ಕೋಲಾರ: ಜಿಲ್ಲೆಯ ಪಾಲಿಗೆ 75 ನೇ ಸ್ವಾತಂತ್ರ್ಯೋತ್ಸವದ (75th Independence day) ಅಮೃತ ಮಹೋತ್ಸವ (Amrit Mahotsav) ಅವಿಸ್ಮರಣೀಯ. ಕಾರಣ, ದೇಶದಲ್ಲಿ ಅತಿದೊಡ್ಡದಾದ ತ್ರಿವರ್ಣ ಧ್ವಜ (Tri Color Flag) ಹಾರಾಟಕ್ಕೆ ಕೋಲಾರ (Kolar) ಸಾಕ್ಷಿಯಾಯಿತು. ಇದಕ್ಕೆ ಭಾರತೀಯ ವಾಯುಸೇನೆಯು (Indian Air Force) ಬೆಂಬಲಿಸಿ, ಹೆಲಿಕಾಪ್ಟರ್ ನಿಂದ (Helicopter) ಪುಷ್ಪಾರ್ಚನೆ ಮಾಡುವ ಮೂಲಕ ಸಂಭ್ರಮ ಹೆಚ್ಚಿಸಿದ್ದು, ಇದನ್ನು ನೋಡಿ ಕೋಲಾರದ ಜನತೆ ಪುಳಕಿತರಾಗಿದ್ದಾರೆ. ನಿನ್ನೆ ಕೋಲಾರದ ಸರ್ ಎಂ ವಿಶೇಶ್ವರಯ್ಯ ಕ್ರಿಡಾಂಗಣದಲ್ಲಿ ಆಯೋಜಿಸಿದ್ದ 75 ನೇ ವರ್ಷದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನ ಉಸ್ತುವಾರಿ ಸಚಿವ ಮುನಿರತ್ನ ನೆರವೇರಿಸಿದರು. ಅದಕ್ಕೂ ಮೊದಲ ಬೆಳಗ್ಗೆ 7 ಗಂಟೆಗೆ ನಗರದ ಸೂಕ್ಷ್ಮ ಪ್ರದೇಶ ಕ್ಲಾಕ್ ಟವರ್ ಮೇಲೆ ಇದೇ ಮೊದಲ ಬಾರಿಗೆ ಧ್ವಜಾರೋಹಣ ನಡೆದು, ಮತ್ತೊಂದು ದಾಖಲೆ ನಿರ್ಮಾಣವಾಗಿದೆ.
ಸಂಭ್ರಮದ ಧ್ವಜಾರೋಹಣ
ಬೆಳಗ್ಗೆ ಸಂಸದ ಮುನಿಸ್ವಾಮಿ ಆಶಯದಂತೆ, ಜಿಲ್ಲಾಧಿಕಾರಿ ಹಾಗು ಎಸ್ಪಿಯವರು ಕ್ರೇನ್ ಸಹಾಯದಿಂದ ಧ್ವಜಾರೋಹಣ ನೆರವೇರಿಸಿದ್ರು, ಇದೇ ವೇಳೆ ನೂರಾರು ವಿಧ್ಯಾರ್ಥಿಗಳು ಭಾರತ ಧ್ವಜ ಹಿಡಿದು ಜೈಕಾರ ಹಾಕಿದರು, ಧ್ವಜಾರೋಹಣ ವೇಳೆ ಸ್ತಳೀಯ ಮುಸ್ಲಿಂ ಮುಖಂಡರು ಭಾಗಿಯಾಗಿದ್ದರು. ಮೈದಾನದಲ್ಲಿ ಸಾವಿರಾರು ಶಾಲಾ ಮಕ್ಕಳು ಭಾರತ ಧ್ವಜ ಹಿಡಿದು ಭಾಗಿಯಾಗಿದ್ದರು, ಧ್ವಜಾರೋಹಣ ನೆರವೇರಿಸಿದ ಸಚಿವ ಮುನಿರತ್ನ, ಪೆರೇಡ್ ವೀಕ್ಷಿಸಿ ಗೌರವ ವಂದನೆಯನ್ನ ಸ್ವೀಕರಿಸಿದರು.
ದೇಶದ ಅತಿದೊಡ್ಡ ಧ್ವಜ ಹಾರಾಟಕ್ಕೆ ಸಾಕ್ಷಿಯಾದ ಜನರು
ಧ್ವಜಾರೋಹಣ ನಂತರ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಸಿದ್ದಪಡಿಸಿದ್ದ 1 ಲಕ್ಷ 30 ಸಾವಿರ ಚದರಡಿಯ ದೇಶದ ದೊಡ್ಡ ಭಾರತ ಧ್ವಜವನ್ನ ಪ್ರದರ್ಶಿಸಲಾಯಿತು, 630 ಅಡಿ ಉದ್ದ, 205 ಅಡಿ ಅಗಲ, 3 ಟನ್ ತೂಕದ ಬಾವುಟವನ್ನ ಮೈದಾನದ ನಾಲ್ಕು ಭಾಗದಲ್ಲಿ ಕೈಯಲ್ಲಿಡಿದು ಸಂಚರಿಸಿದ ನೂರಾರು ಸ್ವಯಂ ಸೇವಕರು, ದೇಶದ ಅತಿದೊಡ್ಡ ಭಾರತ ಧ್ವಜವನ್ನ ಪ್ರದರ್ಶಿಸಿದರು,
ಇದನ್ನೂ ಓದಿ: Namma Metro: ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನ ದಾಖಲೆ ಬರೆದ ನಮ್ಮ ಮೆಟ್ರೋ; ಹರಿದು ಬಂತು ಕೋಟಿ ಆದಾಯ
ವಾಯುಸೇನೆ ಹೆಲಿಕಾಪ್ಟರ್‌ನಿಂದ ಪುಷ್ಪಾರ್ಚನೆ
ಬೃಹತ್ ಧ್ವಜದ ಮೇಲೆ ವಾಯು ಸೇನೆಯ ಹೆಲಿಕಾಪ್ಟರ್ ನಿಂದ ಎರಡು ಪುಷ್ಪಾರ್ಚನೆ ಮಾಡಿದ್ದು ಮತ್ತೊಂದು ವಿಶೇಷವಾಗಿತ್ತು. ದೇಶದ ಅತಿದೊಡ್ಡ ಧ್ವಜ ನಿರ್ಮಾಣ ಮಾಡಲು ಕಳೆದ 8 ದಿನದಿಂದ ಶ್ರಮಿಸಿದ್ದು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಸಂಸದ ಮುನಿಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೃಹತ್ ಧ್ವಜದ ಪ್ರದರ್ಶನದಿಂದ ಲಿಮ್ಕಾ ದಾಖಲೆಯ ಪುಟಕ್ಕು ಕೋಲಾರದ ಧ್ವಜ ಸೇರಿದೆ, ಜಿಲ್ಲೆಯ ಮಗನಾಗಿ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ತಿಳಿಸಿದರು.
ಇದನ್ನೂ ಓದಿ: Independence day: ಹಾವೇರಿಯಲ್ಲಿ ಧ್ವಜಾರೋಹಣದ ವೇಳೆ ಮಗು ಜನನ, ಧ್ವಜಸ್ತಂಭದ ಬಳಿ ತಂದು ಸಂಭ್ರಮ!
ಸಚಿವ ಮಾಧುಸ್ವಾಮಿ ರಾನಿನಾಮೆಗೆ ಮುನಿರತ್ನ ಆಗ್ರಹ
ರಾಜ್ಯದಲ್ಲಿ ಸರ್ಕಾರ ನಡೆಯುತ್ತಿಲ್ಲ ಮ್ಯಾನೇಜ್ ಮಾಡ್ತಿದ್ದೇವೆ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆಗೆ, ಕೋಲಾರದಲ್ಲಿ ತೋಟಗಾರಿಕೆ ಇಲಾಖೆಯ ಸಚಿವ ಮುನಿರತ್ನ ತಿರುಗೇಟು ನೀಡಿದ್ದಾರೆ, ಕೂಡಲೇ ಮಾಧುಸ್ವಾಮಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹಾಗೆ ಮಾತನಾಡಲಿ, ಅವರ ಹಿರಿತನಕ್ಕೆ ಈ ರೀತಿ ಹೇಳಿಕೆ ಶೋಭೆ ತರೋದಿಲ್ಲ. ಸರ್ಕಾರದಲ್ಲಿ ಮಾಧುಸ್ವಾಮಿ ಸಹ ಒಂದು ಭಾಗ, ಕ್ಯಾಬಿನೆಟ್ ನ ಪ್ರತಿಯೊಂದು ಅಂಶದಲ್ಲೂ ಅವರು ಭಾಗವಹಿಸುತ್ತಿದ್ದಾರೆ, ಅಂತಹ ಹೇಳಿಕೆ ನೀಡಿದರೆ, ಅವರು ಸಹ ಪಾಲುದಾರರಾಗಿರುತ್ತಾರೆ, ಹಾಗಾಗಿ ರಾಜಿನಾಮೆ ಕೊಟ್ಟು ಮಾತಾಡಲಿ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ