• Home
  • »
  • News
  • »
  • state
  • »
  • ಡ್ರೈನೇಜ್ ಸ್ವಚ್ಛ ಮಾಡಲು ಇಳಿದಿದ್ದ ಇಬ್ಬರು ಕಾರ್ಮಿಕರ ಸಾವು; ಓರ್ವನ ಸ್ಥಿತಿ ಗಂಭೀರ

ಡ್ರೈನೇಜ್ ಸ್ವಚ್ಛ ಮಾಡಲು ಇಳಿದಿದ್ದ ಇಬ್ಬರು ಕಾರ್ಮಿಕರ ಸಾವು; ಓರ್ವನ ಸ್ಥಿತಿ ಗಂಭೀರ

ಅಸ್ವಸ್ಥಗೊಂಡ ಕಾರ್ಮಿಕ

ಅಸ್ವಸ್ಥಗೊಂಡ ಕಾರ್ಮಿಕ

ಡ್ರೈನೇಜ್ ನೊಳಗೆ ಇಳಿದ ಮೇಲೆ ಉಸಿರುಗಟ್ಟಿ ಓರ್ವ ಸಾವನ್ನಪ್ಪಿದ್ದಾನೆ. ಆತನನ್ನ ರಕ್ಷಣೆ ಮಾಡುವುದಕ್ಕೆ ಇಳಿದ ಇನ್ನಿಬ್ಬರು ಕೂಡ ಅಸ್ವಸ್ಥಗೊಂಡಿದ್ದರು. ಅಸ್ವಸ್ಥರನ್ನ ಸಾಗಿಸುವ ವೇಳೆ ಮತ್ತೋರ್ವ ಸಾವನ್ನಪ್ಪಿದ್ದಾನೆ. 

  • Share this:

ಕಲಬುರ್ಗಿ (ಜ. 28):  ಜಲ ಮಂಡಳಿ ನಿರ್ಲಕ್ಷ್ಯಕ್ಕೆ ಇಬ್ಬರು ಬಲಿಯಾಗಿ,  ಓರ್ವ ಗಂಭಿರಗೊಂಡ ಘಟನೆ ನಗರದಲ್ಲಿ ನಡೆದಿದೆ. ಡ್ರೈನೇಜ್ ಸ್ವಚ್ಛ ಮಾಡಲು ತೆರಳಿದ್ದ ಮೂರು ಜನರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಒಬ್ಬನ ಸ್ಥಿತಿ ಗಂಭೀರವಾಗಿದೆ.  ಕೈಲಾಶ್ ನಗರದಲ್ಲಿ ಘಟನೆ ನಡೆದಿದ್ದು, ಮೃತ ದುರ್ದೈವಿಗಳನ್ನು ಲಾಲ್ ಅಹ್ಮದ್ (25) ಮತ್ತು ರಶೀದ್ (30) ಎಂದು ಗುರುತಿಸಲಾಗಿದೆ. ರಾಜು ಎಂಬಾತನ ಸ್ಥಿತಿ ಗಂಭೀರವಾಗಿದೆ. ಈ ಮೂವರು ಕಲಬುರ್ಗಿ ಜಲ ಮಂಡಳಿಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.  ಇಂದು ಮಧ್ಯಾಹ್ನ ಡ್ರೈ ನೇಜ್ ಕೆಟ್ಟು ನಿಂತ ಹಿನ್ನೆಲೆಯಲ್ಲಿ ಕ್ಲೀನ್ ಮಾಡುವುದಕ್ಕೆ ಸಿಬ್ಬಂದಿ ಮುಂದಾಗಿದ್ದರು. 18 ಅಡಿ ಆಳದಲ್ಲಿ ಇಳಿದು ಕೆಲಸ ಮಾಡುತ್ತಿದ್ದರು. ಡ್ರೈನೇಜ್ ನೊಳಗೆ ಇಳಿದ ಮೇಲೆ ಉಸಿರುಗಟ್ಟಿ ಓರ್ವ ಸಾವನ್ನಪ್ಪಿದ್ದಾನೆ. ಆತನನ್ನ ರಕ್ಷಣೆ ಮಾಡುವುದಕ್ಕೆ ಇಳಿದ ಇನ್ನಿಬ್ಬರು ಕೂಡ ಅಸ್ವಸ್ಥಗೊಂಡಿದ್ದರು. ಅಸ್ವಸ್ಥರನ್ನ ಸಾಗಿಸುವ ವೇಳೆ ಮತ್ತೋರ್ವ ಸಾವನ್ನಪ್ಪಿದ್ದಾನೆ. 


ಮೊದಲು ಓರ್ವ ವ್ಯಕ್ತಿ ಡ್ರೈನೇಜ್ ಗೆ ಸ್ವಚ್ಛತೆಗಾಗಿ ಇಳಿದಿದ್ದ. ಆತನ ಅಸ್ವಸ್ಥಗೊಂಡು ಡ್ರೈನೇಜ್ ನಲ್ಲಿ ಸಿಲುಕಿಕೊಳ್ಳುತ್ತಿದ್ದಂತೆಯೇ ಆತನ ರಕ್ಷಣೆಗಾಗಿ ಮತ್ತೋರ್ವ ಕೆಳಗೆ ಇಳಿದಿದ್ದ. ಆತನೂ ಉಸಿರುಗಟ್ಟಿ ಅಸ್ವಸ್ಥಗೊಂಡಿದ್ದಾನೆ. ಈ ವೇಳೆ ಜಲ ಮಂಡಳಿ ಅಧಿಕಾರಿಗಳು ಮತ್ತೋರ್ವನನ್ನು ಕೆಳಗೆ ಇಳಿಸಿದ್ದಾರೆ. ಹೀಗೆ ಹೋದವರೆಲ್ಲರೂ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ನಾವೆಲ್ಲಾ ಕೂಡಿ ಮೇಲೆ ಎತ್ತಿದೆವು. ಅಷ್ಟರೊಳಗಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಜಲ ಮಂಡಳಿಯ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿ ಕಾರ್ಮಿಕ ತಸ್ಲೀಂ ಶೇಖ್ ತಿಳಿಸಿದ್ದಾರೆ.


ಇಬ್ಬರು ಕಾರ್ಮಿಕರ ದುರ್ಮರಣ ಪ್ರಕರಣ ಖಂಡಿಸಿ ದಿಢೀರ್ ರಸ್ತೆ ತಡೆ ಮಾಡಲಾಯಿತು. ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾ ಆಸ್ಪತ್ರೆ ಎದುರು ರಸ್ತೆ ತಡೆ ಮಾಡಿ, ಜಲ ಮಂಡಳಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಂತ್ರಗಳ ಮೂಲಕ ಮಾಡಬೇಕಿದ್ದ ಕೆಲಸವನ್ನು ಮನುಷ್ಯರ ಮೂಲಕ ಮಾಡಿಸಲಾಗಿದೆ. ತಕ್ಷಣ ಅಧಿಕಾರಿಗಳ ಎಚ್ಚೆತ್ತಿದ್ದರೂ ಈ ಘಟನೆ ನಡೆಯುತ್ತಿರಲಿಲ್ಲ. ಮೃತರ ಕುಟುಂಬಗಳಿಗೆ ಸೂಕ್ತ ನ್ಯಾಯ ಒದಗಿಸಬೇಕು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತ ಸಂಘಟನೆ ಮುಖಂಡ ಸೂರ್ಯಕಾಂತ ನಿಂಬಾಳಕರ್ ಮತ್ತು ಮೃತ ರಶೀದ್ ತಂದೆ ಬುರಾನ್ ಶೇಖ್ ಆಗ್ರಹಿಸಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ ರಾಜು ಗೆ ನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಇದನ್ನು ಓದಿ: ಬಾಹುಬಲಿ ಚಿತ್ರದಲ್ಲಿ ನಟಿಸಿದ ಈ ಮಗು ಈಗ ಹೇಗಿದೆ ಗೊತ್ತಾ? ಇಲ್ಲಿದೆ ಚಿತ್ರಣ


ಭರವಸೆ ನಂತರ ರಸ್ತೆ ತಡೆ ವಾಪಸ್:


ಜಲ ಮಂಡಳಿ ನಿರ್ಲಕ್ಷ್ಯಕ್ಕೆ ಇಬ್ಬರು ಬಲಿಯಾಗಿರುವುದನ್ನು ಖಂಡಿಸಿ ಜಿಲ್ಲಾಸ್ಪತ್ರೆ ಬಳಿ ರಸ್ತೆ ತಡೆ ನಡೆಸಲಾಯಿತು.  ಜಲ ಮಂಡಳಿ ಅಧಿಕಾರಿಗಳು ಬೇಡಿಕೆ ಈಡೇರಿಸುವ ಭರವಸೆ ನೀಡಿದ ನಂತರ ಹೋರಾಟ ಅಂತ್ಯಗೊಳಿಸಲಾಗಿದೆ. ಮೃತರ ಕುಟುಂಬಕ್ಕೆ ತಕ್ಷಣ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾವುದು. ಎಫ್.ಐ.ಆರ್. ದಾಖಲಿಸಿ ಸೂಕ್ತ ತನಿಖೆ ಕೈಗೊಳ್ಳಲಾಗುವುದು. ಮೃತರ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡುವ ಭರವಸೆ ನೀಡಿದ ನಂತರ ಹೋರಾಟಗಾರರು ರಸ್ತೆ ತಡೆ ವಾಪಸ್ ಪಡೆದಿದ್ದಾರೆ.


ಘಟನೆಗೆ ಪ್ರಿಯಾಂಕ್ ಖರ್ಗೆ ಖಂಡನೆ


ಸ್ವಚ್ಛತೆಗಾಗಿ ಡ್ರೈನೇಜ್ ಗೆ ಇಳಿದು ಇಬ್ಬರು ಕಾರ್ಮಿಕರು ದುರ್ಮರಣಕ್ಕೀಡಾಗಿ, ಓರ್ವ ಕಾರ್ಮಿಕ ತೀವ್ರವಾಗಿ ಅಸ್ವಸ್ಥಗೊಂಡಿರುವ ಪ್ರಕರಣವನ್ನು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಖಂಡಿಸಿದ್ದಾರೆ. ಇದೊಂದು ಅಮಾನವೀಯ ಘಟನೆ. ಸ್ವಚ್ಛತೆಗಾಗಿ ಮ್ಯಾನ್ ಹೋಲ್ ಗಳಲ್ಲಿ ಮನುಷ್ಯರನ್ನು ಇಳಿಸಬಾರದೆಂದು ನ್ಯಾಯಾಲಯ ಸೂಚನೆ ನೀಡಿದರು, ಹೊರತಾಗಿಯೂ ಈ ರೀತಿ ಇಳಿಸಿರೋದು ಅಮಾವೀಯ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.


(ವರದಿ: ಶಿವರಾಮ್​ ಅಸುಂಡಿ)

Published by:Seema R
First published: