ಬೆಂಗಳೂರು: ಕ್ಯಾನ್ಸರ್ (Cancer) ಚಿಕಿತ್ಸೆಗೆ (Treatment) ವಿಮಾ ಹಣ (Policy Money) ಪಾವತಿಸಲು ನಿರಾಕರಿಸಿದ ಖಾಸಗಿ ವಿಮಾ ಕಂಪನಿಗೆ (Private Policy Company) ಒಂದು ಲಕ್ಷ ರು. ದಂಡವನ್ನು ಬೆಂಗಳೂರು ಗ್ರಾಹಕರ ನ್ಯಾಯಾಲಯ (Bengaluru Consumer Court) ವಿಧಿಸಿದೆ. ಆರೋಗ್ಯ ವಿಮೆ ಮಾಡಿಸುವ ವೇಳೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಕಾಯಿಲೆಯ ಬಗ್ಗೆ ಮಾಹಿತಿ ನೀಡಿಲ್ಲ ಎಂಬ ಕಾರಣಕ್ಕಾಗಿ ಖಾಸಗಿ ವಿಮಾ ಕಂಪನಿ, ವಿಮೆದಾರರಿಗೆ ಕ್ಯಾನ್ಸರ್ ಚಿಕಿತ್ಸೆಗೆ ವಿಮಾ ಹಣ ಪಾವತಿಸಲು ನಿರಾಕರಿಸಿತ್ತು. ಹಾಗಾಗಿ ಬೆಂಗಳೂರು ಗ್ರಾಹಕರ ನ್ಯಾಯಾಲಯ ಖಾಸಗಿ ವಿಮಾ ಕಂಪನಿಗೆ ಒಂದು ಲಕ್ಷ ರು. ದಂಡ ವಿಧಿಸಿದೆ.
ಕ್ಯಾನ್ಸರ್ ಚಿಕಿತ್ಸೆಗೆ ವಿಮೆ ಹಣ ನೀಡದ ಖಾಸಗಿ ಕಂಪನಿಗೆ ದಂಡ
ವಿಮೆದಾರರಿಗೆ ವಿಮೆ ಮಾಡಿಸಿದ 5 ಲಕ್ಷ ರೂ. ಮೊತ್ತವನ್ನು ವಾರ್ಷಿಕ ಶೇ.12 ರಷ್ಟು ಬಡ್ಡಿ ದರದಲ್ಲಿ ಪಾವತಿ ಮಾಡುವಂತೆ ಆದೇಶ ಹೊರಡಿಸಿದೆ. ಈ ಮೂಲಕ ಒಟ್ಟು 6.7 ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ವಿಮೆದಾರರು ಪಡೆದುಕೊಮಡಿದ್ದಾರೆ.
ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಒಂದು ರೋಗವಲ್ಲ. ಈ ಎರಡು ಆರೋಗ್ಯ ಸಮಸ್ಯೆ ಇರುವವರಿಗೆ ಹಾಗೂ ಕ್ಯಾನ್ಸರ್ ಚಿಕಿತ್ಸೆಗೆ ವಿಮಾ ಹಣ ಪಾವತಿಸಲು ನಿರಾಕರಣೆ ಮಾಡುವಂತಿಲ್ಲ ಎಂದು ಬೆಂಗಳೂರು ಗ್ರಾಹಕರ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ: ರಾಜಕಾರಣ ಯಾರಪ್ಪನ ಆಸ್ತಿಯಲ್ಲ; ಸಂಸದ ಪ್ರತಾಪ್ ಸಿಂಹ
ಖಾಸಗಿ ವಿಮಾ ಕಂಪನಿಯಿಂದ ಆರೋಗ್ಯ ವಿಮೆ ಮಾಡಿಸಿದ್ದ ಪಾಲಿಸಿದಾರರು
ಬೆಂಗಳೂರಿನ ಇಂದಿರಾನಗರದ ಹಿರಿಯ ನಾಗರಿಕರೊಬ್ಬರು 2011ರಲ್ಲಿ ತಮಗೆ, ಪತ್ನಿ ಹಾಗೂ ಇಬ್ಬರು ಪುತ್ರರಿಗೆ ಖಾಸಗಿ ವಿಮಾ ಕಂಪನಿಯಿಂದ ಆರೋಗ್ಯ ವಿಮೆ ಮಾಡಿಸಿದ್ದರು. ಕಾಲ ಕಾಲಕ್ಕೆ ವಿಮೆ ಪಾಲಿಸಿಯನ್ನು ನವೀಕರಣ ಮಾಡುತ್ತ ಬಂದಿದ್ದರು.
2019ರ ನವೆಂಬರ್ 4ರವರೆಗೆ ವಿಮೆ ಚಾಲ್ತಿ ಇತ್ತು. ಈ ಮಧ್ಯೆ 2018ರ ಮೇ ತಿಂಗಳಲ್ಲಿ ಪಾಲಿಸಿದಾರರು ಅನಾರೋಗ್ಯಕ್ಕೆ ತುತ್ತಾಗಿದ್ದರು. ವೈದ್ಯಕೀಯ ಪರೀಕ್ಷೆ ಮಾಡಿದಾಗ 'ಬೆವರು ಗ್ರಂಥಿಯ ಕ್ಯಾನ್ಸರ್' ಆಗಿರುವುದು ಪತ್ತೆ ಆಗಿತ್ತು. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಕಂಪನಿಗೆ ಚಿಕಿತ್ಸೆಗೆ ಖರ್ಚಾಗಿರುವ ಹಣ ಪಾವತಿ ಮಾಡುವಂತೆ ಖಾಸಗಿ ವಿಮಾ ಕಂಪನಿಗೆ ಕೋರಿದ್ದ ಪಾಲಿಸಿದಾರರು
ಚಿಕಿತ್ಸೆಗಾಗಿ ಸುಮಾರು 11 ಲಕ್ಷ ರೂ. ಖರ್ಚಾಗಿತ್ತು. ನಂತರ ವಿಮಾ ಕಂಪನಿಗೆ ಚಿಕಿತ್ಸೆಗೆ ಖರ್ಚಾಗಿರುವ ಹಣ ಪಾವತಿ ಮಾಡುವಂತೆ ಕೋರಿದ್ದರು. ಪಾಲಿಸಿದಾರರ ಈ ಮನವಿಯನ್ನು ಖಾಸಗಿ ವಿಮಾ ಕಂಪನಿ ನಿರಾಕರಿಸಿತ್ತು. 10 ವರ್ಷಗಳಿಂದ ಅಧಿಕ ರಕ್ತದೊತ್ತಡ ಹಾಗೂ ಎರಡು ಮೂರು ವರ್ಷಗಳಿಂದ ಮಧುಮೇಹ ಸಮಸ್ಯೆ ಇರುವುದು ವೈದ್ಯಕೀಯ ತಪಾಸಣೆ ದಾಖಲೆಯಿಂದ ಗೊತ್ತಾಗಿದೆ.
ಎರಡು ಆರೋಗ್ಯ ಸಮಸ್ಯೆಯಿದ್ದರೆ ವಿಮಾ ಹಣವನ್ನು ಕ್ಲೇಮ್ ಮಾಡಲು ಬರುವುದಿಲ್ಲ ಎಂದಿದ್ದ ಖಾಸಗಿ ವಿಮಾ ಕಂಪನಿ
ಪಾಲಿಸಿ ನಿಯಮದ ಪ್ರಕಾರ, ಈ ಎರಡು ಆರೋಗ್ಯ ಸಮಸ್ಯೆಯಿದ್ದರೆ ವಿಮಾ ಹಣವನ್ನು ಕ್ಲೇಮ್ ಮಾಡಲು ಬರುವುದಿಲ್ಲ. ಜತೆಗೆ ಕ್ಯಾನ್ಸರ್ ಚಿಕಿತ್ಸೆಗೆ ಖರ್ಚಾದ ಹಣ ಪಾವತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಇದನ್ನೂ ಓದಿ: ಸಚಿವರಾದ ಆರಗ ಜ್ಞಾನೇಂದ್ರ, ಅಶ್ವಥ್ ನಾರಾಯಣರನ್ನು ವಜಾ ಮಾಡಿ; ವಿಪಕ್ಷ ನಾಯಕ ಸಿದ್ದರಾಮಯ್ಯ ಪಟ್ಟು
ಆದರೆ ಈಗ ಬೆಂಗಳೂರು ಗ್ರಾಹಕರ ನ್ಯಾಯಾಲಯ ಖಾಸಗಿ ವಿಮಾ ಕಂಪನಿಗೆ ವಿಮೆಯ ಹಣ ನೀಡುವಂತೆ ಆದೇಶ ನೀಡಿದೆ. ಜೊತೆಗೆ ಬೆಂಗಳೂರು ಗ್ರಾಹಕರ ನ್ಯಾಯಾಲಯ ಖಾಸಗಿ ವಿಮಾ ಕಂಪನಿಗೆ ಒಂದು ಲಕ್ಷ ರು. ದಂಡ ವಿಧಿಸಿದೆ. ಇತ್ತೀಚಿನ ದಿನಗಳಲ್ಲಿ ಹಲವು ಖಾಸಗಿ ಕಂಪನಿಗಳು ಇದೇ ರೀತಿ ಪಾಲಿಸಿದಾರರನ್ನು ಪ್ರಾಣ ಸಂಕಟಕ್ಕೆ ಈಡು ಮಾಡುತ್ತಿದ್ದು, ಸಾಧ್ಯವಾದಷ್ಟು ಎಚ್ಚರಿಕೆ ವಹಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ