HOME » NEWS » State » THE FARMER CREATED MARKET UNDER THE NAME OF RAM GOLD SESR ATVR

ಸಿರಿಧಾನ್ಯದಿಂದಲೇ ಯಶಸ್ಸು ಕಂಡ ರೈತ; ರಾಮ್ ಗೋಲ್ಡ್ ಹೆಸರಿನಲ್ಲಿ ಮಾರುಕಟ್ಟೆ ಸೃಷ್ಟಿಸಿ ಹೆಸರಾದ ಕೃಷಿಕ

ಸಿರಿಧಾನ್ಯದಲ್ಲಿ ಬದುಕು ಕಂಡುಕೊಂಡಿರುವ ರೈತರೊಬ್ಬರು  ಯಶಸ್ವಿಯಾಗಿದ್ದು, ತಮ್ಮದೇ ಆದ ಮಾರುಕಟ್ಟೆ ಸೃಷ್ಟಿಸಿ ಲಾಭಾ ಪಡೆಯುತ್ತಿದ್ದಾರೆ. 

news18-kannada
Updated:November 13, 2020, 7:56 AM IST
ಸಿರಿಧಾನ್ಯದಿಂದಲೇ ಯಶಸ್ಸು ಕಂಡ ರೈತ; ರಾಮ್ ಗೋಲ್ಡ್ ಹೆಸರಿನಲ್ಲಿ ಮಾರುಕಟ್ಟೆ ಸೃಷ್ಟಿಸಿ ಹೆಸರಾದ ಕೃಷಿಕ
ಕೃಷಿಕ ವಾಸು
  • Share this:
ರಾಮನಗರ (ನ.12): ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಕ್ಕೆ ಎಲ್ಲಿಲ್ಲದ ಬೇಡಿಕೆ. ಆರೋಗ್ಯ ವೃದ್ಧಿಗೆ ಹೆಚ್ಚು ಒತ್ತು ನೀಡುವ ಈ ಧಾನ್ಯಗಳ ಬಳಕೆಗೆ ನಿಧಾನವಾಗಿ ಜನರು ಒಳಗಾಗಿದ್ದಾರೆ. ಇದೇ ಕಾರಣಕ್ಕೆ ಸರ್ಕಾರ ಕೂಡ ಸಿರಿಧಾನ್ಯ ಬಿತ್ತನೆಗೆ ರೈತರಿಗೆ ಪ್ರೋತ್ಸಾಹಿಸುತ್ತಿದೆ. ಇದೇ ಸಿರಿಧಾನ್ಯದಲ್ಲಿ ಬದುಕು ಕಂಡುಕೊಂಡಿರುವ ರೈತರೊಬ್ಬರು  ಯಶಸ್ವಿಯಾಗಿದ್ದು, ತಮ್ಮದೇ ಆದ ಮಾರುಕಟ್ಟೆ ಸೃಷ್ಟಿಸಿ ಲಾಭಾ ಪಡೆಯುತ್ತಿದ್ದಾರೆ.  ತಾಲೂಕಿನ ಬಿಳಗುಂಬ ಗ್ರಾಮದ ವಾಸು ಎಂಬ ರೈತ ಸರಿಸುಮಾರು 6 ವರ್ಷಗಳಿಂದ ಸಿರಿಧಾನ್ಯ ಬೆಳೆಯುತ್ತಿದ್ದು, ಈಗ ಇದರಿಂದಲೇ ತಮ್ಮ ಜೀವನದಲ್ಲಿ ಯಶಸ್ಸು ಕಂಡಿದ್ದಾರೆ. ಮೊದಲಿಗೆ ಸಿರಿಧಾನ್ಯ ಬೆಳೆಯುವ ಪದ್ಧತಿಯ ಬಗ್ಗೆ ಆರು ತಿಂಗಳುಗಳ ಕಾಲ ತರಬೇತಿ ಪಡೆದು ನಂತರ ತಮ್ಮ ಜಮೀನಿನಲ್ಲಿ ತಾವೇ 50 ರಿಂದ 60 ಲಕ್ಷ ರೂಪಾಯಿ ಖರ್ಚು ಮಾಡಿ ಪ್ರೋಸಸಿಂಗ್ ಯೂನಿಟ್ ಕೂಡ ಪ್ರಾರಂಭಿಸಿ ಇದರಿಂದಲೇ ತಮ್ಮ ಜೀವನ ಕಂಡುಕೊಂಡಿದ್ದಾರೆ.

ಏಳು ಬಗೆಯ ಸಿರಿಧಾನ್ಯಗಳನ್ನ ಬೆಳೆಯುವ ಇವರು ರಾಜ್ಯದ ಕೊಪ್ಪಳ, ರಾಯಚೂರು ಸೇರಿದಂತೆ ರಾಮನಗರ ಜಿಲ್ಲೆಯ ಸುತ್ತಮುತ್ತಲ ರೈತರಿಗೆ ಬೀಜಗಳನ್ನ ವಿತರಿಸಿ, ನಂತರ ಬಂದ ಬೆಳೆಯನ್ನ ತಮ್ಮ ಪ್ರೋಸಸಿಂಗ್ ಯೂನಿಟ್‌ನಲ್ಲಿ ಮಿಲ್ ಮಾಡಿದ ನಂತರ ಪ್ಯಾಕೇಟ್ ಮಾಡಿ ತಮ್ಮದೇ ರಾಮ್‌ಗೋಲ್ಡ್ ಹೆಸರಿನಲ್ಲಿ ಮಾರಾಟ ಮಾಡುತ್ತಾರೆ .

The farmer created market under the name of Ram Gold

ಸಿರಿಧಾನ್ಯಗಳಾದ ರಾಗಿ, ಜೋಳ, ಆರ್ಕಾ, ಸಾಮೆ, ಸಜ್ಜೆ, ನವಣೆ, ಕೊರ್ಲೆ, ಉರುಲು, ಬರ್ಗು ಹೀಗೆ ಒಟ್ಟು ಒಂಬತ್ತು ಬಗೆಯ ಸಿರಿಧಾನ್ಯಗಳು ಬರುತ್ತವೆ. ಇದರಿಂದ ನಾವು 22ಬಗೆಯ ರೀತಿ ಆಹಾರ ಪದಾರ್ಥಗಳನ್ನ ತಯಾರು ಮಾಡಬಹುದಾಗಿದೆ. ಮುಖ್ಯವಾಗಿ ರಾಗಿ ಮಿಲೆಟ್, ಗೋಧಿ ಪೌಡರ್, ಆರ್ಕಾ ಉಪ್ಪಿಟ್ಟು ಸೇರಿದಂತೆ ಹಲವು ಬಗೆಯ ಪೌಡರ್‌ಗಳನ್ನ ತಯಾರು ಮಾಡಿ ನಮ್ಮದೇ ಬ್ರ್ಯಾಂಡ್ ಆಗಿರುವ ರಾಮ್‌ಗೋಲ್ಡ್ ಹೆಸರಿನಲ್ಲಿ ಮಾರಾಟ ಮಾಡ್ತಿದ್ದೇವೆ.

ಇದನ್ನು ಓದಿ: ಮೊಮ್ಮಗನ ನಾಮಕರಣದಲ್ಲಿ ಕೇಂದ್ರ ಸಚಿವ ಡಿ ವಿ ಸದಾನಂದಗೌಡ

ರಾಗಿಯಿಂದ ನಮಗೆ 3.6 ರಷ್ಟು, ನವಣೆಯಿಂದ  8ರಷ್ಟು,  ಸಾಮೆಯಿಂದ 9.6ರಷ್ಟಯ, ಕೊರ್ಲೆಯಿಂದ 12.6ರಷ್ಟು ಫೈಬರ್ ಅಂಶ ನಮಗೆ ಸಿಗಲಿದೆ. ಇನ್ನು ಕೆ.ಜಿ ಲೆಕ್ಕದಲ್ಲಿ ನವಣೆ 100, ಸಜ್ಜೆ-60, ಸಾಮೆ-110, ಕೊರ್ಲೆ-150, ಬರ್ಗು-120, ಉದುಲು-110, ಆರ್ಕಾ-110 ರೂಪಾಯಿ ಬೆಲೆಯಿದೆ. ಪ್ರಮುಖವಾಗಿ ಈ ಧಾನ್ಯಗಳನ್ನ ಮೂರು ತಿಂಗಳುಗಳ ಕಾಲ ಸೇವನೆ ಮಾಡಿದರೆ ಶುಗರ್, ಬಿಪಿ ಮಾಯವಾಗುತ್ತೆ ಅಂತಾರೆ ರೈತ ವಾಸು.

ಇನ್ನು ಪ್ರತಿವರ್ಷ ನಾವು ಹಾಪ್‌ಕಾಮ್ಸ್‌ಗಳಿಗೆ 2 ಟನ್‌ನಷ್ಟು ಸಿರಿಧಾನ್ಯದ ಪ್ಯಾಕೇಟ್‌ಗಳನ್ನ ಮಾರಾಟ ಮಾಡುತ್ತಿದ್ದೆವು. ಆದರೆ ಈ ವರ್ಷ ಕೊರೋನಾ ಹಿನ್ನೆಲೆ ಕಳೆದ 8-9 ತಿಂಗಳಿಂದ ಪ್ರೊಸಸಿಂಗ್ ಯೂನಿಟ್ ಕೂಡ ಸ್ಥಗಿತ ಮಾಡಲಾಗಿತ್ತು. ಜೊತೆಗೆ ಅಂಗಡಿಯಲ್ಲೂ ಮಾರಾಟ ಪ್ರಕ್ರಿಯೆ ಸಂಪೂರ್ಣ ಡಲ್ ಆಗಿದೆ. ಕೆಲದಿನಗಳಲ್ಲಿ ವ್ಯಾಪಾರ ವಹಿವಾಟು ಮೊದಲಿನಂತಾಗುವ ನಂಬಿಕೆಯಿದೆ. ಆದರೆ ಈಗಿನ ಸಮಯದಲ್ಲಿ ಜನರು ಆರೋಗ್ಯ ಸಮಸ್ಯೆಗಳನ್ನ ಹೆಚ್ಚಾಗಿ ಅನುಭವಿಸುತ್ತಿದ್ದಾರೆ. ಹಾಗಾಗಿ ಬೇಡದ ಜಂಕ್‌ಫುಡ್‌ಗಳನ್ನ ಬಿಟ್ಟು ಸಿರಿಧಾನ್ಯಗಳನ್ನ ಬಳಸಿದರೆ ಉತ್ತಮ ಎನ್ನುತ್ತಾರೆ ವಾಸು.(ವರದಿ: ಎಟಿ ವೆಂಕಟೇಶ್​​)
Published by: Seema R
First published: November 13, 2020, 7:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories