Drugs Mafia| ಡ್ರಗ್ಸ್​ ಮಾಫಿಯಾ ವಿರುದ್ಧ ಮುಂದುವರೆದ ದಾಳಿ; ಮತ್ತೆ ಮೂವರ ಬಂಧನ, 30 ಲಕ್ಷ ರೂ. ಮೌಲ್ಯದ ಮಾದಕವಸ್ತು ವಶ!

ಬಂಧಿತರಲ್ಲಿ ಇಬ್ಬರು ನೈಜಿರಿಯನ್ಸ್ ಮತ್ತು ಓರ್ವ ಕೇರಳ ಮೂಲದ ಪೆಡ್ಲರ್ ಇದ್ದಾರೆ ಎಂದು ತಿಳಿದುಬಂದಿದೆ. ಇವರು ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ಎಂಡಿಎಂಎ ಮಾತ್ರೆ ಮಾರಾಟಕ್ಕೆ ಯತ್ನ ಮಾಡುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೆರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ವಶಕ್ಕೆ ಪಡೆಯಲಾಗಿರುವ ಮಾದಕವಸ್ತು.

ವಶಕ್ಕೆ ಪಡೆಯಲಾಗಿರುವ ಮಾದಕವಸ್ತು.

 • Share this:
  ಬೆಂಗಳೂರು (ಸೆಪ್ಟೆಂಬರ್​ 14): ಡ್ರಗ್ಸ್​ ಮಾಫಿಯಾ ಕಳೆದ ಒಂದು ವರ್ಷಗಳಿಂದ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಸೇರಿದಂತೆ ಹಲವರು ಜೈಲು ಪಾಲಾಗಿ ದ್ದರು. ಇದಲ್ಲದೆ, ಬೆಂಗಳೂರು ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ಎನ್‌ಸಿಬಿ ಹಾಗೂ ಸಿಸಿಬಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿ ಈವರೆಗೆ ನಗರದ ಹಲವಾರು ಡ್ರಗ್​ ಪೆಡ್ಲರ್​ಗಳನ್ನು ಕಂಬಿಯ ಹಿಂದೆ ಕಳುಹಿಸಿದ್ದಾರೆ. ಎನ್​ಸಿಬಿ ಪೊಲೀಸರು ಕಳೆದ ಆಗಸ್ಟ್​ 31 ರಂದು ಸಹ ಮೂವರು ಪ್ರಮುಖ ಪೆಡ್ಲರ್​ಗಳನ್ನು ಬಂಧಿಸಿದ್ದರು. ಆದರೂ ಸಹ ಈ ಜಾಲವನ್ನು ಕೊನೆಗೊಳಿಸುವುದು ಸಾಧ್ಯವಾಗು ತ್ತಿಲ್ಲ. ಇಂದೂ ಸಹ ಪೊಲೀಸರು ಎಂಡಿಎಂಎ ಎಕ್ಸ್ ಟಸಿ ಮಾತ್ರೆಗಳ ಡೀಲಿಂಗ್ ನಡೆಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ಅಲ್ಲದೆ, 30 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

  ಬಂಧಿತರಲ್ಲಿ ಇಬ್ಬರು ನೈಜಿರಿಯನ್ಸ್ ಮತ್ತು ಓರ್ವ ಕೇರಳ ಮೂಲದ ಪೆಡ್ಲರ್ ಇದ್ದಾರೆ ಎಂದು ತಿಳಿದುಬಂದಿದೆ. ಇವರು ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ಎಂಡಿಎಂಎ ಮಾತ್ರೆ ಮಾರಾಟಕ್ಕೆ ಯತ್ನ ಮಾಡುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೆರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ನೈಜಿರಿಯನ್ಸ್ ಸೇರಿ ಮೂವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

  ಅಲ್ಲದೆ, ಬಂಧಿತರಿಂದ 500 ಎಂಡಿಎಂಎ ಎಕ್ಸ್ ಟಸಿ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ. ಇದರ ಮೌಲ್ಯ ಸುಮಾರು 30 ಲಕ್ಷ ಎಂದು ಅಂದಾಜಿಸಲಾಗಿದೆ. ತನಿಖೆಯ ವೇಳೆ ಬಂಧಿತರು ಐಟಿ ಉದ್ಯೋಗಿಗಳು, ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ ಮಾರಾಟ ಮಾಡುತ್ತಿದ್ದರು ಎಂಬ ಅಂಶ ಬಯಲಾಗಿದೆ. ಈ ಬಗ್ಗೆ ಕೊಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಕಳೆದ ವಾರವೂ ಸಹ ಬೆಂಗಳೂರಿನ ಅಪಾರ್ಟ್ಮೆಂಟ್‌ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ಅಧಿಕಾರಿಗಳು ಅನಿಕಾ ಡಿ ಸೇರಿದಂತೆ ಒಟ್ಟು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಪೈಕಿ ಅನಿಕಾ ಡ್ರಗ್ ಮಾಫಿಯಾದ ಕಿಂಗ್‌ಪಿನ್ ಎನ್ನಲಾಗುತ್ತಿದೆ. ಮಾಡಲಿಂಗ್ ಕ್ಷೇತ್ರದಲ್ಲಿದ್ದ ಈ ಮಹಿಳೆ ಮಾದಕ ದ್ರವ್ಯಗಳ ವ್ಯಸನಿ ಕೂಡಾ ಆಗಿದ್ದಾರೆ. ಬೆಂಗಳೂರು ನಗರದಲ್ಲಿ ಈಕೆಗೆ ದಂಧೆಗೆ ಹಲವು ಗ್ರಾಹಕರಿದ್ದಾರೆ ಎಂಬುವುದು ವಿಚಾರಣೆಯಿಂದ ಬಯಲಿಗೆ ಬಂದಿದೆ.

  ಮತ್ತೊಂದು ಕಡೆಯಲ್ಲಿ ಸ್ಯಾಂಡಲ್‌ವುಡ್‌ ನಲ್ಲೂ ಡ್ರಗ್ಸ್ ಮಾಫಿಯಾ ಸದ್ದು ಮಾಡುತ್ತಿರುವುದರಿಂದ ಸಿಸಿಬಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಕುರಿತಾಗಿ ಗಂಭೀರವಾದ ಆರೋಪಗಳನ್ನು ಮಾಡಿದ್ದು ಮತ್ತಷ್ಟು ಮಾಹಿತಿ ಇದೆ ಎಂದು ಹೇಳಿದ್ದಾರೆ.

  ಇದನ್ನೂ ಓದಿ: Petrol Prices| ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಸ್ಥಿರ, ರಾಜ್ಯದ ಹಲವೆಡೆ ಅಲ್ಪ ಇಳಿಕೆ; ನಿಮ್ಮ ಊರಿನಲ್ಲಿ ಇಂದಿನ ತೈಲ ಬೆಲೆ ಎಷ್ಟು?

  ಸದ್ಯ ಎನ್‌ಸಿಬಿಗೂ ಹಲವು ಪ್ರಮುಖ ಗ್ರಾಹಕರ ಹೆಸರುಗಳು ಗೊತ್ತಾಗಿದ್ದು ಈ ಸಂಬಂಧ ಲಿಸ್ಟ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಬಂಧಿತರು ಕೊಟ್ಟ ಮಾಹಿತಿ ಆಧಾರದಲ್ಲಿ ಗ್ರಾಹಕರಿಗೂ ನೋಟಿಸ್‌ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿಯೂ ಇದೆ. ಗೃಹ ಇಲಾಖೆಯೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಜಾಲ ಮೂಲವನ್ನು ಭೇದಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
  Published by:MAshok Kumar
  First published: