Independence Day: ಕೋಲಾರದಲ್ಲಿ ಹಾರಲು ರೆಡಿಯಾಯ್ತು ದೇಶದ ಅತೀ ದೊಡ್ಡ ರಾಷ್ಟ್ರ ಧ್ವಜ!

ಭಾರತದಲ್ಲಿ ಇಷ್ಟು ದೊಡ್ಡದಾದ ಬಾವುಟವನ್ನ ಇದೇ ಮೊದಲ ಬಾರಿಗೆ ಪ್ರದರ್ಶನ ಮಾಡುತ್ತಿದ್ದು, ಏಷ್ಯಾದಲ್ಲೆ ಅತಿದೊಡ್ಡದಾದ ಧ್ವಜ ಎಂಬ ಕೀರ್ತಿಗೂ ಈ ತಿರಂಗಾ ಭಾಜನವಾಗಲಿದೆ.

ಅತೀ ದೊಡ್ಡ ಧ್ವಜದ ತಯಾರಿಕೆ

ಅತೀ ದೊಡ್ಡ ಧ್ವಜದ ತಯಾರಿಕೆ

  • Share this:
ಕೋಲಾರ: ಅಜಾದಿ ಕಾ ಅಮೃತ ಮಹೋತ್ಸವ (azadi ka amrit mahotsav) ಪ್ರಯುಕ್ತ, ಕೋಲಾರದಲ್ಲಿ (Kolar) ನಡೆಯಲಿರುವ ಸ್ವಾತಂತ್ರ್ಯೋತ್ಸವ (independence day) ಕಾರ್ಯಕ್ರಮ ದೇಶದ ಗಮನ ಸೆಳೆಯಲು ಸನ್ನದ್ದವಾಗಿದೆ. ಇದೇ ಮೊದಲ ಬಾರಿಗೆ ನಮ್ಮ ದೇಶದಲ್ಲಿ ಅತಿದೊಡ್ಡ ವಿಸ್ತೀರ್ಣ ಹೊಂದಿರುವ ತಿರಂಗ ಧ್ವಜ (Tri-Color Flag) ಕೋಲಾರದಲ್ಲಿ ಅನಾವರಣಗೊಳ್ಳಲಿದೆ.  ಕೋಲಾರದಲ್ಲಿ ಅತಿದೊಡ್ಡ ರಾಷ್ಟ್ರಧ್ವಜ (National Flag) ಹೊಲಿಗೆ ಕಾರ್ಯ ಮುಕ್ತಾಯಗೊಂಡಿದೆ, ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ 1 ಲಕ್ಷ 30 ಸಾವಿರ ಚದರಡಿ ವಿಸ್ತೀರ್ಣ ಹೊಂದಿರುವ, 630 ಅಡಿ ಉದ್ದ, 205 ಅಡಿ ಅಗಲದ ಭಾರತದ ಧ್ವಜ ನಿರ್ಮಾಣವಾಗಿದೆ. ಜೊತೆಗೆ 3600 ಚದರಡಿ ಸುತ್ತಳತೆ ಹೊಂದಿರುವ ಅಶೋಕ ಚಕ್ರವನ್ನ, ಕೈ ಬರಹದಿಂದಲೇ ಬಿಡಿಸಲಾಗಿದೆ.

ಬೃಹತ್ ಧ್ವಜದ ಹಿಂದೆ ಹಲವರ ಶ್ರಮ

ಕಳೆದ 7 ದಿನಗಳಿಂದ ಬೆಂಗಳೂರು ಮೂಲದ 6 ಮಂದಿ ಟೈಲರ್‍ಗಳು, ಹಾಗು ಮೂವರು ಚಿತ್ರ ಬರಹಗಾರರು ರಾತ್ರಿ ಹಗಲು ಶ್ರಮಿಸಿ, ತಿರಂಗವನ್ನ ಸಿದ್ದಪಡಿಸಿದ್ದು, ಆಗಸ್ಟ್ 15 ರಂದು ಕೋಲಾರ ಜಿಲ್ಲೆಯ ಸರ್,ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿರುವ, 76 ನೇ ವರ್ಷದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ, ಸುಮಾರು 2 ಸಾವಿರ ಸ್ವಯಂ ಸೇವಕರು ತಿರಂಗದ ಧ್ವಜವನ್ನ ಕೈಯಲ್ಲಿ ಹಿಡಿದು ಪ್ರದರ್ಶನ ಮಾಡಲಿದ್ದಾರೆ.

ಅತಿದೊಡ್ಡ ಧ್ವಜದ ತಯಾರಿ


ಅತೀ ದೊಡ್ಡ ಬಾವುಟ ಹಾರಾಟ

ಭಾರತದಲ್ಲಿ ಇಷ್ಟು ದೊಡ್ಡದಾದ ಬಾವುಟವನ್ನ ಇದೇ ಮೊದಲ ಬಾರಿಗೆ ಪ್ರದರ್ಶನ ಮಾಡುತ್ತಿದ್ದು, ಏಷ್ಯಾದಲ್ಲೆ ಅತಿದೊಡ್ಡದಾದ ಧ್ವಜ ಎಂಬ ಕೀರ್ತಿಗೂ ಈ ತಿರಂಗಾ ಭಾಜನವಾಗಲಿದೆ. ಈ ಬಗ್ಗೆ ಮಾತನಾಡಿರುವ ಸಂಸದ ಮುನಿಸ್ವಾಮಿ, ಲಿಮ್ಕಾ ಬುಕ್ ಆಪ್ ರೆಕಾಡ್ರ್ಸ್ ದಾಖಲೆ ಸಿಗುವ ಸಾಧ್ಯತೆಯಿದೆ ಸಂತಸ ವ್ಯಕ್ತಪಡಿಸಿದ್ದಾರೆ,

ಇದನ್ನೂ ಓದಿ: Independence Day: ಬೆಳಗಾವಿಯಲ್ಲಿ ಹಾರಾಡಿತು ದೇಶದ ಅತೀ ಎತ್ತರದ ಧ್ವಜ! ಸಂಭ್ರಮಕ್ಕೆ ಸಾಕ್ಷಿಯಾದ ಕುಂದಾನಗರಿ

ಅತಿದೊಡ್ಡ ಧ್ವಜದ ವಿಶೇಷತೆಯೇನು ?

ಇತ್ತೀಚೆಗೆ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ನಡೆದ ಅಂತರಾಷ್ಟ್ರೀಯ ಯೋಗದಿನವನ್ನ ಕೋಲಾರದ ಅತರಗಂಗೆ ಬೆಟ್ಟದಲ್ಲಿ ಆಚರಿಸುವ ಮೂಲಕ, ಅತಿ ಎತ್ತರ ಪ್ರದೇಶದ ಬೆಟ್ಟ ಗುಡ್ಡದಲ್ಲಿ ಪ್ರಕೃತಿ ಮಡಿಲಲ್ಲಿ ನಡೆದ ಮೊದಲ ಯೋಗದಿನಾಚರಣೆ ಎನ್ನುವ ಹೆಗ್ಗಳಿಕೆಗೆ ಕೋಲಾರ ಪಾತ್ರವಾಗಿತ್ತು, ಇದೀಗ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ರಾಜ್ಯದ ಕೀರ್ತಿ ಪತಾಕೆ ಹಾರಿಸಲು, ದೇಶದ ಅತಿ ದೊಡ್ಡದ ಧ್ವಜವೂ ಕೋಲಾರದಲ್ಲಿ ಅನಾವರಣ ಆಗಲಿದೆ.

3 ಟನ್ ತೂಕದ ಧ್ವಜ

ರಾಷ್ಟ್ರಧ್ವಜ ನಿರ್ಮಾಣಕ್ಕಾಗಿ 3 ಟನ್ ತೂಕದ 13.500 ಮೀಟರ್ ಉದ್ದದ ಕೇಸರಿ, ಬಿಳಿ, ಹಸಿರಿನ ಪಾಲಿಸ್ಟರ್ ಬಟ್ಟೆಯನ್ನ ಬಳಸಲಾಗಿದ್ದು, ಸುಮಾರು ಮೂರುವರೆ ಟನ್ ನಷ್ಟು ತೂಕವಿದೆ, 1.30000 ಚದರಡಿಯ ವಿಸ್ತೀರ್ಣ ಹೊಂದಿರುವ ತಿರಂಗವನ್ನ ಕಳೆದ 7 ದಿನಗಳಿಂದ. 6 ಮಂದಿ ಟೈಲರ್ ಗಳು ಹಗಲು ರಾತ್ರಿ ಶ್ರಮಿಸಿ ಸಿದ್ದಪಡಿಸಿದ್ದಾರೆ,

ಕೈಯಲ್ಲಿ ಅಶೋಕ ಚಕ್ರ ಬಿಡಿಸಿದ ಬೆಂಗಳೂರು ಕಲಾವಿದರು

ಸಂಸದ ಮುನಿಸ್ವಾಮಿ ರಿಗೆ ಆಪ್ತರಾಗಿರೊ ಪ್ರದೀಪ್ ಎನ್ನುವರು ಧ್ವಜ ನಿರ್ಮಾಣದ ಉಸ್ತುವಾರಿಯನ್ನ ಹೊತ್ತಿದ್ದು, ಬೆಂಗಳೂರು ಮೂಲದ 6 ಮಂದಿ ಟೈಲರ್ ಗಳು ಹಗಲಿರುಳು ಶ್ರಮಿಸಿ ತಿರಂಗದ ಧ್ವಜವನ್ನ ಸಿದ್ದಪಡಿಸಿದ್ದಾರೆ, ಧ್ವಜದಲ್ಲಿ ಪ್ರಮುಖ ಆಕರ್ಷಣೆಯೆಂದರೆ ಅಶೋಕ ಚಕ್ರವನ್ನ ಬೆಂಗಳೂರು ಮೂಲದ ಇಬ್ಬರು ಚಿತ್ರಪಟುಗಳು ಕೈಯಲ್ಲಿಯೇ ಒಂದು ದಿನದಲ್ಲಿ ಬಿಡಿಸಿದ್ದು ವಿಶೇಷವಾಗಿದೆ,

ಇದನ್ನೂ ಓದಿ: Hubballi: ಕೆಂಪುಕೋಟೆಯಲ್ಲಿ ಹಾರಾಡೋ ಧ್ವಜ ತಯಾರಾಗೋದು ನಮ್ಮ ಕರ್ನಾಟಕದಲ್ಲಿ! ವಿಶೇಷ ಏನು ನೋಡಿ

ದೇಶಕ್ಕಾಗಿ ಏನಾದರು ಅಳಿಲು ಸೇವೆ ಮಾಡುವ ಉದ್ದೇಶದಿಂದಲೇ ಹಗಲು ರಾತ್ರಿಯೆನದೆ ಕೆಲಸ ಮಾಡುತ್ತಿರುವುದಾಗಿ ಚಿತ್ರಪಟುಗಳು ಸಂತಸ ವ್ಯಕ್ತಪಡಿಸಿದ್ದಾರೆ, ಕೋಲಾರದ ಸರ್,ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಗಸ್ಟ್ 15ರ ಧ್ವಜಾರೋಹಣ ವೇಳೆ ಸ್ವಯಂ ಸೇವಕರು ಅತಿದೊಡ್ಡ ಧ್ವಜವನ್ನ ಸ್ಟೇಡಿಯಂ ನಲ್ಲಿ ಪ್ರದರ್ಶಿಸಲಿದ್ದು, ಬಳಿಕ ಧ್ವಜವನ್ನ ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಬೆಟ್ಟದ ಸುತ್ತಲೂ ಕಟ್ಟುವುದಾಗಿ ಸಂಸದ ಎಸ್ ಮುನಿಸ್ವಾಮಿ ಮಾಹಿತಿ ನೀಡಿದ್ದಾರೆ.
Published by:Annappa Achari
First published: