HOME » NEWS » State » THE COW HAD TO BE NUMBERED LIKE AADHAR RH

ಆಧಾರ್ ರೀತಿಯಲ್ಲಿ ಹಸುವಿಗೂ ಬಂತು ನಂಬರ್: ಇನಫ್ ಯೋಜನೆಯಡಿ ರಾಸುಗಳ ಮಾಹಿತಿ ಡಿಜಿಟಲೀಕರಣ

ಯೋಜನೆ ಸಂಬಂಧ ಜಿಲ್ಲಾ ಪಶು ವೈದ್ಯ ಮತ್ತು ಪಶುಪಾಲನ ಇಲಾಖೆ ಉಪನಿರ್ದೇಶಕರು ಮಾತನಾಡಿ, ಇನಫ್ ಯೋಜನೆಯಡಿಯಲ್ಲಿ ಜಿಲ್ಲೆಯ 1 ಲಕ್ಷ 87 ಸಾವಿರ ರಾಸುಗಳಿಗೆ, ಕಿವಿಯೋಲೆ ಹಾಕಲಾಗಿದೆ. ಇದು ಆಪ್ ಮೂಲಕ ಕಂಪ್ಯೂಟರೀಕರಣ ಜೊತೆ ಜೊತೆಗೆ, ಡಿಜಟಲೀಕರಣಕ್ಕೂ ಒತ್ತು ನೀಡಿದೆ. ರಾಸುಗಳ ಸಂಪೂರ್ಣ ಇತಿಹಾಸ ವೈದ್ಯರು ಮತ್ತು ಗೋಪಾಲಕರು ತಿಳಿಯಲು ನೆರವಾಗಿದೆ ಎಂದರು.

news18-kannada
Updated:August 5, 2020, 2:53 PM IST
ಆಧಾರ್ ರೀತಿಯಲ್ಲಿ ಹಸುವಿಗೂ ಬಂತು ನಂಬರ್: ಇನಫ್ ಯೋಜನೆಯಡಿ ರಾಸುಗಳ ಮಾಹಿತಿ ಡಿಜಿಟಲೀಕರಣ
ಹಸುವಿಗೆ ನೀಡಲಾಗಿರುವ ನಂಬರ್.
  • Share this:
ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯ ಇಲಾಖೆ ವತಿಯಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದ್ದು, ಇನಫ್ ಯೋಜನೆಯಡಿ ಹಸುಗಳಿಗೆ ಕಿವಿಯೋಲೆ ಹಾಕುವುದು ಯಶಸ್ವಿಯಾಗಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಡಿಜಿಟಲೀಕರಣದ ಭಾಗವಾಗಿ ಬೆಂಗಳೂರು ಗ್ರಾಮಾಂತರ  ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯ ಇಲಾಖೆ ವತಿಯಿಂದ "ಇನಫ್" ರಾಸುಗಳಿಗೆ ಕಿವಿಯೋಲೆ ಕಾರ್ಯಕ್ರಮವನ್ನು ಉತ್ತಮವಾಗಿ ಅನುಷ್ಟಾನಗೊಳಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1 ಲಕ್ಷ 87 ಸಾವಿರ ಸೀಮೆ ಹಸು ಸೇರಿದಂತೆ ಎಲ್ಲಾ ಹಸುಗಳಿಗೆ ಕಿವಿಯೋಲೆ ಹಾಕಿ ಇನಫ್ ನಂಬರ್ ನೀಡಲಾಗಿದೆ. ಮನುಷ್ಯರಿಗೆ ಆಧಾರ್ ಸಂಖ್ಯೆಯಂತೆ ಗೋವುಗಳ ಕಿವಿಗೆ ಓಲೆ ಹಾಕಿ, 12 ಸಂಖ್ಯೆಯ ಡೈಸ್ ನಂಬರ್ ಹಾಕಿ ಡಿಜಿಟಲೀಕರಣಕ್ಕೆ ಒತ್ತು ನೀಡಿದ್ದಾರೆ. ಇದರಿಂದ ಗೋವುಗಳ ಲಸಿಕೆ, ಗರ್ಭಧಾರಣೆ, ಪಶುವಿನ ಹೆರಿಗೆ, ಕಾಲುಬಾಯಿ ಜ್ವರದ ಲಸಿಕೆ, ರೋಗಗಳು ಮಾಹಿತಿಯನ್ನು ಪಡೆಯಬಹುದಾಗಿದೆ. ಕಂಪ್ಯೂಟರೀಕರಣದ ಮೂಲಕ ಆಪ್ ಸಿದ್ದಪಡಿಸಿ ಪಶುಪಾಲನ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಸಮಯಕ್ಕೆ‌ ಸರಿಯಾಗಿ ಎಲ್ಲ ಮಾಹಿತಿ ತಮ್ಮ ಮೊಬೈಲ್‌ನಲ್ಲೇ ನೋಟಿಫಿಕೇಷನ್ ಬರಲಿದ್ದು, ಪಶುಗಳ ಆರೋಗ್ಯದ ಕಡೆ ಹೆಚ್ಚು ಗಮನವಹಿಸಲು ನೆರವಾಗಲಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಈ ಯೋಜನೆ ಅನುಷ್ಠಾನ ಮಾಡಿರುವುದರಲ್ಲಿ ಮುಂಚೂಣಿಯಲ್ಲಿದೆ. ಇನಫ್ ಕಿವಿಯೋಲೆ ಸಂಖ್ಯೆಯಿಂದ ಹಸುವಿನ ಕಳವು, ಗೋ ಪಾಲಕನ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಬಹುದು. ಕೇಂದ್ರ ಸರ್ಕಾರ ಉತ್ತಮ ಯೋಜನೆ ಜಾರಿ ತಂದಿದೆ. ವೈದ್ಯರು ಮತ್ತು ಗೋಪಾಲಕರ ನಡುವಿನ ಸಂಪರ್ಕ ಸಾಧಿಸಲು ಅನುಕೂಲವಾಗಿದೆ. ಈ ಯೋಜನೆ ಒಳಗೊಂಡ ಆಪ್ ನಿಂದ ರಾಸುವಿನ ವಯಸ್ಸು, ಲಿಂಗ, ಹೆರಿಗೆ ವಯಸ್ಸು, ಗೋವು ಕಳವಾದರೂ ಯಾವ ಜಿಲ್ಲೆಯಲ್ಲಿದೆ ಎಂದು ತಿಳಿಯಬಹುದಾಗಿದೆ. ಕೈ ಬೆರಳಿನಂಚಿನಲ್ಲಿ ಮಾಹಿತಿ ಎಂಬಂತೆ, ಕೇಂದ್ರ ಸರ್ಕಾರದ ಡಿಜಟಲೀಕರಣ ಭಾಗವಾಗಿ ಈ ಇನಫ್ ಆಪ್ ಬೆರಳಿನ ತುದಿಯಲ್ಲಿ ಮಾಹಿತಿ ಪಡೆಯಬಹುದಾಗಿದೆ. ಈ ಆಪ್ ಅನ್ನು‌ ಇಲಾಖೆ ಹೆಚ್ಚಾಗಿ ಬಳಸಲಾಗುತ್ತಿದೆ. ಹಸುವಿನ ಬಣ್ಣ ಸೇರಿದಂತೆ ಪ್ರತಿಯೊಂದು ಮಾಹಿತಿ ಇಲಾಖೆ ತಿಳಿಯಬಹುದಾಗಿದೆ.

ಇದನ್ನು ಓದಿ: Ram Mandir: ಜೈ ಶ್ರೀರಾಮ ಘೋಷಣೆ ಕೇವಲ ಅಯೋಧ್ಯೆಯಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ; ಪ್ರಧಾನಿ ಮೋದಿ

ಯೋಜನೆ ಸಂಬಂಧ ಜಿಲ್ಲಾ ಪಶು ವೈದ್ಯ ಮತ್ತು ಪಶುಪಾಲನ ಇಲಾಖೆ ಉಪನಿರ್ದೇಶಕರು ಮಾತನಾಡಿ, ಇನಫ್ ಯೋಜನೆಯಡಿಯಲ್ಲಿ ಜಿಲ್ಲೆಯ 1 ಲಕ್ಷ 87 ಸಾವಿರ ರಾಸುಗಳಿಗೆ, ಕಿವಿಯೋಲೆ ಹಾಕಲಾಗಿದೆ. ಇದು ಆಪ್ ಮೂಲಕ ಕಂಪ್ಯೂಟರೀಕರಣ ಜೊತೆ ಜೊತೆಗೆ, ಡಿಜಟಲೀಕರಣಕ್ಕೂ ಒತ್ತು ನೀಡಿದೆ. ರಾಸುಗಳ ಸಂಪೂರ್ಣ ಇತಿಹಾಸ ವೈದ್ಯರು ಮತ್ತು ಗೋಪಾಲಕರು ತಿಳಿಯಲು ನೆರವಾಗಿದೆ ಎಂದರು. ಮಹೇಶ್ ಎನ್ನುವ ಪಶುಪಾಲಕ ಮಾತನಾಡಿ, ಈ ಯೋಜನೆಯಿಂದ ನಮಗೆ ಬಹಳ ಅನುಕೂಲವಾಗಿದೆ. ಆಧಾರ್ ನಿಂದ ನಮ್ಮ ಎಲ್ಲಾ ಮಾಹಿತಿ ಸಿಗುವಂತೆ ಹಸುಗಳಿಗೆ ಈ ಯೋಜನೆಯಿಂದ ಹಸುಗಳ ಮಾಹಿತಿಯೂ ಸಿಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Published by: HR Ramesh
First published: August 5, 2020, 2:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories