Chamarajanagar: ಅಪ್ಪಟ ಗಣಪನ ಭಕ್ತ ರೆಹಮಾನ್; ಗಣೇಶನ ಗುಡಿ ಕಟ್ಟಿ ಅರ್ಚಕರನ್ನು ನೇಮಿಸಿದ

ಗಣಪನ ದೇವಾಲಯ ನಿರ್ಮಿಸಿರೋ ರೆಹಮಾನ್​ ದೇವಾಲಯದಲ್ಲಿ ಪೂಜೆ ಮಾಡಲು ಒಬ್ಬ  ಅರ್ಚಕರನ್ನು ನೇಮಿಸಿದ್ದಾರೆ. ನಿವೃತ್ತಿ ನಂತರವೂ  ರೆಹಮಾನ್ ಇದೇ ಜಲಾಶಯದಲ್ಲಿ ದಿನಗೂಲಿ ನೌಕರರಾಗಿ ತಮ್ಮ ಸೇವೆ ಮುಂದುವರಿಸಿದ್ದಾರೆ

ರೆಹಮಾನ್​ ನಿರ್ಮಿಸಿರುವ ದೇಗುಲ

ರೆಹಮಾನ್​ ನಿರ್ಮಿಸಿರುವ ದೇಗುಲ

  • Share this:
ಚಾಮರಾಜನಗರ ( ಏ.06):  ರಾಜ್ಯದ ಎಲ್ಲೆಡೆ ಹಿಜಾಬ್ (Hijab), ಹಲಾಲ್ ಕಟ್, ಝಟ್ಕಾ ಕಟ್, ಆಜಾನ್,  ವ್ಯಾಪಾರಕ್ಕೆ ನಿರ್ಬಂಧ ಇತ್ಯಾದಿ ವಿವಾದಗಳು(Controversy) ಹೊಗೆಯಾಡುತ್ತಾ ಕೋಮು ಸೌಹಾರ್ದತೆ ಕದಡುತ್ತಿವೆ. ಕೋಮು ಸ್ವಾರಸ್ಯಕ್ಕೆ ಧಕ್ಕೆ ತರುವ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಆದರೆ ಹಿಂದೂ ದೇವರಿಗೆ (Hindu God) ದೇಗುಲ ನಿರ್ಮಿಸಿ ಆರಾಧಿಸುತ್ತಾ ಹಿಂದೂ ಮುಸ್ಲಿಂ ಭಾವೈಕ್ಯತೆಗೆ  ಸಾಕ್ಷಿಯಾಗಿದ್ದಾರೆ. ಚಾಮರಾಜನಗರದ ಈ ಮುಸ್ಲಿಂ ವ್ಯಕ್ತಿ ಚಾಮರಾಜನಗರ ತಾಲೂಕು ಚಿಕ್ಕಹೊಳೆಯ ಪಿ.ರೆಹಮಾನ್  (Rehman) ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದರೂ ಗಣಪತಿಯ (Ganapati) ಅಪ್ಪಟ ಭಕ್ತ.  ಗಣೇಶನಿಗಾಗಿ ದೇಗುಲ ನಿರ್ಮಾಣ ಮಾಡಿದ್ದಾರೆ. ನಿತ್ಯ ವಿಘ್ನ ವಿನಾಯಕನನ್ನು  ಆರಾಧಿಸುತ್ತಾ ದೇವನೊಬ್ಬ ನಾಮ ಹಲವು ಎಂಬುದನ್ನು ಸಾರುತ್ತಿದ್ದಾರೆ

ಗಣಪನ ಭಕ್ತ ಈ ರೆಹಮಾನ್​

ಪಿ. ರೆಹಮಾನ್  ಮೂಲತಃ ಕೇರಳದವರು. 80  ದಶಕದಲ್ಲೇ ಗಡಿ ಜಿಲ್ಲೆ ಚಾಮರಾಜನಗರಕ್ಕೆ ಕೆಲಸ ಅರಸಿ ಬಂದು ಇಲ್ಲೆ ನೆಲನಿಂತವರು.   ಚಿಕ್ಕಹೊಳೆ ಜಲಾಶಯದಲ್ಲಿ ದಿನಗೂಲಿ ನೌಕಕರಾಗಿದ್ದ ಪಿ.ರೆಹಮಾನ್ ಕಾಲ ಕ್ರಮೇಣ ನೀರಾವರಿ ಇಲಾಖೆಯಲ್ಲಿ ಕಾಯಂ ನೌಕರರಾಗಿ ಗೇಟ್ ಆಪರೇಟರ್ ಆಗಿ ಸಲ್ಲಿಸಿ ಕಳೆದ ನಾಲ್ಕು ವರ್ಷಗಳ ಹಿಂದೆ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಇವರು ನಿವೃತ್ತಿ ಹೊಂದುವ ಒಂದು ತಿಂಗಳ‌ ಮುಂಚೆ ಜಲಾಶಯದ ಕಾಲುವೆ  ಬಳಿಯಿದ್ದ ಪುಟ್ಟ ಗಣೇಶನ ವಿಗ್ರಹ ಇದ್ದಕ್ಕಿದ್ದಂತೆ ಕಾಣೆಯಾಗಿತ್ತು.  ಯಾರೋ ಕಿಡಿಗೇಡಿಗಳು ಕದ್ದೊಯ್ದಿದ್ದರು.  ಆದರೆ  ಅದೇ ದಿನ ರಾತ್ರಿ ನನ್ನ  ಕನಸಿನಲ್ಲಿ ಗಣಪತಿ ಕಾಣಿಸಿಕೊಂಡು ದೇವಾಲಯ  ನಿರ್ಮಿಸುವಂತೆ  ಹೇಳಿದಂತಾಗಿತ್ತು ಎನ್ನುವ ರೆಹಮಾನ್ ಇದನ್ನು‌ ಗಂಭೀರವಾಗಿ ಪರಿಗಣಿಸಿ ಕೂಡಲೇ ಕಾರ್ಯನ್ಮೋಖರಾದರು.

ಗಣೇಶನ  ದೇವಾಲಯ ನಿರ್ಮಿಸಿದ ರೆಹಮಾನ್​

ಅದೇ ವೇಳೆಗೆ ಅವರು ಸೇವೆಯಿಂದ  ನಿವೃತ್ತಿಯೂ  ಆದರು. ಗ್ರ್ಯಾಚುಯಿಟಿ, ಪ್ರಾವಿಡೆಂಟ್  ಫಂಡ್ ಇತ್ಯಾದಿ  ಹಣ ಸಹಾ ಕೈ ಸೇರಿತ್ತು. ಆ ಹಣದಲ್ಲೇ ಗಣೇಶನ  ದೇವಾಲಯ ನಿರ್ಮಿಸಿದರು.  ದೇವಾಲಯದಲ್ಲಿ ಪೂಜೆ ಮಾಡಲು ಒಬ್ಬ  ಅರ್ಚಕರನ್ನು ನೇಮಿಸಿದ್ದಾರೆ.  ನಿವೃತ್ತಿ ನಂತರವೂ  ರೆಹಮಾನ್ ಇದೇ ಜಲಾಶಯದಲ್ಲಿ ದಿನಗೂಲಿ ನೌಕರರಾಗಿ ತಮ್ಮ ಸೇವೆ ಮುಂದುವರಿಸಿದ್ದು ತಮಗೆ ಬರುವ ವೇತನದಲ್ಲೇ ಅರ್ಚಕರಿಗೆ ಪ್ರತಿ ತಿಂಗಳು ನಾಲ್ಕು  ಸಾವಿರ ಸಂಭಾವನೆ  ನೀಡುತ್ತಿದ್ದಾರೆ. ಅಲ್ಲದೇ ಪ್ರತಿ ಸೋಮವಾರ ಮತ್ತು ಶುಕ್ರವಾರ ತಾವೇ  ಹಣ್ಣು, ತೆಂಗಿನ ಕಾಯಿ, ಹೂ ಇತ್ಯಾದಿ ಪೂಜೆ ಸಾಮಾಗ್ರಿಗಳನ್ನು ತಂದು ಗಣಪತಿಗೆ ವಿಶೇಷ ಪೂಜೆ ಮಾಡಿಸುತ್ತಾರೆ ಈ ವೇಳೆ ಜಲಾಶಯದಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ಪ್ರಸಾದ ವಿನಿಯೋಗ ಸಹ ಮಾಡಲಾಗುತ್ತದೆ

ಇದನ್ನೂ ಓದಿ: Kolar: ಹೂಳು ತೆಗೆಯೋ ಕೆಲಸಕ್ಕೆ ಸೈ ಎಂದ್ರು 35 ಮಹಿಳೆಯರು, ಗ್ರಾಮದ ಕೆರೆಗಳಿಗೆ ಮರುಜೀವ ಕೊಟ್ರು

ದೇವನೊಬ್ಬ ನಾಮ ಹಲವು

"ದೇವರ ಅಪ್ಪಣೆಯಂತೆ ಗುಡಿ ಕಟ್ಟಿಸಿದ್ದೇನೆ. ಗಣಪತಿಯನ್ನು ನಂಬಿದ ಮೇಲೆ ಎಲ್ಕಾ ರೀತಿಯಲ್ಲು ಒಳ್ಳೆಯದಾಗಿದೆ.  ನನ್ನ ಬದುಕು ಹಸನಾಗಿದೆ‌. ವಿಘ್ನ ವಿನಾಯಕನ ಆಶಿರ್ವಾದದಿಂದ ನೆಮ್ಮದಿಯಾಗಿದ್ದೇನೆ.‌ಎಲ್ಲರ ರಕ್ತವೂ ಒಂದೇ ಬಣ್ಣ. ಹಾಗೇ ದೇವರೂ ಸಹಾ ಒಬ್ಬನೇ ಎಂದು ನಂಬಿ ಗಣೇಶನನ್ನು ಆರಾಧಿಸುತ್ತಿದ್ದೇನೆ " ಎನ್ನುತ್ತಾರೆ ರೆಹಮಾನ್

ಗಣಪನ ದೇಗುಲಕ್ಕೆ ಅರ್ಚಕರ ನೇಮಕ

ಗಣೇಶನನ್ನು ನಂಬಿರುವ  ರೆಹಮಾನ್‌  ಕುಟುಂಬದ  ಚನ್ನಾಗಿ ಬದುಕುತ್ತಿದ್ದಾರೆ. ಅದೇ ರೀತಿ ರೆಹಮಾನ್‌ ಅವರಿಂದ  ನನಗೆ ಒಳ್ಳೆಯದಾಗಿದ್ದು ಅವರು ಪ್ರತಿ  ತಿಂಗಳು ನೀಡುವ ನಾಲ್ಕು ಸಾವಿರ ರೂಪಾಯಿ ಸಂಭಾವನೆಯಿಂದ ನನ್ಮ ಕುಟುಂಬದ ನಿರ್ವಹಣೆಗೆ ಅನುಕೂಲವಾಗಿದೆ. ಅವರು  ಮುಸ್ಲೀಂ ಅದ್ರೂ ಗಣೇಶನಿಗೆ ಪೂಜೆ ಮಾಡಲು ನನಗೆ ಸಂಬಳ ನೀಡುತ್ತಾ  ನನ್ನ ಕಷ್ಟ ಸುಖದಲ್ಲೂ ಭಾಗಿಯಾಗ್ತಿದ್ದಾರೆ. ಇದು‌ ನಿಜವಾದ ಮನುಷತ್ವದ ಲಕ್ಷಣ ಎಂದು ಅರ್ಚಕ ಶಿವಸ್ವಾಮಿ ಹೇಳಿದರು.

ಇದನ್ನೂ ಓದಿ: Mango Market: ಹಿಜಾಬ್, ಹಲಾಲ್, ಅಜಾನ್ ನಂತ್ರ ಮಾವು ಮಾರುಕಟ್ಟೆಗೆ ಕಾಲಿಟ್ಟ ವಿವಾದ: ಹಿಂದೂಗಳ ಬಳಿ ಹಣ್ಣು ಖರೀಸುವಂತೆ ಅಭಿಯಾನ

ಹಿಂದೂ-ಮುಸ್ಲಿಂ ಎಂದು ಬಡಿದಾಡುವವರ ಮಧ್ಯೆ  ಗಣೇಶನಿಗೆ  ದೇಗುಲ ಕಟ್ಟಿಸಿರುವ ರೆಹಮಾನ್ ಹಿಂದೂ ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ, ದೇವನೊಬ್ಬ ನಾಮ ಹಲವು ಎಂಬುದನ್ನು ಸಾರುತ್ತಾ  ಕೋಮ ಭಾವೈಕ್ಯತೆ ಮೆರೆಯುತ್ತಿದ್ದಾರೆ
Published by:Pavana HS
First published: