• Home
  • »
  • News
  • »
  • state
  • »
  • Chandrashekhar Death Case: ಡಯಾಟಮ್ ವರದಿಯಲ್ಲಿದ್ಯಾ ಚಂದ್ರಶೇಖರ್ ಸಾವಿನ ಕಾರಣ? ವಿನಯ್ ಗುರೂಜಿಯಿಂದಲೂ ಮಾಹಿತಿ ಪಡೆದ ಪೊಲೀಸರು

Chandrashekhar Death Case: ಡಯಾಟಮ್ ವರದಿಯಲ್ಲಿದ್ಯಾ ಚಂದ್ರಶೇಖರ್ ಸಾವಿನ ಕಾರಣ? ವಿನಯ್ ಗುರೂಜಿಯಿಂದಲೂ ಮಾಹಿತಿ ಪಡೆದ ಪೊಲೀಸರು

ಚಂದ್ರಶೇಖರ್ ನಿಗೂಢ ಸಾವಿನ ಕೇಸ್

ಚಂದ್ರಶೇಖರ್ ನಿಗೂಢ ಸಾವಿನ ಕೇಸ್

ಎಲ್ಲಾ ಆರೋಪ, ಗೊಂದಲಗಳ ನಡುವೆ ಚಂದ್ರಶೇಖರ್ ಅವರ ಮೃತ ದೇಹದ ಡಯಾಟಮ್ ವರದಿ ಪೊಲೀಸರ ಕೈ ಸೇರಿದೆ. ಈ ವರದಿಯಲ್ಲಿ ಚಂದ್ರಶೇಖರ್ ನಿಗೂಢ ಸಾವಿನ ಕುರಿತಂತೆ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ!

  • News18 Kannada
  • Last Updated :
  • Honnali, India
  • Share this:

ದಾವಣಗೆರೆ: ಹೊನ್ನಾಳಿ ಶಾಸಕ (Honnali MLA) ಎಂ.ಪಿ. ರೇಣುಕಾಚಾರ್ಯ (MP Renukacharya) ಅವರ ಸಹೋದರ ರಮೇಶ್ ಅವರ ಪುತ್ರ ಚಂದ್ರಶೇಖರ್ ನಿಗೂಢ ಸಾವಿನ ಪ್ರಕರಣ (Chandrasekhar mysterious death) ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. ಜೊತೆಗೆ ತೀವ್ರ ಕುತೂಹಲಕ್ಕೂ ಕಾರಣವಾಗಿದೆ. ಚಂದ್ರಶೇಖರ್‌ ಅವರು ಅಪಘಾತಕ್ಕೆ (Accident) ಒಳಗಾಗಿ ಸಾವನ್ನಪ್ಪಿದ್ದಾರೆ ಅಂತ ಪೊಲೀಸರ ಪ್ರಾಥಮಿಕ ವರದಿ ಹೇಳಿದ್ರೆ, “ಇದು ವ್ಯವಸ್ಥಿತ ಕೊಲೆ, ಚಿತ್ರ ಹಿಂಸೆ ನೀಡಿ ಕೊಲೆ ಮಾಡಿರಬಹುದು” ಅಂತ ರೇಣುಕಾಚಾರ್ಯ ಅವರೇ ಹೇಳಿದ್ದಾರೆ. ಇನ್ನು ಚಂದ್ರಶೇಖರ್ ತಂದೆ ರಮೇಶ್, “ಸಲಿಂಗ ಕಾಮಕ್ಕೆ ಒತ್ತಾಯಿಸಿ ನನ್ನ ಮಗನನ್ನು ಕೊಂದಿರಬಹುದು” ಅಂತ ಆರೋಪಿಸಿದ್ದಾರೆ. ಈ ಎಲ್ಲಾ ಆರೋಪ, ಗೊಂದಲಗಳ ನಡುವೆ ಚಂದ್ರಶೇಖರ್ ಅವರ ಮೃತ ದೇಹದ ಡಯಾಟಮ್ ವರದಿ (Diatom Report) ಪೊಲೀಸರ ಕೈ ಸೇರಿದೆ. ಈ ವರದಿಯಲ್ಲಿ ಚಂದ್ರಶೇಖರ್ ನಿಗೂಢ ಸಾವಿನ ಕುರಿತಂತೆ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.


ಏನಿದು ಡಯಾಟಮ್ ವರದಿ?


ವಿಧಿ ವಿಜ್ಞಾನ ಅಥವಾ ಫೋರೆನ್ಸಿಕ್ ಪ್ಯಾಥೋಲಜಿಯಲ್ಲಿ ಮುಳುಗುವಿಕೆಯಿಂದ ಸಾವಿನ ನಿರ್ಣಯವನ್ನು ಕಷ್ಟಕರವಾದ ಕೆಲಸವೆಂದು ಪರಿಗಣಿಸಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ನಡೆಸುವ ಪರೀಕ್ಷೆಗಳಲ್ಲಿ ಡಯಾಟಮ್ ಪರೀಕ್ಷೆಯು ಒಂದಾಗಿದೆ. ಮುಳುಗುವಿಕೆಯಿಂದ ಸಾವಿನ ಕಾರಣವನ್ನು ಪತ್ತೆಹಚ್ಚಲು ಡಯಾಟಮ್‌ಗಳ ಬಳಕೆ ಮಾಡಲಾಗುತ್ತದೆ. ವಿವಿಧ ಅಂಗಗಳಲ್ಲಿನ ಡಯಾಟಮ್‌ಗಳ ಪತ್ತೆಯು ಮುಳುಗುವಿಕೆಯಿಂದ ಸಾವಿನ ರೋಗನಿರ್ಣಯಕ್ಕೆ ಕಾರಣವಾಗಬಹುದು, ಈ ಪ್ರಕ್ರಿಯೆಯನ್ನು 'ಡಯಾಟಮ್ ಪರೀಕ್ಷೆ' ಎಂದು ಕರೆಯಲಾಗುತ್ತದೆ.
ಪೊಲೀಸರ ಕೈ ಸೇರಿದ ಚಂದ್ರಶೇಖರ್ ಡಯಾಟಮ್ ವರದಿ


ಚಂದ್ರಶೇಖರ್ ಸಾವು ಸಹಜವೋ, ಅಸಹಜವೋ ಅಂತ ತಿಳಿಯಲು ಡಯಾಟಮ್ ವರದಿ ನಡೆಸಲಾಗಿತ್ತು. ಇದೀಗ ಡಯಾಟಮ್ ಪರೀಕ್ಷಾ ವರದಿ ಪೊಲೀಸರ ಕೈ ಸೇರಿದೆ. ಚಂದ್ರಶೇಖರ್ ಶ್ವಾಸಕೋಶದ ಒಳಗೆ ನೀರು ಇರೋದು ಡಯಾಟಮ್ ವರದಿ ಖಚಿತಪಡಿಸಿದೆ ಎಂದು ನ್ಯೂಸ್ 18ಗೆ ಪೊಲೀಸ್ ಉನ್ನತ ಮೂಲಗಳು ಮಾಹಿತಿ ನೀಡಿವೆ.


ಇದನ್ನೂ ಓದಿ: Chandrashekhar Death: ಸ್ನೇಹಿತರ ಸಲಿಂಗಕಾಮಕ್ಕೆ ಬಲಿಯಾದ್ರಾ ಶಾಸಕ ರೇಣುಕಾಚಾರ್ಯ ಪುತ್ರ ಚಂದ್ರಶೇಖರ್?


ಡಯಾಟಮ್ ಪರೀಕ್ಷಾ ವರದಿಯಲ್ಲಿ ಏನಿದೆ?


ಶ್ವಾಸಕೋಶದ ಒಳಗೆ ನೀರು ಸೇರಿರೋದು ಸಹ ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಾಲೆಯ ನೀರು ಶ್ವಾಸಕೋಶದಲ್ಲಿ ಇರೋದು ಅಂತ ರಿಪೋರ್ಟ್ ಹೇಳುತ್ತಿದೆ. ಡಯಾಟಂ ಪರೀಕ್ಷಾ ವರದಿಯಲ್ಲಿ ಸಹಜ ಸಾವು ಎನ್ನುವುದು ಉಲ್ಲೇಖಿಸಲಾಗಿದೆ.


ಎಫ್‌ಎಸ್ಎಲ್‌ ವರದಿಗಾಗಿ ಕಾಯುತ್ತಿರುವ ಪೊಲೀಸರು


ಇನ್ನು FSL ವರದಿ ಹಾಗೂ ಮರಣೋತ್ತರ ಪರೀಕ್ಷಾ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಈ ಎಲ್ಲಾ ವರದಿ ಬಂದ ಮೇಲೆ ಸಾವು ಸಹಜವೋ, ಅಸಹಜವೋ ಎಂದು ತಿಳಿಯಲಿದೆ. ಸದ್ಯ ಚಂದ್ರು ನಿಗೂಢ ಸಾವಿನ ಇಂಚಿಂಚು ಮಾಹಿತಿಯನ್ನು ಎಡಿಜಿಪಿ ಅಲೋಕ್ ಕುಮಾರ್ ಪಡೆಯುತ್ತಿದ್ದಾರೆ.


ವಿನಯ್ ಗುರೂಜಿಯಿಂದ ಮಾಹಿತಿ ಪಡೆದ ಪೊಲೀಸರು


ಮತ್ತೊಂದೆಡೆ ಚಂದ್ರಶೇಖರ್ ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಚಂದ್ರಶೇಖರ್ ನಾಪತ್ತೆಯಾಗುವ ಮೊದಲು ತನ್ನ ಸ್ನೇಹಿತ ಕಿರಣ್ ಜೊತೆ ರಾತ್ರಿ ಹೊತ್ತು ಆಶ್ರಮಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ತಡರಾತ್ರಿ ಕಾರಿನಲ್ಲಿ ಚಂದ್ರಶೇಖರ್ ಹೊರಟಿದ್ದರು.


ಇದನ್ನೂ ಓದಿ: Chandrashekar Death: ಆಶ್ರಮಕ್ಕೆ ಬಂದ ಚಂದ್ರಶೇಖರ್​ಗೆ ವಿನಯ್​ ಗುರೂಜಿ ಹೇಳಿದ್ದೇನು? ಸಾವಿನ ಬಗ್ಗೆ ಸುಳಿವು ಕೊಟ್ಟಿದ್ರಾ ಅವಧೂತರು?


ಪೊಲೀಸರ ಮುಂದೆ ವಿನಯ್ ಗುರೂಜಿ ಹೇಳಿದ್ದೇನು?


ಇನ್ನು ಪೊಲೀಸರು ಕೇಳಿದ ಪ್ರಶ್ನೆಗಳಿಗೆಲ್ಲಾ ವಿನಯ್ ಗುರೂಜಿಯವರು ಉತ್ತರಿಸಿದ್ದಾರೆ ಎನ್ನಲಾಗಿದೆ. ಚಂದ್ರಶೇಖರ್ ಆಶ್ರಮಕ್ಕೆ ರಾತ್ರಿ ಹೊತ್ತು ಬಂದಿದ್ದರು, ಅವರಲ್ಲಿ ಹೆಚ್ಚು ಮಾತನಾಡಿರಲಿಲ್ಲ. ಇಷ್ಟು ತಡವಾಗಿ ಏಕೆ ಬಂದಿರಿ, ಇದು ಬರುವ ಹೊತ್ತೇ ಎಂದು ಕೇಳಿದ್ದೆ. ಹುಷಾರಾಗಿ ಹೋಗಿ ಎಂದು ಹೇಳಿ ಕಳುಹಿಸಿದ್ದೆ, ಘಟನೆ ಬಗ್ಗೆ ನನಗೂ ನೋವಿದೆ ಎಂದು ವಿನಯ್ ಗುರೂಜಿ ಹೇಳಿದ್ದಾರೆ ಎನ್ನಲಾಗಿದೆ.

Published by:Annappa Achari
First published: