Cat Death: ನಾಯಿ ದಾಳಿಗೆ ಪ್ರಾಣ ತೆತ್ತ ಬೆಕ್ಕು, 'ಅಮ್ಮು' ಕಳೆದುಕೊಂಡು ಊಟ-ತಿಂಡಿ ಬಿಟ್ಟು ಮನೆಯವರ ಕಣ್ಣೀರು!

ತನ್ನ ಮಕ್ಕಳ ಜನ್ಮ ದಿನಾಚರಣೆ ರೀತಿ ನೆಚ್ಚಿನ ಅಮ್ಮುವಿನ ಜನ್ಮ ದಿನವನ್ನು ಆಚರಿಸುತ್ತಿದ್ದರು. ಕೇಕ್ ಕತ್ತರಿಸಿ ಬೆಕ್ಕಿನ ಜನ್ಮ‌ದಿನ ಆಚರಣೆ ಮಾಡಿ ಸಂತೋಷ ಪಡುತ್ತಿದ್ದರು. ಅವೆಲ್ಲ ಇನ್ನು ನೆನಪು ಮಾತ್ರ...

ನಾಯಿದಾಳಿಗೆ ಪ್ರಾಣತೆತ್ತ 'ಅಮ್ಮು'

ನಾಯಿದಾಳಿಗೆ ಪ್ರಾಣತೆತ್ತ 'ಅಮ್ಮು'

  • Share this:
ಯಾದಗಿರಿ: ಆ ಕುಟುಂಬದ ದಂಪತಿಗಳು (Couple) ‘ಅಮ್ಮು’ವನ್ನು ತನ್ನ ಮಗನಂತೆ (Son) ಸಾಕಿದ್ದರು. ನಾಲ್ಕು ವರ್ಷದಿಂದ ಪ್ರೀತಿಯಿಂದ ಸಾಕಿದ್ದ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಅಮ್ಮುವಿನ ಸಾವಿನ ಸುದ್ದಿ (Death News) ಕೇಳಿ ಇದೀಗ ಆ ಕುಟುಂಬಸ್ಥರು ಕಣ್ಣೀರು ಹಾಕುವಂತಾಗಿದೆ. ನಾಲ್ಕು ವರ್ಷ ಸಾಕಿ ಬೆಳೆಸಿದ್ದ ಆ ಅಮ್ಮುವಿನ ಸಾವು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಯಾದಗಿರಿ (Yadagiri) ಜಿಲ್ಲೆಯ ಹುಣಸಗಿ ತಾಲೂಕಿನ ವಜ್ಜಲ ಗ್ರಾಮದ ನಿಂಗಣ್ಣಗೌಡ ಹಾಗೂ ಶೋಭಾ ದಂಪತಿಗಳು ಕಳೆದ ನಾಲ್ಕು ವರ್ಷದಿಂದ ಬೆಕ್ಕು (Cat) ಸಾಕಿದರು. ವಿಜಯಪುರದ ಸ್ನೇಹಿತರ ಮನೆಯಿಂದ ಬೆಕ್ಕನ್ನು ನಿಂಗಣ್ಣಗೌಡ ತೆಗೆದುಕೊಂಡು ಬಂದು ಸಾಕುತ್ತಾ ಬಂದಿದ್ದಾರೆ. ಬೆಕ್ಕು ಸಾಕು ಪ್ರಾಣಿ ಆದರೂ ಈ ದಂಪತಿಗಳು ಮಗನಂತೆ ಭಾವಿಸಿದರು. ನಿಂಗಣ್ಣಗೌಡ ಹಾಗೂ ಶೋಭಾ ದಂಪತಿಗಳಿಗೆ ಪ್ರವೀಣ್ ಹಾಗೂ ಪವಿತ್ರಾ ಇಬ್ಬರು ಮಕ್ಕಳಿದ್ದಾರೆ. ಆದರೆ, ಈ ಬೆಕ್ಕಿಗೆ ಕೂಡ ಮಗನಂತೆ ಭಾವಿಸಿ ಪೋಷಣೆ ಮಾಡುತ್ತಿದ್ದರು. ಇದಕ್ಕೆ ಅಮ್ಮು ಅಂತ ಹೆಸರಿಟ್ಟಿದ್ದರು.

ಮನೆ ಮಗನಂತೆ ಬೆಳೆದಿದ್ದ ಅಮ್ಮು

ಕಳೆದ ನಾಲ್ಕು ವರ್ಷದಿಂದ ಪ್ರೀತಿಯ ಅಮ್ಮುವಿಗೆ ಬೇಕಾದ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಬಂದು ಹಸಿವು ನಿಗಿಸುವ ಕಾರ್ಯ ಮಾಡುತ್ತಿದ್ದರು. ಹಾಲುಣಿಸುವದು, ಬ್ರೆಡ್ ಹಾಗೂ ಇನ್ನಿತರ ಆಹಾರ ನೀಡಿ ಹೊಟ್ಟೆ ತುಂಬಿಸುತ್ತಿದ್ದರು. ಬೆಕ್ಕಿಗೆ ಸ್ನಾನ ಮಾಡಿಸುತ್ತಿದ್ದರು. ದಂಪತಿಗಳ ಮೇಲೆ ಹಾಗೂ ಮಕ್ಕಳಿಬ್ಬರ ಮೇಲೆ ಪ್ರೀತಿಯ ಅಮ್ಮು ಓಡಾಡಿಕೊಂಡಿರುತಿತ್ತು.

ಜೋಳಿಗೆ ಕಟ್ಟಿ ಮಕ್ಕಳಂತೆ ನಿದ್ದೆ ಮಾಡಲು ವ್ಯವಸ್ಥೆ

ಅಮ್ಮುವಿನ ಒಡನಾಟವು ಎಲ್ಲರ ಮನಸ್ಸಿಗೆ ಖುಷಿ ಕೊಡುತಿತ್ತು. ಬೆಕ್ಕು ಮಲಗಲು ಮಕ್ಕಳಿಗೆ ಜೋಳಿಗೆ ಕಟ್ಟಿದಂತೆ ಬೆಕ್ಕಿಗಾಗಿ ಜೋಳಿಗೆ ಕಟ್ಟಿ ತೂಗಿ ಅಮ್ಮುವಿಗೆ ಮಲಗಿಸುತ್ತಿದ್ದರು. ಅಮ್ಮುವಿಗೆ ಅನಾರೋಗ್ಯ ತಪ್ಪಿದಾಗ ಅಗತ್ಯ ಚಿಕಿತ್ಸೆ ಕೊಡಿಸುತ್ತಿದ್ದರು.

ಇದನ್ನೂ ಓದಿ: OMG: ಈ ನಾಯಿಗೆ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಕೆಲಸ, ಭರ್ಜರಿ ಸಂಬಳ! ಹ್ಯಾಪಿನೆಸ್ ಆಫೀಸರ್ ಅಂತೆ ಈ ಡಾಗ್

ಮಕ್ಕಳಂತೆ ಅಮ್ಮುವಿನ ಜನ್ಮ ದಿನ ಆಚರಣೆ

ತನ್ನ ಮಕ್ಕಳ ಜನ್ಮ ದಿನಾಚರಣೆ ರೀತಿ ನೆಚ್ಚಿನ ಅಮ್ಮುವಿನ ಜನ್ಮ ದಿನವನ್ನು ಆಚರಿಸುತ್ತಿದ್ದರು. ಕೇಕ್ ಕತ್ತರಿಸಿ ಬೆಕ್ಕಿನ ಜನ್ಮ‌ದಿನ ಆಚರಣೆ ಮಾಡಿ ಸಂತೋಷ ಪಡುತ್ತಿದ್ದರು. ಜನವರಿ 1ರಂದು ಪ್ರತಿ ವರ್ಷ ಕಳೆದ ನಾಲ್ಕು ವರ್ಷದಿಂದ ಜನ್ಮ ದಿನ ಆಚರಣೆ ಮಾಡಿ ಖುಷಿ ಪಡುತ್ತಿದ್ದರು. ಆದರೆ, ಈಗ ಅಮ್ಮುವಿನ ಜನ್ಮ ದಿನ ಕೇವಲ ನೆನಪು ಮಾತ್ರ ಎನ್ನುವಂತಾಗಿದೆ.

ನಾಯಿಗಳ ದಾಳಿಯಿಂದ ಅಮ್ಮು ಸಾವು

ನಿನ್ನೆ ರಾತ್ರಿ ವಜ್ಜಲ ಗ್ರಾಮದಲ್ಲಿ ಶ್ವಾನಗಳು ದಾಳಿ ಮಾಡಿ ಬೆಕ್ಕನ್ನು ಕಚ್ಚಿ ಸಾಯಿಸಿವೆ. ನೆಚ್ಚಿನ ಬೆಕ್ಕು ಮೃತಪಟ್ಟ ಸುದ್ದಿ ಕುಟುಂಬಕ್ಕೆ ಆಘಾತ ಉಂಟಾಗಿದೆ. ದಂಪತಿಗಳು ಹಾಗೂ ಮಕ್ಕಳು ಕಣ್ಣೀರು ಹಾಕಿದ್ದಾರೆ. ವಿಜಯಪುರದಿಂದ ಸ್ನೇಹಿತನ ಮನೆಯಿಂದ ನಾಲ್ಕು ವರ್ಷದ ಹಿಂದೆ ತೆಗೆದುಕೊಂಡು ಬಂದಿದೆ. ಅಮ್ಮು ಎಂಬ ಹೆಸರಿಟ್ಟು ಮಗನಂತೆ ಸಾಕಿದೆ. ಯಾವುದೇ ತೊಂದರೆಯಾಗದಂತೆ ಎಲ್ಲರೂ ನೋಡಿಕೊಂಡಿದ್ದೆವೆ. ನಾಯಿಗಳು ಕಚ್ಚಿ ಸಾಯಿಸಿದ್ದು ನಮಗೆ ಆಘಾತ ತರಿಸಿದೆ. ಮಗನಂತೆ ನಾವು ನೋಡಿಕೊಂಡಿದ್ದೆವು. ಊರ ಹೊರಭಾಗದಲ್ಲಿ ಅಂತ್ಯಕ್ರಿಯೆ ಮಾಡಿದ್ದೆವೆ. ಇದೀಗ ಅಮ್ಮು ಇಲ್ಲದ ನೋವು ಅರಗಿಸಿಕೊಳ್ಳಲು ಆಗುತ್ತಿಲ್ಲವೆಂದು ಬೆಕ್ಕಿನ ಮಾಲೀಕ ನಿಂಗಣ್ಣ ಗೌಡ ಹಾಕಿದರು.

ಇದನ್ನೂ ಓದಿ: Attack: ನಾಯಿ ಬೊಗಳಿದ್ದಕ್ಕೆ ಅದರ ಮಾಲೀಕರ ಮೇಲೆ ಹಲ್ಲೆ! ಕಬ್ಬಿಣದ ರಾಡ್‌ನಿಂದ ಥಳಿಸಿದ ಪಕ್ಕದ ಮನೆ ಪಾಪಿ

ಅಂತ್ಯಕ್ರಿಯೆ ವೇಳೆ ಕಣ್ಣೀರು

ಗ್ರಾಮದ ಹೊರಭಾಗದಲ್ಲಿ ಬೆಕ್ಕಿನ ಅಂತ್ಯಕ್ರಿಯೆ ಮಾಡಲಾಯಿತು. ಅಂತ್ಯಕ್ರಿಯೆ ಮಾಡುವಾಗ ನಿಂಗಣ್ಣಗೌಡ ಬೆಕ್ಕು ಕೈಯಲ್ಲಿ ಹೀಡಿದು ಕೆಲ ಕಣ್ಣೀರು ಹಾಕುವ ದೃಶ್ಯ ಕರಳು ಚುರ್ ಎನ್ನುವಂತಿದೆ. ಬೆಕ್ಕಿನ ಸಾವಿನ ನೋವಿನಿಂದ ಹೊರಬಾರದೆ ದಂಪತಿಗಳು ಹಾಗೂ ಅವರ ಮಕ್ಕಳು ಇನ್ನೂ ಊಟ ಮಾಡದೇ ದುಃಖದಲ್ಲಿದ್ದಾರೆ.
Published by:Annappa Achari
First published: