ಬೆಂಗಳೂರು: ಸಾರಿಗೆ ಸತ್ಯಾಗ್ರಹ ಇಂದು ಬೆಳಿಗ್ಗೆಯಿಂದ ಆರಂಭ ಆಗಿದೆ. ಇನ್ನೂ ಸತ್ಯಾಗ್ರಹ ಮುಂದುವರೆದಿದೆ. ಕೊರೋನಾ ನಿಯಮವನ್ನು ಉಲ್ಲಂಘನೆ ಮಾಡಿಲ್ಲ. ಯಾವುದೇ ಅಹಿತಕರ ಘಟನೆಯನ್ನು ಸಹ ನಾವು ಮಾಡಿಲ್ಲ. ಸೇವೆಗೆ ಹಾಜರಾಗದೆ ಸೇವೆಯಿಂದ ನಾವು ದೂರ ಇದ್ದೇವೆ. ನಾಳೆಯೂ ಸತ್ಯಾಗ್ರಹ ಮುಂದುವರೆಸುತ್ತೇವೆ. ನಾಳೆಯೂ ಬಸ್ ಗಳು ಇರಲ್ಲ. ಅನಿರ್ಧಿಷ್ಟಾವಧಿ ಸತ್ಯಾಗ್ರಹ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಸಾರಿಗೆ ಮುಷ್ಕರದ ನೇತೃತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರು ಹೇಳಿದರು.
ಇಂದು ಮುಷ್ಕರದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರು, 10ನೇ ತಾರೀಖಿನಂದು ನಾಲ್ಕು ವಿಭಾಗಗಳಿಗೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮುಖ್ಯಸ್ಥರ ಜೊತೆ ಸಭೆ ನಡೆಸಲಾಗುವುದು. 11 ನೇ ತಾರೀಖು ಗುಲ್ಬರ್ಗ ವಿಭಾಗದ ಸಭೆಯನ್ನು ಬೀದರ್ ನಲ್ಲಿ ಮಾಡ್ತೀವಿ. ಶಾಂತಿಯುತವಾಗಿ ಹೋರಾಟ ಹೇಗೆ ಮುಂದುವರೆಯಬೇಕು ಅನ್ನೋ ಕ್ರಮದ ಬಗ್ಗೆ ಚರ್ಚೆ ಮಾಡುತ್ತೇವೆ. ಇನ್ನೆರಡು ಸಭೆಗಳಲ್ಲಿ ದಕ್ಷಿಣ ವಲಯದಲ್ಲಿ ಕೆಲ ದಿನಗಳ ಬಳಿಕ ಮಾಡ್ತೀವಿ ಎಂದು ತಿಳಿಸಿದರು.
ಪಕ್ಕದ ಆಂಧ್ರಪ್ರದೇಶದಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲಾಗಿದೆ. ಇದ್ರಿಂದಾನೆ ನಾವು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಆದರೆ ಸರ್ಕಾರ ಕಾರಣಗಳನ್ನು ಕೊಡುತ್ತಾ ಬೇಡಿಕೆ ಈಡೇರಿಸಲು ಆಗಲ್ಲ ಅಂತಿದೆ. ಲಿಖಿತ ರೂಪದಲ್ಲಿ ಬೇಡಿಕೆ ಈಡೇರಿಸಿದರೆ ಮಾತ್ರ ಸತ್ಯಾಗ್ರಹ ಬಿಡುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದರು.
ಇದನ್ನು ಓದಿ: ಸಾರಿಗೆ ನೌಕರರ ಮುಷ್ಕರ: ಮೊದಲ ದಿನ ಇಲಾಖೆಗೆ ಆದ ನಷ್ಟವೆಷ್ಟು? ಇಂದು ಸಂಚರಿಸಿದ ಬಸ್ಗಳ ಸಂಖ್ಯೆ ಎಷ್ಟು ಗೊತ್ತಾ?
ಬಜೆಟ್ ನಲ್ಲಿ ಸಾವಿರಾರು ಕೋಟಿ ಮಂಡನೆ ಮಾಡ್ತೀರಾ. ಆದರೆ ಸಾರಿಗೆ ನೌಕರರಿಗೆ ಯಾವ ಅನ್ಯಾಯ. ಸರ್ಕಾರ ಉದ್ದೇಶಪೂರ್ವಕವಾಗಿ ಈ ಯೋಜನೆ ಕೈಗೊಂಡಿಲ್ಲ. ಮುಖ್ಯಮಂತ್ರಿಗಳು ಆದಷ್ಟು ನಮ್ಮ ಬೇಡಿಕೆ ಈಡೇರಿಸಿ. ನಮ್ಮ ಮನವಿಗೆ ಸ್ಪಂದಿಸಿಲ್ಲ ಅಂದ್ರೆ ನಾವು ಸತ್ಯಾಗ್ರಹ ನಿಲ್ಲಿಸಲ್ಲ. 6ನೇ ವೇತನ ಆಯೋಗ ಕೂಡಲೇ ಅನುಷ್ಠಾನ ಮಾಡುವಂತೆ ಸಿಎಂ ಬಿಎಸ್ವೈ ಅವರಿಗೆ ಕೋಡಿಹಳ್ಳಿ ಚಂದ್ರಶೇಖರ್ ಮನವಿ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ