ಕೊಪ್ಪಳ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurappa) ಅವರ ನಂತರ ನಾನು ಪ್ರಭಾವಿ ಲಿಂಗಾಯತ (Lingayat) ಮುಖಂಡನಾಗುತ್ತಿದ್ದೆ. ಸೀನಿಯರ್ ಲೀಡರ್ಗಳನ್ನು ಮನೆಗೆ ಕಳುಹಿಸಿ ತಾವು ಹೇಳಿದವರನ್ನು ಕೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ವಾಗ್ದಾಳಿ ನಡೆಸಿದರು. ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರದ ವೇಳೆ ಮಾತನಾಡಿದ ಶೆಟ್ಟರ್, ಈ ಹಿಂದೆ ಬಿಜೆಪಿಯಿಂದ ಬರುತ್ತಿದ್ದ ನಾನು ಇಂದು ಕಾಂಗ್ರೆಸ್ ಪರವಾಗಿ ಮತ ಕೇಳಲು ಬಂದಿದ್ದೇನೆ. ರಾಜ್ಯ ಬಿಜೆಪಿ ಕೆಲವೇ ಕೆಲವರ ಕಪಿ ಮುಷ್ಠಿಯಲ್ಲಿ ಸಿಕ್ಕಿದೆ ನಾನು ಜನಸಂಘದಿಂದ ನಮ್ಮ ಕುಟುಂಬ ಬೆಳಿಸಿದೆ. ಬಿಜೆಪಿಯವರು ಶೆಟ್ಟರಿಗೆ ಎಲ್ಲಾ ನೀಡಿದೆ ಎಂದು ಹೇಳುತ್ತಾರೆ. ಆದರೆ ಅದಕ್ಕೆ ಪ್ರತಿಯಾಗಿ ನಾನು ಶ್ರಮದಿಂದ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಬೆಳೆಸಿದ್ದೇನೆ ಎಂದು ತಿರುಗೇಟು ನೀಡಿದರು.
ಅಧಿಕಾರ ಹಾಗೂ ಸ್ಥಾನಮಾನಕ್ಕೆ ನಾನು ಕೆಲಸ ಮಾಡಿಲ್ಲ. ಪತ್ರಕ್ಕೆ ಸಹಿ ಮಾಡಿ ರಾಜಕೀಯ ನಿವೃತ್ತಿ ಘೋಷಿಸಿ ಎಂದರು. ಪಕ್ಷದ ಹಿರಿಯ ನಾಯಕರಿಗೆ ಹೇಳುವ ಮಾತಾ ಇದು ಎಂದು ಪ್ರಶ್ನೆ ಮಾಡಿದರು.
ಕೆಲವರ ಹಿತಾಸಕ್ತಿ ಯಿಂದ ನನಗೆ ಟಿಕೆಟ್ ನೀಡಿಲ್ಲ. ರಾಜ್ಯಸಭಾ ಮೆಂಬರ್ ಆಗಿ ಎಂದರು. ಮುಖ್ಯಮಂತ್ರಿಯಾದವರಿಗೆ ಶಾಸಕರಾಗಿ ಕೆಲಸ ಮಾಡಲು ಆಗೋದಿಲ್ಲವಾ ಎಂದು ಕೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ!
ಕಾಂಗ್ರೆಸ್ಗೆ ಬದ್ಧತೆಯಿಂದ ಕೆಲಸ ಮಾಡುತ್ತೇನೆ. ಈ ಚುನಾವಣೆಯಲ್ಲಿ ಕಾಂಗ್ರಸ್ 140-150 ಸ್ಥಾನದಿಂದ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಪ್ರಣಾಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟರ್, ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಿಂತ ಬಿಜೆಪಿಯ ಭರವಸೆಗಳಲ್ಲಿ ಏನು ವಿಶೇಷವಿಲ್ಲ. ಬಿಜೆಪಿಯಲ್ಲಿದ್ದಾಗ ಪಕ್ಷ ಬೆಳೆಸಲು ಯತ್ನಿಸಿದ್ದೆ. ಈಗ ಲಿಂಗಾಯತ ನಾಯಕರನ್ನು ಮುಗಿಸಲು ಬಿಜೆಪಿ ನಿರ್ಧರಿಸಿದದೆ ಎಂದು ಆರೋಪಿಸಿದರು.
ಇದನ್ನೂ ಓದಿ: V Somanna: ಸಚಿವರಿಗೆ ಲೋ ಬಿಪಿ, ತಲೆ ಸುತ್ತು; ಅನಾರೋಗ್ಯದ ನಡುವೆಯೂ ಬಿರುಸಿನ ಪ್ರಚಾರ
ಮತ್ತೆ ಗೆಲ್ಲುತ್ತೇನೆ!
ಒಮ್ಮೆ ಮುಖ್ಯಮಂತ್ರಿಯಾದವರಿಗೆ ಮತ್ತೆ ಮುಖ್ಯಮಂತ್ರಿಯಾಗುವ ಆಸೆ ಇಲ್ಲ. ಸೌಹಾರ್ದತಯುತವಾಗಿ ಮಾತನಾಡಿದರೆ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ. ಶೆಟ್ಟರ್ ಯಾವಾಗಲೂ ಗೆಲ್ಲುತ್ತಾರೆ. ಈ ಬಾರಿಯೂ ಅತಿ ಹೆಚ್ಚು ಬಹುಮತದಿಂದ ಗೆಲ್ಲುತ್ತೇನೆ ಎಂದು ಗುಡುಗಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ