Donkey Race: ಕುದುರೆಗೊಂದು ಕಾಲ, ಈಗ ಕತ್ತೆಗೂ ಒಂದು ಕಾಲ! ಡಾಂಕಿ ರೇಸ್‌ ನೋಡೋಕೆ ಜನವೋ ಜನ

ರೇಸ್‌ಗಳಲ್ಲಿ ಕುದುರೆ ರೇಸ್ ಫೇಮಸ್. ಇದರ ಜೊತೆಗೆ ಬೇರೆ ಬೇರೆ ಪ್ರಾಣಿಗಳ ರೇಸ್ ನಡೆಯುವ ಬಗ್ಗೆ ನೋಡಿದ್ದೇವೆ, ಕೇಳಿದ್ದೇವೆ. ಇದೀಗ ಬಾಗಲಕೋಟೆಯ ರಬಕವಿ ಪಟ್ಟಣದಲ್ಲಿ ವಿಶೇಷ ರೀತಿಯ ರೇಸ್ ಒಂದು ನಡೆದಿದೆ. ಅದೇ ಕತ್ತೆಗಳ ರೇಸ್!

ಕತ್ತೆಗಳ ಓಟ

ಕತ್ತೆಗಳ ಓಟ

  • Share this:
ರಬಕವಿ, ಬಾಗಲಕೋಟೆ: ರೇಸ್ (Race) ಎನ್ನುವ ಶಬ್ದದ (Word) ಅರ್ಥ (Meaning) ಎಲ್ಲರಿಗೂ ಗೊತ್ತು. ಮನರಂಜನೆಗಾಗಿ (Entertainment) ಶುರುವಾದ ರೇಸ್ ಕೊನೆಗೆ ವಾಣಿಜ್ಯಾತ್ಮಕವಾಗಿ, ಜೂಜಾಗಿ ಬದಲಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಇನ್ನು ರೇಸ್‌ಗಳಲ್ಲಿ ಕುದುರೆ ರೇಸ್ (Horse Race) ಫೇಮಸ್. ಇದರ ಜೊತೆಗೆ ಬೇರೆ ಬೇರೆ ಪ್ರಾಣಿಗಳ ರೇಸ್ (Animals Race) ನಡೆಯುವ ಬಗ್ಗೆ ನೋಡಿದ್ದೇವೆ, ಕೇಳಿದ್ದೇವೆ. ಇದೀಗ ಬಾಗಲಕೋಟೆಯ (Bagalkot) ರಬಕವಿ ಪಟ್ಟಣದಲ್ಲಿ (Rabakavi City) ವಿಶೇಷ ರೀತಿಯ ರೇಸ್ ಒಂದು ನಡೆದಿದೆ. ಅಂದಹಾಗೆ ಇಲ್ಲಿ ನಡೆದಿರುವುದು ಕತ್ತೆ ಓಟ ಅಥವಾ ಡಾಂಕಿ ರೇಸ್ (Donkey Race).

ರಾಂಪೂರ ಗ್ರಾಮದಲ್ಲಿ ಕತ್ತೆಗಳ ಓಟ

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಾಂಪೂರ ಗ್ರಾಮದಲ್ಲಿ ವಿಶೇಷವಾದ ಕತ್ತೆಗಳ ಓಟ ನಡೆಯಿತು. ರಾಂಪೂರದಲ್ಲಿ ಲಕ್ಕವ್ವದೇವಿ ಜಾತ್ರೆ ನಿಮಿತ್ತ ನಿನ್ನೆ ಶುಕ್ರವಾರ ಕತ್ತೆಗಳ ಓಟದ ಸ್ಪರ್ಧೆ ನಡೆಯಿತು. ಗ್ರಾಮ ದೇವತೆ ಉಡಿ ತುಂಬುವ ಕಾರ್ಯಕ್ರಮದ ನಿಮಿತ್ತ ನಡೆದ ಈ ಸ್ಪರ್ಧೆಯಲ್ಲಿ 10 ಕ್ಕೂ ಅಧಿಕ ಕತ್ತೆಗಳು ಹಾಗು ಅದರ ಮಾಲಿಕರು ಭಾಗವಹಿಸಿದ್ದರು. ಈ ರೇಸ್ ನಲ್ಲಿ ಭಾಗವಹಿಸಿದ್ದ ಕತ್ತೆಗಳು ಅಗಸನ ಕತ್ತೆಗಳಲ್ಲ. ಬದಲಾಗಿ ಇಲ್ಲಿ ವಾಸಿಸುವ ಭಜಂತ್ರಿ ಸಮುದಾಯಕ್ಕೆ ಸೇರಿದವು ಎಂಬುದು ಮತ್ತೊಂದು ವಿಶೇಷ.

ಊರಿನ ಪ್ರಮುಖ ಬೀದಿಗಳಲ್ಲಿ ಕತ್ತೆಗಳ ಓಟ

ರಾಮದೇವ ದೇವಸ್ಥಾನದಿಂದ ಆರಂಭವಾದ ರೇಸ್ ನಗರಸಭೆ ಕಚೇರಿವರೆಗೆ ಸಾಗಿ ನಂತರ ಆರಂಭಿಕ ಸ್ಥಾನಕ್ಕೆ ಬಂದು ನಿಲ್ಲುವುದು ನಿಯಮ. ರೇಸ್‌ನಲ್ಲಿ ರಬಕವಿ-ಬನಹಟ್ಟಿ, ರಾಮಪೂರ ಹಾಗು ಆಸಂಗಿ ಗ್ರಾಮಗಳಿಂದ ಕತ್ತೆಗಳು ಪಾಲ್ಗೊಂಡಿದ್ದವು.

ಇದನ್ನೂ ಓದಿ: Yellamma Devi: ಮಾಟ ಮಾಡಿದವರಿಗೆ ಶಿಕ್ಷೆ ಕೊಟ್ರೆ 50,001 ರೂಪಾಯಿ ಹುಂಡಿಗೆ ಹಾಕ್ತೀನಿ! ಯಲ್ಲಮ್ಮ ದೇವಿಗೆ ಭಕ್ತನ ಪತ್ರ

ಗೆದ್ದ ಕತ್ತೆಗಳಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ

ರೇಸ್‌ನಲ್ಲಿ ರಬಕವಿ– ಬನಹಟ್ಟಿ, ರಾಂಪೂರ ಹಾಗೂ ಆಸಂಗಿ ಗ್ರಾಮಗಳಿಂದ ಕತ್ತೆಗಳು ಪಾಲ್ಗೊಂಡಿದ್ದವು. ಪ್ರಥಮ ಸ್ಥಾನವನ್ನು ರಾಮಪೂರದ ರವಿ ಭಜಂತ್ರಿಯವರ ಕತ್ತೆ, ದ್ವಿತೀಯ ಸ್ಥಾನವನ್ನು ಬನಹಟ್ಟಿಯ ಮಹಾದೇವ ಭಜಂತ್ರಿ ಹಾಗೂ ತೃತಿಯ ಸ್ಥಾನವನ್ನು ರಾಮಪೂರದ ನಾಗಪ್ಪ ಭಜಂತ್ರಿಯವರ ಕತ್ತೆ ಪಡೆಯುವಲ್ಲಿ ಯಶಸ್ವಿಯಾಯಿತು. ಅವುಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಈ ನಗದು ಬಹುಮಾನ ಪಡೆದ ಕತ್ತೆಗಳ ಮಾಲೀಕರು, ಗ್ರಾಮದ ಯುವಕರು ಕುಣಿದು ಕುಪ್ಪಳಿಸಿದರು.

ಒಂದು ವಾರಗಳಿಂದ ಕತ್ತೆಗಳಿಗೆ ಟ್ರೇನಿಂಗ್

ಈ ಕತ್ತೆ ರೇಸ್‌ಗಾಗಿ ಕತ್ತೆಗಳಿಗೆ ತರಬೇತಿ ನೀಡಲಾಗಿತ್ತು. ಈ ಸ್ಪರ್ಧೆಗೆ ಅಕ್ಕಪಕ್ಕದ ಊರುಗಳಿಂದ 10ಕ್ಕೂ ಅಧಿಕ ಕತ್ತೆಗಳು ಬಂದಿದ್ದವು. ಕೆಲವು ಕತ್ತೆಗಳು ಕುದುರೆಗಳಂತೆ ಚಾಕಚಕ್ಯತೆಯಿಂದ ಓಡಿದರೆ, ಮತ್ತೆ ಕೆಲವು ಓಟದ ಸ್ಫರ್ಧೆ ವೇಳೆಯೂ ಕತ್ತೆಗಳು ಬಿದ್ದವು. ಈ ವೇಳೆ ಕೆಲವೆಡೆ ಯುವಕರೂ ಸಹ ಎದ್ದು ಬಿದ್ದು ಕತ್ತೆಗಳೊಂದಿಗೆ ಓಟ ನಡೆಸಿದರು.

ಇದನ್ನೂ ಓದಿ: Uttara Kannada: ಸಹಸ್ರಲಿಂಗ ಕ್ಷೇತ್ರದಲ್ಲಿ ಕಣ್ಮರೆಯಾಗ್ತಿವೆ ಲಿಂಗಗಳು; ಐತಿಹಾಸಿಕ ಕ್ಷೇತ್ರದಲ್ಲಿ ಏನಾಗ್ತಿದೆ?

ಕತ್ತೆಗಳ ಓಟಕ್ಕೆ ಮನಸೋತ ಗ್ರಾಮಸ್ಥರು

ಇನ್ನು ಗ್ರಾಮದ ಜನರೆಲ್ಲ ಒಟ್ಟಾಗಿ ನಿಂತು ಕತ್ತೆ ಓಟ ವೀಕ್ಷಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕತ್ತೆಗಳ ಓಟವನ್ನು ವೀಕ್ಷಿಸಿದ್ರು. ಯುವಕರಂತೂ ಅವುಗಳಿಗೆ ಹುರಿ ದುಂಬಿಸುತ್ತಾ ಕತ್ತೆ ಓಟ ಕಣ್ತುಂಬಿಕೊಂಡರು. ಅತ್ತ ಕತ್ತೆಗಳನ್ನ ಓಟಕ್ಕೆ ಬಿಟ್ಟಿದ್ದೇ ತಡ ಅವುಗಳನ್ನ ಹಿಂಬಾಲಿಸಿ ಊರಲ್ಲಿದ್ದ ಯುವಕರು ಬೈಕ್ ನೊಂದಿಗೆ ಬೆನ್ನಟ್ಟಿ ಹೊರಟಿದ್ದರು‌. ಒಂದು ಕತ್ತೆಯಂತೂ ಅದೇನು ಕುದುರೇಯೇನೋ ಅನ್ನೋ ಮಟ್ಟಿಗೆ ಭರ್ಜರಿಯಾಗಿ ಓಟ ಮಾಡಿತ್ತು‌.
Published by:Annappa Achari
First published: