• Home
  • »
  • News
  • »
  • state
  • »
  • Honor Killing: ಮಗಳನ್ನೇ ಕೊಂದು ತಿರುಪತಿಗೆ ಹೋದ ತಂದೆ! ಪ್ರೀತಿಸಿದ ಹುಡುಗಿಗೆ ಇದೆಂಥಾ ಶಿಕ್ಷೆ?

Honor Killing: ಮಗಳನ್ನೇ ಕೊಂದು ತಿರುಪತಿಗೆ ಹೋದ ತಂದೆ! ಪ್ರೀತಿಸಿದ ಹುಡುಗಿಗೆ ಇದೆಂಥಾ ಶಿಕ್ಷೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಗಳು ಅನ್ಯ ಜಾತಿಯವನನ್ನು ಪ್ರೀತಿಸುತ್ತಾ ಇದ್ದಾಳೆ ಅಂತ ಆಕ್ರೋಶಗೊಂಡ ತಂದೆಯೊಬ್ಬ ತಾನು ಹೆತ್ತ ಮಗಳೂ ಅಂತಲೂ ನೋಡದೆ ಆಕೆಯನ್ನು ಕೊಲೆ ಮಾಡಿದ್ದಾನೆ. ಅಲ್ಲದೇ ಕೊಂದ ಪಾಪ ತೊಳೆದುಕೊಳ್ಳಲೋ ಎನ್ನುವಂತೆ ಏನೂ ಆಗಲಿಲ್ಲ ಅಂತ ನಟಿಸುತ್ತಾ ತಿರುಪತಿ ತಿಮ್ಮಪ್ಪನ ದರ್ಶನಕ್ಕೂ ಹೋಗಿ ಬಂದಿದ್ದಾನೆ!

ಮುಂದೆ ಓದಿ ...
  • News18 Kannada
  • Last Updated :
  • Bellary, India
  • Share this:

ಬಳ್ಳಾರಿ: ಸಮಾಜ ಎಷ್ಟೇ ಬದಲಾದರೂ, ಆಧುನಿಕತೆ ಮೈಗೂಡಿಸಿಕೊಂಡರೂ ಪ್ರೀತಿ ಪ್ರೇಮದ (Love) ವಿಚಾರದಲ್ಲಿ ಎಂದೂ ಬದಲಾಗೋದಿಲ್ಲ. ಇಲ್ಲಿ ಬಹುತೇಕ ಪ್ರೇಮಕಥೆಗಳು (Love Story) ದುಃಖದಲ್ಲೇ ಅಂತ್ಯವಾಗುವುದು (tragedy ending). ಬಹುತೇಕ ಎಲ್ಲಾ ಲವ್‌ ಸ್ಟೋರಿಗಳಲ್ಲೂ ಹೆತ್ತವರೇ (parents) ಪ್ರೇಮಿಗಳಿಗೆ (Lovers) ವಿಲನ್ (villains) ಆಗುತ್ತಾರೆ. ಬಳ್ಳಾರಿ (Bellery) ಜಿಲ್ಲೆಯಲ್ಲೂ ಇಂಥದ್ದೇ ಘಟನೆ ನಡೆದಿದೆ. ಮಗಳು (daughter) ಅನ್ಯ ಜಾತಿ ಯುವಕನನ್ನು (different caste boy) ಪ್ರೀತಿಸುತ್ತಾ ಇದ್ದಾಳೆ ಅಂತ ಆಕ್ರೋಶಗೊಂಡ ತಂದೆಯೊಬ್ಬ (father) ತಾನು ಹೆತ್ತ ಮಗಳೂ ಅಂತಲೂ ನೋಡದೆ ಆಕೆಯನ್ನು ಕೊಲೆ (Murdet) ಮಾಡಿದ್ದಾನೆ. ಅಲ್ಲದೇ ಕೊಂದ ಪಾಪ ತೊಳೆದುಕೊಳ್ಳಲೋ ಎನ್ನುವಂತೆ ಏನೂ ಆಗಲಿಲ್ಲ ಅಂತ ನಟಿಸುತ್ತಾ ತಿರುಪತಿ ತಿಮ್ಮಪ್ಪನ (Tirupati Timmappa) ದರ್ಶನಕ್ಕೂ ಹೋಗಿ ಬಂದಿದ್ದಾನೆ!


ಮಗಳನ್ನೇ ಕೊಲೆ ಮಾಡಿದ ತಂದೆ!


ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಮಗಳ್ನೇ ತಂದೆಯೇ ಹತ್ಯೆ ಮಾಡಿದ್ದಾನೆ ಎನ್ನಲಾದ ಘಟನೆ ಬಳ್ಳಾರಿ ಜಿಲ್ಲೆಯ ಕುಡಿತಿನಿ ಪಟ್ಟಣದಲ್ಲಿ ನಡೆದಿದೆ. ಓಂಕಾರ ಗೌಡ ಎಂಬಾತನೇ ತನ್ನ ಮಗಳನ್ನು ಕೊಲೆ ಮಾಡಿದ ತಂದೆ.


ಆರೋಪಿ ಓಂಕಾರಗೌಡ


ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಹುಡುಗಿ


ಕುಡುತಿನಿ ಪಟ್ಟಣದ ಬುಡ್ಗ ಜಂಗಮ ಕಾಲೋನಿಯಲ್ಲಿ ವಾಸವಾಗಿದ್ದ ಓಂಕಾರಗೌಡ ತಮ್ಮ ಪುತ್ರಿಯನ್ನು ಹೆಚ್ಎಲ್ ಸಿ ಕಾಲುವೆಗೆ ತಲ್ಲಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಓಂಕಾರ್ ಗೌಡನ ಪುತ್ರಿ ಹೈಸ್ಕೂಲ್‌ ಓದುತ್ತಾ ಇದ್ದಳು. ಆಕೆ ಅನ್ಯ ಕೋಮಿನ ಯುವಕನ ಪ್ರೀತಿಯಲ್ಲಿ ಬಿದ್ದಿದ್ದಳು. ಇದೇ ಕಾರಣಕ್ಕೆ ತಂದೆ ಓಂಕಾರ ಗೌಡನೇ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.


ಇದನ್ನೂ ಓದಿ: Instagram Reels: 24 ಗಂಟೆ ರೀಲ್ಸ್‌ನಲ್ಲೇ ಕಾಲ ಕಳಿತಾಳೆ ಅಂತ ಹೆಂಡ್ತಿಗೆ ಹೊಡೆದ ಗಂಡ! ರೀಲ್ ಅಲ್ಲ ರಿಯಲ್ ಆಗೇ ನಡೀತು ಮರ್ಡರ್!


ಬಾರ್‌ನಲ್ಲಿ ಕೆಲಸ ಮಾಡುವ ಹುಡುಗನೊಂದಿಗೆ ಪ್ರೀತಿ


ಓಂಕಾರ್ ಗೌಡ ತೋರಣಗಲ್‌ನ ವೈನ್ ಶಾಪ್ ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಈತನ ಜೊತೆಗೆ ಕೆಲಸ ಮಾಡ್ತಿದ್ದ ನಾಗರಾಜ್ ಎನ್ನುವ ಯುವಕನನ್ನು ಓಂಕಾರ ಗೌಡನ ಮಗಳು ಪ್ರೀತಿ ಮಾಡ್ತಿದ್ದಳಂತೆ. ಈ ವಿಷಯ ಮನೆಯಲ್ಲಿ ಗೊತ್ತಾಗಿ ದೊಡ್ಡ ಜಗಳವೇ ನಡೆದಿದೆ.


ಮನೆಯವರ ವಿರೋಧದ ಮಧ್ಯೆಯೂ ಪ್ರೀತಿ ಪ್ರೇಮ


ಮಗಳ ಪ್ರೀತಿ ವಿಚಾರ ತಿಳಿದ ಮೇಲೆ ಯುವಕನಿಂದ ದೂರವಿರುವಂತೆ ಓಂಕಾರಗೌಡ ಎಚ್ಚರಿಕೆ ನೀಡಿದ್ದರು. ಮಗಳನ್ನು ಹೊಡೆದು ಬಡೆದು ಬುದ್ಧಿ‌ ಹೇಳಿದ್ರು‌ ಮಗಳು ಸುಧಾರಿಸಿರಲಿಲ್ಲ. ಒಂದು ದಿನ ಶಾಲೆಗೆಂದು ತೆರಳಿದ ಮಗಳು ಮಾರನೇ ದಿನ ಮನೆಗೆ ಬಂದಿದ್ದಳು.  ಇದು ಮಗಳ ಮೇಲೆ ತಂದೆಗೆ ಇರೋ ಕೋಪ ಮತ್ತಷ್ಟು ಹೆಚ್ಚಾಗುವಂತೆ ಮಾಡಿತ್ತು. ಹೀಗಾಗಿ ಒಂದೇರಡು ದಿನ ತಣ್ಣಗಿದ್ದು ಮಗಳ ಕೊಲೆಗೆ ತಂದೆಯೇ ಸ್ಕೇಚ್ ಹಾಕಿದ್ದ ಎನ್ನಲಾಗಿದೆ.


ಸಿನಿಮಾಕ್ಕೆ ಹೋಗುತ್ತೀನಿ ಅಂತ ಕರೆದೊಯ್ದು ಕೊಲೆ


ಸಿನಿಮಾಕ್ಕೆ ಕರೆದುಕೊಂಡು ಹೋಗೋದಾಗಿ ಹೇಳಿದ ತಂದೆ ರಾತ್ರಿಯವರೆಗೂ ಬಳ್ಳಾರಿಯಲ್ಲಿ ತಿರುಗಾಡಿಸಿ ಮಗಳಿಗೆ ಬೇಕಾದ ಒಡವೆ ಕೊಡಿಸಿದ್ದಾನಂತೆ. ನಂತರ ರಾತ್ರಿ ಊರಿಗೆ ಕರೆದುಕೊಂಡು ಹೋಗೋ ವೇಳೆ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾನಂತೆ.


ಇದನ್ನೂ ಓದಿ: Suicide for Hair Loss: ಕೂದಲು ಉದುರಿದ್ದಕ್ಕೆ ನೊಂದು ಯುವಕ ಆತ್ಮಹತ್ಯೆ, ಡೆತ್‌ ನೋಟ್‌ನಲ್ಲಿತ್ತು ಡಾಕ್ಟರ್ ಹೆಸರು!


ಮಗಳನ್ನು ಕೊಲೆ ಮಾಡಿ ತಿರುಪತಿಗೆ ಹೋಗಿದ್ದ ತಂದೆ!


ಅಲ್ಲಿಂದ ಮನೆಗೆ ಬಂದ ಓಂಕಾರಗೌಡ ಬೈಕ್ ಅನ್ನು ಮನೆಯಲ್ಲಿ ಬಿಟ್ಟು ತಿರುಪತಿಗೆ ಹೋಗಿದ್ದಾನೆ.ಮಗಳು ಕಾಣೆಯಾಗಿರುವ ಬಗ್ಗೆ ಕುಡತಿನಿ ಠಾಣೆಯಲ್ಲಿ ಮೃತಳ ತಾಯಿ ಪದ್ಮ ದೂರು ನೀಡಿದ್ದಾರೆ. ದೂರಿನನ್ವಯ ತಿರುಪತಿಯಿಂದ ಬರೋವಾಗಲೇ‌ ಪೊಲೀಸರು ಓಂಕಾರಪ್ಪನನ್ನು ಕೊಪ್ಪಳದಲ್ಲಿ ಬಂಧಿಸಿದ್ದಾರೆ.

Published by:Annappa Achari
First published: