ಬೆಳಗಾವಿ: ಬರೋಬ್ಬರಿ 24 ದಿನ (24 days) ಕಳೆದರೂ ಬೆಳಗಾವಿಯಲ್ಲಿ (Belagavi) ಚಾಲಾಕಿ ಚಿರತೆ (Leopard) ಕೈಗೆ ಸಿಗುತ್ತಿಲ್ಲ. ಶೋಧಕಾರ್ಯ ವೇಳೆ ಕಣ್ಣಿಗೆ ಬೀಳುವ ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳ (Forest Department) ಬಲೆಗೆ ಮಾತ್ರ ಬೀಳುತ್ತಿಲ್ಲ. ಇದರಿಂದ ಕಂಗೆಟ್ಟಿರುವ ಅರಣ್ಯ ಇಲಾಖೆ ಅಧಿಕಾರಿಗಳು ಈಗ ಪ್ಲ್ಯಾನ್ ಚೇಂಜ್ ಮಾಡಿದ್ದಾರೆ. ಮತ್ತೊಂದೆಡೆ ಸತೀಶ್ ಜಾರಕಿಹೊಳಿ (Sathish jarakiholi) ಬೆಂಬಲಿಗರೂ ಗಾಲ್ಫ್ ಮೈದಾನದಲ್ಲಿ (Golf Ground) ಹೈಡ್ರಾಮಾ ನಡೆಸಿದ್ದಾರೆ. ಗಜಪಡೆ ಕಾರ್ಯಾಚರಣೆ ಕೂಡ ಐದನೇ ದಿನವೂ ನಡೆಯಿತು. ಮಳೆಯಿಂದ ನಿನ್ನೆ ಸ್ಥಗಿತಗೊಂಡಿದ್ದ ಕಾರ್ಯಾಚರಣೆ ಬೆಳಗ್ಗೆ ಆರಂಭಿಸಲಾಯಿತು. ಚಾಲಾಕಿ ಚಿರತೆ ಶೋಧಕ್ಕಾಗಿ ಅರಣ್ಯ ಇಲಾಖೆ ಪ್ಲ್ಯಾನ್ ಚೇಂಜ್ ಮಾಡಲಾಯಿತು.
24ನೇ ದಿನವೂ ಚಿರತೆಗಾಗಿ ಶೋಧ
ಬೆಳಗಾವಿ ಗಾಲ್ಫ್ ಮೈದಾನದಲ್ಲಿ ಚಿರತೆಗಾಗಿ ಶೋಧ ಕಾರ್ಯ 24ನೇ ದಿನವೂ ನಡೆಯಿತು. ಚಾಲಾಕಿ ಚಿರತೆ ಅರಣ್ಯ ಸಿಬ್ಬಂದಿಗೆ ಪದೇ ಪದೇ ಚಳ್ಳೆಹಣ್ಣು ತಿನ್ನಿಸುತ್ತಿದೆ. ಗಜಪಡೆ ಕಾರ್ಯಾಚರಣೆ ಕೂಡ ಐದನೇ ದಿನವೂ ಮುಂದುವರೆಯಿತು. ಮಳೆಯಿಂದ ನಿನ್ನೆ ಸ್ಥಗಿತಗೊಂಡಿದ್ದ ಕಾರ್ಯಾಚರಣೆ ಇಂದು ಬೆಳಗ್ಗೆ ಆರಂಭಿಸಲಾಯಿತು. ಚಾಲಾಕಿ ಚಿರತೆ ಶೋಧಕ್ಕಾಗಿ ಅರಣ್ಯ ಇಲಾಖೆ ಪ್ಲ್ಯಾನ್ ಚೇಂಜ್ ಮಾಡಲಾಯಿತು.
ಪ್ಲ್ಯಾನ್ ಚೇಂಜ್ ಮಾಡಿದ ಅಧಿಕಾರಿಗಳು
ಮುಂದಿನ ಎರಡು ದಿನ ಕೇವಲ ಆಪರೇಷನ್ ಗಜಪಡೆ ನಡೆಸಲು ನಿರ್ಧರಿಸಲಾಗಿದೆ. ಚಿರತೆಗೆ ಡಿಸ್ಟರ್ಬ್ ಮಾಡದೇ ಸೆರೆಹಿಡಿಯಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಇಷ್ಟು ದಿನ ಅಳವಡಿಸಿದ್ದ ಸ್ಥಳ ಬಿಟ್ಟು ಬೋನು, ಟ್ರ್ಯಾಪ್ ಕ್ಯಾಮರಾ ಬೇರೆ ಸ್ಥಳದಲ್ಲಿ ಅಳವಡಿಕೆ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಇದನ್ನೂ ಓದಿ: Operation Cheetha: ಕಾಣದಂತೆ ಮಾಯವಾಯಿತೇ ಚಿರತೆ? ಬೆಳಗಾವಿಯಲ್ಲಿ ಆಪರೇಷನ್ ಚೀತಾ ಕಂಟಿನ್ಯೂ!
ಕೂಂಬಿಂಗ್ ವೇಳೆ ಪತ್ತೆಯಾದ ಹೆಜ್ಜೆ ಗುರುತು
8 ಸಾಮಾನ್ಯ ಬೋನು,1 ದೊಡ್ಡದಾದ ಬೋನು, 23 ಟ್ರ್ಯಾಪ್ ಕ್ಯಾಮರಾಗಳ ಅಳವಡಿಕೆ ಮಾಡಲಾಗಿದೆ. ನಿನ್ನೆ 300ಕ್ಕೂ ಹೆಚ್ಚು ಸಿಬ್ಬಂದಿ ನಡೆಸಿದ ಕೋಂಬಿಂಗ್ ವೇಳೆ ಹೆಜ್ಜೆ ಗುರುತು ಪತ್ತೆಯಾಗಿದ್ದವು.
ಅರಣ್ಯಾಧಿಕಾರಿಗಳು ಹೇಳಿದ್ದೇನು?
ಈ ಸಂಬಂಧ ಪ್ರತಿಕ್ರಿಯಿಸಿದ ಡಿಎಫ್ಓ ಆ್ಯಂಥೋನಿ ಮರಿಯಪ್ಪ, ನಿನ್ನೆ 75 ಪರ್ಸೆಂಟ್ ಪ್ರದೇಶ ಕೊಂಬಿಂಗ್ ಮಾಡಿದ್ದೇವೆ. ನಿನ್ನೆ ಮಧ್ಯಾಹ್ನ ನಂತರ ಕಾರ್ಯಾಚರಣೆಗೆ ಸ್ವಲ್ಪ ತೊಂದರೆ ಆಯ್ತು. ನಾಳೆ ಯೆಲ್ಲೋ ಅಲರ್ಟ್ ಇದೆ. ಟ್ರ್ಯಾಪ್ ಕ್ಯಾಮರಾ ಬೋನುಗಳನ್ನು ಶಿಫ್ಟ್ ಮಾಡುತ್ತೇವೆ. ಆದಷ್ಟು ಚಿರತೆಯನ್ನು ಅನ್‌ಡಿಸ್ಟರ್ಬ್ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ನಿನ್ನೆ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. 250 ಎಕರೆ ಪ್ರದೇಶದಲ್ಲಿಯೇ ಚಿರತೆ ಇರುವ ಹಿನ್ನೆಲೆಯಲ್ಲಿ ಗಾಲ್ಫ್ ಮೈದಾನ ಸುತ್ತ ಬಿಗಿ ಭದ್ರತೆ ಒದಗಿಸಿದ್ದೇವೆ. ಶಾಲೆಗಳ ಆರಂಭ ನಿರ್ಧಾರ ಜಿಲ್ಲಾಧಿಕಾರಿ ತೆಗೆದುಕೊಳ್ಳಬೇಕು ಎಂದರು.
ಉಮೇಶ್ ಕತ್ತಿ ರಾಜೀನಾಮೆಗೆ ಆಗ್ರಹ
24 ದಿನಗಳು ಕಳೆದರೂ ಬೆಳಗಾವಿಯಲ್ಲಿ ಚಿರತೆ ಪತ್ತೆಯಾಗ್ತಿಲ್ಲ. ಇದು ಕಾಂಗ್ರೆಸ್ ಕಾರ್ಯಕರ್ತೆಯರ ಆಕ್ರೋಶಕ್ಕೆ ವ್ಯಕ್ತಪಡಿಸಿದರು. ಕೈಯಲ್ಲಿ ಕೋಲು ಹಿಡಿದು ಗಾಲ್ಫ್ ಮೈದಾನ ಬಳಿ 'ಕೈ' ಕಾರ್ಯಕರ್ತೆಯರು ಹೈಡ್ರಾಮಾ ನಡೆಸಿದರು. 24 ದಿನ ಕಳೆದರೂ ಒಂದು ಚಿರತೆ ಹಿಡಿಯಲು ಆಗ್ತಿಲ್ಲ. ಉಮೇಶ್ ಕತ್ತಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸತೀಶ್ ಜಾರಕಿಹೊಳಿಯನ್ನು ಸೋಲಿಸುತ್ತೇನೆ ಎಂದು ಹೇಳುವ ಇವರು ಚಿರತೆ ಹಿಡಿಯಲು ಆಗ್ತಿಲ್ಲ. ಸಚಿವ ಉಮೇಶ್ ಕತ್ತಿ ಒಂದು ದಿನವೂ ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿಲ್ಲ. ಸತೀಶ್ ಜಾರಕಿಹೊಳಿ ಸಚಿವರಾಗಿದ್ರೆ ಇಲ್ಲೇ ಇರುತ್ತಿದ್ದರು. ಎಂದ್ರು.
ಇದನ್ನೂ ಓದಿ: Operation Elephant: ಭಾನುಮತಿ ಖೆಡ್ಡಾಕ್ಕೆ ಬಿದ್ದ ಹಾವೇರಿ ಟಸ್ಕರ್! ಮಲೆನಾಡಿಗರ ನಿದ್ದೆಗೆಡಿಸಿದ್ದ ಒಂಟಿ ಸಲಗ ಸೆರೆ
ಕಾಂಗ್ರೆಸ್ ಕಾರ್ಯಕರ್ತೆಯರ ಹೈಡ್ರಾಮಾ
ಇಂದು ನಾವು ಕಾಡಿನೊಳಗೆ ಹೋಗಲು ಬಂದಿದ್ದೇವೆ. ಇಂದು ಬಿಡಲಿಲ್ಲ ಅಂದ್ರೆ ನಾಳೆ ಸಾವಿರಾರು ಹೆಣ್ಣುಮಕ್ಕಳು ಬರ್ತಾರೆ. 24 ಗಂಟೆಯಲ್ಲಿ ಚಿರತೆ ಸೆರೆ ಹಿಡಿಯಲು ಆಗದಿದ್ರೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಮತ್ತೊಂದೆಡೆ ಗೇಟ್ ಏರಿ ಗಾಲ್ಫ್ ಮೈದಾನ ನುಗ್ಗಲು ಯತ್ನಿಸಿದರು. ಬಳಿಕ ಕೆಳಗಿಳಿದು ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ