ಬಹುಮತದ ಮೇಲಿನ ಚರ್ಚೆ; ನಾವು ಅಧಿಕಾರಕ್ಕೆ ಗೂಟ ಹೊಡ್ಕಂಡು ಕೂತಿಲ್ಲ, ಜನರಿಗೆ ಸ್ಪಷ್ಟೀಕರಣ ನೀಡುವ ಜವಾಬ್ದಾರಿ ನಮಗಿದೆ; ಹೆಚ್​ಡಿಕೆ

ಕಮಲ ಪಕ್ಷದ ನಾಯಕರು ಮೈತ್ರಿ ಸರ್ಕಾರವನ್ನು ಲೂಟಿ ಸರ್ಕಾರ ಎಂದು ಜರೆಯುತ್ತಾರೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದು ನಮ್ಮದು ತಲೆ ಒಡೆಯುವ ಸರ್ಕಾರ ಎಂದು ಭಾಷಣ ಬಗಿಯುತ್ತಾರೆ. ಇದು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಆಡುವ ಮಾತೆ. ಇದು ನಿಜವಾದರೆ ನಾವು ಎಲ್ಲಿ? ಹೇಗೆ ಕೊಳ್ಳೆ ಹೊಡೆದೆವು ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಲಿ ಎಂದು ಸಿಎಂ ಕುಮಾರಸ್ವಾಮಿ ಅವರು ಸವಾಲು ಹಾಕಿದರು.

MAshok Kumar | news18
Updated:July 18, 2019, 12:11 PM IST
ಬಹುಮತದ ಮೇಲಿನ ಚರ್ಚೆ; ನಾವು ಅಧಿಕಾರಕ್ಕೆ ಗೂಟ ಹೊಡ್ಕಂಡು ಕೂತಿಲ್ಲ, ಜನರಿಗೆ ಸ್ಪಷ್ಟೀಕರಣ ನೀಡುವ ಜವಾಬ್ದಾರಿ ನಮಗಿದೆ; ಹೆಚ್​ಡಿಕೆ
ಹೆಚ್​.ಡಿ. ಕುಮಾರಸ್ವಾಮಿ
  • News18
  • Last Updated: July 18, 2019, 12:11 PM IST
  • Share this:
ಬೆಂಗಳೂರು (ಜುಲೈ.18); ಮೈತ್ರಿ ಸರ್ಕಾರ ಹಾಗೂ ನಾಯಕರು ಅಧಿಕಾರಕ್ಕೆ ಗೂಟ ಹೊಡ್ಕಂಡು ಕೂತಿಲ್ಲ. ಆದರೆ, ಇಂದು ರಾಜ್ಯದಲ್ಲಿ ಸರ್ಕಾರ ಬಹುಮತ ಸಾಬೀತುಪಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣ ಯಾರು? ಹಾಗೂ ಸರ್ಕಾರದ ಕಾರ್ಯಕ್ರಮ ಹಾಗೂ ನಿಲುವುಗಳನ್ನು ನಾವು ಹೇಗೆ ಕಾರ್ಯರೂಪಕ್ಕೆ ತಂದೆವು ಎಂಬುದನ್ನು ಜನರಿಗೆ ಸ್ಪಷ್ಟಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸಿಎಂ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರದ ವಿಧಾನಮಂಡಲ ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸುವ ಕುರಿತ ಚರ್ಚೆ ಮೇಲೆ ಮಾತನಾಡಿದ ಸಿಎಂ ಹೆಚ್.ಡಿ. ಕುಮಾರಸ್ವಾಮಿ, “ವಿರೋಧ ಪಕ್ಷದ ನಾಯಕರಾದ ಬಿ.ಎಸ್. ಯಡಿಯೂರಪ್ಪ ವಿಶ್ವಾಸಮತಕ್ಕೆ ಅವಸರ ಮಾಡುತ್ತಿದ್ದಾರೆ. ಆದರೆ, ಈ ಕುರಿತ ಚರ್ಚೆಯಾಗದೆ ತೀರ್ಮಾನ ತೆಗೆದುಕೊಳ್ಳುವುದು ಸರಿ ಅಲ್ಲ.

ಅಧಿಕಾರ ಶಾಶ್ವತ ಅಲ್ಲ, ನಾವು ಇಲ್ಲಿ ಗೂಟ ಹೊಡ್ಕಂಡು ಕೂತಿಲ್ಲ. ಆದರೆ, 14 ತಿಂಗಳ ಸುಭದ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದವರು ಯಾರು? ಇಂದು ಜನ ಅಸಹ್ಯಕರ ರಾಜಕೀಯವನ್ನು ನೋಡಲು ಕಾರಣ ಯಾರು? ಎಂಬ ಕುರಿತು ಚರ್ಚೆ ಆಗಲೇಬೇಕು. ಚರ್ಚೆಯಾಗದೆ ಬಹುಮತಕ್ಕೆ ನಾವು ಆಸ್ಪದ ನೀಡುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ವಿಶ್ವಾಸಮತ ಯಾಚನೆ; ಬಿಜೆಪಿಗಿಂತ ಕಾನ್ಫಿಡೆಂಟ್ ಆಗಿರುವ ಸಿಎಂ ಹೆಚ್​ಡಿಕೆ; ಆಪರೇಷನ್ ಮೈತ್ರಿ ಗುಮಾನಿ!

ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, “ಕಮಲ ಪಕ್ಷದ ನಾಯಕರು ಮೈತ್ರಿ ಸರ್ಕಾರವನ್ನು ಲೂಟಿ ಸರ್ಕಾರ ಎಂದು ಜರೆಯುತ್ತಾರೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದು ನಮ್ಮದು ತಲೆ ಒಡೆಯುವ ಸರ್ಕಾರ ಎಂದು ಭಾಷಣ ಬಗಿಯುತ್ತಾರೆ. ಇದು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಆಡುವ ಮಾತೆ. ಇದು ನಿಜವಾದರೆ ನಾವು ಎಲ್ಲಿ? ಹೇಗೆ ಕೊಳ್ಳೆ ಹೊಡೆದೆವು ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಲಿ ಎಂದು ಅವರು ಸವಾಲು ಹಾಕಿದರು.

ರಾಜ್ಯ ಸರ್ಕಾರ ಬರ, ಕೊಡಗಿನ ನೆರೆ ಪರಿಸ್ಥಿತಿ ಹಾಗೂ ಐಎಂಎ ಪ್ರಕರಣವನ್ನು ಸರಿಯಾದ ಮಾರ್ಗದಲ್ಲಿ ನಿಭಾಯಿಸಿದೆ. ಉತ್ತಮ ಆಡಳಿತ ನೀಡಿದ್ದೇವೆ. ನಾನು ಮಾಧ್ಯಮಗಳ ಎದುರು ಕಳೆದ ಎರಡು ತಿಂಗಳಿನಿಂದ ಈ ಕುರಿತು ಮಾತನಾಡಿಲ್ಲ. ಏಕೆಂದರೆ ಸರ್ಕಾರದ ನಿಲುವುಗಳನ್ನು ನಮ್ಮ ಸರ್ಕಾರ ಕಾರ್ಯಕ್ರಮದ ಮೂಲಕ ನಾವು ಹೇಗೆ ಅನುಷ್ಠಾನಗೊಳಿಸಿದೆವು ಎಂದು ಜನರಿಗೆ ತಿಳಿಸಲು ಸಾಧ್ಯವಾಗುವುದು ಸದನದಲ್ಲಿ ಮಾತ್ರ. ಹೀಗಾಗಿ ನಮ್ಮ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ನಾನು ಇಲ್ಲಿ ಜನರ ಮುಂದೆ ಇಡುತ್ತೇನೆ ಎಂದರು.

ಇದನ್ನೂ ಓದಿ : ನಾವೆಲ್ಲಾ ಒಟ್ಟಿಗೆ ಇದ್ದೇವೆ, ಬಹುಮತ ಸಾಬೀತುಪಡಿಸುತ್ತೇವೆ; ಡಿಸಿಎಂ ಜಿ. ಪರಮೇಶ್ವರ್ ವಿಶ್ವಾಸಶಾಸಕರ ಪಕ್ಷಾಂತರದ ಬಗ್ಗೆ ಮಾತನಾಡಿದ ಅವರು, “ಇಂದು ಇಡೀ ದೇಶದಲ್ಲಿ ಪ್ರಜಾಪ್ರಭುತ್ವದ ಅಣಕ ನಡೆಯುತ್ತಿದೆ. ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ದೇಶದ ಜನ ನೋಡುತ್ತಿದ್ದಾರೆ. ಶಾಸಕರು ಈ ಪಕ್ಷದಿಂದ ಆ ಪಕ್ಷಕ್ಕೆ ಆ ಪಕ್ಷದಿಂದ ಈ ಪಕ್ಷಕ್ಕೆ ಹಾರುತ್ತಿದ್ದಾರೆ. ಇದನ್ನು ನೋಡಿ ಜನ ಅಸಹ್ಯಪಡುತ್ತಿದ್ದಾರೆ. ಆದರೆ, ಇಂತಹ ಪರಿಸ್ಥಿತಿಗೆ ಕಾರಣ ಯಾರು? ಇದರ ಹಿನ್ನೆಲೆ ಏನು?" ಎಂದು ಬಿಜೆಪಿಯನ್ನು ಪರೋಕ್ಷವಾಗಿ ಕುಟುಕಿದರು.

First published:July 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading