news18-kannada Updated:February 15, 2020, 7:30 AM IST
ನಿಧಾನ ಗತಿಯಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿ
ಕಾರವಾರ(ಫೆ.15) : ಬಹು ನಿರೀಕ್ಷಿತ ಬೇಡ್ತಿ ಸೇತುವೆ ನಿರ್ಮಾಣ ಹಲವು ವಿಘ್ನಗಳ ನಡುವೆಯೆ 2016 ರಲ್ಲಿಯೇ ಕಾರ್ಯಾರಂಭಗೊಂಡರೂ ಕಾಮಗಾರಿ ಕುಂಟುತ್ತಾ ಸಾಗಿರುವದು ಸಾರ್ವಜನಿಕರಲ್ಲಿ ಬೇಡ್ತಿ ಸೇತುವೆ ಮುಗಿಸಲು ಇನ್ನೇಷ್ಟು ವರ್ಷ ಕಾಯಬೇಕು ಎಂಬ ಪ್ರಶ್ನೆಯಾಗಿದೆ.
ಜಿಲ್ಲೆಯ ಯಲ್ಲಾಪುರ ಮತ್ತು ಶಿರಸಿ ಜೊತೆಗೆ ಹಳಿಯಾಳ ಮೂಲಕ ಬೆಳಗಾವಿ ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಈ ರಾಜ್ಯ ಹೆದ್ದಾರಿಗೆ ಬೇಡ್ತಿ ಸೇತುವೆ ಇದೆ. ನೂರಾರು ವರ್ಷದ ಹಿಂದಿನ ತೀರಾ ಶೀಥಿಲಾವಸ್ಥೆ ತಲುಪಿರುವ ಬೇಡ್ತಿ ನದಿಯ ಹಳೆ ಸೇತುವೆ ಮೇಲೆಯೆ ವಾಹನ ಸಂಚಾರ ಈಗ ನಡೆಯುತ್ತಿದೆ. ಕಳೆದ ಮೂರು ವರ್ಷದಿಂದ ಹೊಸ ಸೇತುವೆ ನಿರ್ಮಾಣ ಕಾರ್ಯ ಆಮೆ ವೇಗದಲ್ಲಿ ನಡೆಯುತ್ತಿದೆ.
ಅಂದಾಜು 13 ಕೋಟಿ ರೂ. ವೆಚ್ಚದ ಈ ಬೃಹತ್ ಕಾಮಗಾರಿಯು ಹೀಗೆ ನಿಧಾನ ಗತಿಯಲ್ಲಿ ಸಾಗಿದರೆ ಮುಗಿಯುವುದು ಯಾವಾಗ ಎಂಬುದನ್ನು ಭಗವಂತನೇ ಬಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರದು. ಮೆಗಾ ಧಾರಾವಾಹಿಯಂತಾದ ಈ ಕಾಮಗಾರಿ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ಜನರು ಕಾಯುವಂತಾಗಿದೆ.

ಬೇಡ್ತಿ ನಧಿಗೆಯ ಹಳೆಯ ಸೇತುವೆ
ಕುಂಟುತ್ತ ಸಾಗಿದ ಕಾಮಗಾರಿ
ನಿರೀಕ್ಷೆಯ ಪ್ರಕಾರ ಇಷ್ಟೊತ್ತಿಗಾಗಲೇ ಸೇತುವೆಯ ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತವಾಗಬೇಕಿತ್ತು. ನಾನಾ ಕಾರಣಗಳಿಂದ ಕಾಮಗಾರಿ ಕುಂಟುತ್ತ ಸಾಗಿದೆ. ಅಂತೂ ಇಷ್ಟು ವರ್ಷಗಳ ನಂತರ ಮಳೆಗಾಲಕ್ಕೂ ಪೂರ್ವದಲ್ಲಿ ಸೇತುವೆಯು ಸ್ಪ್ಯಾಬ್ ಹಂತಕ್ಕೆ ಬಂದು ನಿಂತಿದೆ. ಮಳೆಗಾಲದ ಒಳಗಾಗಿ ನಿರ್ಮಾಣ ಪೂರ್ಣಗೊಳ್ಳುತ್ತಿದೆ ಎಂಬ ಮಾತು ಹುಸಿಯಾಗಿದೆ.
ನಡೆಯದ ಮರದ ಮೇಲಿನ ನಡಿಗೆ - ಕುವೇಶಿಯ ಕೆನೋಪಿ ವಾಕ್ ಗೆ ಗ್ರಹಣಒಟ್ಟಾರೆ ಎರಡೇ ವರ್ಷದಲ್ಲಿ ನಿರ್ಮಾಣವಾಗಿ ವಾಹನ ಸವಾರರ ಉಪಯೋಗಕ್ಕೆ ಬರಬೇಕಾಗಿದ್ದ ಸೇತುವೆ ಕಳೆದ ಮೂರು ವರ್ಷದಿಂದ ಕಾಮಗಾರಿ ನಡೆಯುತ್ತಿಲೆ ಇದೆ. ಮೂರು ವರ್ಷ ಕಳೆದರೂ ಕೂಡಾ ಅರ್ಧ
ಕಾಮಗಾರಿ ಪೂರ್ಣ ಆಗದಿರುವುದು ದುರಂತ. ಈ ಹಿನ್ನಲೆಯಲ್ಲಿ ಈ ಹೆದ್ದಾರಿಯಿಂದ ಓಡಾಟ ನಡೆಸುವ ಜನ ಅಯ್ಯೊ ಈ ಸೇತುವೆ ಕಾಮಗಾರಿ ಯಾವಾಗ ಮುಗಿಯತ್ತೋ ಅಂತಾ ಆಡಿಕೊಳ್ಳುವಂತಾಗಿದೆ. ಆದರೂ ಕೂಡಾ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಮಾತ್ರ ತಲೆಗೆ ಹಾಕಿ ಕೊಳ್ಳದೆ ಕಾಮಗಾರಿ ಆಮೆ ವೇಗದಲ್ಲೆ ನಡೆಸಿಕೊಂಡು ಬರುತ್ತಿದೆ.
(ವರದಿ : ದರ್ಶನ್ ನಾಯ್ಕ)
First published:
February 15, 2020, 7:30 AM IST