Sudhakar: ಆಗಸ್ಟ್​ನಲ್ಲಿ ಕೊರೊನಾ 4ನೇ ಅಲೆ ಫಿಕ್ಸ್! ಸಚಿವರೇ ಕೊಟ್ಟಿದ್ದಾರೆ ಮುನ್ಸೂಚನೆ

ಈ ಮೊದಲು ಮೂರನೆ ಅಲೆ ಕಾಣಿಸಿಕೊಳ್ಳುವ ಮುನ್ಸೂಚನೆ ನೀಡಿದ ಸಂಸ್ಥೆಯೇ ನಾಲ್ಕನೆ ಅಲೆಯ ಮುನ್ಸೂಚನೆಯನ್ನು ನೀಡಿದೆ. ಬಹುತೇಕ ಆಗಸ್ಟ್​ನಲ್ಲಿ ಕೋವಿಡ್ ನಾಲ್ಕನೆ ಅಲೆ ಬರುವ ಸಾಧ್ಯತೆ ಇದೆ ಎಂದು ಸುಧಾಕರ್​ ಹೇಳಿದ್ದಾರೆ.

ಸಚಿವ ಸುಧಾಕರ್

ಸಚಿವ ಸುಧಾಕರ್

  • Share this:
ಬೆಂಗಳೂರು ( ಮಾ.21): ಕೊರೊನಾ (Corona) ಮಹಾಮಾರಿ ಹೋಗೇಬಿಡ್ತು ಅನ್ನೋ ಹಾಗೇ ಜನರೆಲ್ಲಾ ನಿರಾಳರಾಗಿದ್ದಾರೆ. ಎಷ್ಟೋ ಜನ ಮಾಸ್ಕ್ (Mask)​ ಹಾಕಿಕೊಳ್ಳದೆ ಓಡಾಡುತ್ತಾರೆ. ಆಗಸ್ಟ್​ ಕೋವಿಡ್ ನಾಲ್ಕನೇ ಅಲೆ ಆಗಸ್ಟ್  ವೇಳೆಗೆ ಕಾಣಿಸಿಕೊಳ್ಳುವ ಮುನ್ಸೂಚನೆ (Forecast) ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ (Dr. Sudhakar) ತಿಳಿಸಿದ್ದಾರೆ. ವಿಧಾನ ಪರಿಷತ್​ನ ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ಶಶೀಲ್ ನಮೋಶಿ (Shashil Namoshi) ಅವರ ಪ್ರಸ್ತಾಪಕ್ಕೆ ಉತ್ತರ ನೀಡಿದ ಸಚಿವರು, ಕೊರೊನಾದ ರೂಪಾಂತರ ಉಪತಳಿ ಬಿ.ಎ.2 ಮೊದಲು ಫಿಲಿಫೈನ್ಸ್​ನಲ್ಲಿ ಕಾಣಿಸಿಕೊಂಡಿತ್ತು. ನಂತರ 40 ದೇಶಗಳಲ್ಲಿ ಕಾಣಿಸಿಕೊಂಡಿದೆ. ಈ ಮೊದಲು ಮೂರನೆ ಅಲೆ ಕಾಣಿಸಿಕೊಳ್ಳುವ ಮುನ್ಸೂಚನೆ ನೀಡಿದ ಸಂಸ್ಥೆಯೇ ನಾಲ್ಕನೆ ಅಲೆಯ ಮುನ್ಸೂಚನೆಯನ್ನು ನೀಡಿದೆ ಎಂದಿದ್ದಾರೆ.

ಕೊರೊನಾ 4ನೇ ಅಲೆ ಫಿಕ್ಸ್​

ಬಹುತೇಕ ಆಗಸ್ಟ್  ನಲ್ಲಿ ಕೋವಿಡ್ ನಾಲ್ಕನೆ ಅಲೆ ಬರುವ ಮುನ್ಸೂಚನೆಯನ್ನ ಕೆಲ ಸಂಸ್ಥೆಗಳು ನೀಡಿದೆ ಎಂದು ಹೇಳಿದರು. ನಮ್ಮಲ್ಲಿ ಲಸಿಕಾ ಅಭಿಯಾನ ಉತ್ತಮವಾಗಿದೆ. ಹಾಗಾಗಿ ನಾಲ್ಕನೆ ಅಲೆ ಎದುರಾದರೂ ಸಾರ್ವಜನಿಕರು ಹೆದರುವ ಅಗತ್ಯ ಇಲ್ಲ. ರಾಜ್ಯದಲ್ಲಿ 1.25 ಕೋಟಿ ಡೋಸ್ ಲಸಿಕೆ ನೀಡಿದೆ. ಬೂಸ್ಟರ್ ಲಸಿಕೆಯನ್ನು ನೀಡಲಾಗುತ್ತಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ಕೊಡಿಸಲು ಮಕ್ಕಳ ಪೋಷಕರ ಮನವೋಲಿಸಲಾಗುವುದು ಎಂದು ಹೇಳಿದರು.

ಮುನ್ನೆಚ್ಚರಿಕೆ ಕ್ರಮ ಅತ್ಯಗತ್ಯ

ಲಸಿಕಾಕರಣ ಕೋವಿಡ್ಅನ್ನು ತಡೆಯುತ್ತದೆ. ಆದರೂ ಕೋವಿಡ್ ತಡೆಯುವ ಮುನ್ನೆಚರಿಕೆ ಕ್ರಮಗಳನ್ನು ಅನುಸರಿಸುವುದು ಅಗತ್ಯ ಇದೆ. ಒಳಾಂಗಣದಲ್ಲಿ ಮಾಸ್ಕ ಕಡ್ಡಾಯ ಮಾಡುವ ಚಿಂತನೆಯನ್ನು ಸರ್ಕಾರ ನಡೆಸಿದೆ. ಶೀಘ್ರವೇ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ಈ ಬಗ್ಗೆ ನಡೆಸಿ ನಿರ್ಧರಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಬೇರೆ ದೇಶದವರು ಜವಾಬ್ದಾರಿಯಿಂದ ತಮ್ಮ ಜನರನ್ನ Ukraineನಿಂದ ಕರೆ ತಂದಿಲ್ಲ: ಸಚಿವ Sudhakar

4ನೇ ಅಲೆ ಎದುರಿಸಲು ಸರ್ಕಾರದಿಂದ ಸಿದ್ಧತೆ

ನಾವು ಈಗಾಗಲೇ ಮೂಲ ಸೌಲಭ್ಯಗಳನ್ನು ಹೆಚ್ಚಿಸಲು ಆದ್ಯತೆ ನೀಡಲಾಗಿದೆ. ರಾಜ್ಯದಲ್ಲಿ 55,256 ಆಮ್ಲಜನಕ ಬೆಡ್​ಗಳನ್ನು ಸ್ಥಾಪಿಸಲಾಗಿದೆ. 300 ಮೆಟ್ರಿಕ್ ಟನ್ ಆಮ್ಲಜನಕದ ಸಾಮಥ್ರ್ಯವನ್ನು, 1,270 ಮೆಟ್ರಿಕ್ ಟನ್ ಗಳಿಗೆ ಹೆಚ್ಚಿಸಲಾಗಿದೆ. ನಮ್ಮಲ್ಲಿ ಆಮ್ಲಜನಕ ಉತ್ಪಾದನೆ ಮತ್ತು ಸಂಗ್ರಹ ಸಾಮಥ್ರ್ಯ ಬೇಡಿಕೆಗೆ ಅನುಗುಣವಾಗಿದೆ ಎಂದರು.

ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ

265 ಪ್ರಯೋಗಾಲಯಗಳನ್ನು ಸ್ಥಾಪನೆ ಮಾಡಲಾಗಿದ್ದು, ದಿನಕ್ಕೆ 2.5 ಲಕ್ಷ ಪರೀಕ್ಷೆ ಮಾಡುವ ಸಾಮಥ್ರ್ಯ ವೃದ್ಧಿಸಿಕೊಂಡಿದ್ದೇವೆ. ಈ ಮೊದಲ ಮೂರು ಅಲೆಗಳ ಅನುಭವದಿಂದ ಚಿಕಿತ್ಸೆ ನೀಡುವುದನ್ನು ವೈದ್ಯರು ಅಭ್ಯಾಸ ಮಾಡಿಕೊಂಡಿದ್ದಾರೆ. ಹಾಗಾಗಿ ನಾಲ್ಕನೆ ಅಲೆ ಬಂದರೂ ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ ಎಂದರು.

ಏಷ್ಯಾ, ಯುರೋಪ್​ನಲ್ಲಿ ಕೋವಿಡ್​ ಹೆಚ್ಚಳ

ಆಗ್ನೇಯ ಏಷ್ಯಾ ಮತ್ತು ಯುರೋಪ್‌ನಾದ್ಯಂತ ಕೋವಿಡ್ ಪ್ರಕರಣಗಳಲ್ಲಿ  ಹೆಚ್ಚಳ ಕಂಡು ಬಂದಿರುವ ಹಿನ್ನಲೆಯಲ್ಲಿ ಈಗ ಕೇಂದ್ರ ಸರ್ಕಾರ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. ಈ ಕುರಿತಾಗಿ ವಿವಿಧ ರಾಜ್ಯಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಮ್ಮ ಪತ್ರದಲ್ಲಿ, ಹೊಸ ರೂಪಾಂತರಗಳನ್ನು ಸಮಯೋಚಿತವಾಗಿ ಪತ್ತೆಹಚ್ಚಲು ಮತ್ತು ಕೋರೊನಾ ವಿರುದ್ಧ ಲಸಿಕೆ ಹಾಕಲು ಜನರನ್ನು ಪ್ರೇರೇಪಿಸಲು ಮಾದರಿಗಳ ಸಾಕಷ್ಟು ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಲು ತಿಳಿಸಿದ್ದಾರೆ.

ಇದನ್ನೂ ಓದಿ: High Court ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಹಾಕಿದ್ದವರು ಅರೆಸ್ಟ್! ಬಂಧಿತರು ಯಾರು? ಎಲ್ಲಿಯವರು ಗೊತ್ತಾ?

ಜಾಗೃತಿ ಮೂಡಿಸಲು ಸೂಚನೆ

ರಾಜ್ಯವು ಅಗತ್ಯವಾದ ಜಾಗೃತಿಯನ್ನು ಮೂಡಿಸಬೇಕು ಮಾಸ್ಕ್​ ಧರಿಸುವುದು, ಎಲ್ಲಾ ಸಾರ್ವಜನಿಕ ಪ್ರದೇಶಗಳು, ಸಭೆಗಳಲ್ಲಿ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುವಂತೆ ಸೂಚಿಸಿದೆ.

ಆಗ್ನೇಯ ಏಷ್ಯಾ ಮತ್ತು ಯುರೋಪಿನ ಕೆಲವು ದೇಶಗಳಾದ್ಯಂತ ಕೋವಿಡ್-19 ಪ್ರಕರಣಗಳ ಹೆಚ್ಚಳದೊಂದಿಗೆ, ಮಾರ್ಚ್ 16 ರಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು, ಅಲ್ಲಿ ಆಕ್ರಮಣಕಾರಿ ಜೀನೋಮ್ ಅನುಕ್ರಮ, ತೀವ್ರ ಕಣ್ಗಾವಲು ಮತ್ತು ಒಟ್ಟಾರೆ ಜಾಗರೂಕತೆಯ ಮೇಲೆ ಕೇಂದ್ರೀಕರಿಸಲು ರಾಜ್ಯಗಳಿಗೆ ಸಲಹೆ ನೀಡಲಾಯಿತು.
Published by:Pavana HS
First published: