• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Election: ಈ ಬಾರಿ ಒಂದೇ ಕ್ಷೇತ್ರದಲ್ಲಿ ಎದುರಾಳಿ ಆಗಿರೋ ಕುಟುಂಬಸ್ಥರು ಯಾರು? ಇಲ್ಲಿದೆ ನೋಡಿ ಮಾಹಿತಿ

Karnataka Election: ಈ ಬಾರಿ ಒಂದೇ ಕ್ಷೇತ್ರದಲ್ಲಿ ಎದುರಾಳಿ ಆಗಿರೋ ಕುಟುಂಬಸ್ಥರು ಯಾರು? ಇಲ್ಲಿದೆ ನೋಡಿ ಮಾಹಿತಿ

ಕರ್ನಾಟಕ ಚುನಾವಣೆ

ಕರ್ನಾಟಕ ಚುನಾವಣೆ

ಹಿಂದೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣವಾದ ಬಳ್ಳಾರಿಯ ರೆಡ್ಡಿ ಕುಟುಂಬವು ಈಗ ರಾಜಕೀಯವಾಗಿ ವಿಭಜಿತ ಮನೆಯಾಗಿದೆ.

 • Trending Desk
 • 3-MIN READ
 • Last Updated :
 • Karnataka, India
 • Share this:

ಬೆಂಗಳೂರು: ಇನ್ನೇನು ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ಕೇವಲ ಏಳು ದಿನಗಳು ಮಾತ್ರವೇ ಬಾಕಿ ಉಳಿದಿದ್ದು, ಚುನಾವಣೆ ಕಣದಲ್ಲಿರುವ ರಾಜಕೀಯ ಪಕ್ಷಗಳ ಕೇಂದ್ರ ಮತ್ತು ರಾಜ್ಯ ರಾಜಕಾರಿಣಿಗಳು ತಮ್ಮ ಪಕ್ಷಕ್ಕಾಗಿ ಮತವನ್ನು ಚಲಾಯಿಸಿ ಅಂತ ಮತದಾರರನ್ನು (Voters) ಓಲೈಸುವ ಕಾರ್ಯದಲ್ಲಿ ಎಂದರೆ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯದಲ್ಲಿ (Election Politics) ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಂದೇ ಕುಟುಂಬದಲ್ಲಿನ ಅಣ್ಣ-ತಮ್ಮಂದಿರು (Brothers), ಸೊಸೆ-ಮಾವ ಹೀಗೆ ಇಬ್ಬರು ವ್ಯಕ್ತಿಗಳ ನಡುವಿನ ಬಿಗ್ ಫೈಟ್ ಮೇ 10ನೇ ತಾರೀಖು ಎಂದರೆ ಮತದಾನದ ದಿನ ನಡೆಯಲಿದೆ.


ಹೀಗೆ ಒಂದೇ ಮನೆಯಲ್ಲಿರುವ ಅಣ್ಣ-ತಮ್ಮಂದಿರು ಮತ್ತು ಕುಟುಂಬದಲ್ಲಿ ಇರುವ ಇಬ್ಬರು ವ್ಯಕ್ತಿಗಳು ಚುನಾವಣೆಯಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸುತ್ತಿರುವುದು ಇದೇನು ಮೊದಲ ಬಾರಿ ಅಲ್ಲ ಬಿಡಿ.


ಈ ಬಾರಿ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಈ ರೀತಿಯ ಫೈಟ್ ನೋಡಬಹುದು


ಈ ಬಾರಿಯ ಚುನಾವಣೆಯಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಹೀಗೆ ಒಂದೇ ಕುಟುಂಬದ ಇಬ್ಬರು ವ್ಯಕ್ತಿಗಳು ಎದುರುಬದುರಾಗಿ ಸ್ಪರ್ಧಿಸುತ್ತಿದ್ದಾರೆ ನೋಡಿ.


ಕಲಬುರಗಿ ಜಿಲ್ಲೆಯ ಅಫಜಲಪುರ, ಶಿವಮೊಗ್ಗ ಜಿಲ್ಲೆಯ ಸೊರಬ ಮತ್ತು ಬಳ್ಳಾರಿ ನಗರ ಕ್ಷೇತ್ರಗಳಲ್ಲಿ ಒಂದೇ ಕುಟುಂಬದ ಸದಸ್ಯರು ಪರಸ್ಪರ ಸ್ಪರ್ಧಿಸುತ್ತಿದ್ದಾರೆ.


ಐದನೇ ಬಾರಿಗೆ ಮುಖಾಮುಖಿಯಾದ ಬಂಗಾರಪ್ಪ ಅವರ ಮಕ್ಕಳು


ಸೊರಬದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಕ್ಕಳಾದ ಮಧು ಮತ್ತು ಕುಮಾರ್ ಕಳೆದ 20 ವರ್ಷಗಳಲ್ಲಿ ಐದನೇ ಬಾರಿಗೆ ಮತ್ತೆ ಚುನಾವಣೆಯಲ್ಲಿ ಮುಖಾಮುಖಿಯಾಗುತ್ತಿದ್ದರೆ, ಅಫಜಲಪುರದ ಹಾಲಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅವರ ಸಹೋದರ ನಿತಿನ್ ಅವರಿಂದ ಸವಾಲನ್ನು ಎದುರಿಸುತ್ತಿದ್ದಾರೆ.


ಇನ್ನೂ ಬಳ್ಳಾರಿ ನಗರ ಕ್ಷೇತ್ರದಲ್ಲಿ ಬಳ್ಳಾರಿಯ ಗಣಿ ಧಣಿ ಜಿ. ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ಅವರು ತಮ್ಮ ಸೋದರ ಮಾವನಾದ ಜಿ. ಸೋಮಶೇಖರ್ ರೆಡ್ಡಿ ಅವರನ್ನು ಎದುರಿಸುತ್ತಿದ್ದಾರೆ.


ಸೊರಬ ಕ್ಷೇತ್ರದಲ್ಲಿದೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಪುತ್ರರ ನಡುವೆ ಫೈಟ್


ಕರ್ನಾಟಕದ ದಿವಂಗತ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಇಬ್ಬರು ಪುತ್ರರಾದ ಕುಮಾರ್ ಬಂಗಾರಪ್ಪ ಅವರು ಬಿಜೆಪಿ ಪಕ್ಷದಿಂದ ಮತ್ತು ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷದಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.


ಇವರಿಬ್ಬರ ನಡುವಿನ ಸ್ಪರ್ಧೆಯಿಂದಾಗಿ ಪ್ರತಿ ಬಾರಿ ರಾಜ್ಯದ ವಿಧಾನಸಭಾ ಚುನಾವಣೆ ಎದುರಾದಾಗಲೂ ಈ ಸೊರಬ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತದೆ.


ಬಳ್ಳಾರಿ ನಗರ ಕ್ಷೇತ್ರದಲ್ಲಿ ನಡೆಯಲಿದೆ ರೆಡ್ಡಿ ಕುಟುಂಬದ ಚುನಾವಣೆ ಕಾಳಗ


ಹಿಂದೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣವಾದ ಬಳ್ಳಾರಿಯ ರೆಡ್ಡಿ ಕುಟುಂಬವು ಈಗ ರಾಜಕೀಯವಾಗಿ ವಿಭಜಿತ ಮನೆಯಾಗಿದೆ.


janardhan reddy election, kalyana rajya pragati party, janardhan reddy manifesto, janardhan reddy gifts, kannada news, karnataka news, ಜನಾರ್ದನ ರೆಡ್ಡಿ ಚುನಾವಣಾ ಪ್ರಚಾರ, ಜನಾರ್ದನ ರೆಡ್ಡಿ ಘೋಷಣೆಗಳು
ಜನಾರ್ದನ ರೆಡ್ಡಿ ಕುಟುಂಬ


ವಿಶೇಷವಾಗಿ ಜನಾರ್ದನ ರೆಡ್ಡಿ ತಮ್ಮದೇ ಆದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್ ಪಿಪಿ) ಸ್ಥಾಪಿಸಿದರು. ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ಅವರ ಉಮೇದುವಾರಿಕೆಯನ್ನು ಪಕ್ಷ ಈಗಾಗಲೇ ಘೋಷಿಸಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಬಿಜೆಪಿ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಅವರನ್ನು ಇವರ ಎದುರಿಗೆ ಸ್ಪರ್ಧಿಸಲು ಆಯ್ಕೆ ಮಾಡಿದೆ.


ಅಫಜಲಪುರ ಕ್ಷೇತ್ರದಲ್ಲಿ ನಡೆಯುತ್ತಿದೆ ಅಣ್ಣ-ತಮ್ಮನ ನಡುವೆ ಬಿಗ್ ಫೈಟ್


ಕಲಬುರಗಿ ಜಿಲ್ಲೆಯ ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಿತಿನ್ ಗುತ್ತೇದಾರ್ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಭವಿಷ್ಯಕ್ಕೆ ಧಕ್ಕೆ ತರುವ ಸಾಧ್ಯತೆ ಇದೆ.


ಏಕೆಂದರೆ ನಿತಿನ್ ಗುತ್ತೇದಾರ್ ಅವರು ತಮ್ಮ ಸಹೋದರ ಹಾಗೂ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್ ವಿರುದ್ಧ ಸ್ಪರ್ಧೆ ಮಾಡಲಿದ್ದಾರೆ.
ಇದನ್ನೂ  ಓದಿ: Bajrang Dal: ಬಜರಂಗದಳ ನಿಷೇಧಿಸ್ತೇವೆ ಎಂದ ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ಆಕ್ರೋಶ, ತಾಕತ್ತಿದ್ದರೆ ಬ್ಯಾನ್ ಮಾಡುವಂತೆ ಸಚಿವೆ ಶೋಭಾ ಸವಾಲು

top videos


  ಮಾಲೀಕಯ್ಯ ಗುತ್ತೇದಾರ್ ಅವರು ಈ ಕ್ಷೇತ್ರವನ್ನು ಆರು ಬಾರಿ ಪ್ರತಿನಿಧಿಸಿದ್ದಾರೆ. ಹಾಲಿ ಶಾಸಕ ಎಂ ವೈ ಪಾಟೀಲ್ ಕೂಡ ಪ್ರಬಲ ಅಭ್ಯರ್ಥಿಯಾಗಿದ್ದು, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

  First published: