news18-kannada Updated:June 26, 2020, 9:53 PM IST
ಪ್ರಾತಿನಿಧಿಕ ಚಿತ್ರ
ಬೆಂಗಳೂರು (ಜೂನ್ 26); ಇಂದು ನಡೆದ ಪ್ರಮುಖ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ಪ್ರಮುಖ 13 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸುವ ಮೂಲಕ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲು ಮುಂದಾಗಿದೆ.
ಕೋಮು ಗಲಭೆ ಮತ್ತು ಗೋಲಿಬಾರ್ಗೆ ಸಂಬಂಧಿಸಿದಂತೆ ಕಳೆದ ಡಿಸೆಂಬರ್ನಲ್ಲಿ ಸುದ್ದಿಯ ಕೇಂದ್ರದಲ್ಲಿದ್ದ ಮಂಗಳೂರು ಪೊಲೀಸ್ ಕಮಿಷನರ್ ಪಿ.ಎಸ್. ಹರ್ಷ ಅವರನ್ನು ವಾರ್ತಾ ಇಲಾಖೆ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ. ಇವರ ಜೊತೆಗೆ ಇನ್ನೂ 13 ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ವರ್ಗಾವಣೆಯಾದ ಅಧಿಕಾರಿಗಳ ಪಟ್ಟಿ ಇಲ್ಲಿದೆ.
1. ಪಿ.ಎಸ್. ಹರ್ಷ- ವಾರ್ತಾ ಇಲಾಖೆ ಕಮಿಷನರ್
2. ಸೀಮಂತ್ಕುಮಾರ್ ಸಿಂಗ್ - ಕೇಂದ್ರ ವಲಯ ಐಜಿಪಿ
3. ಕೆ.ವಿ ಶರತ್ಚಂದ್ರ - ಐಜಿಪಿ ಆಡಳಿತ ವಿಭಾಗ ಬೆಂಗಳೂರು
4. ಸುಮನ್ ಪನೇಕರ್- ಡಿಸಿಪಿ ಸಿಎಆರ್ ಬೆಂಗಳೂರು,5. ಹೆಚ್.ಡಿ ಆನಂದ ಕುಮಾರ್- ಎಸ್.ಪಿ ಐಎಸ್ಡಿ
6. ವಿಕಾಸ್ ಕುಮಾರ್ - ಮಂಗಳೂರು ಕಮಿಷನರ್
7. ಎಸ್.ಎನ್ ಸಿದ್ದರಾಮಪ್ಪ - ಡಿಐಜಿ ಸಿಐಡಿ ಆರ್ಥಿಕ ಅಪರಾಧ ವಿಭಾಗ
8. ಬಿ.ಎಸ್ ಲೋಕೇಶ್ ಕುಮಾರ್ - ಡಿಐಜಿ ಐಎಸ್ಡಿ
9. ಡಾ.ಕೆ.ತ್ಯಾಗರಾಜನ್ - ಬೆಳಗಾವಿ ಸಿಟಿ ಪೊಲೀಸ್ ಕಮಿಷನರ್
10. ಕ್ಷಮಾ ಮಿಶ್ರಾ - ಕೊಡಗು ಎಸ್.ಪಿ
11. ಹರೀಶ್ ಪಾಂಡೆ - ಎಸ್.ಪಿ ಗುಪ್ತಚರ ಇಲಾಖೆ ಬೆಂಗಳೂರು
12. ದಿವ್ಯಾ ಸಾರಾ ಥಾಮಸ್ - ಎಸ್.ಪಿ ಚಾಮರಾಜನಗರ
13. ಹಾಕಯ್ ಅಕ್ಷಯ್ ಮಚ್ಚೀಂದ್ರ - ಎಸ್.ಪಿ ಚಿಕ್ಕಮಗಳೂರು
First published:
June 26, 2020, 9:52 PM IST