ಸವದತ್ತಿ, ಬೆಳಗಾವಿ: ಸವದತ್ತಿ ಯಲ್ಲಮ್ಮನ (Saundatti Yellamma) ಬಗ್ಗೆ ಎಲ್ಲರಿಗೂ ಗೊತ್ತು. “ಉಧೋ” ಎಂದರೆ ಎಲ್ಲರನ್ನೂ ಕಾಯುತ್ತಾಳೆ ಯಲ್ಲಮ್ಮ ತಾಯಿ (Mother) ಎನ್ನುವುದು ಭಕ್ತರ (Devotees) ನಂಬಿಕೆ. ತಾಯಿಗೆ ಪೂಜೆ (Worship) ಸಲ್ಲಿಸಿ, ಪ್ರಾರ್ಥನೆ (Prayer) ಮಾಡಿದ್ರೆ ಬದುಕಿನಲ್ಲಿ ಬರುವ ಕಷ್ಟ ಕಳೆಯುತ್ತಾಳಂತೆ. ಹೀಗಾಗಿ ದಿನದಿಂದ ದಿನಕ್ಕೆ ಏಳು ಕೊಳದ ಯಲ್ಲಮ್ಮ ತಾಯಿ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಏರುತ್ತಲೇ ಇದೆ. ಇದೀಗ ದೇಗುಲದ ಆಡಳಿತ ಮಂಡಳಿ (Managing Committee) ದೇವಿಯ (Goddess) ಕಾಣಿಕೆ ಹುಂಡಿ (Hundi) ಓಪನ್ ಮಾಡಿದೆ. ಈ ವೇಳೆ ಭಕ್ತರು ಕಾಣಿಕೆ ರೂಪದಲ್ಲಿ ಕೊಟ್ಟ ಹಣ 1.13 ಕೋಟಿ ಆಗಿದ್ಯಂತೆ. ಇನ್ನು ಕೆಲ ಭಕ್ತರು ತಮ್ಮ ಕಷ್ಟ ಕಳೆಯಮ್ಮ ಅಂತ ದೇವಿಗೆ ಪತ್ರ ಬರೆದು, ಹುಂಡಿಯಲ್ಲಿ ಹಾಕುತ್ತಾರೆ. ಹೀಗೆ ಭಕ್ತನೊಬ್ಬ ಆನ್‌ಲೈನ್ ಗೇಮ್‌ನಲ್ಲಿ (Online Game) ತಾನು ಕಳೆದುಕೊಂಡ ಹಣವನ್ನು (Money) ವಾಪಸ್ ಕೊಡಿಸುವಂತೆ ದೇವಿಗೆ ಪತ್ರ (Letter) ಬರೆದು, ಹುಂಡಿಯಲ್ಲಿ ಹಾಕಿದ್ದಾನೆ. ಮತ್ತೊಮ್ಮೆ ನನ್ನ ಮೇಲೆ ಮಾಟ ಮಾಡಿವವರಿಗೆ ಶಿಕ್ಷೆ ಕೊಡಿಸಿದ್ರೆ 50 ಸಾವಿರದ 1 ರೂಪಾಯಿ ಹಣ ಹಾಕುವುದಾಗಿ ಹೇಳಿದ್ದಾನೆ.
ಯಲ್ಲಮ್ಮ ದೇವಿ ಹುಂಡಿಯಲ್ಲಿ 1.13 ಕೋಟಿ ಕಾಣಿಕೆ ಸಂಗ್ರಹ
ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದೆ. 40 ದಿನಗಳಲ್ಲಿ ಬರೋಬ್ಬರಿ 1.13 ಕೋಟಿ ರೂಪಾಯಿ ನಗದು ಸಂಗ್ರಹ ಮಾಡಿದ್ದಾರೆ. 22 ಲಕ್ಷ ರೂಪಾಯಿ ಮೌಲ್ಯದ ಬಂಗಾರ, 3.86 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ ಪತ್ತೆಯಾಗಿದೆ ಎಂದು ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ. ದೊಡಗೌಡರ ತಿಳಿಸಿದ್ದಾರೆ.
ಕಾಣಿಕೆ ಹುಂಡಿಯಲ್ಲಿ ಚಿತ್ರ ವಿಚಿತ್ರ ಪತ್ರ ಪತ್ತೆ
ದೇವಸ್ಥಾನದ ಹುಂಡಿಯಲ್ಲಿ ಹಣದ ಜೊತೆಗೆ ಭಕ್ತರು ಹಾಕಿದ ಚಿತ್ರ ವಿಚಿತ್ರ ಪತ್ರಗಳು ಪತ್ತೆಯಾಗಿವೆ. ಪತ್ರವನ್ನು ಹುಂಡಿಗೆ ಹಾಕಿದ್ರೆ ದೇವಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆಂಬ ನಂಬಿಕೆ ಮೇಲೆ ಚಿತ್ರ ವಿಚಿತ್ರ ಪತ್ರ ಬರೆದು ಹುಂಡಿಗೆ ಹಾಕಿದ್ದಾರೆ.
ಇದನ್ನೂ ಓದಿ: Male Mahadeshwra: ಮಾದಪ್ಪನಿಗೆ ಉಘೇ ಎಂದ ಭಕ್ತರು, 35 ದಿನಗಳಲ್ಲಿ 2 ಕೋಟಿಕೂ ಅಧಿಕ ಕಾಣಿಕೆ ಸಂಗ್ರಹ!
“ಆನ್‌ಲೈನ್ ಗೇಮ್‌ನಲ್ಲಿ ಕಳೆದುಕೊಂಡ ಹಣ ವಾಪಸ್ ಕೊಡಿಸು”
ಭಕ್ತನೊಬ್ಬ ದೇವಿಗೆ ಪತ್ರ ಬರೆದು, ಹುಂಡಿಗೆ ಹಾಕಿದ್ದಾನೆ. ನಾನು ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡಿದ್ದೇನೆ. ಇನ್ನು ಮುಂದೆ ನನಗೆ ಈ ರೀತಿ ಆನ್‌ಲೈನ್ ಗೇಮ್ ಆಡದಂತೆ ಮನಸ್ಸು ಕೊಡು ತಾಯಿ ಅಂತ ಪತ್ರದಲ್ಲಿ ಪ್ರಾರ್ಥಿಸಿದ್ದಾನೆ.
“ಮಾಟ ಮಾಡಿಸಿದವರಿಗೆ ಶಿಕ್ಷೆ ಕೊಡಿಸಿದ್ರೆ 50001 ರೂಪಾಯಿ ಕಾಣಿಕೆ”
ಮತ್ತೋರ್ವ ಭಕ್ತ ನನ್ನ ಮೇಲೆ ಮಾಟ ಮಂತ್ರ ಪ್ರಯೋಗವಾಗಿದೆ ಅಂತ ದೇವಿಯಲ್ಲಿ ಅಳಲು ತೋಡಿಕೊಂಡಿದ್ದಾನೆ. ನನ್ನ ಮೇಲೆ ಮಾಟ ಮಾಡಿಸಿದವರಿಗೆ ಶಿಕ್ಷೆ ಕೊಡಿಸು. ಹಾಗೆ ಮಾಡಿದ್ರೆ ನಿನ್ನ ಹುಂಡಿಗೆ 50 ಸಾವಿರದ 1 ರೂಪಾಯಿ ಕಾಣಿಕೆ ಹಾಕೋದಾಗಿ ಮನವಿ ಮಾಡಿದ್ದಾನೆ.
ಸಾಲಗಾರರ ಕಾಟ ಕಡಿಮೆ ಮಾಡು ಅಂತ ಮನವಿ
ಮತ್ತೋರ್ವ ಭಕ್ತನೊಬ್ಬ ವಿಚಿತ್ರ ಪತ್ರ ಬರೆದು ದೇವಿಯ ಹುಂಡಿಗೆ ಹಾಕಿದ್ದಾನೆ. ನನಗೆ ಸಾಲಗಾರರ ಕಾಟ ಜಾಸ್ತಿಯಾಗಿದೆ. ಇದನ್ನು ಪರಿಹರಿಸು ತಾಯಿ ಅಂತ ಪತ್ರ ಬರೆದು ಬೇಡಿಕೊಂಡಿದ್ದಾನೆ.
ಇದನ್ನೂ ಓದಿ: Tirupati: ಮತ್ತಷ್ಟು ಶ್ರೀಮಂತನಾದ ಕಲಿಯುಗದ ಸಾಕ್ಷಾತ್ ದೈವ, ತಿಮ್ಮಪ್ಪನ ಹುಂಡಿಯಲ್ಲಿ ಒಂದೇ ದಿನ 10 ಕೋಟಿ ಸಂಗ್ರಹ!
ದೇವಸ್ಥಾನದ ಹುಂಡಿಯಲ್ಲಿ ಹಣದ ಜೊತೆಗೆ ಭಕ್ತರು ಹಾಕಿದ ಚಿತ್ರ ವಿಚಿತ್ರ ಪತ್ರಗಳು ಪತ್ತೆಯಾಗಿವೆ. ಪತ್ರವನ್ನು ಹುಂಡಿಗೆ ಹಾಕಿದರೆ ದೇವಿ ನಮ್ಮ ಕೋರಿಕೆ ಈಡೇರಿಸುತ್ತಾಳೆ ಎಂಬ ನಂಬಿಕೆ ಭಕ್ತರದ್ದು. ಭಕ್ತರ ವಿಚಿತ್ರ ಕೋರಿಕೆ ಪತ್ರಗಳನ್ನ ಕಂಡು ಹುಂಡಿ ಎಣಿಕೆ ಸಿಬ್ಬಂದಿ ಅಚ್ಚರಿಗೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ