• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • AAP List: ಟೆನ್ನಿಸ್‌ ಕೃಷ್ಣ, ಬ್ರಿಜೇಶ್ ಕಾಳಪ್ಪಗೆ ಎಎಪಿ ಟಿಕೆಟ್; ವಿಧಾನಸಭಾ ಚುನಾವಣೆಗೆ ಆಮ್‌ ಆದ್ಮಿ ರಣಕಹಳೆ

AAP List: ಟೆನ್ನಿಸ್‌ ಕೃಷ್ಣ, ಬ್ರಿಜೇಶ್ ಕಾಳಪ್ಪಗೆ ಎಎಪಿ ಟಿಕೆಟ್; ವಿಧಾನಸಭಾ ಚುನಾವಣೆಗೆ ಆಮ್‌ ಆದ್ಮಿ ರಣಕಹಳೆ

ಆಮ್‌ ಆದ್ಮಿ ಲಿಸ್ಟ್

ಆಮ್‌ ಆದ್ಮಿ ಲಿಸ್ಟ್

ಇದೀಗ ಆಮ್ ಆದ್ಮಿ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿ (Candidates List) ರಿಲೀಸ್ ಮಾಡಿದೆ. ಚಲನಚಿತ್ರ ಖ್ಯಾತ ಹಾಸ್ಯನಟ ಟೆನ್ನಿಸ್ ಕೃಷ್ಣ, ಕಾಂಗ್ರೆಸ್ ಮಾಜಿ ವಕ್ತಾರ ಬ್ರಿಜೇಶ್ ಕಾಳಪ್ಪ, ಮಾಜಿ ಕೆಎಎಸ್ ಅಧಿಕಾರಿ ಕೆ. ಮಥಾಯ್ ಸೇರಿದಂತೆ ಹಲವರಿಗೆ ಟಿಕೆಟ್ ನೀಡಲಾಗಿದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿ (Delhi) ಹಾಗೂ ಪಂಜಾಬ್‌ನಲ್ಲಿ (Punjab) ಅಧಿಕಾರದ ಗದ್ದುಗೆ ಹಿಡಿದಿರುವ ಆಮ್ ಆದ್ಮಿ ಪಕ್ಷ (Aam Aadmi Party), ಇದೀಗ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಇದೀಗ ಆಮ್ ಆದ್ಮಿ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿ (Candidates List) ರಿಲೀಸ್ ಮಾಡಿದೆ. ಚಲನಚಿತ್ರ ಖ್ಯಾತ ಹಾಸ್ಯನಟ ಟೆನ್ನಿಸ್ ಕೃಷ್ಣ, ಕಾಂಗ್ರೆಸ್ ಮಾಜಿ ವಕ್ತಾರ ಬ್ರಿಜೇಶ್ ಕಾಳಪ್ಪ, ಮಾಜಿ ಕೆಎಎಸ್ ಅಧಿಕಾರಿ ಕೆ. ಮಥಾಯ್ ಸೇರಿದಂತೆ ಹಲವರಿಗೆ ಟಿಕೆಟ್ ನೀಡಲಾಗಿದೆ. ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಬ್ರಿಜೇಶ್ ಕಾಳಪ್ಪ ಸೇರಿದಂತೆ ಹಲವರ ಸಮ್ಮುಖದಲ್ಲಿ ಪಟ್ಟಿ ರಿ್ಲೀಸ್ ಮಾಡಿದ್ರು.


ಮೊದಲ ಲಿಸ್ಟ್ ರಿಲೀಸ್


ಈ ವೇಳೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, ಇಂದು ನಾವು ಬಿಡುಗಡೆ ಮಾಡ್ತಾ ಇರೋದು ಮೊದಲ ಲಿಸ್ಟ್ ಜೊತೆಗೆ ಬೆಸ್ಟ್ ಲಿಸ್ಟ್. ಭ್ರಷ್ಟಾಚಾರ ರಹಿತ ಜನ ಸಾಮಾನ್ಯರಿಗೆ ನಮ್ಮ ಪಕ್ಷ  ಟಿಕೆಟ್ ನೀಡುತ್ತಿದೆ. 10 ವರ್ಷದಲ್ಲಿ ನಮ್ಮ ಪಕ್ಷ ಎರಡು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ. ಕಡಿಮೆ ಸಮಯದಲ್ಲಿ ನಮ್ಮ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದ್ರು.


ಹಲವು ಕ್ಷೇತ್ರದ ವ್ಯಕ್ತಿಗಳಿಗೆ ಟಿಕೆಟ್


ಮೊದಲ ಪಟ್ಟಿಯಲ್ಲಿ 45 ವರ್ಷಕ್ಕಿಂತ ಕೆಳಗಿನವರು, ಮೊದಲ 7 ಜನ ರೈತರಿದ್ದಾರೆ ಅಂತ ರೆಡ್ಡಿ ಹೇಳಿದ್ರು. 7 ಮಹಿಳೆಯರು, 7 ಸಮಾಜ ಸೇವಕರು, 13 ವಕೀಲರು, 4 ಜನರು ವೈದ್ಯರು, ಪತ್ರಕರ್ತರಿದ್ದಾರೆ, ಇಂಜಿನಿಯರ್ಸ್ಗೆ ಈ ಬಾರಿ ಟಿಕೆಚ್ ನೀಡಲಾಗಿದೆ. 69 ಅಭ್ಯರ್ಥಿಗಳು ಮೊದಲ ಬಾರಿಗೆ MLA ಎಲೆಕ್ಷನ್ ಗೆ ನಿಲ್ತಾ ಇದ್ದಾರೆ ಅಂತ ಮಾಹಿತಿ ನೀಡಿದ್ರು.


ಇದನ್ನೂ ಓದಿ: Janardhan Reddy: ಮತದಾರರಿಗೆ ಡಬಲ್ ಬೆಡ್‌ ರೂಂ ಮನೆ ಗಿಫ್ಟ್! ಜನಾರ್ದನ ರೆಡ್ಡಿಯಿಂದ ಭರ್ಜರಿ ಆಫರ್


ಟಿನ್ನಿಸ್ ಕೃಷ್ಣ, ಬ್ರಿಜೇಶ್ ಕಾಳಪ್ಪಗೆ ಟಿಕೆಟ್


ಚಲನಚಿತ್ರ ಖ್ಯಾತ ಹಾಸ್ಯನಟ ಟೆನ್ನಿಸ್ ಕೃಷ್ಣ ಅವರಿಗೆ ತುರುವೇಕೆರೆಯಿಂದ, ಕಾಂಗ್ರೆಸ್ ಮಾಜಿ ವಕ್ತಾರ ಬ್ರಿಜೇಶ್ ಕಾಳಪ್ಪ, ಮಾಜಿ ಕೆಎಎಸ್ ಅಧಿಕಾರಿ ಕೆ. ಮಥಾಯ್ ಸೇರಿದಂತೆ ಹಲವರಿಗೆ ಟಿಕೆಟ್ ನೀಡಲಾಗಿದೆ. ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಬ್ರಿಜೇಶ್ ಕಾಳಪ್ಪ ಸೇರಿದಂತೆ ಹಲವರ ಸಮ್ಮುಖದಲ್ಲಿ ಪಟ್ಟಿ ರಿ್ಲೀಸ್ ಮಾಡಿದ್ರು.


ಯಾರಿಗೆ ಯಾವ ಕ್ಷೇತ್ರದ ಟಿಕೆಟ್?


ತೇರದಾಳ - ಅರ್ಜುನ ಹಲಗಿಗೌಡರ, ಬಾದಾಮಿ - ಶಿವರಾಯಪ್ಪ ಜೋಗಿನ, ಬಾಗಲಕೋಟೆ - ರಮೇಶ ಬದ್ನೂರ, ಅಥಣಿ - ಸಂಪತ್ ಕುಮಾರ ಶೆಟ್ಟಿ, ಬೈಲಹೊಂಗಲ - ಬಿ. ಎಂ. ಚಿಕ್ಕನಗೌಡರ, ರಾಮದುರ್ಗ - ಮಲ್ಲಿಕಜಾನ್‌ ನದಾಫ, ಹುಬ್ಬಳ್ಳಿ- ಧಾರವಾಡ ಪೂರ್ವ - ಬಸವರಾಜ ಎಸ್‌ ತೇರದಾಳ, ಹುಬ್ಬಳ್ಳಿ-ಧಾರವಾಡ ಕೇಂದ್ರ - ವಿಕಾಸ ಸೊಪ್ಪಿನ, ಕಲಘಟಗಿ - ಮಂಜುನಾಥ ಜಕ್ಕಣ್ಣವರರಿಗೆ ಟಿಕೆಟ್ ನೀಡಲಾಗಿದೆ.


ಇನ್ನು ಯಾರಿಗೆ ಟಿಕೆಟ್?


ಇನ್ನು ರೋಣ - ಆನೇಕಲ್‌ ದೊಡ್ಡಯ್ಯ, ಬ್ಯಾಡಗಿ - ಎಂ. ಎನ್.‌ ನಾಯಕ, ರಾಣೆಬೆನ್ನೂರು - ಹನುಮಂತಪ್ಪ ಕಬ್ಬಾರ, ಬಸವ ಕಲ್ಯಾಣ - ದೀಪಕ ಮಲಗಾರ, ಹುಮನಾಬಾದ - ಬ್ಯಾಂಕ್‌ ರೆಡ್ಡಿ, ಬೀದರ ದಕ್ಷಿಣ - ನಸೀಮುದ್ದಿನ್‌ ಪಟೇಲ, ಭಾಲ್ಕಿ - ತುಕಾರಾಮ ನಾರಾಯಣರಾವ್ ಹಜಾರೆ, ಔರಾದ - ಬಾಬುರಾವ ಅಡ್ಕೆ, ಗುಲ್ಬರ್ಗ ಗ್ರಾಮೀಣ - ಡಾ. ರಾಘವೇಂದ್ರ ಚಿಂಚನಸೂರ, ಗುಲ್ಬರ್ಗ ದಕ್ಷಿಣ - ಸಿದ್ದರಾಮ ಅಪ್ಪಾರಾವ ಪಾಟೀಲ, ಗುಲ್ಬರ್ಗ ಉತ್ತರ - ಸಯ್ಯದ್‌ ಸಜ್ಜಾದ್‌ ಅಲಿ, ಇಂಡಿ - ಗೋಪಾಲ ಆರ್‌ ಪಾಟೀಲ, ಗಂಗಾವತಿ - ಶರಣಪ್ಪ ಸಜ್ಜಿಹೊಲ ಸೇರಿದಂತೆ  ಹಲವರಿಗೆ ಎಎಪಿ ಟಿಕೆಟ್ ನೀಡಿದೆ.
ಅದೃಷ್ಟ ಪರೀಕ್ಷೆಗೆ ಇಳಿದವರು


ಇದರ ಜೊತೆ ರಾಯಚೂರು ಗ್ರಾಮೀಣ - ಡಾ. ಸುಭಾಶಚಂದ್ರ ಸಾಂಭಾಜಿ, ರಾಯಚೂರು - ಡಿ. ವೀರೇಶ ಕುಮಾರ ಯಾದವ, ಮಾನ್ವಿ - ರಾಜಾ ಶಾಮಸುಂದರ ನಾಯಕ, ಲಿಂಗಸುಗೂರು - ಶಿವಪುತ್ರ ಗಾಣದಾಳ, ಸಿಂಧನೂರು - ಸಂಗ್ರಾಮ ನಾರಾಯಣ ಕಿಲ್ಲೇದ, ವಿಜಯನಗರ - ಡಿ. ಶಂಕರದಾಸ, ಕೂಡ್ಲಿಗಿ - ಶ್ರೀನಿವಾಸ ಎನ್, ಹರಪನಹಳ್ಳಿ - ನಾಗರಾಜ ಎಚ್‌, ಚಿತ್ರಗುರ್ಗ - ಜಗದೀಶ ಬಿ. ಇ., ಜಗಳೂರು – ಗೋವಿಂದರಾಜು, ಹರಿಹರ - ಗಣೇಶಪ್ಪ ದುರ್ಗದ, ದಾವಣಗೆರೆ ಉತ್ತರ - ಶ್ರೀಧರ ಪಾಟೀಲ, ಕುಣಿಗಲ್‌ – ಜಯರಾಮಯ್ಯ, ಗುಬ್ಬಿ – ಪ್ರಭುಸ್ವಾಮಿ, ಸಿರಾ – ಶಶಿಕುಮಾರ್, ಪಾವಗಡ - ರಾಮಾಂಜನಪ್ಪ ಎನ್, ಶೃಂಗೇರಿ - ರಾಜನ್‌ ಗೌಡ ಎಚ್.ಎಸ್‌, ಹಾಸನ - ಅಗಿಲೆ ಯೋಗೀಶ್‌, ಭದ್ರಾವತಿ – ಆನಂದ, ಶಿವಮೊಗ್ಗ - ನೇತ್ರಾವತಿ ಟಿ, ಸಾಗರ - ಕೆ. ದಿವಾಕರ, ಮೂಡಬಿದರೆ- ವಿಜಯನಾಥ ವಿಠಲ ಶೆಟ್ಟಿ, ಮಂಗಳೂರು ನಗರ ದಕ್ಷಿಣ - ಸಂತೋಷ್‌ ಕಾಮತ, ಸುಳ್ಯ – ಸುಮನಾ, ಕಾರ್ಕಳ – ಡ್ಯಾನಿಯಲ್, ಶಿರಸಿ - ಹಿತೇಂದ್ರ ನಾಯಕ, ಮಳವಳ್ಳಿ - ಬಿಸಿ ಮಹದೇವಸ್ವಾಮಿ, ಮಂಡ್ಯ – ಬೊಮ್ಮಯ್ಯ, ಪಿರಿಯಾಪಟ್ಟಣ - ರಾಜಶೇಖರ್‌ ದೊಡ್ಡಣ್ಣ ಸೇರಿದಂತೆ ಹಲವರಿಗೆ ಟಿಕೆಟ್ ನೀಡಲಾಗಿದೆ.



ಬೆಂಗಳೂರಿನಲ್ಲಿ ಯಾರಿಗೆಲ್ಲ ಟಿಕೆಟ್?

top videos


    ಬೆಂಗಳೂರಿನ ದಾಸರಹಳ್ಳಿ - ಕೀರ್ತನ್‌ ಕುಮಾರ, ಮಹಾಲಕ್ಷ್ಮಿ ಬಡಾವಣೆ - ಶಾಂತಲಾ ದಾಮ್ಲೆ, ಮಲ್ಲೇಶ್ವರ - ಸುಮನ್ ಪ್ರಶಾಂತ್‌, ಹೆಬ್ಬಾಳ - ಮಂಜುನಾಥ ನಾಯ್ಡು, ಪುಲಕೇಶಿನಗರ - ಸುರೇಶ್‌ ರಾಥೋಡ್, ಸಿ.ವಿ. ರಾಮನ್‌ ನಗರ - ಮೋಹನ ದಾಸರಿ, ಶಿವಾಜಿನಗರ - ಪ್ರಕಾಶ್‌ ನೆಡುಂಗಡಿ, ಶಾಂತಿನಗರ - ಕೆ ಮಥಾಯ್, ರಾಜಾಜಿನಗರ - ಬಿಟಿ ನಾಗಣ್ಣ, ವಿಜಯನಗರ - ಡಾ ರಮೇಶ್‌ ಬೆಲ್ಲಂಕೊಂಡ, ಚಿಕ್ಕಪೇಟೆ - ಬ್ರಿಜೇಶ್‌ ಕಾಳಪ್ಪ, ಪದ್ಮನಾಭನಗರ - ಅಜಯ್‌ ಗೌಡ, ಬಿ.ಟಿ.ಎಂ ಬಡಾವಣೆ - ಶ್ರೀನಿವಾಸ್‌ ರೆಡ್ಡಿ ಹಾಗೂ ಬೊಮ್ಮನಹಳ್ಳಿ - ಸೀತಾರಾಮ್‌ ಗುಂಡಪ್ಪಗೆ ಟಿಕೆಟ್ ನೀಡಲಾಗಿದೆ.

    First published: