ಮೈಸೂರು (ಮೇ 28): ಶಾಲೆಗೆ (School) ಹಾಜರಾಗದೇ ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕ ಸಾವನ್ನಪ್ಪಿರೋ (Boy Death) ಘಟನೆ ಹುಣುಸೂರು ತಾಲೂಕಿನ ತಿಪ್ಪಲಾಪುರ ಬೆಳ್ತೂರು ಬಳಿ ಸಂಭವಿಸಿದೆ. ಚಿಲ್ಕುಂದ ಗ್ರಾಮದ ನಿವಾಸಿ ಹರ್ಷ (14) ಮೃತ ದುರ್ದೈವಿ. ಬಾಲಕ ಹರ್ಷ (Harsha), ಮಂಜುನಾಥ್ ಮತ್ತು ಶೈಲಜಾ ದಂಪತಿ ಪುತ್ರ. ಬಾಲಕ ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ. ಶಾಲೆಗೆ ಹೋಗುವುದಾಗಿ ಮನೆಯಲ್ಲಿ ಹೇಳಿದ್ದ ಐವರು ಬಾಲಕರು ಈಜುವುದಕ್ಕೆ ಕೆರೆಗೆ (Lake) ಹೋಗಿದ್ದರು.
ಈ ವೇಳೆ ಅವಘಡ ಸಂಭವಿಸಿದ್ದು, ಘಟನೆ ನಡೆಯುತ್ತಿದ್ದಂತೆ ಉಳಿದ ನಾಲ್ವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ ಪ್ರಕರಣ ನಂಜುನಗೂಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪೊಲೀಸ್ ಪೇದೆ ನೇಣಿಗೆ ಶರಣು
ಒಂದುವರೆ ವರ್ಷದ ಹಿಂದಷ್ಟೆ ಮದುವೆಯಾಗಿದ್ದ ಪೊಲೀಸ್ ಪೇದೆ ನೇಣಿಗೆ ಶರಣಾಗಿರೋ ಘಟನೆ ಮೈಸೂರಿನ ಜಲಪುರಿ ಪೊಲೀಸ್ ಕ್ವಾಟ್ರಸ್ನಲ್ಲಿ ನಡೆದಿದೆ. ಪರಸಪ್ಪ ಕೊನ್ನೂರು (27) ಮೃತ ದುರ್ದೈವಿ, ಮೈಸೂರಿನ ದೇವರಾಜ ಠಾಣೆಯಲ್ಲಿ ಪರಸಪ್ಪ ಕೊನ್ನೂರು ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉತ್ತರ ಕರ್ನಾಟಕ ಮೂಲದ ಪರಸಪ್ಪ ಕೊನ್ನೂರು ಎಂಬಾತ 2016ನೇ ಬ್ಯಾಚ್ ನಲ್ಲಿ ಆಯ್ಕೆಯಾಗಿದ್ದರು.
ಪತ್ನಿ ಇಲ್ಲದ ವೇಳೆ ನೇಣಿಗೆ ಶರಣು
ಪತ್ನಿ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಕ್ವಾಟ್ರಸ್ ನಲ್ಲೇ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೇದೆ ಪರಸಪ್ಪ ಒಂದುವರೆ ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು, ಕ್ವಾಟ್ರಸ್ನಲ್ಲಿ ವಾಸವಿದ್ದ ದಂಪತಿ ಚೆನ್ನಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನಜರ್ ಬಾದ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.
ಪತ್ನಿ ಕೊಂದು ನೇಣಿಗೆ ಶರಣಾದ ಪತಿ
ಚಾಮರಾಜನಗರ : ಪರಪುರುಷನೊಟ್ಟಿಗೆ ಪತ್ನಿ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದನ್ನು ಕಂಡು ಪತ್ನಿಯನ್ನು ಕೊಂದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮಾದಲವಾಡಿ ಸಮೀಪದ ಬೇಲದಕುಪ್ಪೆ ಎಂಬಲ್ಲಿ ನಡೆದಿದೆ. ಮಹಾದೇವಪ್ಪ (52) ಎಂಬಾತ ತನ್ನ ಪತ್ನಿ ಮಹದೇವಮ್ಮ(45) ಎಂಬಾಕೆಯನ್ನು ಮಚ್ಚಿನಿಂದ ಕೊಂದು ಠಾಣೆಗೆ ಬಂದು ಶರಣಾಗಿದ್ದಾನೆ.
ಇದನ್ನೂ ಓದಿ: Land Slides: ಉತ್ತರ ಕನ್ನಡದಲ್ಲಿ ಮತ್ತೆ ಭೂ ಕುಸಿತದ ಭೀತಿ; ಈ ವರ್ಷ ಈ 5 ಪ್ರದೇಶಗಳಿಗೆ ಅಪಾಯವಂತೆ!
ಅನೈತಿಕ ಸಂಬಂಧದ ಕಾರಣ
ಪತ್ನಿಗೆ ಸಾಕಷ್ಟು ಬಾರಿ ಬುದ್ದಿವಾದ ಹೇಳಿದ್ದರೂ ಪತ್ನಿ ಆ ಪರಪುರುಷನ ಜೊತೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇಂದು ಬೆಳಗ್ಗೆ ಡೇರಿಗೆ ಹಾಲು ಹಾಕಿ ಹಿಂತಿರುಗುವಾಗ ಸ್ನಾನದ ಮನೆಯಲ್ಲಿ ರಾಸಲೀಲೆಯನ್ನು ಕಂಡು ಮಚ್ಚಿನಿಂದ ಹೊಡೆದಿದ್ದರಿಂದ ಮಹಾದೇವಮ್ಮ ಸ್ಥಳದಲ್ಲೇ ಅಸುನೀಗಿದ್ದಾರೆ ಎನ್ನಲಾಗಿದೆ.ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿವೆ. ಮದುವೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅನೈತಿಕ ಸಂಬಂಧದ ಕಾರಣ ಕೊಂದೆ ಎಂದು ಪತಿ ಪೊಲೀಸ್ ಠಾಣೆಗೆ ಶರಣಾದರೂ ವಿವಿಧ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ತೆರಕಣಾಂಬಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಲವ್ ಸೆಕ್ಸ್ ದೋಖಾಗೆ ಯವತಿ ಬಲಿ
ಲವ್ ಸೆಕ್ಸ್ ದೋಖಾ ಗೆ ಶಿಲ್ಪಾ ದೇವಾಡಿಗ ಎಂಬ ಯುವತಿ ಬಲಿಯಾಗಿದ್ದಾಳೆ. ಶಿಲ್ಪಾ ಸಾವಿನ ಬೆನ್ನಲ್ಲೇ ಸಾವಿಗೆ ಕಾರಣರಾದ ಮುಸ್ಲಿಂ ದಂಪತಿಯನ್ನ ಬಂಧಿಸುವಂತೆ ಹಿಂದೂ ಸಂಘಟನೆ ಒತ್ತಾಯಿಸಿದೆ. ಈ ಬಗ್ಗೆ ಆರೋಪಿಯ ಜಾಡು ಹಿಡಿದಿರುವ ಪೊಲೀಸರು ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ. ಹೌದು, ಶಿಲ್ಪಾ ಸಾವಿನ ಬೆನ್ನಲ್ಲೇ ಲವ್ ಜಿಹಾದ್ ಎಂದು ಆಕ್ರೋಶ ಹೊರಹಾಕಿರುವ ಹಿಂದೂ ಸಂಘಟನೆಗಳು ಶಿಲ್ಪಾ ಸಾವಿಗೆ ಕಾರಣರಾದ ಅಜೀಜ್ ಹಾಗೂ ಸಲ್ಮಾ ದಂಪತಿಯನ್ನ ಬಂಧಿಸುವಂತೆ 24 ಗಂಟೆಗಳ ಗಡುವು ನೀಡಿದೆ.
ಇದನ್ನೂ ಓದಿ: Bridge: ಸೇತುವೆ ನಿರ್ಮಾಣವಾದ್ರೂ ತಪ್ಪಿಲ್ಲ ಜನರ ಸಂಕಷ್ಟ, ಮಳೆಗಾಲದಲ್ಲಿ ಇಲ್ಲಿನ ಜೀವನ ಕಷ್ಟ ಕಷ್ಟ!
ಅಲ್ಲದೆ ಸರ್ಕಾರ ಕೂಡ ಲವ್ ಜಿಹಾದ್ ತಡ ಕಾನೂನು ತರಬೇಕು ಜೊತೆಗೆ ಪ್ರಕರಣ ಸಿಐಡಿಗೆ ಕೊಡುವುದರ ಜೊತೆಗೆ ಶಿಲ್ಪಾ ಕುಟುಂಬಕ್ಕೆ10 ಲಕ್ಷ ಪರಿಹಾರ ಕೊಡಬೇಕು ಎಂದು ಆಗ್ರಹಿಸಿರುವ ಭಜರಂಗದಳ ಇದೊಂದು ಮತಾಂತರ ಮಾಡುವ ಬಹುದೊಡ್ಡ ಷಡ್ಯಂತ್ರ. ಇದೊಂದು ಲವ್ ಜಿಹಾದಿನ ವ್ಯವಸ್ಥಿತ ಸಂಚು ಎಂದು ಆರೋಪ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ