ಕಂಗಾಲಾಗಿರುವ ಕೃಷಿ ಸಮುದಾಯ; ಸೂಕ್ತ ಬೆಲೆ ಸಿಗದೆ ಮೆಣಸಿನಕಾಯಿ ಬೆಳೆ ನಾಶಗೊಳಿಸಿದ ರೈತ

ದೇಶದಾದ್ಯಂತ ಲಾಕ್‌ಡೌನ್‌ ನಿಂದಾಗಿ ಹಸಿ ಮೆಣಸಿನಕಾಯಿಗೆ ಸರಿಯಾದ ಬೆಲೆ ಸಿಗಲಿಲ್ಲ. ಸರಿಯಾದ ಬೆಲೆ ಸಿಗದ ಕಾರಣ ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನು ಟ್ರ್ಯಾಕ್ಟರ್‌ ನಿಂದ ನಾಶ ಪಡಿಸಿದ್ದಾನೆ. ಹಸಿ ಮೆಣಸಿನಕಾಯಿ ಬೆಳೆದ ರೈತರಿಗೆ ಸರಕಾರ 15 ಸಾವಿರ ರೂ. ಪರಿಹಾರ ಘೋಷಣೆ ಮಾಡಿದೆ. ಆದರೆ, ರೈತನ ಖಾತೆಗೆ ಘೋಷಣೆ ಮಾಡಿದ ಹಣ ಇನ್ನೂ ಸೇರಿಲ್ಲ.

news18-kannada
Updated:May 23, 2020, 4:13 PM IST
ಕಂಗಾಲಾಗಿರುವ ಕೃಷಿ ಸಮುದಾಯ; ಸೂಕ್ತ ಬೆಲೆ ಸಿಗದೆ ಮೆಣಸಿನಕಾಯಿ ಬೆಳೆ ನಾಶಗೊಳಿಸಿದ ರೈತ
ಮೆಣಸಿನಕಾಯಿ ಬೆಳೆ ನಾಶಗೊಳಿಸುತ್ತಿರುವ ರೈತ.
  • Share this:
ಹಾವೇರಿ (ಮೇ 23) ಕೊರೊನಾ ಹೊಡೆತಕ್ಕೆ ಈಗಾಗಲೇ ರೈತ ಸಮುದಾಯ ನಲುಗಿ ಹೋಗಿದೆ. ಈ ನಡುವೆ ತಾನು ಬೆಳೆದ ಬೆಳಗೆ ಯೋಗ್ಯ ಬೆಲೆ ಸಿಗದ ಕಾರಣ ರೈತನೊಬ್ಬ ತನ್ನ ಜಮೀನಿನಲ್ಲಿ ಬೆಳೆದಿದ್ದ ಹಸಿ ಮೆಣಸಿನಕಾಯಿ ಬೆಳೆಯನ್ನು ನಾಶಪಡಿಸಿದ ಘಟನೆ ಹಾವೇರಿ ತಾಲೂಕಿನ ಹನುಮನಹಳ್ಳಿ ಗ್ರಾಮದ ನಡೆದಿದೆ.

ಹನುಮನಹಳ್ಳಿ ಗ್ರಾಮದ ಸುರೇಶ ಪೂಜಾರ ಎಂಬಾತನೇ ಮೆಣಸಿನಕಾಯಿ ಬೆಳೆಯನ್ನು ನಾಶಪಡಿಸಿದ ರೈತ. ಸುರೇಶಪ್ಪ ತನ್ನ 2 ಎಕರೆ ಜಮೀನಿನಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಹಸಿ ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದರು.

ದೇಶದಾದ್ಯಂತ ಲಾಕ್‌ಡೌನ್‌ ನಿಂದಾಗಿ ಹಸಿ ಮೆಣಸಿನಕಾಯಿಗೆ ಸರಿಯಾದ ಬೆಲೆ ಸಿಗಲಿಲ್ಲ. ಸರಿಯಾದ ಬೆಲೆ ಸಿಗದ ಕಾರಣ ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನು ಟ್ರ್ಯಾಕ್ಟರ್‌ ನಿಂದ ನಾಶ ಪಡಿಸಿದ್ದಾನೆ. ಹಸಿ ಮೆಣಸಿನಕಾಯಿ ಬೆಳೆದ ರೈತರಿಗೆ ಸರಕಾರ 15 ಸಾವಿರ ರೂ. ಪರಿಹಾರ ಘೋಷಣೆ ಮಾಡಿದೆ. ಆದರೆ,ರೈತನ ಖಾತೆಗೆ ಘೋಷಣೆ ಮಾಡಿದ ಹಣ ಇನ್ನೂ ಸೇರಿಲ್ಲ.

ಒಂದು ಕಡೆ ಪರಿಹಾರವೂ ಇಲ್ಲ, ಇನ್ನೊಂದು ಕಡೆ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆಯೂ ಸಿಗುತ್ತಿಲ್ಲ.ಆದ್ದರಿಂದ ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಲಾಗದೇ ರೈತ ಕಂಗಾಲಾಗಿ ಮನನೊಂದು ಜಮೀನಿನಲ್ಲಿ ಬೆಳೆದ ಮೆಣಸಿನಕಾಯಿ ಬೆಳೆಯನ್ನು ಸಂಪೂರ್ಣವಾಗಿ ಟ್ರ್ಯಾಕ್ಟರ್‌ನಿಂದ ರೂಟರ್ ವೆಟರ್ ಹೊಡೆದು  ಹರಗಿಸಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪರಿಹಾರ ನೀಡಬೇಕೆಂದು ರೈತ ಸುರೇಶಪ್ಪ ಪೂಜಾರ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಕೊರೋನಾ ಹೋರಾಟಕ್ಕೆ ಬ್ರಿಟನ್ ವಿಜ್ಞಾನಿಗಳಿಂದ 50:30 ಸೂತ್ರ – ಏನಿದು ಈ ಐವತ್ತು ಮೂವತ್ತು ಫಾರ್ಮುಲಾ?
First published:May 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading