇನೆ. ಪದೇ ಪದೇ ಪೊಲೀಸ್ ಠಾಣೆಗೆ ಕರೆಸಿ, ನನ್ನ ಮಾನಸಿಕ ಸ್ಥಿತಿಯನ್ನ ಕುಗ್ಗಿಸಲಾಗ್ತಿದೆ. ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗ್ತಿದೆ ಎಂದು ದೂರುದಾರರ ವಿರುದ್ಧ ಸಿದ್ಧು ಬುಗಡಿ ಕಿಡಿಕಾರಿದ್ದಾರೆ.


ಇದನ್ನೂ ಓದಿ: Suicide: ಹೆಂಡತಿ ದುಡ್ಡಿನಾಸೆಗೆ ಹೆಣವಾದ ಗಂಡ! ಬೆಂಗಳೂರಲ್ಲಿ ಪತ್ನಿ ಕಾಟಕ್ಕೆ ಬೇಸತ್ತು ಪತಿ ಆತ್ಮಹತ್ಯೆ


ಇನ್ನು ಗಂಡನನ್ನು ಮತಾಂತರಕ್ಕೆ ಒತ್ತಾಯ ಮಾಡಿದ ಆರೋಪ ಹೊತ್ತಿರೋ ಭಾರತಿ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಗಂಡನನ್ನ ಮತಾಂತರಕ್ಕೆ ಒತ್ತಡ ಮಾಡಿಲ್ಲ. ನಾನೇ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿಲ್ಲ. ವೈಯಕ್ತಿಕ ನಂಬಿಕೆ ಕಾರಣಕ್ಕೆ ಚರ್ಚ್ ಗೆ ಹೋಗ್ತೇನೆ. ಯಾರನ್ನೂ ಮತಾಂತರಗೊಳ್ಳುವಂತೆ ಪ್ರೇರೇಪಿಸಿಲ್ಲ. ನನ್ನನ್ನ ನನ್ನ ಪತಿ ಬಿಟ್ಟು 13 ವರ್ಷವಾಯಿತು.  ನನ್ನ ತವರು ಮನೆಯಲ್ಲಿ ನಾನು ಇದ್ದೇನೆ. ನನ್ನ ಕುಟುಂಬದ ಸದಸ್ಯರಿಗೆ ಕಿರುಕುಳ ಕೊಡಲೆಂದು ಹೀಗೆ ಮಾಡಿದಾರೆ ಎಂದು ಆರೋಪಿಸಿದ್ರು.


ನನಗೆ ಜೀವ ಭಯವಿದೆ, ಸೂಕ್ತ ರಕ್ಷಣೆ


ಮತಾಂತರಕ್ಕೆ ಪ್ರೇರೇಪಣೆ ಪ್ರಶ್ನೆಯೇ ಇಲ್ಲ. ಉಚಿತ ಗ್ಯಾಸ್ ಕಬಳಿಸೋಕೆ‌ ಈ ರೀತಿ ಮಾಡಿದ್ದಾರೆ. ಉಚಿತ ಗ್ಯಾಸ್ ಪಡೆಯಲು ಅರ್ಜಿ ಹಾಕಿದ್ದೆ. ಅದರಲ್ಲಿ ಗಂಡನ ಹೆಸರು ಬರೆದಿದ್ದರಿಂದ ಗ್ಯಾಸ್ ಅವರ ಮನೆಗೆ ಹೋಗಿತ್ತು. ಅದನ್ನು ನನಗೆ ಕೊಡದೆ ಹಲ್ಲೆ ಮಾಡಿದ್ದಾರೆ. ನನಗೆ ಜೀವ ಭಯವಿದೆ, ಸೂಕ್ತ ರಕ್ಷಣೆ ಕೊಡಿ ಎಂದು ಭಾರತಿ ಪೊಲೀಸರಿಗೆ ಮನವಿ ಮಾಡಿದ್ದಾಳೆ. ಭಾರತಿ ವಿರುದ್ಧ ಪತಿ ಸಂಪತ್ ಬಲವಂತದ ಮತಾಂತರದ ಕುರಿತು ದೂರು ಸಲ್ಲಿಸಿದ್ದರು.

Published by:ಪಾವನ ಎಚ್ ಎಸ್
First published: