ಬೀದರ್​ನಲ್ಲಿ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ 6 ಮಂದಿ ಸಾವು

ಮೃತ ದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

Latha CG | news18
Updated:June 26, 2019, 12:23 PM IST
ಬೀದರ್​ನಲ್ಲಿ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ 6 ಮಂದಿ ಸಾವು
ಸಾಂದರ್ಭಿಕ ಚಿತ್ರ
  • News18
  • Last Updated: June 26, 2019, 12:23 PM IST
  • Share this:
ಬೀದರ್​(ಜೂ.26): ಪುರಾತನ ಕಾಲದ ಮಣ್ಣಿನ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿರುವ ದುರ್ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣದ ಚಿಲ್ಲಾಗಲ್ಲಿಯಲ್ಲಿ ನಡೆದಿದೆ.

ತಂದೆ ತಾಯಿ ಸೇರಿ ಒಂದೇ ಕುಟುಂಬದ 6 ಮಂದಿ ಮೃತಪಟ್ಟಿದ್ದಾರೆ. ನದೀಮ್ ಶೇಖ್ ಯೂಸ್‌ಫ್ (45), ಫರೀದಾ ಬೇಗಂ ನದೀಮ್ ಶೇಖ್ (34), ಆಯಿಷಾಬಾನು ನದೀಮ್ ಶೇಖ್ (15), ಮೆಹತಾಬಿ ನದೀಮ್ ಶೇಖ್ (14), ಫೈಜಾನ್ ಅಲಿ ನದೀಮ್ ಶೇಖ್ (6) ಹಾಗೂ ಫರ್ಹಾನ್ ಅಲಿ ನದೀಮ್ ಶೇಖ್ (4) ಮೃತ ದುರ್ದೈವಿಗಳು.

ಇದನ್ನೂ ಓದಿ: ತಿಪ್ಪೆ ಆಹಾರವೇ ಈತನಿಗೆ ಮೃಷ್ಟಾನ್ನವಾಯ್ತು; ಕೊಪ್ಪಳದಲ್ಲಿ ವೈರಲ್ ಆಗುತ್ತಿದೆ ಈ ಮನಕಲಕುವ ದೃಶ್ಯ!

ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಹಳೇ ಕಾಲದ ಮಣ್ಣಿನ ಮನೆ ಯಾದ್ದರಿಂದ ಕುಸಿದು ಬಿದ್ದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಶಾಸಕ ಬಿ. ನಾರಾಯಣರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸವ ಕಲ್ಯಾಣ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತ ದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ಸಿಎಂ ಎಚ್​ಡಿ ಕುಮಾರಸ್ವಾಮಿ ಅವರು ಜೂನ್ 27ರಂದು ಗ್ರಾಮ ವಾಸ್ತವ್ಯ ಮಾಡುವ ಮುನ್ನಾ ದಿನವೇ ಈ ಘಟನೆ ನಡೆದಿದೆ.
First published:June 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ