PSI Exam Scam: ಮದುವೆ ಮುಗಿಸಿದವನನ್ನು 'ಮಾವನ ಮನೆ'ಗೆ ಕರೆದೊಯ್ದ ಸಿಐಡಿ ಪೊಲೀಸ್!

ಮೇ 14ರಂದು ಜಮಖಂಡಿ ನಗರದಲ್ಲಿ ಶ್ರೀಕಾಂತ್‌ನ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಇದಾದ 5 ದಿನಗಳ ಬಳಿಕ ಸಿಐಡಿ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ. ಮದುವೆ ಬಳಿಕ ಮೊದಲ ಬಾರಿಗೆ ಮನೆ ದೇವರ ದರ್ಶನಕ್ಕೆಂದು ಹೋಗಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಶ್ರೀಕಾಂತ್

ಬಂಧಿತ ಶ್ರೀಕಾಂತ್

  • Share this:
    ಬಾಗಲಕೋಟೆ: ಪಿಎಸ್‌ಐ ನೇಮಕಾತಿ ಹಗರಣ (PSI Recruitment Scam) ಬಗೆದಷ್ಟು ಬಯಲಾಗುತ್ತಿದೆ. ಈ ಬಗ್ಗೆ ತನಿಖೆ (Investigation) ನಡೆಸುತ್ತಿರುವ ಸಿಐಡಿ ಅಧಿಕಾರಿಗಳು (CID Officers) ರಾಜ್ಯದ ಮೂಲೆ ಮೂಲೆಯಿಂದ ಶಂಕಿತ ಆರೋಪಿಗಳನ್ನ (Accused) ಹೊರ ತರುತ್ತಿದ್ದಾರೆ. ಇದೀಗ ಬಾಗಲಕೋಟೆಯಲ್ಲಿ (Bagalkot) ಮದುವೆಯಾಗಿ (Marriage) ಪತ್ನಿಯನ್ನು (Wife) ಮನೆಗೆ ಕರೆದುಕೊಂಡು ಬರುವ ಸಂಭ್ರಮದಲ್ಲಿ ಇದ್ದ ನವವಿವಾಹಿತನಿಗೆ (Newly Married) ಸಿಐಡಿ ಅಧಿಕಾರಿಗಳು ಶಾಕ್ (Shock) ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ (Jamakhandi) ತಾಲೂಕಿನ ತೊದಲಾಬಾಗಿ ಗ್ರಾಮದಲ್ಲಿ ಓರ್ವನನ್ನು ವಶಕ್ಕೆ ಪಡೆದಿರುವುದು ವರದಿಯಾಗಿದೆ. ಶ್ರೀಕಾಂತ್ ಚೌರಿ ಎಂಬಾತನೇ ಬಂಧಿತ ಆರೋಪಿ ಅಂತ ತಿಳಿದು ಬಂದಿದೆ.

    ಪಿಎಸ್ಐ ಪರೀಕ್ಷಾ ಹಗರಣದ ತನಿಖೆ ಚುರುಕು

    ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಿಖೆ ಚುರುಕುಗೊಂಡಿದ್ದು, ಪ್ರಕರಣದ ವಿಚಾರಣೆಗಾಗಿ ಬೆಂಗಳೂರು ವಿಧಾನಸೌಧ ವ್ಯಾಪ್ತಿಯ ಸಿಐಡಿ ಪೊಲೀಸರು ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಿ, ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ನಿವಾಸಿ ಶ್ರೀಕಾಂತ್ ಚೌರಿಯನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

    ಬಂಧಿತ ವ್ಯಕ್ತಿ ಶ್ರೀಕಾಂತ್ ಹಿನ್ನಲೆ ಏನು?

    ಶ್ರೀಕಾಂತ್ ಚೌರಿ ಕೋಚಿಂಗ್ ಸೆಂಟರ್ ಒಂದರ ಮುಖ್ಯಸ್ಥ ಎಂದು ತಿಳಿದುಬಂದಿದ್ದು,   ಧಾರವಾಡದ ಇನ್ಸ್ಪೈರ್ ಇಂಡಿಯಾದ ಐಎಎಸ್ ಮತ್ತು ಕೆಎಎಸ್ ಕೋಚಿಂಗ್ ಸೆಂಟರ್  ಮಾಜಿ ನಿರ್ದೇಶಕ ಎನ್ನಲಾಗಿದೆ. ಕಳೆದ ಆರು ದಿನಗಳ ಹಿಂದೆ ಜಿಲ್ಲೆಗೆ ಬಂದಿರುವ ಅಧಿಕಾರಿಗಳ ತಂಡ ಶ್ರೀಕಾಂತ್ ಕುರಿತು ಮಾಹಿತಿ ಕಲೆ ಹಾಕಿ ಮಹತ್ವದ ಮಾಹಿತಿಗಳನ್ನ ಪಡೆದಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: Explained: ಏನಿದು PSI Exam Scam? ಇದರ ಆಳ, ಅಗಲ ಏನು? ಈವರೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ

    ಮದುವೆ ಮುಗಿಸಿ, ದೇವಸ್ಥಾನಕ್ಕೆ ಹೋದ ವೇಳೆ ಸಿಐಡಿ ವಶಕ್ಕೆ

    ಇನ್ನು ಮೇ 14ರಂದು ಜಮಖಂಡಿ ನಗರದಲ್ಲಿ ಶ್ರೀಕಾಂತ್‌ನ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಇದಾದ 5 ದಿನಗಳ ಬಳಿಕ ಸಿಐಡಿ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ. ಮದುವೆ ಬಳಿಕ ಮೊದಲ ಬಾರಿಗೆ ಮನೆ ದೇವರ ದರ್ಶನಕ್ಕೆಂದು ಹೋಗಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದು ಬನಹಟ್ಟಿಯ ಪೋಲಿಸ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಬಳಿಕ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

    ಕೋಚಿಂಗ್ ಸೆಂಟರ್ ವಿರುದ್ಧ ಬಂದಿತ್ತಾ ಪತ್ರ?

    ಇನ್ನು  ತೊದಲಬಾಗಿ ಕೋಚಿಂಗ್ ಸೆಂಟರ್ ವಿರುದ್ಧ ಬೆಂಗಳೂರು ಪೋಲಿಸರಿಗೆ ಪತ್ರ ಬರೆದಿರುವ ಶಂಕೆ ವ್ಯಕ್ತವಾಗಿದೆ. ಪತ್ರದ ಬೆನ್ನಲ್ಲೆ ವಿಚಾರಣೆಗೆ ಆಗಮಿಸಿರೋ ಬೆಂಗಳೂರು ಸಿಐಡಿ ಪೋಲಿಸರು ವಶಕ್ಕೆ ಪಡೆದಿದ್ದಾರೆ.

    ಸಿಐಡಿ ಅಧಿಕಾರಿಗಳಿಂದ ಬಂಧಿತ ಶ್ರೀಕಾಂತ್ ವಿಚಾರಣೆ

    ಇನ್ನು ಶ್ರೀಕಾಂತ್  ಹಿನ್ನಲೆ ಏನು ಯಾರ್ ಯಾರ ಜೊತೆ ಸಂಪರ್ಕ ಹೊಂದಿದ್ದಾರೆ. ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ಇವರ ಪಾತ್ರ ಏನು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ರಾಜಕೀಯ ವ್ಯಕ್ತಿಗಳ ಜೊತೆ ಶ್ರೀಕಾಂತ್ ಒಡನಾಟ?

    ಇನ್ನು ಬಂಧಿತ ಶ್ರೀಕಾಂತ್ ಹಲವಾರು ರಾಜಕೀಯ ವ್ಯಕ್ತಿಗಳ ಜೊತೆ ಒಡನಾಟ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮೇ 14 ರಂದು ನಡೆದ ಮದುವೆ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಉಮಾಶ್ರೀ, ತೆರದಾಳ ಶಾಸಕ ಸಿದ್ದು ಸವದಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ.

    ಇದನ್ನೂ ಓದಿ: Explained: ಪಿಎಸ್ಐ Exam Scamನ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಯಾರು? ಇಲ್ಲಿದೆ ಓದಿ 'ದಿವ್ಯ' ಇತಿಹಾಸ!

    ಇನ್ನು ಬೇರೆ ಬೇರೆ ಸನ್ನಿವೇಶಗಳಲ್ಲಿ ಸಚಿವ ಎಂಟಿಬಿ ನಾಗರಾಜ್, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಉದ್ಯಮಿ ಸಂಗಮೇಶ ನಿರಾಣಿ ಸೇರಿದಂತೆ ಹಲವಾರ ಜೊತೆ ಫೋಟೋಗಳು ಇವೆ.

    (ವರದಿ: ಮಂಜುನಾಥ್ ತಳವಾರ)
    Published by:Annappa Achari
    First published: