• Home
  • »
  • News
  • »
  • state
  • »
  • Mahadayi Water Project: ಮಹದಾಯಿ ಯೋಜನೆ ಜಾರಿಗೆ ಮತ್ತೆ ಗೋವಾ ಕ್ಯಾತೆ!

Mahadayi Water Project: ಮಹದಾಯಿ ಯೋಜನೆ ಜಾರಿಗೆ ಮತ್ತೆ ಗೋವಾ ಕ್ಯಾತೆ!

ಮಹದಾಯಿ ಯೋಜನೆ ಜಾರಿಗೆ ಮತ್ತೆ ಗೋವಾ ಕ್ಯಾತೆ!

ಮಹದಾಯಿ ಯೋಜನೆ ಜಾರಿಗೆ ಮತ್ತೆ ಗೋವಾ ಕ್ಯಾತೆ!

ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಅನುಮತಿ ಪಡೆಯಲು ಕರ್ನಾಟಕ ಸರ್ಕಾರದ ಪ್ರಯತ್ನ ಮುಂದುವರೆದಿವೆ. ಈ ಪ್ರಯತ್ನಕ್ಕೆ ಕೊಕ್ಕೆ ಹಾಕಲು ಗೋವಾ ರಾಜಕೀಯ ನಾಯಕರು ಮುಂದಾಗಿದ್ದಾರೆ.

  • Share this:

ಬೆಳಗಾವಿ (ನ.21): ಮಹದಾಯಿ ಯೋಜನೆ (Mahadayi Yojana) ಜಾರಿ ವಿಚಾರ ದೇವರು ಕೊಟ್ಟರೂ ಪೂಜಾರಿ ಕೊಡ್ತಿಲ್ಲ ಎಂಬಂತಾಗಿದೆ. ಮಹಾದಾಯಿ ನ್ಯಾಯಾಧಿಕರಣ ತೀರ್ಪು (Tribunal judgment) ಅನ್ವಯ ರಾಜ್ಯಕ್ಕೆ 13.42 ಟಿಎಂಸಿ ನೀರು ರಾಜ್ಯಕ್ಕೆ ಹಂಚಿಕೆಯಾಗಿದೆ. ಏಳು ವರ್ಷ ಕಳೆದರೂ ಯೋಜನೆ ಜಾರಿಗೆಗೆ ಹಲವು ವಿಘ್ನಗಳು ಎದುರಾಗ್ತಿವೆ. ಒಂದೆಡೆ ಗೋವಾ ಪರಿಸರವಾದಿಗಳ ಆಕ್ಷೇಪವಾದ್ರೆ, ಮತ್ತೊಂದೆಡೆ‌ ಅನುಮತಿ ನೀಡಲು ಕೇಂದ್ರ ಅರಣ್ಯ ಇಲಾಖೆಯ (Central Forest Department) ಹಿಂದೇಟು ಹಾಕ್ತಿದೆ. ಈ ಕಾರಣಕ್ಕೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪರಿಷ್ಕೃತ ಯೋಜನಾ ವರದಿ (Project Report) ಸಲ್ಲಿಸಿದೆ. ಅನುಮತಿ ಸಿಕ್ಕು ಇನ್ನೇನು ಕೆಲವೇ ದಿನಗಳಲ್ಲಿ ಯೋಜನೆ ಜಾರಿಗೆಗೆ ಚಾಲನೆ ಸಿಗಲಿದೆ.


ಇದಕ್ಕಾಗಿ ಸರ್ಕಾರ ಈಗಾಗಲೇ ಒಂದೂವರೆ ಸಾವಿರ ಕೋಟಿ ಮೀಸಲು ಇಟ್ಟಿದೆ. ಆದರೀಗ ಗೋವಾ ರಾಜಕೀಯ ನಾಯಕರು ಮತ್ತೆ ಕ್ಯಾತೆ ತೆಗೆದಿದೆ. ಕಳಸಾ, ಬಂಡೂರಿ ಯೋಜನೆ ಅನುಷ್ಠಾನದ ಪ್ರಯತ್ನಕ್ಕೆ ಬ್ರೇಕ್ ಹಾಕುವ ಯತ್ನ‌ ಮಾಡ್ತಿದ್ದಾರೆ.


Alternative scheme by state government to get Mahadayi water
ಮಹದಾಯಿ ಯೋಜನೆ


ಕಾಮಗಾರಿ ಸ್ಥಳಕ್ಕೆ ರಹಸ್ಯ ಭೇಟಿ


ಗೋವಾ ಮಾಜಿ ಡಿಸಿಎಂ ವಿಜಯ ಸರದೇಸಾಯಿ ಖಾನಾಪುರ ತಾಲೂಕಿನ ಕಣಕುಂಬಿ ಪ್ರದೇಶದಲ್ಲಿರುವ ಕಾಮಗಾರಿ ಸ್ಥಳಕ್ಕೆ ರಹಸ್ಯ ಭೇಟಿ ನೀಡಿದ್ದಾರೆ. ಯೋಜನೆ ಜಾರಿಗೆಗೆ ಕರ್ನಾಟಕ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಕಾಮಗಾರಿ ಫೋಟೋಗಳನ್ನು ಗೋವಾ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಆ ಮೂಲಕ ಗೋವಾದ ಪರಿಸರವಾದಿಗಳು, ಅಲ್ಲಿನ ಸರ್ಕಾರವನ್ನು ಎತ್ತಿಕಟ್ಟುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಕಳಸಾ, ಬಂಡೂರಿ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಪ್ರಯತ್ನ ಮುಂದುವರೆದಿದೆ. ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆಯ 13 ತಾಲೂಕಿಗೆ ಈ ಯೋಜನೆಯಿಂದ ಅನುಕೂಲ ಆಗಲಿದೆ.


ಪೈಪ್ ಲೈನ್ ಮೂಲಕ ನೀರು ಪಡೆಯಲು ಹೊಸ ಯೋಜನೆ


ಮಹಾದಾಯಿ ನ್ಯಾಯಾಧೀಕರಣ ತೀರ್ಪುನ ಅನ್ವಯ ನೀರು ಪಡೆಯಲು ಡ್ಯಾಂ ನಿರ್ಮಾಣದಾದ್ರೆ ಅರಣ್ಯ ನಾಶವಾಗುತ್ತದೆ ಎಂಬ ಆರೋಪ ಗೋವಾ ಮಾಡುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಯೋಜನಾ ವರದಿಯನ್ನೇ ಬದಲಿಸಿದೆ. ಡ್ಯಾಂ ನಿರ್ಮಿಸದೇ ಪೈಪ್ ಲೈನ್ ಮೂಲಕ ನೀರು ಪಡೆಯಲು ಹೊಸ ಯೋಜನೆ ರೂಪಿಸಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಅನುಮತಿ ಪಡೆಯಲು ಕರ್ನಾಟಕ ಸರ್ಕಾರದ ಪ್ರಯತ್ನ ಮುಂದುವರೆದಿವೆ. ಈ ಪ್ರಯತ್ನಕ್ಕೆ ಕೊಕ್ಕೆ ಹಾಕಲು ಗೋವಾ ರಾಜಕೀಯ ನಾಯಕರು ಮುಂದಾಗಿದ್ದಾರೆ.


ಹೊಸ ಬಾಂಬ್ ಸಿಡಿಸಿದ ಸಾವಂತ್​


ಮಹದಾಯಿ ವಿಚಾರದಲ್ಲಿ ಗೋವಾದ ಅನಗತ್ಯ ಕ್ಯಾತೆ ಸಂಬಂಧ ಹೋರಾಟಗಾರ ಅಶೋಕ ಚಂದರಗಿ ಪ್ರತಿಕ್ರಿಯಿಸಿದ್ದು, ಕಳಸಾ, ಬಂಡೂರಿ ಯೋಜನೆಯನ್ನು ನಿಲ್ಲಿಸಲು ಗೋವಾ ನಿರಂತರವಾಗಿ ಪ್ರಯತ್ನಿಸುತ್ತಿದೆ. ವಿಜಯ ಸರದೇಸಾಯಿ ಕಣಕುಂಬಿಗೆ ರಹಸ್ಯವಾಗಿ ಭೇಟಿ ನೀಡಿ ಗೋವಾ ಪರಿಸರವಾದಿಗಳನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ.


ಇನ್ನು ಗೋವಾ ಸಿಎಂ ಪ್ರಮೋದ್ ಸಾವಂತ ಕೂಡ ಹೊಸ ವರಸೆ ಆರಂಭಿಸಿದ್ದಾರೆ.  ಮಹದಾಯಿ ನದಿ ನೀರು ಹಂಚಿಕೆ ಪ್ರಾಧಿಕಾರ ರಚಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದು ಕೊನೆ ಹಂತದಲ್ಲಿ ಇದೆ ಎಂದು ಸಾವಂತ್ ಹೊಸ ಬಾಂಬ್ ಸಿಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಮಹದಾಯಿ ನದಿ ನೀರು ಹಂಚಿಕೆ ಪ್ರಾಧಿಕಾರ ರಚನೆ ಆದ್ರೆ ನ್ಯಾಯಾಧೀಕರಣ ತೀರ್ಪಿನ ಅನುಷ್ಠಾನ ಕಷ್ಟ ಆಗಲಿದೆ. ಮಹದಾಯಿ ವಿಚಾರದಲ್ಲಿ ಮೌನ ವಹಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ ಮೌನ ಮುರಿಯಬೇಕಿದೆ. ಗೋವಾ ಮನವಿ ತಿರಸ್ಕಾರ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಇಲ್ಲವಾದ್ರೆ ಮಲಪ್ರಭಾ ನದಿ ಪಾತ್ರದ ಜನರಿಗೆ ಹನಿ ನೀರು ಸಿಗುವುದು ಅನುಮಾನ ಎನ್ನಲಾಗ್ತಿದೆ.

Published by:ಪಾವನ ಎಚ್ ಎಸ್
First published: