ಯುಗಾದಿ ವಿಶೇಷ | ಮಾರಟೇಶ್ವರ ದೇಗುಲದ ಉದ್ಭವ ಲಿಂಗದ ಮೇಲೆ ಪ್ರಥಮ ಸೂರ್ಯ ರಶ್ಮಿಯ ಸಿಂಚನ!

ಯುಗಾದಿ ವಿಶೇಷ | ಸೂರ್ಯ ಉದಯಿಸಿದ ನಂತರ ಸುಮಾರು 20 ನಿಮಿಷ ಕಾಲ ಸೂರ್ಯನ ಕಿರಣಗಳು ಲಿಂಗವನ್ನು ಸ್ಪರ್ಶಿಸುವ ದೃಶ್ಯ ನೋಡಿ, ಭಕ್ತರು ಪುಳಕಿತರಾದರು. ಇದೇ ವೇಳೆ ದೇವರಿಗೆ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಲಾಯಿತು.

HR Ramesh | news18
Updated:April 6, 2019, 11:36 AM IST
ಯುಗಾದಿ ವಿಶೇಷ | ಮಾರಟೇಶ್ವರ ದೇಗುಲದ ಉದ್ಭವ ಲಿಂಗದ ಮೇಲೆ ಪ್ರಥಮ ಸೂರ್ಯ ರಶ್ಮಿಯ ಸಿಂಚನ!
ನಂದಿಯ ಮೂಲಕ ಲಿಂಗದ ಮೇಲೆ ಸೂರ್ಯ ರಶ್ಮಿಯ ಸಿಂಚನ
  • News18
  • Last Updated: April 6, 2019, 11:36 AM IST
  • Share this:

  • ಶರಣಪ್ಪ ಬಾಚಲಾಪುರರಾಯಚೂರು: ಹಿಂದುಗಳಿಗೆ ಯುಗಾದಿ ಹೊಸ ವರ್ಷ. ಹಿಂದಿನ ವರ್ಷ ಮುಗಿದು ನೂತನ ಸಂವತ್ಸರ ಇಂದಿನಿಂದ ಆರಂಭವಾಗುತ್ತದೆ. ಇಂದು ವಿಕಾರಿ ನಾಮ ಸಂವತ್ಸರ ಆರಂಭ. ಈ ದಿನ ವಸಂತ ಋತುವಿನ ಚೈತ್ರ ಮಾಸ, ವಸಂತ ಋತು ಭೂಮಿಯಲ್ಲಿ ನವೋಲ್ಲಾಸ ನೀಡುತ್ತದೆ. ಈ ಸಂದರ್ಭದಲ್ಲಿ ಮೂಡಲದಲ್ಲಿ ಮೂಡುವ ಸೂರ್ಯನ ಕಿರಣಗಳು ದೇವರ ಮೇಲೆ ಬಿದ್ದರೆ, ಈ ವಿಸ್ಮಯ ಮನೋಹರವಾಗಿರುತ್ತದೆ. ಇಂಥ ಒಂದು ದೃಶ್ಯಕ್ಕೆ ಇಂದು ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಕಲ್ಲೂರಿನಲ್ಲಿರುವ ಮಾರಟೇಶ್ವರ ದೇವಸ್ಥಾನ ಸಾಕ್ಷಿಯಾಯಿತು,

ಈ ಐತಿಹಾಸಿಕ ದೇಗುಲದಲ್ಲಿ ಯುಗಾದಿಯ ದಿನದಂದು ಸೂರ್ಯನ ಪ್ರಥಮ ಕಿರಣಗಳು ಸ್ಪರ್ಶಿಸಿವೆ. ಈ ದೇಗುಲದಲ್ಲಿರುವ ಉದ್ಭವ ಲಿಂಗದ ಮೇಲೆ ಸೂರ್ಯ ಕಿರಣಗಳು ಬೀಳುವ ವಿಸ್ಮಯ ದೃಶ್ಯವನ್ನು ಸಾವಿರು ಭಕ್ತರು ಕಣ್ತುಂಬಿಸಿಕೊಂಡಿದ್ದಾರೆ.

ಸಾವಿರಾರು ವರ್ಷಗಳ ಇತಿಹಾಸವಿರುವ ಮಾರಟೇಶ್ವರ ದೇವಸ್ಥಾನದ ಗರ್ಭ ಗುಡಿಯಲ್ಲಿ ಪ್ರತಿವರ್ಷದ ಏಪ್ರಿಲ್ 5,6,7ರಂದು ನೇಸರನ ಪ್ರಥಮ ಕಿರಣಗಳು ಲಿಂಗದ ಮುಂದೆ ಇರುವ ನಂದಿಯ ಮುಖಾಂತರ ಲಿಂಗದ ಮೇಲೆ ಬೀಳುತ್ತವೆ. ಈ ಬಾರಿ ಇಂದೇ ಯುಗಾದಿ ಇರುವುದರಿಂದ ವಿಕಾರಿ ನಾಮಸಂವತ್ಸರದ ಮೊದಲು ಸೂರ್ಯ ಕಿರಣ ಮಾರಟೇಶ್ವರನ ಮೇಲೆ ಬಿದ್ದಿವೆ.

ಇದನ್ನು ಓದಿ: ಯುಗಾದಿ ಹಬ್ಬದ ನಿಮಿತ್ತ ಇಂದು ಪ್ರಚಾರಕ್ಕೆ ಬ್ರೇಕ್​ ಹಾಕಿದ ದರ್ಶನ್-ಯಶ್​; ದಳಪತಿಗಳಿಗೂ ದಿನದ ಮಟ್ಟಿಗೆ ವಿಶ್ರಾಂತಿಪುರಾಣಗಳ ಪ್ರಕಾರ ಭರತರಾಜ್ ಇಲ್ಲಿ ಆಡಳಿತ ನಡೆಸಿದ್ದು, ಈ ಸಂದರ್ಭದಲ್ಲಿ ಈ ಲಿಂಗ ಉದ್ಭವವಾಗಿದೆ ಎನ್ನಲಾಗಿದೆ. ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯ ಈ ದೇವಸ್ಥಾನದಲ್ಲಿ ಈ ವರ್ಷ ಯುಗಾದಿಯಂದೇ ಸೂರ್ಯ ಕಿರಣಗಳು ಲಿಂಗದ ಮೇಲೆ ಬಿದ್ದಿರುವದು ವಿಶೇಷ. ಈ ವಿಸ್ಮಯದ ನಂತರ ನೂತನ ವರ್ಷದ ಪಂಚಾಂಗ ಪಠಣ ಹಾಗೂ ಮುಂದಿನ ವರ್ಷದ ಮಳೆ ಬೆಳೆಯ ಬಗ್ಗೆ ಪಂಚಾಂಗದ ಉಲ್ಲೇಖವನ್ನು ಭಕ್ತರಿಗೆ ತಿಳಿಸಲಾಯಿತು.

ಸೂರ್ಯ ಉದಯಿಸಿದ ನಂತರ ಸುಮಾರು 20 ನಿಮಿಷ ಕಾಲ ಸೂರ್ಯನ ಕಿರಣಗಳು ಲಿಂಗವನ್ನು ಸ್ಪರ್ಶಿಸುವ ದೃಶ್ಯ ನೋಡಿ, ಭಕ್ತರು ಪುಳಕಿತರಾದರು. ಇದೇ ವೇಳೆ ದೇವರಿಗೆ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಲಾಯಿತು.

First published:April 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading