• Home
  • »
  • News
  • »
  • state
  • »
  • PFI Ban: ನಿಷೇಧದ ಬೆನ್ನಲ್ಲೇ ಪಿಎಫ್‌ಐಗೆ ಶಾಕ್! ಜಿಲ್ಲಾಧ್ಯಕ್ಷರ ಮನೆ ಮೇಲೆ ದಾಳಿ, ದಾಖಲೆಗಳ ಪರಿಶೀಲನೆ

PFI Ban: ನಿಷೇಧದ ಬೆನ್ನಲ್ಲೇ ಪಿಎಫ್‌ಐಗೆ ಶಾಕ್! ಜಿಲ್ಲಾಧ್ಯಕ್ಷರ ಮನೆ ಮೇಲೆ ದಾಳಿ, ದಾಖಲೆಗಳ ಪರಿಶೀಲನೆ

ಪೊಲೀಸರಿಂದ ಪರಿಶೀಲನೆ

ಪೊಲೀಸರಿಂದ ಪರಿಶೀಲನೆ

ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರಿಂದ ಸರ್ಚ್ ವಾರೆಂಟ್ ಪಡೆದು ಕಾರ್ಯಪ್ರವೃತ್ತರಾದ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದರಿಂದ ಗೊಂದಲಕ್ಕೆ ಒಳಗಾದ ಕುಟುಂಬಸ್ಥರು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನ ಪ್ರಶ್ನಿಸಿದರು. ಅಧಿಕಾರಿಗಳು, ಪೊಲೀಸರು ಮತ್ತು ಕುಟುಂಬಸ್ಥರ ನಡುವೆ ಮಾತಿನ ಚಕಾಮಕಿ ನಡೆಯಿತು.

ಮುಂದೆ ಓದಿ ...
  • Share this:

ಚಿಕ್ಕಮಗಳೂರು: ದೇಶದಲ್ಲಿ ಪಿಎಫ್‍ಐ ಸಂಘಟನೆ ನಿಷೇಧ (PFI Organization Ban) ಬೆನ್ನಲ್ಲೇ ಇಂದು ಬೆಳಿಗ್ಗೆ ಪೊಲೀಸರು (Police) ಪಿಎಫ್‍ಐ ಮತ್ತು ಎಸ್‍ಡಿಪಿಐ ಕಾರ್ಯಕರ್ತರ (PFI, SDPI Workers) ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ, ತಪಾಸಣೆ ನಡೆಸಿದರು. ಚಿಕ್ಕಮಗಳೂರು (Chikkamagaluru) ನಗರದ ವಿಜಯಪುರದಲ್ಲಿರುವ ಪಿಎಫ್‍ಐ ಜಿಲ್ಲಾಧ್ಯಕ್ಷ ಚಾಂದ್ ಪಾಷ ಹಾಗೂ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಗೌಸ್ ಮುನೀರ್‌ಗೆ ಬಿಸಿ ಮುಟ್ಟಿಸಿದ್ದಾರೆ. ತಾಲ್ಲೂಕಿನ ಆಲ್ದೂರು ವಗಾರ್ ರಸ್ತೆಯಲ್ಲಿರುವ ಆರೀಫ್ ಮನೆ, ಮಲ್ಲಂದೂರು ರಸ್ತೆಯಲ್ಲಿರುವ ಎಸ್ ಡಿಪಿಐ ಜಿಲ್ಲಾ ಕಚೇರಿ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಿದರು. ಈ ವೇಳೆ ಮನೆ ಮತ್ತು ಕಚೇರಿ ಸುತ್ತಮುತ್ತ ಬೀಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.


 ಕುಟುಂಬಸ್ಥರು, ಪೊಲೀಸರ ನಡುವೆ ಮಾತಿನ ಚಕಮಕಿ


ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರಿಂದ ಸರ್ಚ್ ವಾರೆಂಟ್ ಪಡೆದು ಕಾರ್ಯಪ್ರವೃತ್ತರಾದ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದರಿಂದ ಗೊಂದಲಕ್ಕೆ ಒಳಗಾದ ಕುಟುಂಬಸ್ಥರು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನ ಪ್ರಶ್ನಿಸಿದರು. ಅಧಿಕಾರಿಗಳು, ಪೊಲೀಸರು ಮತ್ತು ಕುಟುಂಬಸ್ಥರ ನಡುವೆ ಮಾತಿನ ಚಕಾಮಕಿ ನಡೆಯಿತು.


ಪಿಎಫ್‍ಐ ಜಿಲ್ಲಾಧ್ಯಕ್ಷ ಚಾಂದ್ ಪಾಷ


ಪ್ರಮುಖರ ಮನೆ, ಕಚೇರಿಯಲ್ಲಿ ಪರಿಶೀಲನೆ


ಮನೆ ಮತ್ತು ಕಚೇರಿಯಲ್ಲಿ ತಪಾಸಣೆ ನಡೆಸಿದ ವಿವಿಧ ಇಲಾಖೆಯ ಅಧಿಕಾರಿಗಳು ನಿಷೇಧಿತ ಪಿಎಫ್‍ಐ ಚಟುವಟಿಕೆಗಳ ಮಾಹಿತಿ ಕಲೆ ಹಾಕಿದರು. ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಗೌಸ್ ಮುನೀರ್ ಮನೆಯಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು ಅಲ್ಲಿಂದ ನೇರವಾಗಿ ಮಲ್ಲಂದೂರು ರಸ್ತೆಯಲ್ಲಿರುವ ಎಸ್‍ಡಿಪಿಐ ಕಚೇರಿಯಲ್ಲಿ ತಪಾಸಣೆ ನಡೆಸಿದರು. ಇದೇ ವೇಳೆ ಪಿಎಫ್‍ಐ ಜಿಲ್ಲಾಧ್ಯಕ್ಷ ಚಾಂದ್ ಪಾಷ ಮನೆಯಲ್ಲಿ ತಪಾಸಣೆ ನಡೆಸಿದರು.


ಇದನ್ನೂ ಓದಿ: Appachu Ranjan: ಸಿದ್ದರಾಮಯ್ಯಗೆ ತಲೆಕೆಟ್ಟಿದೆ, ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ! ಮಾಜಿ ಸಿಎಂ ವಿರುದ್ಧ ಶಾಸಕ ಅಪ್ಪಚ್ಚು ರಂಜನ್ ಆಕ್ರೋಶ


ಪೊಲೀಸರ ಪರಿಶೀಲನೆಗೆ ಎದುರಾಯ್ತು ವಿರೋಧ


ಪಿಎಫ್‍ಐ ಜಿಲ್ಲಾಧ್ಯಕ್ಷ ಚಾಂದ್ ಪಾಷ ಮನೆ ಮೇಲೆ ಏಕಾಏಕಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಮನೆ ಯಲ್ಲಿದ್ದವರು ವಿರೋಧಿಸಿದರು. ಯಾವ ಕಾರಣಕ್ಕಾಗಿ ದಾಳಿ ನಡೆಸಲಾಗುತ್ತಿದೆ ಎಂದು ಪೊಲೀಸರನ್ನು ಪ್ರಶ್ನಿಸಿದರು. ಮನೆ ತಪಾಸಣೆಗೆ ವಾರೆಂಟ್ ಇದೆ ಎಂದು ಉತ್ತರಿಸಿದ ಅಧಿಕಾರಿಗಳು ಹಾಗೂ ಪೊಲೀಸರು ಮನೆಯ ಬಾಗಿಲು ತೆರೆದು ತಪಾಸಣೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು.


ಪೊಲೀಸರಿಂದ ಪರಿಶೀಲನೆ


ಠಾಣೆಗೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ರೇಡ್


ಪೊಲೀಸ್ ಠಾಣೆಗೆ ಹಾಜರಾಗದ ಹಿನ್ನಲೆಯಲ್ಲಿ ಆಲ್ದೂರು ಸಮೀಪದ ವಗಾರ ರಸ್ತೆಯಲ್ಲಿರುವ ಪಿಎಫ್‍ಐ ಕಾರ್ಯಕರ್ತ ಆರೀಫ್ ಮನೆ ಮೇಲೆ ದಾಳಿ ನಡೆಸಿದರು. ಎರಡು ದಿನಗಳ ಹಿಂದೆ ಠಾಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದು, ಠಾಣೆಗೆ ಹಾಜರಾಗದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳಿಂದ ಸರ್ಚ್ ವಾರೆಂಟ್ ಪಡೆದು ಮನೆ ಮೇಲೆ ದಾಳಿ ನಡೆಸಿದರು. ಈ ವೇಳೆ ಸಿಪಿಐ ಸತ್ಯನಾರಾಯಣ, ಪಿಎಸ್‍ಐ ಸಜಿತ್, ಕೀರ್ತಿಕುಮಾರ್ ಹಾಗೂ ಸಿಬ್ಬಂದಿಗಳು ಇದ್ದರು.


ಪೊಲೀಸ್ ಸಿಬ್ಬಂದಿಗೆ ಕಂದಾಯ ಇಲಾಖೆ ಅಧಿಕಾರಿಗಳು ಸಾಥ್


ಏಕಕಾಲದಲ್ಲಿ ನಡೆದ ದಾಳಿಯಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಕಂದಾಯ ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು. ಪಿಎಫ್‍ಐ ಸಂಘಟನೆ ನಿಷೇಧ ಬೆನ್ನಲ್ಲೇ ಈ ದಾಳಿ ನಡೆದಿದ್ದು, ಜನರಲ್ಲಿ ಗೊಂದಲ ಸೃಷ್ಟಿಸಿತು. ಜಿಲ್ಲಾಧಿಕಾರಿ ಆದೇಶಮೇರೆಗೆ ದಾಖಲೆಗಳನ್ನ ಪರಿಶೀಲನೆ ಅಧಿಕಾರಿಗಳು ದಾಳಿಯನ್ನ ಅಂತ್ಯಗೊಳಿಸಿದ್ದಾರೆ.


ಇದನ್ನೂ ಓದಿ: PFI Ban: ಪಿಎಫ್‌ಐ ಒಂದೇ ಅಲ್ಲ, ಈ ಹಿಂದೆ ಹಲವು ಸಂಘಟನೆಗಳಿಗೆ ತಟ್ಟಿವೆ ಬ್ಯಾನ್ ಬಿಸಿ! ಕಾರಣ ಮಾತ್ರ ಅದೊಂದೇ!


 ಪಿಎಫ್‌ಐಗೆ 5 ವರ್ಷ ನಿಷೇಧ


ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮತ್ತು ಐಸಿಸ್‌ನಂತಹ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಸರ್ಕಾರವು ಪಿಎಫ್‌ಐ ಮತ್ತು ಅದಕ್ಕೆ ಸಂಬಂಧಿಸಿದ ಹಲವಾರು ಇತರ ಸಂಘಟನೆಗಳ ಮೇಲೆ ಕಟ್ಟುನಿಟ್ಟಾದ ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ಐದು ವರ್ಷಗಳ ನಿಷೇಧವನ್ನು ಕೇಂದ್ರ ಸರ್ಕಾರ ಹೇರಿದೆ.

Published by:Annappa Achari
First published: