• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Siddaramaiah: ನೀವೇ ಸಿಎಂ, ಆದ್ರೆ ಕಂಡಿಷನ್ ಅಪ್ಲೈ ಎಂದ ಹೈಕಮಾಂಡ್; ಇತ್ತ ಡಿಕೆಶಿಗೆ ಬಂಪರ್!

Siddaramaiah: ನೀವೇ ಸಿಎಂ, ಆದ್ರೆ ಕಂಡಿಷನ್ ಅಪ್ಲೈ ಎಂದ ಹೈಕಮಾಂಡ್; ಇತ್ತ ಡಿಕೆಶಿಗೆ ಬಂಪರ್!

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

Congress High command Conditions: ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿರುವ ಕಾಂಗ್ರೆಸ್ ಹೈಕಮಾಂಡ್ ಕೆಲವು ಷರತ್ತುಗಳನ್ನು ಹಾಕಿದೆ ಎಂದು ಹೇಳಲಾಗುತ್ತಿದೆ.

  • Share this:

ನವದೆಹಲಿ: ಬುಧವಾರವೇ ಸಿದ್ದರಾಮಯ್ಯ (Siddaramaiah) ಅವರೇ ಮುಂದಿನ ಸಿಎಂ ಅನ್ನೋದನ್ನು ಹೈಕಮಾಂಡ್ (Congress High Command) ಅಂತಿಮ ಮಾಡಿತ್ತು. ಆದರೆ ಡಿಕೆ ಶಿವಕುಮಾರ್ (KPCC President DK Shivakumar) ಸಿಎಂ ರೇಸ್​ನಿಂದ ಹಿಂದೆ ಸರಿಯದ ಕಾರಣ ಪ್ರಹಸನ ಮುಂದವರಿದುಕೊಂಡು ಬಂದಿದೆ. ಸಿದ್ದರಾಮಯ್ಯ ಸಿಎಂ ಮತ್ತು ಡಿಕೆ ಶಿವಕುಮಾರ್ ಡಿಸಿಎಂ ಆಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಅಧಿಕೃತ ಘೋಷಣೆ ಹೊರ ಬೀಳಬೇಕಿದೆ. ಇನ್ನು ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿರುವ ಕಾಂಗ್ರೆಸ್ ಹೈಕಮಾಂಡ್ ಕೆಲವು ಷರತ್ತುಗಳನ್ನು ಹಾಕಿದೆ ಎಂದು ಹೇಳಲಾಗುತ್ತಿದೆ. ಹೈಕಮಾಂಡ್ ಹಾಕಿದ ಷರತ್ತುಗಳನ್ನು ಸಿದ್ದರಾಮಯ್ಯ ಸಹ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.


ಹೈಕಮಾಂಡ್ ಷರತ್ತುಗಳೇನು?


*ಹೈಕಮಾಂಡ್ ಹಾಕಿರುವ ಷರತ್ತುಗಳನ್ನು ಒಪ್ಪಿಕೊಳ್ಳಬೇಕು.


*ಲೋಕಸಭಾ ಚುನಾವಣೆಯ ನಂತರ ಯಾವುದೇ ಷರತ್ತುಗಳಿಲ್ಲದೇ ಅಧಿಕಾರ ಹಸ್ತಾಂತರ ಮಾಡಬೇಕು.


*ಯಾವುದೇ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಡಿಕೆ ಶಿವಕುಮಾರ್ ಅವರನ್ನ ಪರಿಗಣನೆಗೆ ತೆಗೆದುಕೊಳ್ಳಬೇಕು.


*ಲೋಕಸಭಾ ಚುನಾವಣೆ ಹಿನ್ನೆಲೆ ಅಧಿಕಾರ ಹಂಚಿಕೆ ಅನಿವಾರ್ಯ ಅನ್ನೋದನ್ನು ಹೈಕಮಾಂಡ್ ಮನವರಿಕೆ ಮಾಡಿದೆ.


ಡಿಕೆ ಶಿವಕುಮಾರ್​ಗೆ ಪ್ರಬಲ ಖಾತೆ


ಡಿಸಿಎಂ ಸ್ಥಾನದ ಜೊತೆಗೆ ಎರಡು ಪ್ರಬಲ ಖಾತೆಗಳು ಡಿಕೆ ಶಿವಕುಮಾರ್​ ಅವರಿಗೆ ಸಿಗಲಿದೆ ಎನ್ನಲಾಗಿದೆ. ಲೋಕಸಭಾ ಚುನಾವಣೆವರೆಗೂ ಡಿಕೆ ಶಿವಕುಮಾರ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. 2024ರ ಲೋಕಸಭಾ ಚುನಾವಣೆಯನ್ನು ರಾಜ್ಯದಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಸಲು ಕಾಂಗ್ರೆಸ್ ಸೂಚನೆ ನೀಡಿದೆಯಂತೆ.




ಇದನ್ನೂ ಓದಿ:  Congress Government: ಸಚಿವರಿಗೂ 50:50 ಸೂತ್ರ ಅನ್ವಯ; ಸಂಪುಟ ಸೇರುವ ಸಂಭವನೀಯರ ಪಟ್ಟಿ ಹೀಗಿದೆ


ಹೈಕಮಾಂಡ್ ಸೂತ್ರ ಒಪ್ಪಿಕೊಂಡ ಡಿಕೆ ಶಿವಕುಮಾರ್


ಕಾಂಗ್ರೆಸ್ ಅಧ್ಯಕ್ಷರು ಮತ್ತು ಗಾಂಧಿ ಕುಟುಂಬದ ಮಾತಿಗೆ ಒಪ್ಪಿಕೊಂಡಿದ್ದೇನೆ. ಪಕ್ಷದ ಹಿತಕ್ಕಾಗಿ ಹೈಕಮಾಂಡ್ ಫಾರ್ಮುಲಾ ಒಪ್ಪಿಕೊಂಡಿದ್ದೇನೆ. ನಮ್ಮ ಮೇಲೆ ಹೆಚ್ಚು ಜವಾಬ್ದಾರಿಗಳಿದ್ದು, ಕರ್ನಾಟಕದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ. ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಎಂದು ಹೇಳಿದರು

top videos
    First published: