• Home
 • »
 • News
 • »
 • state
 • »
 • Renukacharya: ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್​ ಶವ ಪತ್ತೆ, ಕಾಲುವೆಯಲ್ಲಿ ಬಿದ್ದಿದ್ದ ಕಾರು

Renukacharya: ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್​ ಶವ ಪತ್ತೆ, ಕಾಲುವೆಯಲ್ಲಿ ಬಿದ್ದಿದ್ದ ಕಾರು

ಶಾಸಕ ರೇಣುಕಾಚಾರ್ಯ ಕಣ್ಣೀರು

ಶಾಸಕ ರೇಣುಕಾಚಾರ್ಯ ಕಣ್ಣೀರು

ಹೊನ್ನಾಳಿ (Honnali) ಎಚ್ ಕಡದಕಟ್ಟೆ ಮಧ್ಯದ ಕಾಲುವೆಗೆ ಕಾರು ಬಿದ್ದಿದೆ. ವಿಷಯ ತಿಳಿದು ಓಡೋಡಿ ಬಂದ ರೇಣುಕಾಚಾರ್ಯ ಸ್ಥಳದಲ್ಲೇ ಬಿಕ್ಕಿಬಿಕ್ಕಿ ಅಳುತ್ತಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ದಾವಣಗೆರೆ: ಬಿಜೆಪಿ ಶಾಸಕ (BJP MLA) ಹಾಗೂ ಮುಖ್ಯಮಂತ್ರಿಗಳ (Chief Minister) ರಾಜಕೀಯ ಕಾರ್ಯದರ್ಶಿ ಎಂ. ರೇಣುಕಾಚಾರ್ಯಸಹೋದರನ ಮಗ ಚಂದ್ರಶೇಖರ್​ ಶವ ಕಾರಿನಲ್ಲಿ ಪತ್ತೆಯಾಗಿದೆ. ರೇಣುಕಾಚಾರ್ಯ (Renukacharya) ಸಹೋದರ ಎಂ.ಪಿ. ರಮೇಶ್ (MP Ramesh) ಅವರ ಹಿರಿಯ ಪುತ್ರ ಎಂ. ಆರ್. ಚಂದ್ರಶೇಖರ್ ಕಾಣೆಯಾಗಿದ್ರು, ಅವರ ಕಾರು ಕಾಲುವೆ ಬಳಿ ಪತ್ತೆಯಾಗಿತ್ತು. ಹೊನ್ನಾಳಿ (Honnali) ಎಚ್ ಕಡದಕಟ್ಟೆ ಮಧ್ಯದ ಕಾಲುವೆಗೆ ಕಾರು ಬಿದ್ದಿದೆ. ವಿಷಯ ತಿಳಿದು ಓಡೋಡಿ ಬಂದ ರೇಣುಕಾಚಾರ್ಯ ಶವ ಕಂಡು ಸ್ಥಳದಲ್ಲೇ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.


  ಗೌರಿಗದ್ದೆಗೆ ತೆರಳಿದ್ದ ಚಂದ್ರಶೇಖರ್​


  ಕಳೆದ ಭಾನುವಾರ ಶಿವಮೊಗ್ಗದ ಗೌರಿಗದ್ದೆಗೆ ಕಾರಿನಲ್ಲಿ ತೆರಳಿದ್ದ ಚಂದ್ರಶೇಖರ್ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದರು. ನಂತರ ಚಂದ್ರು, ಶಿವಮೊಗ್ಗದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಸ್ವಲ್ಪ ಕಾಲ ಅವರ ಜೊತೆ ಕಾಲ ಕಳೆದು ಹೊನ್ನಾಳಿಗೆ ಹಿಂದಿರುಗಿದ್ದರು.


  ಮುಗಿಲು ಮುಟ್ಟಿದೆ ಕುಟುಂಬಸ್ಥರ ಆಕ್ರಂದನ 


  ತಮ್ಮ ಸ್ನೇಹಿತ ಕಿರಣ್ ಎಂಬುವರ ಜೊತೆ ತೆರಳಿದ್ದ ಚಂದ್ರು ಶಿವಮೊಗ್ಗದಿಂದ ವಾಪಸ್ ಆಗಿ ನ್ಯಾಮತಿ ವರೆಗೂ ಬಂದಿದ್ದಾರೆ. ಆನಂತರ ನಾಪತ್ತೆಯಾಗಿದ್ದಾರೆ. ಚಂದ್ರು ಪ್ರಯಾಣಿಸುತ್ತಿದ್ದ ಕಾರು ಶಿವಮೊಗ್ಗದ ಮೂಲಕ ಹಾದು ಹೋಗುವ ದೃಶ್ಯಗಳು ಪತ್ತೆಯಾಗಿ, ಭಾನುವಾರ ರಾತ್ರಿ 11.56 ರ ಸುಮಾರಿಗೆ  ಚಂದ್ರಶೇಖರ್ ಮೊಬೈಲ್ ಆನ್ ನಲ್ಲಿತ್ತು, ಆದರೆ ಬೆಳದ್ದೆ 6.48 ಕ್ಕೆ ಸ್ವಿಚ್ ಆಫ್ ಆಗಿದೆ, ಚಂದ್ರಶೇಖರ್ ಪ್ರಯಾಣಿಸುತ್ತಿದ್ದ ಕಾರು ಕೂಡ ನಾಪತ್ತೆಯಾಗಿದ್ದು, ಕಿಡ್ನಾಪ್ ಆಗಿರುವ ಅನುಮಾನ ಮೂಡಿತ್ತು. ಇದೀಗ ಕಾರಿನಲ್ಲಿ ಚಂದ್ರಶೇಖರ್​ ಶವ ಪತ್ತೆಯಾಗಿದ್ದು,  ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
  ಇದನ್ನೂ ಓದಿ: Hubballi: ಸಿಲಿಂಡರ್ ಸ್ಫೋಟಕ್ಕೆ 5 ಮನೆ ಬೆಂಕಿಗಾಹುತಿ; 8 ಲಕ್ಷ ಹಣ ಸುಟ್ಟು ಬೂದಿ


  ಚಂದ್ರಶೇಖರ್ ಕಾರು ಕಾಲುವೆಗೆ ಹೇಗೆ ಬಿತ್ತು


  ಇನ್ನು ಘಟನಾ ಸ್ಥಳಕ್ಕೆ ದಾವಣಗೆರೆ ಎಸ್‌ಪಿ ಸಿ.ಬಿ.ರಿಷ್ಯಂತ್‌ ಭೇಟಿ ನೀಡಿದ್ದು, ಚಂದ್ರಶೇಖರ್‌ ಮೃತದೇಹವನ್ನು ಪೊಲೀಸರು ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸುತ್ತಿದ್ದಾರೆ. ಆದ್ರೆ, ಚಂದ್ರಶೇಖರ್ ಕಾರು ಕಾಲುವೆಗೆ ಹೇಗೆ ಬಿತ್ತು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


  ಇದನ್ನೂ ಓದಿ: Rain Update: ರಾಜ್ಯದಲ್ಲಿ ನಿಲ್ಲದ ವರುಣನ ಆರ್ಭಟ, ಇನ್ನೂ 4 ದಿನ ಬೆಂಗಳೂರು ಸೇರಿದಂತೆ ಹಲವೆಡೆ ಭಾರೀ ಮಳೆ


  ಎಲ್ಲಾ ಆಯಾಮಗಳಲ್ಲೂ ತನಿಖೆ


  ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು ಕಾಲುವೆಯಲ್ಲಿ ಪಲ್ಟಿಯಾಗಿದ್ದ ಕಾರಿನಲ್ಲಿ ಮೃತದೇಹ ಪತ್ತೆ ಆಗಿದ್ದು, ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ. ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತದೆ ಎಂದು ಹೇಳಿದ್ರು.


  ಇದನ್ನೂ ಓದಿ: Chandrashekar Death: ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವು ಕೊಲೆಯೋ? ಅಪಘಾತವೋ?


  ರೇಣುಕಾಚಾರ್ಯ ಜೊತೆ ಚರ್ಚಿಸಿ ತನಿಖೆ


  ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್‌ ಶವ ಪತ್ತೆ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಪ್ರತಿಕ್ರಿಯಿಸಿದ್ದಾರೆ.  ಕುಟುಂಬಸ್ಥರು ನೀಡುವ ದೂರಿನಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಶಾಸಕ ರೇಣುಕಾಚಾರ್ಯ ಜೊತೆ ಚರ್ಚಿಸಿ ತನಿಖೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಈ ವೇಳೆ ಚಂದ್ರಶೇಖರ್‌ ತಂದೆಯ ಅಭಿಪ್ರಾಯ ಪಡೆಯುತ್ತೇವೆ ಎಂದರು.

  Published by:ಪಾವನ ಎಚ್ ಎಸ್
  First published: