ಕಲಘಟಗಿಯ ಬಣ್ಣದ ತೊಟ್ಟಿಲಿಗೆ ವಿದೇಶದಲ್ಲಿ ಹೆಚ್ಚಿದ ಬೇಡಿಕೆ..!

ಕಲಘಟಗಿ ಪಟ್ಟಣದ ಗೋಲಪ್ಪನ ಓಣಿಯ ಮಾರುತಿ ಬಡಿಗೇರ್‌ ಎಂಬುವರು ಈ ತೊಟ್ಟಿಲು ನಿರ್ಮಿಸಿದ್ದಾರೆ. ಕಟ್ಟಿಗೆಯಿಂದ ಮಾಡುವ ಸಾಂಪ್ರದಾಯಿಕ ಬಣ್ಣದ ತೊಟ್ಟಿಲುಗಳನ್ನು ನಿರ್ಮಿಸಲು ಕಲಘಟಗಿ ಪಟ್ಟಣ ವಿಶ್ವಪ್ರಸಿದ್ಧಿಗಳಿಸಿದೆ.

G Hareeshkumar | news18
Updated:December 7, 2018, 6:13 PM IST
ಕಲಘಟಗಿಯ ಬಣ್ಣದ ತೊಟ್ಟಿಲಿಗೆ ವಿದೇಶದಲ್ಲಿ ಹೆಚ್ಚಿದ ಬೇಡಿಕೆ..!
ಬಣ್ಣದ ತೊಟ್ಟಿಲು
G Hareeshkumar | news18
Updated: December 7, 2018, 6:13 PM IST
- ಪರಶುರಾಮ್ ತಹಶೀಲ್ದಾರ್

ಹುಬ್ಬಳ್ಳಿ (ಡಿ.07) :  ಡಾ. ರಾಜ್​ಕುಮಾರ್​ ಕುಟುಂಬಕ್ಕೂ ಕಲಘಟಗಿಯ ಬಡಿಗೇರ್ ಕುಟುಂಬ ತಯಾರಿಸುವ ತೊಟ್ಟಿಲುಗಳಿಗೂ ಅವಿನಾಭಾವ ಸಂಬಂಧವಿದೆ. ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ತಯಾರಾಗುವ ಬಣ್ಣದ ತೊಟ್ಟಿಲು ರಾಜ್‌ಕುಮಾರ್‌ ಕುಟುಂಬಸ್ಥರು ತೊಟ್ಟಿಲನ್ನು ತೆಗೆದುಕೊಂಡು ಅಮೆರಿಕಕ್ಕೆ ಹಾರುತ್ತಿದ್ದಾರೆ.

ಇದನ್ನು ಓದಿ : ಕೃಷ್ಣಮೂರ್ತಿ ಸುಬ್ರಮಣಿಯನ್ ನೂತನ ಮುಖ್ಯ ಆರ್ಥಿಕ ಸಲಹೆಗಾರ

ಪಾರ್ವತಮ್ಮ ರಾಜ್‌ಕುಮಾರ್‌ ತಂಗಿಯ ಮೊಮ್ಮಗಳ ನಾಮಕರಣ ಸಮಾರಂಭ  ಬೆಂಗಳೂರಿನ ನಡೆದಿದೆ. ಹೀಗಾಗಿ ತೊಟ್ಟಿಲನ್ನು ಕಲಘಟಗಿಯಿಂದ ಬೆಂಗಳೂರಿಗೆ ತೆಗೆದುಕೊಂಡು ಬಂದಿದ್ದಾರೆ. ಮೊಮ್ಮಗಳು ಅಮೆರಿಕದಲ್ಲಿ ಇರುವ ಕಾರಣಕ್ಕಾಗಿ ತೊಟ್ಟಿಲನ್ನು ಅಮೆರಿಕಕ್ಕೆ ಸಾಗಿಸಲಾಗುತ್ತಿದೆ.ಕಲಘಟಗಿ ಪಟ್ಟಣದ ಗೋಲಪ್ಪನ ಓಣಿಯ ಮಾರುತಿ ಬಡಿಗೇರ್‌ ಎಂಬುವರು ಈ ತೊಟ್ಟಿಲು ನಿರ್ಮಿಸಿದ್ದಾರೆ. ಕಟ್ಟಿಗೆಯಿಂದ ಮಾಡುವ ಸಾಂಪ್ರದಾಯಿಕ ಬಣ್ಣದ ತೊಟ್ಟಿಲುಗಳನ್ನು ನಿರ್ಮಿಸಲು ಕಲಘಟಗಿ ಪಟ್ಟಣ ವಿಶ್ವಪ್ರಸಿದ್ಧಿಗಳಿಸಿದೆ. ಇಲ್ಲಿ ತಯಾರಾಗುವ ತೊಟ್ಟಿಲುಗಳನ್ನು ಕರ್ನಾಟಕ ಮಾತ್ರವಲ್ಲ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೂ ಪೂರೈಕೆ ಮಾಡಲಾಗುತ್ತೆ.

ಸಾಗುವಾನಿ ಕಟ್ಟಿಗೆ ಬಳಸಿ ತೊಟ್ಟಿಲು ಸಿದ್ದಪಡಿಸಲಾಗಿದೆ
Loading...

ಪಶ್ಚಿಮ ಘಟ್ಟದಲ್ಲಿ ಸಿಗುವ ವಿಶೇಷ ಸಾಗವಾಣಿ ಕಟ್ಟಿಗೆಗಳನ್ನು ಬಳಸಿ ಈ ತೊಟ್ಟಿಲುಗಳನ್ನು ಸಿದ್ಧಪಡಿಸಲಾಗುತ್ತೆ. ಮನೆಯಲ್ಲಿಯೇ ಸಿದ್ಧಪಡಿಸಿದ ಪರಿಸರ ಸ್ನೇಹಿ ಬಣ್ಣವನ್ನು ತೊಟ್ಟಿಲುಗಳಿಗೆ ಬಳಸಲಾಗುತ್ತೆ. ಈ ಬಣ್ಣದ ತೊಟ್ಟಿಲುಗಳ ಆಯುಷ್ಯ ನೂರು ವರ್ಷಕ್ಕೂ ಹೆಚ್ಚು. ಅಪ್ಪ, ಮಗ, ಮೊಮ್ಮಗ ಒಂದೇ ತೊಟ್ಟಿಲನಲ್ಲಿ ಆಡಿ ಬೆಳೆಯುವಷ್ಟು ಆಯುಷ್ಯ ಈ ತೊಟ್ಟಿಲುಗಳಿಗಿದೆ.

ಶತಮಾನಗಳ ಇತಿಹಾಸ ಹೊಂದಿರುವ ಈ ತೊಟ್ಟಿಲುಗಳನ್ನು ಜನರು ತಿಂಗಳುಗಳ ಮೊದಲೇ ಹೇಳಿ ಮಾಡಿಸುತ್ತಾರೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ವಿಧದ ತೊಟ್ಟಿಲುಗಳನ್ನು ಮಾರುತಿ ಬಡಿಗೇರ್‌ ಸಿದ್ಧಪಡಿಸುತ್ತಾರೆ. ಇದೇ ರೀತಿ ಹಲವು ಕುಟುಂಬಗಳು ಕಲಘಟಗಿ ಪಟ್ಟಣದಲ್ಲಿ ಬಣ್ಣದ ತೊಟ್ಟಿಲುಗಳನ್ನು ಸಿದ್ಧಪಡಿಸುತ್ತವೆ. ತೊಟ್ಟಿಲುಗಳ ಮೇಲಿನ ಸುಂದರ ಕಲಾಕೃತಿಗಳು ಗಮನ ಸೆಳೆಯುತ್ತವೆ. ಜನರ ಅಭಿರುಚಿಗೆ ತಕ್ಕಂತೆ ತೊಟ್ಟಿಲುಗಳನ್ನು ಸಿದ್ಧಪಡಿಸಿ ಕೊಡಲಾಗುತ್ತದೆ.

ಇದನ್ನು ಓದಿ :  2018ನೇ ಸಾಲಿನ ರಾಜ್​ಕುಮಾರ್ ಸೌಹಾರ್ದ ಪ್ರಶಸ್ತಿ ಘೋಷಣೆ

ಕಟ್ಟಿಗೆಯ ಈ ತೊಟ್ಟಿಲುಗಳನ್ನು ಸಿದ್ಧಪಡಿಸಲು ಸಾಕಷ್ಟು ಶೃದ್ಧೆ ಮತ್ತು ತಾಳ್ಮೆ ಬೇಕು. ಒಂದು ತೊಟ್ಟಿಲು ಸಿದ್ಧಪಡಿಸಲು ಕನಿಷ್ಠಪಕ್ಷ ಒಂದು ತಿಂಗಳು ಹಿಡಿಯುತ್ತೆ. ತೊಟ್ಟಿಲುಗಳ ನಿರ್ಮಾಣ ಹೆಚ್ಚಿನ ಲಾಭದಾಯಕವಲ್ಲ. ಆದರೂ ಹಿರಿಯರು ಪಾರಂಪರಿಕವಾಗಿ ನಡೆಸಿಕೊಂಡು ಬಂದಿರುವ ಕುಸುರಿ ಕೆಲಸವನ್ನು ಬಡಿಗೇರ್‌ ಕುಟುಂಬಸ್ಥರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಈಗ ಮಾರುಕಟ್ಟೆಗಳಲ್ಲಿ ಕಬ್ಬಿಣ ಮತ್ತು ಪ್ಲಾಸ್ಟಿಕ್‌ ತೊಟ್ಟಿಲುಗಳ ಹಾವಳಿ ಹೆಚ್ಚಾಗಿದೆ. ಇದರ ನಡುವೆಯೂ ಕಟ್ಟಿಗೆಯಿಂದ ತಯಾರಿಸುವ ಈ ಕಲಾತ್ಮಕ ತೊಟ್ಟಿಲುಗಳಿಗೆ ಬೇಡಿಕೆ ಕುಗ್ಗಿಲ್ಲ. ದೂರದ ಊರುಗಳಿಂದ ಬರುವ ಜನರು ರಾಮ, ಕೃಷ್ಣ, ಜೀಸಸ್, ಮೆಕ್ಕಾ ಚಿತ್ರಗಳಿರುವ ತೊಟ್ಟಿಲುಗಳನ್ನು ಮಾಡಿಸುತ್ತಾರೆ.

First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...