Sanchari Vijay Last Rites: ಸಕಲ ಸರ್ಕಾರಿ ಗೌರವದೊಂದಿಗೆ ಸಂಚಾರಿ ವಿಜಯ್​ ಅಂತ್ಯಸಂಸ್ಕಾರ: ಮುಖ್ಯಮಂತ್ರಿ ಯಡಿಯೂರಪ್ಪ

B S Yadiyurappa: ಕೆಲವೇ ನಿಮಿಷಗಳ ಹಿಂದೆಯಷ್ಟೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರೂ ಟ್ವೀಟ್​ ಮಾಡಿದ್ದು, ಸರ್ಕಾರಿ ಗೌರವದೊಂದಿಗೆ ವಿಜಯ್​ ಅವರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸಂಚಾರಿ ವಿಜಯ್​ ಹಾಗೂ ಬಿ. ಎಸ್​. ಯಡಿಯೂರಪ್ಪ

ಸಂಚಾರಿ ವಿಜಯ್​ ಹಾಗೂ ಬಿ. ಎಸ್​. ಯಡಿಯೂರಪ್ಪ

  • Share this:
ಸಂಚಾರಿ ವಿಜಯ್​ ಅವರ ಅಕಾಲಿಕ ಮರಣದಿಂದಾಗಿ ಸ್ಯಾಂಡಲ್​ವುಡ್​ ಮಂದಿ ಇನ್ನೂ ಶಾಕ್​ನಲ್ಲಿದ್ದಾರೆ. ಅಪ್ಪಟ ದೇಸಿ ಪ್ರತಿಭೆಯ ಅಗಲಿಕೆಯಿಂದ ಕನ್ನಡ ಸಿನಿರಂಗ ಕಣ್ಣೀರಿಡುತ್ತಿದೆ. ಶನಿವಾರ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಟ ಸಂಛಾರಿ ವಿಜಯ್​ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಇಂದು ಮುಂಜಾನೆ 3.34ಕ್ಕೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯ ವೈದ್ಯರು ವಿಜಯ್​ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇಂದು ಬೆಳಿಗ್ಗೆ ವಿಜಯ್​ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ 8 ಗಂಟೆಯಿಂದ 10ಗಂಟೆಯವರೆಗೆ ಇರಿಸಲಾಗಿತ್ತು. ಅಭಿಮಾನಿಗಳು, ಗಣ್ಯರು ಹಾಗೂ ಸಿನಿರಂಗದ ಕಲಾವಿದರು ರವೀಂದ್ರ ಕಲಾಕ್ಷೇತ್ರಕ್ಕೆ ಬಂದು ಅಂತಿಮ ನಮನ ಸಲ್ಲಿಸಿದ್ದಾರೆ. ಕೆಲವೇ ನಿಮಿಷಗಳ ಹಿಂದೆಯಷ್ಟೆ ವಿಜಯ್​ ಅವರ ಮೃತ ದೇಹವನ್ನು ಅವರ ಸ್ವಗ್ರಾಮಕ್ಕೆ ಸಾಗಿಸಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.  

ವಿಜಯ್ ಅವರ ಹುಟ್ಟೂರಾದ ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿ ಇಂದು ಮಧ್ಯಾಹ್ನ ಅಂತ್ಯ ಸಂಸ್ಕಾರ ನಡೆಯಲಿದೆ. ಇನ್ನು ವಿಜಯ್​ ಅವರ ಅಂತ್ಯಸಂಸ್ಕಾರ ವಿಧಿ ವಿಧಾನಗಳ ಪ್ರಕಾರ ನಡೆಯಲಿದೆ.

ಅಂತಿಮ ದರ್ಶನ ಪಡೆದ ಕಲಾವಿದರು ಹಾಗೂ ಅಭಿಮಾನಿಗಳು


ವಿಜಯ್​ ಅವರ ಅಂತ್ಯ ಸಂಸ್ಕಾರ ಸಲಕ ಸರ್ಕಾರಿ ಗೌರವಗಳೊಂದಿಗೆ ನಡೆಯಬೇಕೆಂದು ಹಲವರು ಒತ್ತಾಯಿಸಿದ್ದರು. ಜೆಡಿಎಸ್​ ಮುಖಂಡ ವೈಎಸ್​ವಿ ದತ್ತ ಸಹ ಆಗ್ರಹಿಸಿದ್ದರು. ಇನ್ನು ಈ ಕುರಿತಾಗಿ ನಿರ್ದೇಶಕ ಮನ್ಸೋರೆ ಅವರು ತಮ್ಮ ಫೇಸ್​ಬುಕ್​ ಪೋಸ್ಟ್​ನಲ್ಲಿ ಬರೆದುಕೊಂಡಿದ್ದರು. ಕೆಲವೇ ನಿಮಿಷಗಳ ಹಿಂದೆಯಷ್ಟೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರೂ ಟ್ವೀಟ್​ ಮಾಡಿದ್ದಾರೆ.

ಯಡಿಯೂರಪ್ಪ ಅವರು ಮಾಡಿರುವ ಲೆಟೆಸ್ಟ್​ ಟ್ವೀಟ್​...



'ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅವರ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವಗಳೊಂದಿಗೆ ನಡೆಸಲಾಗುವುದು. ಅವರ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿರುವ ಕುಟುಂಬದವರಿಗೆ ಕೃತಜ್ಞತೆಗಳ ಜೊತೆಗೆ ಸಂತಾಪ ಸೂಚಿಸುತ್ತಾ... ಪ್ರತಿಭಾವಂತ ಕಲಾವಿದ ಸಂಚಾರಿ ವಿಜಯ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ' ಎಂದು ಟ್ವೀಟ್​ ಮಾಡಲಾಗಿದೆ.

ಇದನ್ನೂ ಓದಿ: Sanchari Vijay: ಮುಂಜಾನೆ 3.34ಕ್ಕೆ ಕೊನೆಯುಸಿರೆಳೆದ ಸಂಚಾರಿ ವಿಜಯ್: ಅಧಿಕೃತವಾಗಿ ಪ್ರಕಟಿಸಿದ ವೈದ್ಯರು..!

ಶಿವರಾಜ್​ ಕುಮಾರ್​, ನಿರ್ದೇಶಕ ಲಿಂಗದೇವರು, ಧನಂಜಯ್, ಸತೀಶ್​ ನೀನಾಸಂ, ಧನಂಜಯ್​ ಸೇರಿದಂತೆ ಸಾಕಷ್ಟು ಮಂದಿ ರವೀಂದ್ರ ಕ್ಷೇತ್ರಕ್ಕೆ ಬಂದು ಅಂತಿಮ ದರ್ಶನ ಪಡೆದಿದ್ದಾರೆ.

ಸ್ವಗ್ರಾಮದಲ್ಲೇ ಅಂತ್ಯಸಂಸ್ಕಾರ: ಸತೀಶ್​ ನೀನಾಸಂ 

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಿಂದ ಸಂಚಾರಿ ವಿಜಯ್​ ಅವರ ಪಾರ್ಥೀವ ಶರೀರವನ್ನು ಅವರ ತವರಿನತ್ತ  ತೆಗೆದುಕೊಂಡು ಹೋಗಲು ಸಕಲ ಸಿದ್ಧತೆ ಆಗಿದೆ. ಆ್ಯಂಬುಲೆನ್ಸ್​ ರವೀಂದ್ರಕಲಾಕ್ಷೇತ್ರ, ಏರ್ ಪೋರ್ಟ್ ರಸ್ತೆ ಮೂಲಕ ಮೇಕ್ರಿ ಸರ್ಕಲ್ , ಯಶವಂತಪುರ , ಗೊರಗುಂಟೆ ಪಾಳ್ಯ , ತುಮಕೂರು ಹೈವೇ‌ ಟು ಶಿರಾ ಮೇಲ್ಸೇತುವೆ‌... ಅಲ್ಲಿಂದ ಎಡಭಾಗಕ್ಕೆ ತಿರುಗಿ ನೇರವಾಗಿ ಪಂಚನಹಳ್ಳಿಗೆ ತೆರಳಲಿದೆಯಂತೆ.

ಇದನ್ನೂ ಓದಿ: ಸಂಚಾರಿ ವಿಜಯ್​ ಇನ್ನು ನೆನಪು ಮಾತ್ರ: ಅಂತಿಮ ನಮನ ಸಲ್ಲಿಸಿದ ಕಲಾವಿದರು..!

ಸಂಚಾರಿ ವಿಜಯ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು. ಹೀಗಾಗಿಯೇ ಸರ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಿದೆ. ಕೋವಿಡ್ ನಿಯಮ ಪಾಲನೆ ಮಾಡೋಣ. ಯಾರು ಕೂಡ ನೂಕುನುಗ್ಗಲು ಮಾಡುವುದು ಬೇಡ. ಮಧ್ಯಾಹ್ನ 2 ಗಂಟೆಗೆ ಅಂತ್ಯ ಸಂಸ್ಕಾರ ಆಗಲಿದೆ ಎಂದು ಸತೀಶ್​ ನೀನಾಸಂ ತಿಳಿಸಿದ್ದಾರೆ.

ವಿಜಯ್​ ಅವರ ಕುಟುಂಬದವರು ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ವಿಜಯ್ ಅವರ ಅಂಗಾಂಗ ದಾನದಿಂದ ಏಳು ಮಂದಿಗೆ ಜೀವದಾನ ಸಿಕ್ಕಿದೆಯಂತೆ.
Published by:Anitha E
First published: