ಮೈಸೂರು: ನಾಡಿನ ಸುಪ್ರಸಿದ್ಧ ಪ್ರವಾಸಿ ಸ್ಥಳ
(Tourist Place), ಅತ್ಯಂತ ಜನಪ್ರಿಯ ಧಾರ್ಮಿಕ ಕೇಂದ್ರ, ತಾಯಿ ಚಾಮುಂಡೇಶ್ವರಿಯ (Goddess Chamundeshwari) ನೆಲೆಬೀಡು ಮೈಸೂರಿನ (Mysuru) ಚಾಮುಂಡಿ ಬೆಟ್ಟಕ್ಕೆ (Chamundi Hills) ರೋಪ್ ವೇ (Rope Way) ನಿರ್ಮಾಣಕ್ಕೆ ಮೈಸೂರು ಜಿಲ್ಲಾಡಳಿತ ಮುಂದಾಗಿತ್ತು. ಆದರೆ ಇದಕ್ಕೆ ಸ್ಥಳೀಯರಿಂದ, ಪರಿಸರ ಪ್ರೇಮಿಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಮೈಸೂರು ಜಿಲ್ಲಾಡಳಿತದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್ (Minister ST Somashekhar) ಸಭೆ (Meeting) ನಡೆಸಿದರು. ಈ ಸಭೆಯಲ್ಲಿ ರೋಪ್ ವೇ ನಿರ್ಮಾಣ ನಿರ್ಧಾರದಿಂದ ಹಿಂದೆ ಸರಿದಿದ್ದಾಗಿ ಸಚಿವ ಎಸ್‌ಟಿ ಸೋಮಶೇಖರ್ ಹೇಳಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣವಿಲ್ಲ
ಚಾಮುಂಡಿ ಬೆಟ್ಟಕ್ಕೆ ‘ರೋಪ್ ವೇ’ ಅಳವಡಿಸುವ ಯೋಜನೆಯನ್ನು ಕೈಬಿಡಲಾಗಿದೆ. ರೋಪ್ ವೇ ಅಳವಡಿಕೆಗೆ ಜನರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಯೋಜನೆಯನ್ನು ಮೈಸೂರು ಜಿಲ್ಲಾಡಳಿತ ಕೈಬಿಟ್ಟಿದೆ. ರೋಪ್ ವೇ ಅಳವಡಿಸುವ ಬಗ್ಗೆ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ.
ಸಚಿವ ಎಸ್‌ಟಿ ಸೋಮಶೇಖರ್ ಸ್ಪಷ್ಟನೆ
ಇಂದು ಮೈಸೂರು ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್, ಸಭೆ ಬಳಿಕ ಈ ಬಗ್ಗೆ ಸ್ಪಷ್ಟಪಡಿಸಿದರು. ಚಾಮುಂಡಿ ಬೆಟ್ಟ ಪ್ರವಾಸಿ ಸ್ಥಳಕ್ಕಿಂತ, ಒಂದು ಪವಿತ್ರ ಧಾರ್ಮಿಕ ಸ್ಥಳವಾಗಬೇಕು. ಧಾರ್ಮಿಕ ಭಾವನೆಯಿಂದ ಚಾಮುಂಡಿ ಬೆಟ್ಟಕ್ಕೆ ಭಕ್ತರು-ಪ್ರವಾಸಿಗರು ಬರ್ತಾರೆ. ಇದನ್ನ ಮತ್ತೊಂದು ಪ್ರವಾಸಿ ಸ್ಥಳವನ್ನಾಗಿ ನೋಡುವುದು ಬೇಡ. ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ರೋಪ್ ವೇ ಅಳವಡಿಕೆ ಕೈ ಬಿಟ್ಟಿದ್ದೇವೆ ಅಂತ ಹೇಳಿದ್ದಾರೆ.
ಇದನ್ನೂ ಓದಿ: Mysore Palace: ಮೈಸೂರು ಪ್ಯಾಲೇಸ್ ಮೇಲೆ ಹೆಚ್ಚಾಯ್ತು ಪ್ರವಾಸಿಗರ ಆಸಕ್ತಿ! ಇದು ಮೋದಿ ಭೇಟಿ ಇಂಪ್ಯಾಕ್ಟ್
ಬೆಟ್ಟಕ್ಕೆ ಹೋಗಲು ಸಾಕಷ್ಟು ಮೆಟ್ಟಿಲುಗಳು ಇವೆ
ಸರ್ಕಾರಕ್ಕೆ ಈ ಬಗ್ಗೆ ಜಿಲ್ಲಾಡಳಿತ ಪತ್ರದ ಮೂಲಕ ವಿವರಣೆ ನೀಡುತ್ತದೆ. ಬೆಟ್ಟಕ್ಕೆ ಹೋಗಲು ಸಾಕಷ್ಟು ರಸ್ತೆ ಮಾರ್ಗವಿದೆ, ಮೆಟ್ಟಿಲುಗಳಿವೆ. ಹೀಗಾಗಿ ಉದ್ದೇಶಿತ ರೋಪ್ ವೇ ಯೋಜನೆಯನ್ನು ಕೈ ಬಿಟ್ಟಿದ್ದೇವೆ ಎಂದರು.
ಚಾಮುಂಡಿ ಬೆಟ್ಟದಲ್ಲಿ ಹೊಸ ಮನೆಗಳ ನಿರ್ಮಾಣಕ್ಕೆ ಬ್ರೇಕ್
ಇನ್ನು ಚಾಮುಂಡಿ ಬೆಟ್ಟದಲ್ಲಿ ಹೊಸ ಮನೆಗಳ ನಿರ್ಮಾಣಕ್ಕೆ ಬ್ರೇಕ್ ಹಾಕಿ ಸರ್ಕಾರ ಆದೇಶಿಸಿದೆ. ಮುಂದೆ ಹೊಸ ಮನೆಗಳ ನಿರ್ಮಾಣವಾಗದಂತೆ ತಡೆಯಲು ತೀರ್ಮಾನ ಮಾಡಿದ್ದೇವೆ ಅಂತ ಸೋಮಶೇಖರ್ ಹೇಳಿದ್ದಾರೆ. ಚಾಮುಂಡಿ ಬೆಟ್ಟರ ಮೇಲಿನ ಜನರನ್ನ ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲಾ. ಪ್ರಸ್ತುತ ಇರುವ ಯಾವ ಮನೆಗಳನ್ನೂ ತೆರವು ಮಾಡುವ ನಿರ್ಧಾರ ಮಾಡುವ ಕೈಗೊಂಡಿಲ್ಲಾ. ಅಂತಹ ಯಾವ ನಿರ್ಧಾರಗಳನ್ನು ಮುಂದೆ ನಾವು ಕೈಗೊಳ್ಳುವುದಿಲ್ಲ ಅಂತ ಸಚಿವರು ಹೇಳಿದ್ದಾರೆ.
ರೋಪ್ ವೇ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪರಿಸರ ಪ್ರಿಯರು
ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಳವಡಿಸದಂತೆ ಪರಿಸರ ಪ್ರಿಯರು ಆರಂಭದಿಂದಲೂ ವಿರೋಧಿಸಿಕೊಂಡು ಬಂದಿದ್ದರು. ಇದೀಗ ರೋಪ್ ವೇ ಅಳವಡಿಕೆಯಿಂದ ಜಿಲ್ಲಾಡಳಿತ ಹಿಂದೆ ಸರಿದಿದೆ. ಹೀಗಾಗಿ, ಜಿಲ್ಲಾಡಳಿತದ ನಿರ್ಧಾರದಿಂದ ಪರಿಸರ ಪ್ರಿಯರಲ್ಲಿ ಸಂತಸ ಮನೆ ಮಾಡಿದೆ.
ಹೊಸದಾಗಿ ಚಾಮುಂಡೇಶ್ವರಿ ಬಡಾವಣೆ ನಿರ್ಮಾಣ
ಇನ್ನು ಹೊಸ ಮನೆಗಳ ನಿರ್ಮಾಣಕ್ಕೆ ಚಾಮುಂಡಿ ಬೆಟ್ಟ ಪಾದದ ಬಳಿ ನಾಲ್ಕೈದು ಎಕರೆ ಜಾಗ ನಿಗದಿ ಮಾಡುತ್ತೇವೆ. ಇದಕ್ಕೆ ಚಾಮುಂಡೇಶ್ವರಿ ಬಡಾವಣೆಯೆಂದು ಹೆಸರಿಡುತ್ತೇವೆ. ಮುಂದೆ ಚಾಮುಂಡಿ ಬೆಟ್ಟದಲ್ಲಿ ಯಾರಿಗಾದರೂ ಮನೆಗಳ ಅವಶ್ಯಕತೆ ಇದ್ದರೆ ಆ ಬಡಾವಣೆಯಲ್ಲಿ ಜಾಗ ನೀಡಲಾಗುವುದು ಅಂತ ಮೈಸೂರಿನಲ್ಲಿ ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ