Birds Lover: ಮೂಕ ಹಕ್ಕಿಗಳಿಗೆ ನೀರು, ಆಹಾರ ನೀಡುತ್ತಿದ್ದಾರೆ ಈ ಚಾಲಕ! 14 ವರ್ಷಗಳಿಂದ ಸದ್ದಿಲ್ಲದೇ ಸಾಗಿದೆ ಇವರ ಕಾರ್ಯ

ಒಮ್ಮೆ ಅವರು ಕುಳಿತಿರುವಾಗ ಪಕ್ಷಿಯೊಂದು ನೀರು ಕುಡಿಯಲು ಪರದಾಡಿತು. ಇದನ್ನು ನೋಡಿದ ಅವರು ಪಕ್ಷಿಗಳಿಗೆ ಯಾಕೆ ನೀರು ನೀಡಬಾರದು ಎಂದುಕೊಂಡು ಸ್ವಂತ ಖರ್ಚಿನಲ್ಲಿ ಮಣ್ಣಿನ ಪಾತ್ರೆಗಳನ್ನು ಖರೀದಿಸಿ ಗಿಡಕ್ಕೆ ಕಟ್ಟಿದ್ದಾರೆ, ಅದರೊಂದಿಗೆ ಪ್ರತಿ ತಿಂಗಳ ಸುಮಾರು 2500 ರೂಪಾಯಿಯನ್ನು ಖರ್ಚು ಮಾಡಿ ಧಾನ್ಯಗಳನ್ನು ಪಕ್ಷಿಗಳಿಗಾಗಿ ಹಾಕುತ್ತಿದ್ದಾರೆ.

ಪಕ್ಷಿ ಪ್ರೇಮಿ ಸುಲ್ತಾನ್ ಸಾಬ್

ಪಕ್ಷಿ ಪ್ರೇಮಿ ಸುಲ್ತಾನ್ ಸಾಬ್

  • Share this:
ಕೊಪ್ಪಳ: ಬೇಸಿಗೆಯ ಕಾಲದಲ್ಲಿ (Summer Days) ಬಾಯಾರುವ ಪ್ರಾಣಿ (Animals) ಪಕ್ಷಿಗಳಿಗೆ (Birds) ಕುಡಿವ ನೀರು (Drinking water) ನೀಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹಲವರು ಸಲಹೆ ನೀಡುತ್ತಾರೆ, ಆದರೆ ಅವರಲ್ಲಿ ಬಹಳಷ್ಟು ಜನ ತಾವು ಪಕ್ಷಿಗಳಿಗೆ ನೀರು ನೀಡುವುದು ಅಪರೂಪ. ಆದರೆ ಕೊಪ್ಪಳದಲ್ಲಿ (Koppal) ಆರೋಗ್ಯ ಇಲಾಖೆಯ (Health Department) ವಾಹನ ಚಾಲಕರು (Driver) ಒಬ್ಬರಿದ್ದಾರೆ. ಅವರು ಕಳೆದ 14 ವರ್ಷದಿಂದ ನಿತ್ಯ ನೂರಾರು ಮಣ್ಣಿನ ಪಾತ್ರೆಯಲ್ಲಿ ಕುಡಿವ ನೀರು ಹಾಗೂ ಪಕ್ಷಿಗಳಿಗೆ ಆಹಾರ ನೀಡುತ್ತಿದ್ದಾರೆ. ಸದ್ದಿಲ್ಲದೇ 14 ವರ್ಷಗಳಿಂದ ಹಕ್ಕಿಗಳ ಆರೈಕೆಯಲ್ಲಿ ತೊಡಗಿದ್ದಾರೆ.

ಸುಲ್ತಾನ್ ಸಾಬ್ ಎಂಬ ಪಕ್ಷಿ ಪ್ರೇಮಿ

ಕೊಪ್ಪಳ ಜಿಲ್ಲಾ ಆರೋಗ್ಯಾಧಿಕಾರಿಗಳ ಸರಕಾರಿ ವಾಹನದ ಚಾಲಕರಾಗಿರುವ ಸುಲ್ತಾನ್ ಸಾಬ್ ಎಂಬುವವರು ನಿತ್ಯ ಪಕ್ಷಿಗಳಿಗಾಗಿ ಕುಡಿವ ನೀರು ಹಾಕಿ ಅವುಗಳ ದಾಹ ತೀರಿಸುತ್ತಿದ್ದಾರೆ. ಕೊಪ್ಪಳ ಜಿಲ್ಲಾಡಳಿತ ಭವನದ ಸುತ್ತಲು ಸಾವಿರಾರು ಗಿಡ ಮರಗಳಿವೆ. ಅವುಗಳ ಕೊಂಬೆಗಳಿಗೆ ಮಣ್ಣಿನ ಪಾತ್ರೆಗಳನ್ನು ಕಟ್ಟಿದ್ದಾರೆ. ಅದೇ ರೀತಿ ಅಲ್ಲಲ್ಲಿ ಪಕ್ಷಿಗಳು ತಿನ್ನುವುದಕ್ಕಾಗಿ ಧಾನ್ಯಗಳನ್ನು ಹಾಕಿದ್ದಾರೆ.

ಬಿಡುವಿನ ವೇಳೆಯಲ್ಲಿ ಹಕ್ಕಿಗಳ ಆರೈಕೆ ಕೆಲಸ

ಸುಲ್ತಾನ ಸಾಬ ನಿತ್ಯ ಜಿಲ್ಲಾಡಳಿತ ಭವನಕ್ಕೆ ತಮ್ಮ ಅಧಿಕಾರಿಯನ್ನು ಕಚೇರಿಗೆ ಬಿಟ್ಟ ನಂತರ ಬಿಡುವಿನ ಸಮಯದಲ್ಲಿ ತಾವೇ ಕಟ್ಟಿರುವ ಮಣ್ಣಿನ ಪಾತ್ರೆಗಳಿಗೆ ನೀರು ಹಾಕುತ್ತಾರೆ. ಆಗಾಗ ಎಪಿಎಂಸಿಯಲ್ಲಿ ಧಾನ್ಯವನ್ನು ಖರೀದಿಸಿ ಒಂದು ಕಡೆ ಪಕ್ಷಿಗಳಿಗೆ ಆಹಾರ ನೀಡುತ್ತಿದ್ದಾರೆ.

ಇದನ್ನೂ ಓದಿ: Climate Change Impact: ಹವಾಮಾನ ಬದಲಾವಣೆಯ ಪ್ರಭಾವ; ಗಾಳಿ, ಸೌರ ಶಕ್ತಿಗಳಿಗೆ ಫುಲ್ ಡಿಮ್ಯಾಂಡ್

ಪಕ್ಷಿ ಆರೈಕೆಯಲ್ಲೇ ಇದೆಯಂತೆ ಸಂತೋಷ

ಮೂಲತಃ ರಾಯಚೂರಿನವರಾಗಿರುವ ಸುಲ್ತಾನಸಾಬ ಕೊಪ್ಪಳ ಆರೋಗ್ಯ ಇಲಾಖೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ 56 ವಯಸ್ಸಿನ ಸುಲ್ತಾನಸಾಬ ತಮ್ಮ ಸುತ್ತಲಿನ ಗಿಡ‌ ಮರ, ಗಿಡ ಮರದಲ್ಲಿಯ ಹಕ್ಕಿಗಳನ್ನು ನೋಡಿ ಆನಂದಿಸುವುದು ಅಲ್ಲದೆ ಬಾನಾಡಿಗಳಿಗೆ ನೀರು ಆಹಾರ ನೀಡುವದರಿಂದ ಸಂತೋಷ ಪಡುತ್ತಾರೆ.

150 ಕಡೆ ಹಕ್ಕಿಗಳಿಗೆ ನೀರಿನ ವ್ಯವಸ್ಥೆ

ಮೊದಲು ಕೊಪ್ಪಳ ನಗರದ ಮಧ್ಯೆದಲ್ಲಿರುವ ಹಳೆಯ ಜಿಲ್ಲಾಸ್ಪತ್ರೆಯ ಆವರಣದಲ್ಲಿಯ ಗಿಡಗಳಿಗೆ ಮಣ್ಣಿನ ಪಾತ್ರೆ ಕಟ್ಟಿದ್ದರು. ಜಿಲ್ಲಾಸ್ಪತ್ರೆ ಆವರಣದಿಂದ ಆರೋಗ್ಯ ಇಲಾಖೆಯ ಜಿಲ್ಲಾಡಳಿತ ಭವನಕ್ಕೆ ಶಿಪ್ಟ್ ಆದ ನಂತರ ಅಲ್ಲಿಯ ಗಿಡಗಳಿಗೆ ಸುಮಾರು 150 ಕಡೆ ಮಣ್ಣಿನ ಪಾತ್ರೆಗಳನ್ನು ಕಟ್ಟಿದ್ದಾರೆ.

ತಮ್ಮದೇ ಸ್ವಂತ ಖರ್ಚಿನಲ್ಲಿ ಹಕ್ಕಿಗಳ ಆರೈಕೆ

ಒಮ್ಮೆ ಅವರು ಕುಳಿತಿರುವಾಗ ಪಕ್ಷಿಯೊಂದು ನೀರು ಕುಡಿಯಲು ಪರದಾಡಿತು. ಇದನ್ನು ನೋಡಿದ ಅವರು ಪಕ್ಷಿಗಳಿಗೆ ಯಾಕೆ ನೀರು ನೀಡಬಾರದು ಎಂದುಕೊಂಡು ಸ್ವಂತ ಖರ್ಚಿನಲ್ಲಿ ಮಣ್ಣಿನ ಪಾತ್ರೆಗಳನ್ನು ಖರೀದಿಸಿ ಗಿಡಕ್ಕೆ ಕಟ್ಟಿದ್ದಾರೆ, ಅದರೊಂದಿಗೆ ಪ್ರತಿ ತಿಂಗಳ ಸುಮಾರು 2500 ರೂಪಾಯಿಯನ್ನು ಖರ್ಚು ಮಾಡಿ ಧಾನ್ಯಗಳನ್ನು ಪಕ್ಷಿಗಳಿಗಾಗಿ ಹಾಕುತ್ತಿದ್ದಾರೆ.

ಜಿಲ್ಲಾಡಳಿತ ಭವನದ ಬಳಿ ಹಕ್ಕಿಗಳ ಚಿಲಿಪಿಲಿ

ಕೊಪ್ಪಳ ಜಿಲ್ಲಾಡಳಿತ ಭವನದ ಸುತ್ತಲು ಸದಾ ಹಕ್ಕಿಗಳ ಕಲರವ ಇರುತ್ತದೆ, ಪಕ್ಷಿಗಳು ಹಿಂಡು ಹಿಂಡಾಗಿ ಬಂದು ದಾಹ  ತೀರಿಸಿಕೊಳ್ಳುವುದು ಅಷ್ಟೆ ಅಲ್ಲ ಅವುಗಳ ಹೊಟ್ಟೆ ತುಂಬ ಧಾನ್ಯವನ್ನು ತಿಂದು ಹೋಗುತ್ತವೆ, ಸಂಜೆ ಹಾಗು ಮುಂಜಾನೆಯ ವೇಳೆ ಜಿಲ್ಲಾಡಳಿತ ಭವನದಲ್ಲಿ ಹಕ್ಕಿಗಳ ಚಿಲಿಪಿಲಿ ಸದ್ದು ಇಲ್ಲಿಗೆ ಬರುವ ಜನರಿಗೆ ಮುದು ನೀಡುತ್ತದೆ. ದೂರ ದೂರ ಪ್ರದೇಶದಿಂದ ಬರುವ ಜನರು ಇಲ್ಲಿ ಹಕ್ಕಿಗಳ ಚಿಲಿಪಿಲಿ ಸದ್ದಿನಿಂದಾಗಿ ಮಾನಸಿಕ ನೆಮ್ಮದಿ ಹೊಂದುತ್ತಾರೆ.

ಇದನ್ನೂ ಓದಿ: Stag Beetle: ಈ ಅಪರೂಪದ ಕೀಟದ ಬೆಲೆಯೇ ಕೋಟಿ! ಅಷ್ಟಕ್ಕೂ ಯಾಕಿಷ್ಟು ಬೇಡಿಕೆ?

ಕೇವಲ ಒಂದೆರಡು ವರ್ಷ ಪಕ್ಷಿಗಳಿಗೆ ಕುಡಿವ ನೀರು ನೀಡಿ ಒಂದು ಫೋಸು ಕೊಟ್ಟು ಹೋಗುವವರ ಮಧ್ಯೆ ಏಕಾಂಗಿಯಾಗಿ 14 ವರ್ಷದಿಂದ ಪಕ್ಷಿಗಳಿಗೆ ನೀರು ಹಾಗು ಆಹಾರ ನೀಡುತ್ತಿರುವ ಸುಲ್ತಾನ ಸಾಬ ಮಾದರಿಯಾಗಿದ್ದಾರೆ.
Published by:Annappa Achari
First published: