• Home
  • »
  • News
  • »
  • state
  • »
  • Tippu Express: ಅವರೆಲ್ಲ ಮೌನವಾಗಿರೋದು ಯಾಕೆ? ರೈಲಿನ ಹೆಸರು ಮರುನಾಮಕರಣಕ್ಕೆ ಟಿಪ್ಪು ವಂಶಸ್ಥರ ಪ್ರತಿಕ್ರಿಯೆ

Tippu Express: ಅವರೆಲ್ಲ ಮೌನವಾಗಿರೋದು ಯಾಕೆ? ರೈಲಿನ ಹೆಸರು ಮರುನಾಮಕರಣಕ್ಕೆ ಟಿಪ್ಪು ವಂಶಸ್ಥರ ಪ್ರತಿಕ್ರಿಯೆ

ಶೆಹಬಾಜದ್ ಮನ್ಸೂರ್ ಅಲಿ, ಟಿಪ್ಪು ಸುಲ್ತಾನ್ ವಂಶಸ್ಥ

ಶೆಹಬಾಜದ್ ಮನ್ಸೂರ್ ಅಲಿ, ಟಿಪ್ಪು ಸುಲ್ತಾನ್ ವಂಶಸ್ಥ

ಒಡೆಯರ್ ಹೆಸರಿಡಲು ಹಲವು ಹೊಸ ರೈಲುಗಳಿದ್ದವು, ಆದ್ರೆ ಉದ್ದೇಶಪೂರ್ವಕವಾಗಿ ಮಾನ್ಯ ಸಂಸದರಾಗಿರುವ ಪ್ರತಾಪ್ ಸಿಂಹ ಟಿಪ್ಪು ಎಕ್ಸ್​ಪ್ರೆಸ್ ರೈಲಿನ ಹೆಸರನ್ನು ಮರುನಾಮಕರಣಗೊಳಿಸಿದ್ದಾರೆ. ಒಡೆಯರ್ ಹೆಸರನ್ನು ಇರಿಸಿರೋದಕ್ಕೆ ನನ್ನ ಆಕ್ಷೇಪ ಇಲ್ಲ ಎಂದು ಸ್ಪಷ್ಟಪಡಿಸಿದರು.

  • Share this:

ಟಿಪ್ಪು ಎಕ್ಸ್​ಪ್ರೆಸ್ (Tippu Express) ರೈಲು ಈಗ ಒಡೆಯರ್ ಎಕ್ಸ್​ಪ್ರೆಸ್ (Wodeyar Express)​ ಆಗಿ ಬದಲಾಗಿದೆ. ಈಗಾಗಲೇ ರೈಲು ಬೋಗಿಗಳ ಮೇಲಿನ ಫಲಕ ಸಹ ಬದಲಾಗಿದೆ. ಈ ಮರುನಾಮಕಾರಣ ರಾಜಕೀಯ (Politics) ಸ್ವರೂಪ ಪಡೆದುಕೊಂಡಿದೆ. ಮರುನಾಮಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಸೇರಿದಂತೆ ಹಲವು ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ (Yaduveer Krishnadatta Chamaraja Wadiyar) ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಎಡಪಂಥೀಯ ಚಿಂತಕರು, ಇದೊಂದು ರಾಜಕೀಯ ದ್ವೇಷ ಎಂದು ಕಟು ಪದಗಳಲ್ಲಿ ಟೀಕಿಸಿದ್ದಾರೆ.


ಟಿಪ್ಪು ಎಕ್ಸ್​​ಪ್ರೆಸ್ ರೈಲಿನ ಮರುನಾಮಕರಣಕ್ಕೆ ಸಂಬಂಧಿಸಿದಂತೆ ಟಿಪ್ಪು ಸುಲ್ತಾನ್ ಅವರ ಮರಿಮೊಮ್ಮಗ ಶೆಹಬಾಜದ್ ಮನ್ಸೂರ್ ಅಲಿ (Sahebzada Mansoor Ali ,Great Great Grandson of Tipu Sultan) ಪ್ರತಿಕ್ರಿಯೆ ನೀಡಿದ್ದು ವಿಪಕ್ಷ ನಾಯಕರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಸ್ಥಳೀಯ ಕಾಂಗ್ರೆಸ್ ನಾಯಕರು (Congress Leaders) ಈ ಬಗ್ಗೆ ಪ್ರಶ್ನಿಸದೇ ಮೌನವಾಗಿರೋದು ಏಕೆ ಎಂದು ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.


ಮರುನಾಮಕರಣಕ್ಕೆ ಯಾರೂ ಮನವಿ ಮಾಡಿರಲಿಲ್ಲ


ಟಿಪ್ಪು ಎಕ್ಸ್‌ಪ್ರೆಸ್ ಮರುನಾಮಕರಣದ ಕುರಿತು ನ್ಯೂಸ್ 18 ಜೊತೆ ಮಾತನಾಡಿದ ಶೆಹಬಾಜದ್ ಮನ್ಸೂರ್ ಅಲಿ, ಬಿಜೆಪಿ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ. ಟಿಪ್ಪು ಎಕ್ಸ್​ಪ್ರೆಸ್ ಹೆಸರು ಬದಲಿಸಲು ಮೈಸೂರಿನ ಜನರು ಅಥವಾ ಒಡೆಯರ್ ಕುಟುಂಬಸ್ಥರು ಹೇಳಿರಲಿಲ್ಲ. ಹೆಸರು ಬದಲಿಸುವಂತೆ ಯಾರೂ ಸಂಸದ ಪ್ರತಾಪ್ ಸಿಂಹ (MP Pratap Simha) ಅವರ ಬಳಿ ಮನವಿ ಸಹ ಮಾಡಿಕೊಂಡಿರಲಿಲ್ಲ.


ಒಡೆಯರ್ ಹೆಸರು ಇರಿಸಿದ್ದಕ್ಕೆ ಆಕ್ಷೇಪ ಇಲ್ಲ


ಒಡೆಯರ್ ಹೆಸರಿಡಲು ಹಲವು ಹೊಸ ರೈಲುಗಳಿದ್ದವು, ಆದ್ರೆ ಉದ್ದೇಶಪೂರ್ವಕವಾಗಿ ಮಾನ್ಯ ಸಂಸದರಾಗಿರುವ ಪ್ರತಾಪ್ ಸಿಂಹ ಟಿಪ್ಪು ಎಕ್ಸ್​ಪ್ರೆಸ್ ರೈಲಿನ ಹೆಸರನ್ನು ಮರುನಾಮಕರಣಗೊಳಿಸಿದ್ದಾರೆ. ಒಡೆಯರ್ ಹೆಸರನ್ನು ಇರಿಸಿರೋದಕ್ಕೆ ನನ್ನ ಆಕ್ಷೇಪ ಇಲ್ಲ ಎಂದು ಸ್ಪಷ್ಟಪಡಿಸಿದರು.


The great grand son of tippu opposes BJP govt decision over renaming the Tippu express mrq
ಶೆಹಬಾಜದ್ ಮನ್ಸೂರ್ ಅಲಿ, ಟಿಪ್ಪು ಸುಲ್ತಾನ್ ವಂಶಸ್ಥ


ನನ್ನ ಭಾವನೆಗಳಿಗೆ ಧಕ್ಕೆ


ಟಿಪ್ಪು ಸುಲ್ತಾನ್ ಹೆಸರು ತೆಗೆದಿರೋದಕ್ಕೆ ನನ್ನ ಭಾವನೆಗಳಿಗೆ ಧಕ್ಕೆ ಆಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಟಿಪ್ಪು ಜಯಂತಿಯನ್ನು ರದ್ದುಗೊಳಿಸಲಾಯ್ತು. ನಂತರ ಟಿಪ್ಪು ಪಠ್ಯವನ್ನು ಸಹ ತೆಗೆಯಲಾಯ್ತು. ಈಗ ಬೆಂಗಳೂರು ಮತ್ತು ಮೈಸೂರು ನಡುವಿನ ರೈಲಿನ ಹೆಸರನ್ನು ಬದಲಿಸಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.


ಇದನ್ನೂ ಓದಿ: Tippu Express: ಟಿಪ್ಪು ಎಕ್ಸ್‌ಪ್ರೆಸ್ ಮರು ನಾಮಕರಣ; ಯದುವೀರ್ ಒಡೆಯರ್ ಮೊದಲ ಪ್ರತಿಕ್ರಿಯೆ


ಮತಗಳ ಕ್ರೂಢೀಕರಣಕ್ಕಾಗಿ ಹೆಸರು ಬದಲಾವಣೆ


ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿ ಮತಗಳ ಕ್ರೂಢೀಕರಣಕ್ಕಾಗಿ ಟಿಪ್ಪು ಸುಲ್ತಾನ್ ವಿಷಯವನ್ನು ಜೀವಂತವಾಗಿರಿಸಲು ಪ್ರಯತ್ನಿಸಿದೆ. ಅದರ ಭಾಗವಾಗಿ ರೈಲಿನ ಹೆಸರು ಮರುನಾಮಕರಣ ಮಾಡಲಾಗಿದೆ ಎಂದು ಆರೋಪಿಸಿದರು.


The great grand son of tippu opposes BJP govt decision over renaming the Tippu express mrq
ಶೆಹಬಾಜದ್ ಮನ್ಸೂರ್ ಅಲಿ, ಟಿಪ್ಪು ಸುಲ್ತಾನ್ ವಂಶಸ್ಥ


ಮೌನವಾಗಿದ್ದು ಏಕೆ?


ಮೈಸೂರು ರೈಲ್ವೇ ನಿಲ್ದಾಣ (Mysuru Railway Station) ಇರೋ ಕ್ಷೇತ್ರದ ಸ್ಥಳೀಯ ಶಾಸಕ ತನ್ವೀರ್ ಸೇಠ್ (MLA Tanveer Saith) ಸೇರಿದಂತೆ ವಿಪಕ್ಷಗಳು ಯಾಕೆ ಮೌನವಾಗಿವೆ ಎಂಬುವುದು ಗೊತ್ತಿಲ್ಲ. ಎರಡು ತಿಂಗಳ ಹಿಂದೆಯೇ ಟಿಪ್ಪು ಎಕ್ಸ್​ಪ್ರೆಸ್​ ರೈಲಿನ ಹೆಸರು ಬದಲಾವಣೆಗೆ ಬಗ್ಗೆ ಮಾಹಿತಿ ಬಂದ್ರೂ ಇವರೆಲ್ಲ ಮೌನರಾಗಿದ್ದರು.


ಇದನ್ನೂ ಓದಿ:  Tippu Express ಇನ್ಮುಂದೆ ಒಡೆಯರ್ ಎಕ್ಸ್​ಪ್ರೆಸ್; ಹೆಸರು ಬದಲಾವಣೆಗೆ ಯಾರು, ಏನು ಹೇಳಿದ್ರು?


ಮತ್ತೆ ಹೆಸರು ಬದಲಿಸಲು ಒತ್ತಾಯ


ಎರಡು ತಿಂಗಳ ಹಿಂದೆ ವಿಷಯ ಗೊತ್ತಿದ್ದರೂ ಯಾವ ನಾಯಕರು ಪ್ರಶ್ನೆ ಮಾಡಲಿಲ್ಲ. ಈಗ ವಿಪಕ್ಷಗಳು ಒಕ್ಕೊರಲಿನಿಂದ ರೈಲಿನ ಹೆಸರನ್ನು ಮತ್ತೆ ಟಿಪ್ಪು ಎಕ್ಸ್​ಪ್ರೆಸ್ ಎಂದು ಮಾಡಬೇಕು ಎಂದು ಶೆಹಬಾಜದ್ ಮನ್ಸೂರ್ ಅಲಿ ಒತ್ತಾಯಿಸಿದರು.

Published by:Mahmadrafik K
First published: