ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರ ಬೃಹತ್ ಹೋರಾಟ; ಇಂದು ಕಾರವಾರ ಬಂದ್

ಮಿತ್ರ ಸಮಾಜ ಮೈದಾನದಿಂದ ಪ್ರತಿಭಟನೆ ಪ್ರಾರಂಭವಾಗಲಿದೆ. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಮೆರವಣಿಗೆ ಹೊರಡಲಾಗುತ್ತದೆ.  ಮೀನುಗಾರರು ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದು, ಬಂದರು ವಿರೋಧಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. 

news18-kannada
Updated:January 16, 2020, 9:06 AM IST
ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರ ಬೃಹತ್ ಹೋರಾಟ; ಇಂದು ಕಾರವಾರ ಬಂದ್
ಸಾಂದರ್ಭಿಕ ಚಿತ್ರ
  • Share this:
ಕಾರವಾರ(ಜ.16): ಕಾರವಾರ ವಾಣಿಜ್ಯ ಬಂದರು ವಿಸ್ತರಣೆಗೆ ಮೀನುಗಾರರು ಮತ್ತಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟು ದಿನ ರವೀಂದ್ರನಾಥ ಕಡಲತೀರಕ್ಕೆ ಮತ್ತು ಮೀನುಗಾರಿಕೆಗೆ ಹಾನಿಯಾಗಲ್ಲ ಎಂದು ಹೋರಾಟದ ದಿಕ್ಕುತಪ್ಪಿಸುತ್ತಿದ್ದ ಬಂದರು ಇಲಾಖೆ, ಕೊನೆಗೂ ನಿನ್ನೆ ಕಡಲತೀರದ ಮಧ್ಯೆಯೇ ಕಲ್ಲು ಹಾಕಿ ಕಾಮಗಾರಿ ಆರಂಭ ಮಾಡಿದೆ. ಬಂದರು ಇಲಾಖೆಯ ಈ ಧೋರಣೆಯನ್ನು ಖಂಡಿಸಿ ಮೀನುಗಾರರ ಹೋರಾಟ ಇನ್ನಷ್ಟು ಬಲಗೊಳ್ಳುತ್ತಿದೆ.  ಕಾರವಾರದ ಮೀನುಗಾರರು ಕಡಲತೀರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಹಾಗಾಗಿ ಇಂದು ಕಾರವಾರ ಬಂದ್ ಮಾಡಿದ್ದು ಹೋರಾಟದ ಕಿಚ್ಚು ಇನ್ನಷ್ಟು ಬಲವಾಗಲಿದೆ.

ಇಂದು ಕಾರವಾರ ಸಂಪೂರ್ಣ ಬಂದ್ ಆಗಿದ್ದು, ಮೀನುಗಾರರಿಗೆ ಹಲವು ಸಂಘಟನೆಗಳ ಬೆಂಬಲ ನೀಡಿದ್ದಾರೆ. ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ಮಾಡುವ ಸಾಗರಮಾಲ ಯೋಜನೆ ವಿರೋಧಿಸಿ ಮೀನುಗಾರರು ಕಾರವಾರ ಬಂದ್​ಗೆ ಕರೆ ಕೊಟ್ಟಿದ್ದಾರೆ. ಕಡಲತೀರ ಉಳಿಸಿಕೊಳ್ಳಲು ಮೀನುಗಾರರು ಹೋರಾಟ ನಡೆಸುತ್ತಿದ್ದಾರೆ. ವಾಹನ ಸಂಚಾರ ಸ್ಥಗಿತವಾಗಿದ್ದು, ಪ್ರಯಾಣಿಕರ ಪರದಾಡುತ್ತಿದ್ದಾರೆ. ಶಾಲಾ-ಕಾಲೇಜಿಗೆ ಅಧಿಕೃತ ರಜೆ ಘೋಷಣೆ ಇಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 6 ಕೆಎಸ್​ಆರ್​​ಪಿ, 8 ಡಿಎಆರ್​​, ಡಿವೈಎಸ್​ಪಿ ಸೇರಿ 550ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

370ನೇ ವಿಧಿ ರದ್ದು ಮಾಡಿದ 5 ತಿಂಗಳ ಬಳಿಕ ಜಮ್ಮು-ಕಾಶ್ಮೀರಕ್ಕೆ ಮೊದಲ ಬಾರಿಗೆ 36 ಕೇಂದ್ರ ಸಚಿವರ ನಿಯೋಗ ಭೇಟಿಗೆ ಸಿದ್ಧತೆ

ಬೆಳಿಗ್ಗೆ 9 ಗಂಟೆ ಬಳಿಕ ಮೀನುಗಾರರು ಪ್ರತಿಭಟನೆ ನಡೆಸಲಿದ್ದಾರೆ. ಆಸ್ಪತ್ರೆ, ಮೆಡಿಕಲ್ ಶಾಪ್ ಸೇವೆಯಲ್ಲಿ ವ್ಯತ್ಯಯ ಇಲ್ಲ. ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು, ಕನ್ನಡಪರ ಸಂಘಗಳು ಮೀನುಗಾರರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಮಿತ್ರ ಸಮಾಜ ಮೈದಾನದಿಂದ ಪ್ರತಿಭಟನೆ ಪ್ರಾರಂಭವಾಗಲಿದೆ. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಮೆರವಣಿಗೆ ಹೊರಡಲಾಗುತ್ತದೆ.  ಮೀನುಗಾರರು ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದು, ಬಂದರು ವಿರೋಧಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ.

ಸಾಗರಮಾಲಾ ಯೋಜನೆಯಡಿ ಬಂದರು ವಿಸ್ತರಣೆಗೆ ಮೀನುಗಾರರ ವಿರೋಧದ ಹೋರಾಟ ದಿನದಿನಕ್ಕೂ ಬಲಗೊಳ್ಳುತ್ತಿದೆ. ಇಷ್ಟು ದಿನ ಬಂದರು ಇಲಾಖೆ ಮೀನುಗಾರರ ಹೋರಾಟವನ್ನು ಹತ್ತಿಕ್ಕಲು ಮೀನುಗಾರಿಕೆಗೆ ಮತ್ತು ರವೀಂದ್ರನಾಥ ಕಡಲತೀರಕ್ಕೆ ಹಾನಿಯಾಗಲ್ಲ ಎಂದು ಬಹಿರಂಗ ಹೇಳಿಕೆ ನೀಡಿತ್ತು. ಆದರೆ ಈ ಮಧ್ಯೆ ನಿನ್ನೆ ಬಂದರು ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲೇ ಕಾರವಾರ ರವೀಂದ್ರನಾಥ ಕಡಲತೀರದಲ್ಲೆ ಕಲ್ಲು ಹಾಕಿ ಕಾಮಗಾರಿ ವೇಗ ಇನ್ನಷು ಹೆಚ್ಚಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮೀನುಗಾರರು ನಿನ್ನೆ ಕಾಮಗಾರಿಯನ್ನ ತಾತ್ಕಾಲಿಕವಾಗಿ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಕಾಮಗಾರಿ ಜಾಗದಲ್ಲೇ ಸಾಂಪ್ರದಾಯಿಕ ಮೀನುಗಾರಿಕೆ ಮಾಡಿ ಸಮಸ್ಯೆ ತೋರಿಸಿದ್ದರು.

ಓಟು ಹಾಕಿಸಿಕೊಳ್ಳಲು ಸ್ವಾಮೀಜಿಗಳು ಬೇಕು, ಸಚಿವ ಸ್ಥಾನ ಕೇಳಲು ಮಾತ್ರ ಬೇಡವಾ?; ವಚನಾನಂದ ಶ್ರೀಗೆ ಡಿಕೆಶಿ ಸಾಂತ್ವನ

 
First published:January 16, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ