ವಿಜಯನಗರ ಹೊಸ ಜಿಲ್ಲೆ ಅಸ್ತು ಬೆನ್ನಲ್ಲೇ ಜಮಖಂಡಿಯಲ್ಲಿ ಕೇಳದ ಕೂಗು; ನಾಮಕಾವಸ್ಥೆಯಾಗ್ತಿದೆಯಾ ಜಮಖಂಡಿ ಹೊಸ ಜಿಲ್ಲೆ ಬೇಡಿಕೆ?

1997ರಲ್ಲಿ ಬಾಗಲಕೋಟೆ, ಬಿಜಾಪುರ ಅವಿಭಜಿತ ಜಿಲ್ಲೆ ಮಾಡುವ ವೇಳೆ ಜಮಖಂಡಿ ಜಿಲ್ಲೆಯಾಗಬೇಕು ಎನ್ನುವ  ಕೂಗು ಬಲವಾಗಿತ್ತು. ಆಗ ಬಿಜಾಪುರದಿಂದ ವಿಭಜನೆಗೊಂಡು ಬಾಗಲಕೋಟೆ ನೂತನ ಜಿಲ್ಲೆಯಾಯಿತು‌. 1997ರಲ್ಲಿ ಜಮಖಂಡಿ ಜಿಲ್ಲಾ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ.

news18-kannada
Updated:November 22, 2020, 8:38 AM IST
ವಿಜಯನಗರ ಹೊಸ ಜಿಲ್ಲೆ ಅಸ್ತು ಬೆನ್ನಲ್ಲೇ ಜಮಖಂಡಿಯಲ್ಲಿ ಕೇಳದ ಕೂಗು; ನಾಮಕಾವಸ್ಥೆಯಾಗ್ತಿದೆಯಾ ಜಮಖಂಡಿ ಹೊಸ ಜಿಲ್ಲೆ ಬೇಡಿಕೆ?
ಜಮಖಂಡಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿಯ ಹೋರಾಟಗಾರರು ಸಚಿವ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸುತ್ತಿರುವ ದೃಶ್ಯ
  • Share this:
ಬಾಗಲಕೋಟೆ (ನ.21): ರಾಜ್ಯದ 31ನೇ ಜಿಲ್ಲೆ ವಿಜಯನಗರಕ್ಕೆ ರಾಜ್ಯ ಸಚಿವ ಸಂಪುಟ ಅಸ್ತು ಎಂದಿದೆ. ಆದರೆ ಜಮಖಂಡಿ ಜಿಲ್ಲೆಯಾಗಬೇಕೆನ್ನುವುದು ಪಟವರ್ಧನ್ ಸಂಸ್ಥಾನದ ಕಾಲದ  ಬೇಡಿಕೆ. ರಾಜ್ಯದಲ್ಲಿ ಹೊಸ ಜಿಲ್ಲೆಗಾಗಿ ಕೂಗು ಎದ್ದಾಗ ಜಮಖಂಡಿ ಹೊಸ ಜಿಲ್ಲೆ ಬಗ್ಗೆ ಕೂಗು ಕೇಳಿಬರುತ್ತೆ. ಆದರೆ ಬೇಡಿಕೆ ಹಲವು ದಶಕದ್ದಾದರೂ ಅದೇಕೋ ಹೊಸ ಜಿಲ್ಲೆ ರಚನೆಯಾಗಬೇಕು ಎನ್ನುವ ಕೂಗು  ಈಚೆಗೆ ಕಮರಿದೆ ಎಂದಿನಸುತ್ತಿದೆ. ನೆಪ ಮಾತ್ರಕ್ಕೆ ಹೋರಾಟ, ಮನವಿಗೆ ಮಾತ್ರ ಸಿಮೀತವಾಗಿದೆ‌. ಹೊಸ ಜಿಲ್ಲೆ ಬೇಡಿಕೆಗೆ ಗಟ್ಟಿತನವಿಲ್ಲ ಎನ್ನುವ ಮಾತು ಸಾಮಾನ್ಯವಾಗಿ ಕೇಳಿಬರುತ್ತಿದೆ. ಪಟವರ್ಧನ್ ಮಹಾರಾಜರ ಸಂಸ್ಥಾನ  ಆಡಳಿತದ ಬಳಿಕವೂ ಜಮಖಂಡಿ ಜಿಲ್ಲೆಗೆ ಬೇಡಿಕೆಯಿದೆ. ಆಗಾಗ ಹೋರಾಟ, ಸಭೆಗೆ ಸೀಮಿತವಾಗಿದೆ. ಆದರೆ ರಾಜಕೀಯ ನಾಯಕರು, ಹೋರಾಟಗಾರರ ಮಧ್ಯೆ ಒಗ್ಗಟ್ಟಿನ ಹೋರಾಟವಿಲ್ಲದಕ್ಕೆ ಜಮಖಂಡಿ ಹೊಸ ಜಿಲ್ಲೆಯ ಕನಸಾಗಿಯೇ ಉಳಿಯುತ್ತಿದೆ. ಹಾಗೆ ನೋಡಿದರೆ ಭೌಗೋಳಿಕವಾಗಿ ಜಮಖಂಡಿ ಹೊಸ ಜಿಲ್ಲೆಯಾಗಲು ಅರ್ಹವಾದುದು. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಹೊಸ ಜಿಲ್ಲೆಯ ಹೋರಾಟದಲ್ಲಿ ಹಿಂದೆ ಬಿದ್ದಿದೆ.

ಆಳುವ ಸರ್ಕಾರದ ಕಿವಿ, ಮನಸ್ಸಿಗೆ ಜಮಖಂಡಿ ಹೊಸ ಜಿಲ್ಲೆ ಕಾಗದದ ಬೇಡಿಕೆಯಾಗಿದೆ. ವಿಜಯನಗರ ಹೊಸ ಜಿಲ್ಲೆ ಬೇಡಿಕೆ 2007ರಲ್ಲಿ ಹುಟ್ಟಿದೆ. ಅಲ್ಪಕಾಲದ ಬೇಡಿಕೆ ಈಡೇರಿದ್ದು ರಾಜಕೀಯ ಕಾರಣಕ್ಕೆ ಎನ್ನುವುದು ಜಗಜ್ಜಾಹೀರು. ರಾಜ್ಯ ಸರ್ಕಾರ ವಿಜಯನಗರ ಹೊಸ ಜಿಲ್ಲೆ ಘೋಷಣೆಗೆ ತಾತ್ವಿಕ ಒಪ್ಪಿಗೆ ಸಿಕ್ಕ ಬೆನ್ನಲ್ಲೇ ಜಮಖಂಡಿ ಹೊಸ ಜಿಲ್ಲೆಯ ಕೂಗು ಕೇಳಿಯೇ ಬರಲಿಲ್ಲ. ಹೊಸ ಜಿಲ್ಲೆಗಾಗಿ ಮತ್ತೆ ಹೋರಾಟದ ಮಾತು, ಮರೀಚಿಕೆಯಾಯಿತು.

ಜಮಖಂಡಿ ನಗರಕ್ಕೆ ತಾಯಿ,ಮಕ್ಕಳ ನೂತನ ಆಸ್ಪತ್ರೆಯ ಕಟ್ಟಡ ಅಡಿಗಲ್ಲು ಸಮಾರಂಭಕ್ಕೆ ಭೇಟಿ ನೀಡಿದ್ದ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಹೋರಾಟ ಸಮಿತಿಯವರು ನಾಮಕಾವಸ್ಥೆ ಎನ್ನುವಂತೆ ಜಮಖಂಡಿ ಹೊಸ ಜಿಲ್ಲೆಗಾಗಿ ಬೇಡಿಕೆ ಮನವಿ ಸಲ್ಲಿ‌ಸಿದ್ದಾರೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಗಮನಕ್ಕೆ ತಂದು ಜಮಖಂಡಿ ಜಿಲ್ಲೆ ಘೋಷಣೆಗೆ ಮನವರಿಕೆಗಾಗಿ ಮನವಿ ಸಲ್ಲಿಸಿದ್ದಾರೆ. ಆದರೆ ಈವರೆಗೆ  ಹೊಸ ಜಿಲ್ಲೆಯ ಬೇಡಿಕೆಗೆ ಕನಿಷ್ಠ ಪಕ್ಷ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸುವಲ್ಲಿ ಜಮಖಂಡಿ ಜಿಲ್ಲಾ ಹೋರಾಟ ಸಮಿತಿ ಹಿಂದೆ ಬಿದ್ದಿದೆ‌.

ಕೋವಿಡ್-19 ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಆರ್.ಅಶೋಕ್​

ಕೇವಲ ಮನವಿ ಸಲ್ಲಿಸುವುದರಿಂದ ಹೊಸ ಜಿಲ್ಲೆ ಬೇಡಿಕೆ ಈಡೇರದು, ಇದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಹಲವು ದಶಕದಿಂದ ಮನವಿ, ಬೇಡಿಕೆ ಸಲ್ಲಿಸುವುದರಲ್ಲೇ ಕಾಲಹರಣವಾಗಿದೆ. ಹೊಸ ಜಿಲ್ಲೆಯ ಬೇಡಿಕೆಯೊಂದಿಗೆ ರಾಜಕೀಯ ಒತ್ತಡ ಬಹಳ ಮುಖ್ಯವಾಗಿದೆ. ರಾಜಕೀಯ ಇಚ್ಛಾಶಕ್ತಿಯೊಂದಿಗೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಮುಖ್ಯವೆನ್ನುವುದು ವಿಜಯನಗರ ಹೊಸ ಜಿಲ್ಲೆ ಘೋಷಣೆ ಸಾಕ್ಷಿಯಾಗಿದೆ.

ಇನ್ನು 1997ರಲ್ಲಿ ಬಾಗಲಕೋಟೆ, ಬಿಜಾಪುರ ಅವಿಭಜಿತ ಜಿಲ್ಲೆ ಮಾಡುವ ವೇಳೆ ಜಮಖಂಡಿ ಜಿಲ್ಲೆಯಾಗಬೇಕು ಎನ್ನುವ  ಕೂಗು ಬಲವಾಗಿತ್ತು. ಆಗ ಬಿಜಾಪುರದಿಂದ ವಿಭಜನೆಗೊಂಡು ಬಾಗಲಕೋಟೆ ನೂತನ ಜಿಲ್ಲೆಯಾಯಿತು‌. 1997ರಲ್ಲಿ ಜಮಖಂಡಿ ಜಿಲ್ಲಾ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಆಗ ನ್ಯಾಯವಾದಿ ಡಾ. ತಾತಾಸಾಹೇಬ ಬಾಂಗಿ ಜಮಖಂಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರಾಗಿದ್ದರು.
ಓಲೈಮಠದ ಚಂದ್ರಶೇಖರ ಸ್ವಾಮೀಜಿ ಸೇರಿದಂತೆ ಅಂದಿನ ಶಾಸಕ ರಾಮಣ್ಣ ಕಲೂತಿ, ಮಾಜಿ ಕೇಂದ್ರ ಸಚಿವ ದಿವಂಗತ ಸಿದ್ದು ನ್ಯಾಮಗೌಡ, ಜಿ ಎಚ್ ನ್ಯಾಮಗೌಡ, ಶ್ರೀಕಾಂತ ಕುಲಕರ್ಣಿ, ಸಿದ್ದು ಸವದಿ, ಸುಶೀಲ್ ಕುಮಾರ್ ಬೆಳಗಲಿ, ಶ್ರೀಶೈಲ ದಳವಾಯಿ, ಸೇರಿದಂತೆ ಅನೇಕ ರಾಜಕಾರಣಿಗಳು ಹೋರಾಟಕ್ಕೆ ಸಾಥ್ ನೀಡಿದ್ದರು. ಇನ್ಮೇಲಾದರೂ ಜಮಖಂಡಿ ಜಿಲ್ಲೆ ಹೋರಾಟಕ್ಕೆ ರಾಜಕೀಯ ಇಚ್ಚಾಶಕ್ತಿ ತೋರುತ್ತಾರಾ ಎಂದು ಕಾದುನೋಡಬೇಕಿದೆ.
Published by: Latha CG
First published: November 22, 2020, 8:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading