ಸುಪ್ರೀಂ ತೀರ್ಪು, ರಾಜ್ಯಪಾಲರ ಸಲಹೆಗೂ ಬೆಲೆ ಕೊಡದೇ ಸರ್ಕಾರ ಅಗೌರವ ತೋರಿದೆ; ಕೆ.ಎಸ್.ಈಶ್ವರಪ್ಪ

ಪ್ರಜಾಪ್ರಭುತ್ವ ದೇವಾಲಯವಾಗಿರುವ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಬಹುಮತ ಕಳೆದುಕೊಂಡು ಎರಡು ವಾರ ಆದರೂ ರಾಜೀನಾಮೆ ಕೊಡದೇ ಇರುವುದು ನಾಚಿಕೆಗೇಡು 

G Hareeshkumar | news18
Updated:July 18, 2019, 11:00 PM IST
ಸುಪ್ರೀಂ ತೀರ್ಪು, ರಾಜ್ಯಪಾಲರ ಸಲಹೆಗೂ ಬೆಲೆ ಕೊಡದೇ ಸರ್ಕಾರ ಅಗೌರವ ತೋರಿದೆ; ಕೆ.ಎಸ್.ಈಶ್ವರಪ್ಪ
ಶಾಸಕ ಕೆ ಎಸ್​ ಈಶ್ವರಪ್ಪ
  • News18
  • Last Updated: July 18, 2019, 11:00 PM IST
  • Share this:
ಬೆಂಗಳೂರು ( ಜುಲೈ 18) : ಮೈತ್ರಿ ಸರ್ಕಾರ ತಪ್ಪು ಮಾಡುತ್ತಿದೆ. ಇಂದಿನ ಕಲಾಪದಲ್ಲಿ‌ ಸುಪ್ರೀಂಕೋರ್ಟ್ ತೀರ್ಪಿಗೂ ಬೆಲೆ ಇಲ್ಲದ ಹಾಗೆ ಮಾಡಿದೆ. ರಾಜ್ಯಪಾಲರ ಸಲಹೆಗೂ ಬೆಲೆ ಕೊಡದೇ ಅಗೌರವ ತೋರಿಸಿದೆ ಎಂದು ಶಾಸಕ ಕೆ ಎಸ್​ ಈಶ್ವರಪ್ಪ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಸ್ಪೀಕರ್ ಕೂಡ ತಮ್ಮ ಸ್ಥಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಾವು ಕಾನೂನುಬದ್ಧವಾಗಿ ನಡೆದುಕೊಳ್ಳುತ್ತೇವೆ. ನಾಳೆ ಮಧ್ಯಾಹ್ನದ ಒಳಗಾದರೂ ವಿಶ್ವಾಸಮತ ಸಾಬೀತು ಮಾಡುತ್ತಾರಾ ಇಲ್ಲವೇ ಎಂಬುದನ್ನು ನಾವು ಕಾದೂ ನೋಡುತ್ತೇವೆ. ಕಾನೂನನ್ನು ಮುರಿದಿರುವ ಕಾಂಗ್ರೆಸ್ ಜೆಡಿಎಸ್ ಕುತಂತ್ರವನ್ನು ಜನರ ಮುಂದಿಡುತ್ತೇವೆ ಎಂದು ಹೇಳಿದರು.

ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ

ಪ್ರಜಾಪ್ರಭುತ್ವ ದೇವಾಲಯವಾಗಿರುವ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಬಹುಮತ ಕಳೆದುಕೊಂಡು ಎರಡು ವಾರ ಆದರೂ ರಾಜೀನಾಮೆ ಕೊಡದೇ ಇರುವುದು ನಾಚಿಕೆಗೇಡು  ಎಂದು ವಿಧಾನ ಪರಿಷತ್​ ವಿಪಕ್ಷದ ನಾಯಕ ಕೋಟಾ ಶ್ರೀನಿವಾಸ್​​ ಪೂಜಾರಿ ಹೇಳಿದರು.

ಬಹುಮತ ಸಾಬೀತಿಗೆ ಮುಂದಾದರೇ ಸರ್ಕಾರ ಬಿದ್ದುಹೋಗುತ್ತದೆ. ಅದಕ್ಕೆ ಬೇಕು ಅಂತಾನೇ ವಿಳಂಬ ಮಾಡುತ್ತಿದ್ದಾರೆ. ಈಗ ರಾಜ್ಯಪಾಲರು ಸಂವಿಧಾನದತ್ತ ಅಧಿಕಾರ ಚಲಾಯಿಸುವ ಸಮಯ ಬಂದಿದೆ. ನಾಳೆ ಮಧ್ಯಾಹ್ನದ ಒಳಗೆ ಈ ಸರ್ಕಾರ ಬಹುಮತ ಸಾಬೀತುಪಡಿಸಲೇ ಬೇಕು. ಬೇರೆ ವಿಧಿಯಿಲ್ಲ ಎಂದರು.

ಇದನ್ನೂ ಓದಿ : ರಾಜ್ಯ ರಾಜಕೀಯ ಬಿಕ್ಕಟ್ಟು; ಅಖಾಡಕ್ಕಿಳಿದ ರಾಜ್ಯಪಾಲರು; ನಾಳೆ ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತಿಗೆ ಗಡುವು ನಿಗದಿ

ಇಂದು ಸದನದಲ್ಲಿ ಶಾಸಕರು ತಮ್ಮ ಹಕ್ಕುಗಳ ಬಗ್ಗೆ ಚರ್ಚೆ ನಡೆಸುತ್ತಿರುವಾಗಲೇ ಜಗದೀಶ್ ಶೆಟ್ಟರ್​ ನೇತೃತ್ವದ ಬಿಜೆಪಿ ನಾಯಕರ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ, ಬಹುಮತ ಸಾಬೀತು ಮಾಡಲು ಸರ್ಕಾರಕ್ಕೆ ಸೂಚನೆ ನೀಡುವಂತೆ ಮನವಿ ಮಾಡಿತ್ತು. ಇದೀಗ ರಾಜ್ಯ ರಾಜಕೀಯದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಅಖಾಡಕ್ಕೆ ರಾಜ್ಯಪಾಲರು ದುಮುಕ್ಕಿದ್ದಾರೆ. ನಾಳೆ ಮಧ್ಯಾಹ್ನ 1.30ರೊಳಗೆ ಸರ್ಕಾರ ಬಹುಮತ ಸಾಬೀತು ಮಾಡುವಂತೆ ಗಡುವು ನಿಗದಿ ಮಾಡಿದ್ದಾರೆ.
First published: July 18, 2019, 10:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading