ಮುಂದುವರೆದ ಅನ್ನದಾತರ ಆಕ್ರೋಶ; ರೈತರ ಹೋರಾಟಕ್ಕೆ ಪ್ರತಿಪಕ್ಷಗಳ ಬೆಂಬಲ, ಆಡಳಿತ ಪಕ್ಷ ಸುಸ್ತು

ರೈತ ಹೋರಾಟಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಚಿವ ಹೆಚ್ ಡಿ ರೇವಣ್ಣ ಸಾಥ್ ನೀಡಿದರು. ರೈತರ ಪರವಾಗಿ ನಾವಿದ್ದೇವೆ. ನಾವು ಕಾಯ್ದೆ ಪಾಸ್ ಆಗದಂತೆ ಒತ್ತಡ ಹೇರುತ್ತೇವೆ ಎಂದರು

news18-kannada
Updated:September 22, 2020, 8:20 PM IST
ಮುಂದುವರೆದ ಅನ್ನದಾತರ ಆಕ್ರೋಶ; ರೈತರ ಹೋರಾಟಕ್ಕೆ ಪ್ರತಿಪಕ್ಷಗಳ ಬೆಂಬಲ, ಆಡಳಿತ ಪಕ್ಷ ಸುಸ್ತು
ಪ್ರತಿಭಟನೆ ನಡೆಸುತ್ತಿರುವ ರೈತರು
  • Share this:
ಬೆಂಗಳೂರು(ಸೆಪ್ಟೆಂಬರ್​. 22): ಸರ್ಕಾರದ ರೈತ ವಿರೋಧಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಅಹೋರಾತ್ರಿ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಎರಡನೇ ದಿನವೂ ಬೆಂಗಳೂರಿನಲ್ಲಿ ರೈತರ ಕಿಚ್ಚು ಜೋರಾಗಿತ್ತು. ಚಳಿ ಮಳೆ ಗಾಳಿ ಲೆಕ್ಕಿಸದೇ ಸರ್ಕಾರದ ವಿರುದ್ದ ಅನ್ನದಾತರು ಒಕ್ಕೊರಲಿನಿಂದ ಆಕ್ರೋಶ ವ್ಯಕ್ತಪಡಿಸಿದರು. ಹಸಿರು ಶಾಲಿನ ಆಕ್ರೋಶಕ್ಕೆ ಪ್ರತಿಪಕ್ಷಗಳು ಸಾಥ್ ನೀಡಿದ್ರೆ, ಆಡಳಿತಪಕ್ಷ ಸುಸ್ತು ಹೊಡೆಯಿತು. ರಾಜ್ಯದಲ್ಲಿ ಒಂದೆಡೆ ಬರ, ಇನ್ನೊಂದೆಡೆ ನೆರೆ, ಜೊತೆಗೆ ಒಂದಷ್ಟು ರೈತ ವಿರೋಧಿ ನೀತಿಗಳಿಂದಾಗಿ ರೈತ ಅಕ್ಷರಶಃ  ಹೈರಾಣಾಗಿದ್ದಾನೆ. ಜನರಿಗೆ ಅನ್ನ ನೀಡುವ ರೈತನ ಗೋಳು ಮಗಿಲು ಮುಟ್ಟಿದ್ದು ಕಣ್ಣೊರೆಸುವ ಸರ್ಕಾರ ಮಾತ್ರ ರೈತ ವಿರೋಧಿ ಕಾಯ್ದೆ ತರುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕಂಗಾಲಾಗಿರುವ ಅನ್ನದಾತ ರಾಜಧಾನಿಯಲ್ಲಿ ಪ್ರತಿಭಟಿಸುತ್ತಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಕೂಡ ಆಕ್ರೋಶ ವ್ಯಕ್ತಪಡಿಸಿದರು. 

ಇತ್ತ ಮೌರ್ಯ ಸರ್ಕಲ್ ನಲ್ಲಿ ಕೋಡಿಹಳ್ಳಿ ನೇತೃತ್ವದಲ್ಲಿ ಪ್ರತಿಭಟನೆ ನಡಿಯುತ್ತಿದ್ರೇ, ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಜೊತೆಗೆ ಇಂದು ಹಸಿರು ಸೇನೆ ಹಾಗೂ ರಾಜ್ಯ ರೈತ ಸಂಘದ ರೈತರು ಕೂಡ ರಾಜಧಾನಿಗೆ ಆಗಮಿಸಿ ರಸ್ತೆಯಲ್ಲಿಯೇ ಕೂಳಿತು ಪ್ರತಿಭಟಿಸಿದರು.

ಇನ್ನೂ ಪ್ರತಿಭಟನೆ ವೇಳೆ ರಾಯಚೂರಿನ ಚೆನ್ನಪ್ಪ ಎಂಬ ರೈತನೊರ್ವ ಅಸ್ವಸ್ಥನಾಗಿದ್ದು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಲಾಯ್ತು. ಇನ್ನೂ ಪ್ರತಿಭಟನಾ ಸ್ಥಳಕ್ಕೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಕೂಡ ಭೇಟಿ ನೀಡಿದರು. ಈ ಸಂದರ್ಭ ಸಚಿವರನ್ನು ರೈತರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಸರ್ಕಾರ ಹೇಳುವ ಅಂಕಿ ಅಂಶವೆಲ್ಲವೂ ತಪ್ಪು, ನಾವೇ ಸರ್ಕಾರಕ್ಕೆ‌ ಮಾಹಿತಿ ನೀಡುತ್ತೇವೆ ಎಂದು. ರೈತರ ಮನಮೊಲಿಸುವಲ್ಲಿ ವಿಫಲವಾಗಿ ಶಿವರಾಮ್ ಹೆಬ್ಬಾರ್ ಹಿಂತಿರುಗಿದರು.

ಈ ವೇಳೆ ರೈತರು ಮಾತಾಡುತ್ತಿದ್ದ ಮೈಕ್ ಕಿತ್ತುಕೊಂಡು ಸಚಿವ ಹೆಬ್ಬಾರ್ ಮಾತಾಡಿದರು. ಸಂಜೆ ವೇಳೆಗೆ ಅಧಿಕಾರಿಯೊಬ್ಬರಿಗೆ ರೈತರು ಮುತ್ತಿಗೆ ಹಾಕಿದರು‌ ಈ ಸಂದರ್ಭದಲ್ಲಿ ಸಾಕಷ್ಟು ನೂಕು ನುಗ್ಗಲು ಜರುಗಿ ಮಾತಿನ ಚಕಮಕಿ ನಡೆಯಿತು.

ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿ ಯುವಕರು ಮತ್ತು ರೈತರ ವಿರೋಧಿ: ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ

ರೈತ ಹೋರಾಟಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಚಿವ ಹೆಚ್ ಡಿ ರೇವಣ್ಣ ಸಾಥ್ ನೀಡಿದರು. ರೈತರ ಪರವಾಗಿ ನಾವಿದ್ದೇವೆ. ನಾವು ಕಾಯ್ದೆ ಪಾಸ್ ಆಗದಂತೆ ಒತ್ತಡ ಹೇರುತ್ತಾವೆ. ಇದೊಂದು ರೈತ ವಿರೋಧಿ ಸರ್ಕಾರ. ಕೃಷಿ ಸಚಿವರು ಹೇಳಿಕೆಗೆ ವಾಗ್ದಾಳಿ ನಡೆಸಿದರು.
ಒಟ್ಟಿನಲ್ಲಿ ವಿರೋಧಿ ಭೂ ಸುಧಾರಣ ಕಾಯ್ದೆ, ಎಪಿಎಂಸಿ ಕಾಯ್ದೆ ವಿದ್ಯುತ್ ತಿದ್ದಪಡಿ ಕಾಯ್ದೆ ವಿರುದ್ದ ರೈತರ ಆಕ್ರೋಶ ಜೋರಾಗಿದೆ. ಸರ್ಕಾರ ವಾಪಾಸ್ ತೆಗೆದುಕೊಳ್ಳದಿದ್ದಲ್ಲಿ ತಕ್ಕ ಪಾಠದ ಎಚ್ಚರಿಕೆ ಜೊತೆ ಅಹೋರಾತ್ರಿ ಧರಣಿ ಮುಂದುವರೆದಿದೆ.
Published by: G Hareeshkumar
First published: September 22, 2020, 8:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading