Family Suicide: ಮಗುವಿನ ಕತ್ತು ಹಿಸುಕಿ ಗಂಡ ಹೆಂಡತಿ ನೇಣಿಗೆ ಶರಣು, ಬೆಂಗಳೂರಿನಲ್ಲಿ ಭೀಕರ ಘಟನೆ!

ಬೆಂಗಳೂರಿನಲ್ಲಿ ಮಗುವಿನ ಸಮೇತ ಗಂಡ-ಹೆಂಡತಿ ಸಾವಿಗೆ ಶರಣಾದ ಘಟನೆ ನಡೆದಿದೆ. ಬಾಧಿಸಿದ ಅನಾರೋಗ್ಯ ಹಿನ್ನೆಲೆ ಪುಟ್ಟ ಸಂಸಾರವೇ ಸೂಸೈಡ್​ ಮಾಡಿಕೊಂಡಿದೆ. ಏಳೆಂಟು ವರ್ಷದ ಮಗನ ಕತ್ತು ಹಿಸುಕಿ ಕೊಂದು ಬಳಿಕ ಗಂಡ-ಹೆಂಡತಿ ನೇಣು ಬಿಗಿದುಕೊಂಡಿದ್ದಾರೆ.

ಸಾವನ್ನಪ್ಪಿದ ದಂಪತಿ

ಸಾವನ್ನಪ್ಪಿದ ದಂಪತಿ

  • Share this:
ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಒಂದೇ ಕುಟುಂಬದ (Family) ಮೂವರು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಅನಾರೋಗ್ಯ ಹಿನ್ನೆಲೆ ಇಡೀ ಕುಟುಂಬವೇ ಸಾವಿನ ದಾರಿ ಹಿಡಿದಿದೆ. ಆತ್ಮಹತ್ಯೆ ಮಹಾಪಾಪ. ಆದರೆ ಕಾಡಿದ ವಿಪರೀತ ಆರೋಗ್ಯ ಸಮಸ್ಯೆಯಿಂದ (Health issue) ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾಗಿದೆ. ಪುಟ್ಟ ಮಗನ (Son) ಸಮೇತ ಗಂಡ-ಹೆಂಡತಿ (Husband Wife) ಮನೆಯೊಳಗೆ ನೇಣು ಬಿಗಿದುಕೊಂಡು ಸೂಸೈಡ್​ ಮಾಡಿಕೊಂಡಿದ್ದಾರೆ. ಬೆಂಗಳೂರಿನ (Bengaluru) ಕೋಣನಕುಂಟೆ ಬಳಿಯ ಚುಂಚನಕಟ್ಟೆ ಸರ್ಕಲ್ ಬಳಿ ಈ ಘಟನೆ ನಡೆದಿದೆ. ಸಾವನ್ನಪ್ಪಿದ ಮನೆ ಯಜಮಾನನ ಸ್ನೇಹಿತ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಗುವಿನ ಸಮೇತ ಗಂಡ-ಹೆಂಡತಿ ಸಾವಿಗೆ ಶರಣಾದ ಘಟನೆ ನಡೆದಿದೆ. ಬಾಧಿಸಿದ ಅನಾರೋಗ್ಯ ಹಿನ್ನೆಲೆ ಪುಟ್ಟ ಸಂಸಾರವೇ ಸೂಸೈಡ್​ ಮಾಡಿಕೊಂಡಿದೆ. ಏಳೆಂಟು ವರ್ಷದ ಮಗನ ಕತ್ತು ಹಿಸುಕಿ ಕೊಂದು ಬಳಿಕ ಗಂಡ-ಹೆಂಡತಿ ನೇಣು ಬಿಗಿದುಕೊಂಡಿದ್ದಾರೆ.

ಅನಾರೋಗ್ಯದಿಂದ ನೇಣಿಗೆ ಶರಣು

ಗಂಡ ಮಹೇಶ್, ಹೆಂಡತಿ ಜ್ಯೋತಿ ಮತ್ತು ಮಗ ಸಾವಿಗೆ ಶರಣಾದವರು. ಮಹೇಶ್​ರವರು ಕಳೆದ ಒಂದು ವಾರದಿಂದ ಹೊಟ್ಟೆನೋವಿಂದ ಬಳಲುತ್ತಿದ್ದರು. ಅದಕ್ಕಾಗಿ ಪ್ರತಿದಿನ ಟ್ಯಾಬ್ಲೆಟ್​ ತಗೊಂಡು ಸುಸ್ತಾಗಿ ಹೋಗಿದ್ದರು. ಇಂದು ಬೆಳಗ್ಗೆ ಮತ್ತೆ ಮಹೇಶ್​​ ಖಾಸಗಿ ಆಸ್ಪತ್ರೆಯಲ್ಲಿ ಚೆಕ್ ಮಾಡಿಸಿದ್ದಾರೆ. ಆಗ ವೈದ್ಯರು ಕ್ಯಾನ್ಸರ್ ಇದೆ ಎಂದಿದ್ದಾರೆ.

ಇದನ್ನೂ ಓದಿ: ರಾಜು ಶ್ರೀವಾತ್ಸವ್ ಮೆದುಳು ನಿಷ್ಕ್ರಿಯ, ಬುರ್ಖಾ ತೊಟ್ಟು ಬಂದ ಯುವಕನಿಗೆ ಏಟು! ಈ ಸಂಜೆಯ ಟಾಪ್ ನ್ಯೂಸ್‌ಗಳು ಇಲ್ಲಿವೆ

ಪತಿ ಮಹೇಶ್​ಗೆ ಕ್ಯಾನ್ಸರ್​ ದೃಢವಾಗಿತ್ತು. ಇದೇ ಸಂಬಂಧ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಇದರಿಂದ ಮಹೇಶ್​ ಮತ್ತಷ್ಟು ನೊಂದಿದ್ದರು. ಈ ಹಿಂದೆ ಕೂಡ ಮಹೇಶ್​ ಅವರಿಗೆ ಆಪರೇಷನ್ ಆಗಿತ್ತು. ಹಾಗಾಗಿ ವಿಪರೀತ ಕಾಡಿದ ಅನಾರೋಗ್ಯದ ಸಮಸ್ಯೆಯಿಂದ ಸೂಸೈಡ್ ಮಾಡಿಕೊಂಡಿದ್ದಾರೆ.

ಮಗನ ಕತ್ತು ಹಿಸುಕಿ ಕೊಂದು ನೇಣಿಗೆ ಶರಣು

ಜ್ಯೋತಿ ಮತ್ತು ಮಹೇಶ್​ ದಂಪತಿಗೆ ಏಳೆಂಟು ವರ್ಷದ ಮಗನಿದ್ದಾನೆ. ಮೊದಲು ಏಳೆಂಟು ವರ್ಷದ ಮಗನ ಕತ್ತು ಹಿಸುಕಿ ಕೊಂದಿದ್ದಾರೆ. ನಂತರ ಗಂಡ ಹೆಂಡತಿ ಇಬ್ಬರೂ ಬೇರೆ ಬೇರೆ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಘಟನೆಗೆ ಎಲ್ಲರೂ ದಿಗ್ಭ್ರಾಂತರಾಗಿದ್ದಾರೆ.

ಸ್ನೇಹಿತನಿಂದ ಘಟನೆ ಬೆಳಕಿಗೆ

ಬೆಳಗ್ಗೆ ಮಹೇಶ್​ ಸ್ನೇಹಿತರ ಬಳಿ‌ ರಿಪೋರ್ಟ್ ತರಲು ಹೋಗೋದಾಗಿ‌ ತಿಳಿಸಿದ್ದರು. ನಂತರ ಮಹೇಶ್​ಗೆ ಸ್ನೇಹಿತ ನಾಗೇಶ್ ಹಲವು ಬಾರಿ‌ ಕರೆ ಮಾಡಿದ್ದರು. ಮಹೇಶ್​ ಫೋನ್ ರಿಸೀವ್ ಮಾಡದಿದ್ದಾಗ ಸ್ನೇಹಿತ ನಾಗೇಶ್ ಮನೆ ಬಳಿ ಬಂದಿದ್ದರು. ಮನೆ ಬಳಿ ಕರೆದಾಗ ಬಾಗಿಲು ಯಾರೂ ತೆರೆಯಲಿಲ್ಲ. ಆಗ ಕಿಟಕಿ ಗಾಜು ಒಡೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಿಬಿಎಂಪಿ ಗುತ್ತಿಗೆ ಕೆಲಸ ಮಾಡುತ್ತಿದ್ದ ಮಹೇಶ್

ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಶರಣಾದ ಮಹೇಶ್​, ಬಿಬಿಎಂಪಿ ಗುತ್ತಿಗೆ ಕೆಲಸ ಮಾಡುತ್ತಿದ್ದರು. ಮಳವಳ್ಳಿ ಮೂಲದ ಮಹೇಶ್ ಕುಟುಂಬ ಸಮೇತ ಬೆಂಗಳೂರಿನಲ್ಲಿ ವಾಸವಾಗಿದ್ರು. ಇಂದು ಪತ್ನಿ ಜ್ಯೋತಿ ಮತ್ತು ಪತಿ ಮಹೇಶ್​ ಇಬ್ಬರೂ ಪ್ರತ್ಯೇಕ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಇದನ್ನೂ ಓದಿ: ಪ್ರಿಯಕರನೊಂದಿಗೆ ಮೂರು ಮಕ್ಕಳ ತಾಯಿ ಎಸ್ಕೇಪ್, ಮನೆಯಲ್ಲಿದ್ದ ಕಂದಮ್ಮಗಳ ಪಾಲಿಗೆ ತಂದೆಯೇ ಯಮನಾದ!

ಬಾಡಿಗೆ ಮನೆಯ ಗ್ರೌಂಡ್ ಫ್ಲೋರ್​​ನಲ್ಲಿ ಮಹೇಶ್​ರವರ ಕುಟುಂಬ ವಾಸವಿತ್ತು. ಕುಟುಂಬ ಆರ್ಥಿಕವಾಗಿಯೂ ಸದೃಢವಾಗಿತ್ತು. ಆದರೆ ಆರೋಗ್ಯ ಸಮಸ್ಯೆಕ್ಕೆ ಕುಟುಂಬವೇ ಸಾವನ್ನಪ್ಪಿದೆ. ಇನ್ನು ಇಬ್ಬರ ಕುಟುಂಬದವರ ಆಗಮನಕ್ಕಾಗಿ ಕೋಣನಕುಂಟೆ ‌ಪೊಲೀಸರು ಕಾದುನಿಂತಿದ್ದಾರೆ. ಸಂಬಂಧಿಕರು ಮಂಡ್ಯದ ಮಳವಳ್ಳಿಯಿಂದ ಬರಬೇಕಿದೆ. ಬಳಿಕ ಮೃತ ಮೂವರ ಮರಣೋತ್ತರ ಪರೀಕ್ಷೆ ನಡೆಯಲಿದೆ.
Published by:Thara Kemmara
First published: